Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
30 ವರ್ಷ ಶೀತಲೀಕರಣದಲ್ಲಿದ್ದ ಭ್ರೂಣದಿಂದ ಅವಳಿ ಮಕ್ಕಳ ಪಡೆದ ಅಮೆರಿಕದ ದಂಪತಿ: ಈ ಚಮತ್ಕಾರಕ್ಕೆ ವಿಶ್ವವೇ ಬೆರಗಾಗಿದೆ
ವಿಶ್ವದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನೋಡುವಾಗ ಅಬ್ಬಾ ಎಂಥ ಅದ್ಭುತ ಎಂದನಿಸುವುದು, ಆದರೆ ಕೆಲವೊಂದು ಅದ್ಭುತಕ್ಕೆ ಮನುಷ್ಯನ ಬುದ್ಧಿವಂತಿಕೆ ಕಾರಣವಾಗುತ್ತಿದೆ. ಕೃತಕ ಗರ್ಭಧಾರಣೆ, ಪ್ರನಾಳ ಶಿಶು ತಯಾರಿಯಲ್ಲಿ ವೈದ್ಯಕೀಯ ಜಗತ್ತು ತುಂಬಾನೇ ಮುಂದುವರೆದಿದೆ. ಇದೀಗ ಪ್ರನಾಳ ಶಿಶುಗಳ ತಂತ್ರಜ್ಞಾನದಲ್ಲಿ ಒಂದು ಹೊಸ ಪ್ರಯೋಗ ಮಾಡಲಾಗಿದ್ದು, ಅದು ಯಶಸ್ವಿಯಾಗಿದೆ.

ಇದರಿಂದಾಗಿ 30 ವರ್ಷದಿಂದ ಭ್ರೂಣ ಸ್ಥಿತಿಯಲ್ಲಿದ್ದ ಅವಳಿ ಮಕ್ಕಳು ಜೀವ ಪಡೆದು ಭೂಮಿಗೆ ಬಂದಿದ್ದಾರೆ, ಈ ಮೂಲಕ ವಿಶ್ವದಲ್ಲಿ ಒಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಈ ಮಕ್ಕಳನ್ನು ವಿಶ್ವದಲ್ಲಿಯೇ ಅತ್ಯಂತ ಹಿರಿಯ ನವಜಾತಶಿಶುಗಳು ಎಂದು ಗುರುತಿಸಲಾಗಿದೆ.
ಅಮೆರಿಕದ ಒರೆಗಾನ್‌ನ ದಂಪತಿ 1992ರಲ್ಲಿ ಅಂದರೆ ಸುಮಾರು 30 ವರ್ಷಗಳ ಹಿಂದೆ ತಮ್ಮ ಅಂಡಾಣು, ವೀರ್ಯಾಣು ಸೇರಿಸಿ ಉತ್ಪತ್ತಿ ಮಾಡಲಾಗಿದ್ದ ಫಲವತ್ತತೆಯ ಭ್ರೂಣವನ್ನು ಶೀತಲೀಕರಣ ಮಾಡಿ ಸಂರಕ್ಷಿಸಲಾಗಿತ್ತು.
ಈ ಭ್ರೂಣ ರಾಚೆಲ್ ರಿಡ್ಜ್‌ವೇ ಮತ್ತು ಫಿಲಿಪ್ ರಿಡ್ಜ್‌ವೇ ದಂಪತಿಗೆ ಅವಳಿ ಮಕ್ಕಳಾಗಿ ಜನಿಸಿವೆ. ಇವರಲ್ಲಿ ಒಂದು ಹೆಣ್ಣು, ಒಂದು ಗಂಡು
ಈ ಮಕ್ಕಳನ್ನು ಲಿಡಿಯಾ ಹಾಗೂ ಟಿಮೊತಿ ರಿಡ್ಜ್‌ವೇ ಎಂದು ನಾಮಕರಣ ಮಾಡಲಾಗಿದೆ. ಹೆಣ್ಣು ಮಗು ಜನಿಸುವಾಗ ಎರಡೂವರೆ ಕೆಜಿ ಮೈ ತೂಕ ಹೊಂದಿದ್ದರೆ ಗಂಡು ಮಗು 2.92 ಕೆಜಿ ಮೈ ತೂಕ ಹೊಂದಿತ್ತು.
ಈ ಮಕ್ಕಳ ಭ್ರೂಣವನ್ನು ರಿಡ್ಜ್‌ವೇ ದಂಪತಿಯ ಅಂಡಾಣು, ವೀರ್ಯಾಣುವಿನಿಂದ ತಯಾರಿಸಿದ್ದಲ್ಲ. 30 ವರ್ಷದ ಯಾವುದೋ ದಂಪತಿ ಐವಿಎಫ್ ಮಾಡಿಸಿದಾಗ ಭ್ರೂಣವಾದ ಒಂದು ಭ್ರೂಣವನ್ನು ಹಾಗೇ ಸಂರಕ್ಷಿಸಲಾಗಿತ್ತು. ಇದೀಗ ಆ ಭ್ರೂಣದಿಂದ ಮಕ್ಕಳಾಗಿವೆ.
ರಿಡ್ಜ್ ವೇ ದಂಪತಿಗೆ 8, 6, 3 ವರ್ಷದ ಮಕ್ಕಳಿದ್ದು ದಾನ ಮಾಡಿದ ಭ್ರೂಣದ ಮಗುವನ್ನು ಪಡೆಯಲು ಬಯಸಿದ್ದರು, ಆಗ ಅವರು ಯಾರಿಗೂ ಬೇಡವಾಗಿದ್ದ ಈ ಭ್ರೂಣದಿಂದ ಮಗುವನ್ನು ಪಡೆಯಲು ನಿರ್ಧರಿಸಿ, "special consideration," ಅಡಿಯಲ್ಲಿ ಈ ಭ್ರೂಣದಿಂದ ಮಗುವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಕ್ಕಳ ಆಗಮನದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಿಡ್ಜ್‌ವೇ ಈ ಮಕ್ಕಳು ಮೊದಲು ಭ್ರೂಣವಾಗಿದ್ದಾಗ ನನಗೆ 5 ವರ್ಷ ಪ್ರಾಯವಿತ್ತು, ಈಗ ಅವರು ನನ್ನ ಮಕ್ಕಳಾಗಿ ಬಂದಿದ್ದಾರೆ. ಈ ಮಿರಾಕಲ್‌ಗೆ (ಅದ್ಭುತಕ್ಕೆ) ಖುಷಿಯಾಗಿದೆ ಎಂದಿದ್ದಾರೆ.



Click it and Unblock the Notifications


