Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಮಗು ತಿನ್ನದಿದ್ದರೆ ಆಹಾರದ ಬದಲಿಗೆ ಹಾಲು ಕೊಡುವುದು ಸರಿಯಲ್ಲ, ಏಕೆ?
ಮಗು ಬೆಳೆಯುತ್ತಿದ್ದಂತೆ ಹಾಲಿನ ಜೊತೆಗೇ ಇತರ ಆಹಾರಗಳನ್ನೂ ಕೊಡಬೇಕು. ಈ ಆಹಾರಗಳಿಗೆ ಬದಲಿಯಾಗಿ ಹಾಲನ್ನು ಕುಡಿಸುವುದು ಅಷ್ಟು ಒಳ್ಳೆಯದಲ್ಲ. ಹಾಲಿನಲ್ಲಿ ಕ್ಯಾಲ್ಸಿಯಂ ಮೊದಲಾದ ಅಗತ್ಯ ಪೋಷಕಾಂಶಗಳಿದ್ದರೂ ಇದು ಪರಿಪೂರ್ಣ ಆಹಾರವೇನೂ ಅಲ್ಲ.
ಅಂಬೆಗಾಲಿಡುತ್ತಿರುವ ಮಗುವಿಗೆ ದಿನಕ್ಕೆ 350 ಮಿಲಿ ಲೀಟರ್ ನಿಂದ 400 ಮಿಲಿ ಲೀಟರ್ ನಷ್ಟು ಹಾಲು ಬೇಕಾಗುತ್ತದೆ ಮತ್ತು ಶಿಫಾರಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನದನ್ನು ಕುಡಿಸುವುದು ಒಳ್ಳೆಯದಲ್ಲ.
ಹೆಚ್ಚಿನ ಪ್ರಮಾಣದ ಹಾಲು ಕುಡಿಸುವುದರಿಂದ ಕಬ್ಬಿಣ ಮತ್ತು ಜೀವಸತ್ವಗಳ ಸಹಿತ ಇತರ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಇತರ ಆಹಾರಗಳನ್ನು ನಿಮ್ಮ ಮಗು ಸೇವಿಸದೇ ಹೋಗಬಹುದು. ಆದ್ದರಿಂದ ಮಗುವಿನ ಬೆಳವಣಿಗೆ ದೃಷ್ಟಿಯಿಂದ ಅದರ ಆಹಾರಕ್ರಮ ಹೇಗಿರಬೇಕೆಂದು ಹೇಳಲಾಗಿದೆ ನೋಡಿ:

ಮಕ್ಕಳ ಊಟದ ತಟ್ಟೆಯಲ್ಲಿರಲಿ ಪೌಷ್ಠಿಕ ಆಹಾರ
ಹೆಚ್ಚಿನ ಅಂಬೆಗಾಲಿಡುತ್ತಿರುವ ಮಕ್ಕಳು ಬಹಳ ಕಡಿಮೆ ವೈವಿಧ್ಯದ ಆಹಾರಗಳನ್ನು ತಿನ್ನುವ ಒಂದು ಹಂತದ ಮೂಲಕ ಹಾದು ಹೋಗುತ್ತಾರೆ. ಇದು ಅವರ ಬೆಳವಣಿಗೆಯ ಸಾಮಾನ್ಯ ಭಾಗವಾಗಿದೆ, ಆದರೆ, ನಿಮ್ಮ ಮಗು ಏಕೆ ಸರಿಯಾಗಿ ತಿನ್ನುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹಾ ಮುಖ್ಯವಾಗಿದೆ.

ಊಟ ಬದಲಿಗೆ ಹಾಲು ಬಯಸುವ ಮಕ್ಕಳು
ಹೆಚ್ಚಿನ ಅಂಬೆಗಾಲಿಡುತ್ತಿರುವ ಮಕ್ಕಳಂತೆಯೇ, ನಿಮ್ಮ ಮಗು ತಿನ್ನುವುದಕ್ಕಿಂತಲೂ ಆಟಕ್ಕೇ ಹೆಚ್ಚಿನ ಆದ್ಯತೆ ನೀಡಿ ತನ್ನ ಸಮಯವನ್ನು ಊಟಕ್ಕಿಂತಲೂ ಆಟಕ್ಕಾಗಿ ಹೆಚ್ಚು ಆಯ್ಕೆ ಮಾಡುತ್ತದೆ. ಹಾಗಾಗಿ ಊಟದ ಮೇಜಿನ ಬಳಿ ಕುಳಿತು ಆಹಾರವನ್ನು ಹೆಚ್ಚಿನ ಸಮಯದವರೆಗೆ ಅಗಿಯುವುದಕ್ಕಿಂತಲೂ ತಕ್ಷಣ ಒಂದು ಲೋಟ ಹಾಲನ್ನು ಕುಡಿದು ಮರುಕ್ಷಣವೇ ತನ್ನ ಆಟಿಕೆಗಳಿಗೆ ಹಿಂತಿರುಗುವುದನ್ನು ಮಕ್ಕಳು ಕಂಡುಕೊಳ್ಳಬಹುದು.

ಮಗು ಊಟ ಮಾಡುತ್ತಿಲ್ಲವೇ?
ಕೆಲವೊಮ್ಮೆ ಮಗುವಿನ ಆರೋಗ್ಯ ಏರುಪೇರಾಗಿದ್ದರೂ ಮಗು ಊಟ ಮಾಡದೇ ಇರುವುದರ ಕಾರಣವಾಗಿರಬಹುದು. ಕೆಲವೊಮ್ಮೆ ತನಗೆ ಬಲವಂತವಾಗಿ ತಿನ್ನಿಸಲಾಗುತ್ತಿದೆ ಎಂಬ ಅರಿವೂ ಮಗುವಿಗೆ ಆಗುವ ಮೂಲಕ ಹಿರಿಯರ ಗಮನ ಸೆಳೆಯಲೂ ಊಟ ಮಾಡದೇ ಇರಲು ಹಠ ಹಿಡಿಯಬಹುದು.
ಆದ್ದರಿಂದ ಒಂದು ವೇಳೆ ಮಗು ದಿನವೊಂದರಲ್ಲಿ ಒಂದೇ ಹೊತ್ತು ಘನ ಆಹಾರವನ್ನು ಸೇವಿಸಿದರೆ ದೃತಿಗೆಡದಿರಿ. ಬದಲಿಗೆ ಇಡೀ ವಾರದಲ್ಲಿ ಮಗು ಯಾವ ವೈವಿಧ್ಯತೆಯ ಆಹಾರಗಳನ್ನು ಸೇವಿಸಿದೆ ಎಂಬ ಬಗ್ಗೆ ಗಮನ ಹರಿಸಿ.

ಮಗು ತಿನ್ನದಿದ್ದರೆ ಏನು ಮಾಡಬೇಕು?
ನಿಮ್ಮ ಮಗು ಕೇವಲ ಗಡಿಬಿಡಿಯಿಂದ ಬಳಲುತ್ತಿದ್ದರೆ ಮತ್ತು ನೀವು ಅವಳಿಗೆ ಏನು ತಯಾರಿಸುತ್ತೀರೋ ಅದನ್ನು ತಿನ್ನಲು ಬಯಸದಿದ್ದರೆ, ಮಗುವನ್ನು ತನ್ನ ಆಟಿಕೆಗಳ ಬಳಿ ಸಾಗಲು ಬಿಡಿ. ಮಗುವಿಗೆ ಹಸಿವೆಯಾದಾಗ ತಾನೇ ತಾಯಿಯ ಬಳಿ ಬರುತ್ತದೆ. ಆಗ ಮಗು ಬಯಸುವ ಹಾಲನ್ನು ಕೊಡದೇ ಅಗತ್ಯವಿರುವ ಘನ ಆಹಾರವನ್ನೇ ನೀಡಿ. ನಿಮ್ಮ ಮಗುವಿಗೆ ತಾನು ಬಯಸಿದಾಗೆಲ್ಲಾ ಹಾಲು ನೀಡಿದರೆ, ಅಥವಾ ಮಗುವಿನ ತಟ್ಟೆಯಲ್ಲಿರುವ ಆಹಾರವನ್ನು ಮಗು ಇಷ್ಟಪಡದಿದ್ದರೆ, ನೀವೇ ನಿಮ್ಮ ಮಗುವಿಗೆ ಕೆಟ್ಟ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸುತ್ತೀರಿ. ನಿಮ್ಮ ಮಗು ಆಹಾರಕ್ಕಾಗಿ ನಿಮ್ಮ ಬಳಿಗೆ ಬಂದಾಗ ನೀವು ನಿರಂತರವಾಗಿ ಮಗುವಿಗೆ ಅಗತ್ಯವಿರುವ ಘನ ಆಹಾರಗಳನ್ನು ನೀಡುತ್ತಾ ಬಂದರೆ ಮಗು ಶೀಘ್ರವೇ ತನ್ನ ಪಾಲಿಗೆ ಬಂದದ್ದೇ ಪಂಚಾಮೃತ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತದೆ ಹಾಗೂ ಈ ಆಹಾರವನ್ನು ಸೇವಿಸಲು ತೊಡಗುತ್ತದೆ.

ಮಗು ಕೇಳಿದಾಗೆಲ್ಲಾ ಹಾಲು ನೀಡಬೇಡಿ
ಒಂದು ವೇಳೆ ನಿಮ್ಮ ಕುಟುಂಬದ ಇತರ ಸದಸ್ಯರೂ ಮಗುವಿಗೆ ಆಹಾರ ನೀಡುತ್ತಿದ್ದರೆ ಅವರಿಗೂ ಈ ವಿಧಾನದ ಬಗ್ಗೆ ತಿಳಿಸಿ ಹಾಗೂ ಮಗು ಕೇಳಿದಾಗಲೆಲ್ಲಾ ಹಾಲನ್ನು ನೀಡದಿರುವಂತೆ ಎಚ್ಚರಿಸಿ.
ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ನಿಮ್ಮ ಮಗುವಿಗೆ ಮುಖ್ಯ ಆಹಾರ ಗುಂಪುಗಳಿಂದ ವ್ಯಾಪಕವಾದ ಆಹಾರವನ್ನು ನೀಡುವುದನ್ನು ಮುಂದುವರಿಸಿ.

ತಜ್ಞರ ಸಲಹೆ ಪಡೆಯಿರಿ
ನಿಮ್ಮ ಅಂಬೆಗಾಲಿಡುತ್ತಿರುವ ಮಗು ಎಷ್ಟು ತಿನ್ನಬೇಕು ಎಂದು ನೀವು ಇನ್ನೂ ಚಿಂತೆ ಮಾಡುತ್ತಿದ್ದರೆ, ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ. ವೈದ್ಯರು ನಿಮ್ಮ ಮಗುವಿನ ತೂಕ ಮತ್ತು ಎತ್ತರವನ್ನು ಪರಿಶೀಲಿಸಿ ಸೂಕ್ತ ಸಲಹೆ ನೀಡಬಹುದು. ಸಾಮಾನ್ಯವಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ನಿಮಗೆ ಭರವಸೆ ನೀಡಬಹುದು.



Click it and Unblock the Notifications
