Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
ಮಕ್ಕಳಿಗೆ ಹುಷಾರಿಲ್ಲದಿದ್ದರೆ ಪೋಷಕರಿಗೆ ಕೈ ಕಾಲೇ ಓಡುವುದಿಲ್ಲ. ಅದರಲ್ಲೂ ಜ್ವರ ಅಂತೂ ಮಕ್ಕಳಿಗೆ ಆಗಾಗ ಬರುತ್ತಿರುತ್ತದೆ. ಮಗು 5 ವರ್ಷ ತಲುಪುವವರೆಗೆ ಆಗಾಗ ಜ್ವರ ಬರುವುದು, ಕೆಲ ಮಕ್ಕಳಿಗಂತೂ ತಿಂಗಳಿಗೊಮ್ಮೆ ಜ್ವರ ಬರುವುದು, ಇನ್ನು ಕೆಲವು ಮಕ್ಕಳಿಗೆ 3-4 ತಿಂಗಳಿಗೊಮ್ಮೆ ಜ್ವರ ಬರುವುದು, ಜ್ವರ ಬರುವುದು ತುಂಬಾನೇ ಅಪರೂಪ ಎನ್ನುವ ಮಕ್ಕಳು ತುಂಬಾ ಕಡಿಮೆ.

ಜ್ವರ ಬಂದಾಗ ಮೈ ಬಿಸಿಯಾಗುವುದು, ಟೆಂಪರೇಚರ್ ಚೆಕ್ ಮಾಡಿದಾಗ 100 ಡಿಗ್ರಿ ದಾಟಿದರೆ ಪೋಷಕರಿಗೆ ತುಂಬಾನೇ ಆತಂಕ ಉಂಟಾಗುವುದು, ಆ ದಿನವಷ್ಟೇ ವೈದ್ಯರ ಬಳಿ ಕರೆದುಕೊಂಡು ಹೋಗಿರುತ್ತೇವೆ, ಆದರೂ ರಾತ್ರಿ ಹೊತ್ತಿನಲ್ಲಿ ಜ್ವರ ಹೆಚ್ಚಾದಾಗ ತುಂಬಾನೇ ಆತಂಕ ಉಂಟಾಗುವುದು.
ಮಗುವಿಗೆ ಜ್ವರ ಬಂದಾಗ ಪೋಷಕರು ಏನು ಮಾಡಬೇಕು, ಮೈ ಬಿಸಿ ಕಡಿಮೆ ಮಾಡಲು ಏನು ಮಾಡಬೇಕು ಎಂದು ನೋಡೋಣ ಬನ್ನಿ:
ಮಗುವಿಗೆ ಜ್ವರ ಬಂದಾಗ ಏನು ಮಾಡಬೇಕು?
ನಿಮ್ಮ ಮಗು ಎರಡು ವರ್ಷಕ್ಕಿಂತ ಚಿಕ್ಕದಾಗಿದ್ದರೆ ಮಕ್ಕಳ ತಜ್ಞರನ್ನು ಕೇಳಿ ಔಷಧಿ ನೀಡಿ. Acetaminophen ಔಷಧ ಮಗುವಿನ ಮೈ ಬಿಸಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಮಗುವಿಗೆ 6 ತಿಂಗಳಾಗಿದ್ದರೆ ibuprofen ನೀಡಬಹುದು. ಆದರೆ ಯಾವುದೇ ಔಷಧಿಯನ್ನು ನೀವೇ ನಿರ್ಧರಿಸಿ ನೀಡಬೇಡಿ, ಮಕ್ಕಳ ತಜ್ಞರ ಸಲಹೆ ಪಡೆದ ಬಳಿಕವಷ್ಟೇ ನೀಡಬೇಕು.
ಕೋಲ್ಡ್ ಕಂಪ್ರಸ್ ನೀಡಿ
ಮಗುವಿನ ಮೂ ಉಷ್ಣತೆ ತುಂಬಾ ಇದ್ದರೆ ನೀವು ಕೋಲ್ಡ್ ಕಂಪ್ರಸ್ ನೀಡಬೇಕು. ಮಗುವಿನ ಬಟ್ಟೆ ಬಿಚ್ಚಿ, ಒಂದು ಚಿಕ್ಕ ಬಟ್ಟೆಯನ್ನು ಉಗುರು ಬೆಚ್ಚಗಿನ ಬಿಸಿ ನೀರಿನಲ್ಲಿ ಅದ್ದಿ ಮಗುವಿನ ಮೈ ಒರೆಸುತ್ತಾ ಇರಿ, ಹಣೆ ಮೇಲೆ ಒದ್ದೆ ಬಟ್ಟೆ ಇಡಿ. ಮಗುವನ್ನು ಒರೆಸಲು ತಣ್ಣನೆಯ ಬಟ್ಟೆ ಬಳಸಬೇಡಿ. ಮಗುವಿನ ಎದೆಭಾಗ, ಹೊಟ್ಟೆ ಒರೆಸಬೇಡಿ. ಮಗುವಿನ ಕಂಕುಳು, ಮಂಡಿ ಭಾಗವನ್ನು ಒದ್ದೆ ಬಟ್ಟೆಯಿಂದ ಒರೆಸಿ, ಹಣೆಗೆ ಒದ್ದೆ ಬಟ್ಟೆ ಇಡಿ, ಹೀಗೆ ಮಾಡುವುದರಿಂದ ಮೈ ಉಷ್ಣತೆ ಕಡಿಮೆಯಾಗುವುದು.
ಏನು ಮಾಡಬಾರದು?
* ಮಗುವಿಗೆ ಆಸ್ಪಿರಿನ್ ನೀಡಬಾರದು.
* ಶೀತಕ್ಕೂ, ಜ್ವರಕ್ಕೂ ನೀಡಿರುವ ಔಷಧಿಯನ್ನು ಮಿಶ್ರ ಮಾಡಿ ನೀಡಬಾರದು.
FDA ಪ್ರಕಾರ ಎರಡು ವರ್ಷದ ಕೆಳಗಿನ ಯಾವುದೇ ಮಗುವಿಗೆ decongestant ಅಥವಾ antihistamine ಔಷಧ ನೀಡುವಂತಿಲ್ಲ.
* 4 ವರ್ಷದೊಳಗಿನ ಮಗುವಿಗೆ ಶೀತ ಹಾಗೂ ಕೆಮ್ಮು ಔಷಧ ಮಿಶ್ರ ಮಾಡಿ ನೀಡುವಂತಿಲ್ಲ, ಇದರಿಂದ ಗಂಭೀರ ಪರಿಣಾಮ ಬೀರಬಹುದು.
* ಮಗುವಿಗೆ ತಣ್ಣನೆಯ ನೀರಿನಿಂದ ಮೈ ಒರೆಸಬಾರದು
* ಮಗುವಿಗೆ ಜ್ವರದಿಂದ ಚಳಿಯಾಗುತ್ತಿದೆ ಎಂದು ಮಗುವಿಗೆ ಸ್ವೆಟರ್ ಹಾಕುವುದು, ಕಂಬಳಿ ಸುತ್ತುವುದು ಮಾಡಬೇಡಿ. ಉದ್ದ ತೋಳಿನ ಬಟ್ಟೆ ಮಾತ್ರ ಧರಿಸಿ ಸಾಕು.
ಯಾವಾಗ ಕೂಡಲೇ ವೈದ್ಯರ ಬಳಿ ಕರೆಸುಕೊಂಡು ಹೋಗಬೇಕು
* ಜ್ವರ 104 F ಅಥವಾ ಅದಕ್ಕಿಂತ ಜಾಸ್ತಿ ಇದ್ದರೆ
* 3 ತಿಂಗಳ ಒಳಗಿನ ಮಗುವಿಗೆ 100.4 F ಜ್ವರವಿದ್ದಾಗ
* 72 ಗಂಟೆಯಾದರೂ ಜ್ವರ ಕಡಿಮೆಯಾಗದಿದ್ದರೆ
* ಮಗು ಎರಡು ವರ್ಷಕ್ಕಿಂತ ಚಿಕ್ಕದಾಗಿದ್ದರೆ 24 ಗಂಟೆಗಳಿಗಿಂತ ಅಧಿಕ ಸಮಯ ಜ್ವರವಿದ್ದರೆ
* ಪಿಡ್ಸ್ ಬಂದರೆ
* ಮಗು ತುಂಬಾ ಸುಸ್ತಾಗಿದ್ದರೆ
ಮಕ್ಕಳ ಟೆಂಪರೇಚರ್ ಯಾವಾಗ ಚೆಕ್ ಮಾಡಬೇಕು?
ಮಕ್ಕಳ ಟೆಂಪರೇಚರ್ ಯಾವಾಗ ಪರೀಕ್ಷೆ ಮಾಡಬೇಕು ಎಂಬುವುದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಮಗುವಿನ ಮೈ ಉಷ್ಣಾಂಶ ಆಗಾಗ ಪರೀಕ್ಷೆ ಮಾಡಬೇಕಾಗಿಲ್ಲ, ಮಗು ನಿದ್ದೆ ಮಾಡಿದಾಗ ಎಬ್ಬಿಸಿ ಮಾಡುವುದು ಮಾಡಬೇಡಿ. ಮಗು ಸುಸ್ತಾದಂತೆ ಕಂಡು ಬಂದರೆ ಅಥವಾ ಈ ಹಿಂದೆ ಪಿಡ್ಸ್ ರೀತಿ ಬಂದಿದ್ದರೆ ಮಾತ್ರ ತುಂಬಾ ಎಚ್ಚರವಹಿಸಬೇಕು.
ಯಾವ ಥರ್ಮೋಮೀಟರ್ ಒಳ್ಳೆಯದು
* ಡಿಜಿಟಲ್ ಒಳ್ಳೆಯದು, ಇದನ್ನು ಬಾಯಿಯಲ್ಲಿ ಇಟ್ಟು ಅಥವಾ ಕಂಕುಳ ಕೆಳಗಡೆ ಇಟ್ಟು ಮೈ ಉಷ್ಣತೆ ಪರೀಕ್ಷಿಸಬಹುದು. ಕಂಕುಳ ಭಾಗದಲ್ಲಿ ಇಟ್ಟು ಮಾಡಿದರೆ ತುಂಬಾನೇ ನಿಖರವಾದ ಟೆಂಪರೇಚರ್ ತಿಳಿಯುವುದು.



Click it and Unblock the Notifications
