Latest Updates
-
'June Theory' का सच: क्या मानसून में प्यार की नई शुरुआत वाकई मुमकिन है? -
भारी बारिश का अलर्ट: मानसून में घर और बालकनी को सुरक्षित रखने के अचूक तरीके -
मानसून में फूड पॉइजनिंग का खतरा: किचन में आज ही करें ये 5 जरूरी बदलाव -
मानसून में बीमार पड़ने से बचना है? तो किचन और स्ट्रीट फूड के लिए अपनाएं ये वायरल सेफ्टी हैक्स -
भीषण गर्मी और तूफान का अलर्ट: वर्कआउट करते समय कहीं आप तो नहीं कर रहे ये बड़ी गलती? -
आमिर खान की 5 जुलाई की शादी: दूसरी शादी को सफल और सुरक्षित बनाने का सीक्रेट फॉर्मूला -
भीषण गर्मी में शादी का जश्न: मेहमानों को लू से बचाने के लिए अपनाएं ये स्मार्ट टिप्स -
मानसून की बारिश से घर को बचाएं: 60 मिनट में करें ये 4 जरूरी काम -
मानसून में वर्कआउट का नया रूटीन: बारिश और उमस के बीच फिटनेस कैसे बरकरार रखें? -
मानसून में शादी का प्लान है? इन 5 स्मार्ट टिप्स से अपनी वेडिंग को बनाएं यादगार और सुरक्षित
ನ. 7ಕ್ಕೆ ಶಿಶು ರಕ್ಷಣೆ ದಿನ: ಶಿಶುಗಳ ಮರಣ ತಡೆಗಟ್ಟಲು ಏನು ಮಾಡಬೇಕು?
ನವೆಂಬರ್ 7ನ್ನು ಶಿಶುವಿನ ರಕ್ಷಣೆಯ ದಿನವನ್ನಾಗಿ ಆಚರಿಸಲಾಗುವುದು. ಮಗುವಿನ ರಕ್ಷಣೆಗೆ ಸುರಕ್ಷಿತ ಕ್ರಮಗಳನ್ನು ಅನುಸರಿಸಿ ನವಜಾತ ಶಿಶುಗಳನ್ನು ರಕ್ಷಣೆ ಮಾಡುವುದರ ಬಗ್ಗೆ ಜಾಗೃತೆ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು.
ಹುಟ್ಟಿದಾಗ ಸರಿಯಾದ ಆರೈಕೆ ಸಿಗದೆ ಎಷ್ಟೋ ಶಿಶುಗಳು ಸಾವನ್ನಪ್ಪುತ್ತಿದ್ದಾರೆ. ನವಜಾತ ಶಿಶುಗಳ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಂರಕ್ಷಿಸುವ ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುವುದು. ಹಳ್ಳಿ ಪ್ರದೇಶಗಳಲ್ಲಿ ಹುಟ್ಟಿದ ಮಕ್ಕಳಿಗೆ ಏನಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇದರ ಕುರಿತು ಜನರಲ್ಲಿ ಅರಿವು ಮೂಡಿಸಲು ವಿಶ್ವ ನವಜಾತ ಶಿಶುಗಳ ದಿನವನ್ನು ಆಚರಿಸಲಾಗುವುದು.
ವಿಶ್ವ ಸಂಸ್ಥೆಯ ಪ್ರಕಾರ ಭಾರತದಲ್ಲಿ 2018 ಮರಣವೊಂದಿದ ನವಜಾತ ಶಿಶುಗಳ ಸಂಖ್ಯೆ 721000, ದಿನದಲ್ಲಿ ಸುಮಾರು 1975 ಮಕ್ಕಳು ಸರಿಯಾದ ಆರೈಕೆ ಸಿಗದೆ ಸಾವನ್ನಪ್ಪುತ್ತಿದ್ದಾರೆ.

ಮಗು ಹುಟ್ಟಿದ ತಕ್ಷಣ ಎದೆಹಾಲುಣಿಸಬೇಕು
ಮಗು ಹುಟ್ಟಿದ ತಕ್ಷಣ ಎದೆ ಹಾಲುಣಿಸಬೇಕು. ಇದು ಮಗು ಬದುಕುವ ಸಾಧ್ಯತೆ ಹೆಚ್ಚಿಸುತ್ತೆ. ಅಲ್ಲದೆ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಇದು ಅವಶ್ಯಕ. ಅದರಲ್ಲೂ ಮೊದಲ 2 ವರ್ಷ ತುಂಬಾನೇ ಮುಖ್ಯ. ಮಕ್ಕಳಿಗೆ ಪೋಷಕಾಂಶದ ಕೊರತೆ ಉಂಟಾಗಬಾರದು, ಲಕ್ಷಗಟ್ಟಲೆ ಮಕ್ಕಳಿಗೆ ಸರಿಯಾದ ಪೋಷಕಾಂಶ ದೊರೆಯುತ್ತಿಲ್ಲ. ಇದರಿಂದಾಗಿ ಮಕ್ಕಳಿಗೆ ಅನೇಕ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ?
* ಮಗು ಹುಟ್ಟಿ ಒಂದು ಗಂಟೆಯ ಒಳಗೆ ಎದೆ ಹಾಲು ಕುಡಿಸಬೇಕು.
* ಮೊದಲ 6 ತಿಂಗಳವರೆಗೆ ಎದೆ ಹಾಲನ್ನು ಮಾತ್ರ ಕೊಡಬೇಕು.
* ಮಗುವಿಗೆ 6 ತಿಂಗಳಿಂದ 2 ವರ್ಷದವರೆಗೆ ಎದೆಹಾಲುಣಿಸಿದರೆ ಅದರ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

ಲಸಿಕೆಗಳನ್ನು ಕೊಡಿಸಿ
* ಮಗುವಿಗೆ ಯಾವ ತಿಂಗಳು ಯಾವ ಲಸಿಕೆ ನೀಡಬೇಕೆಂಬ ಲಸಿಕೆ ಚಾರ್ಟ್ ಇರುತ್ತೆ, ಅದನ್ನು ತಪ್ಪದೆ ಕೊಡಿಸಿ.
*ಲಸಿಕೆಗಳು ಮಗುವಿಗೆ ಅನೇಕ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.

ಮಗುವನ್ನು ಮಲಗಿಸುವ ಸ್ಥಳ ಸುರಕ್ಷಿತವಾಗಿರಲಿ
ಮಗು ಎರಡು ವರ್ಷದವರೆಗೆ ಅದನ್ನು ಎಲ್ಲಿ ಮಲಗಿಸುತ್ತೇವೆ ಆ ಜಾಗದ ಬಗ್ಗೆ ತುಂಬಾನೇ ಎಚ್ಚರಿಕೆವಹಿಸಬೇಕು. ಬೆಡ್ ಮೇಲೆ ಮಲಗಿಸುವುದಾದರೆ ಎದ್ದ ತಕ್ಷಣ ಬೀಳುವ ಅಪಾಯ ಹೆಚ್ಚು. ಇನ್ನು 8 ತಿಂಗಳು ಕಳೆದ ಮೇಲೆ ತೊಟ್ಟಿಲಿನಲ್ಲಿ ಮಲಗಿಸಿದಾಗ ಮಗು ಬೀಳದಂತೆ ವ್ಯವಸ್ಥೆ ಮಾಡಿ. ನೆಲದಲ್ಲಿ ಹಾಸಿಗೆ ಹಾಕಿ ಮಲಗಿಸಿದರೆ ಹಾವು ಮುಂತಾದ ವಿಷ ಜಂತು ಬಾರದಂತೆ ಎಚ್ಚರವಹಿಸಿ.

ಮಗುವಿಗೆ ನೀಡುವ ಆಟಿಕೆಗಳು ಜೋಪಾನ
ಆಟಿಕೆ ನುಂಗಿ ಮಕ್ಕಳನ್ನು ಸಾವನ್ನಪ್ಪಿರುವ ಅನೇಕ ಪ್ರಕರಣಗಳಿವೆ. ಆದ್ದರಿಂದ ತುಂಬಾ ಚಿಕ್ಕ ಆಟಿಕೆಗಳನ್ನು ನೀಡಬೇಡಿ. ಮಣಿ, ನಾಣ್ಯ ಇವೆಲ್ಲಾ ಮಗುವಿಗೆ ಸಿಗದಂತೆ ಎಚ್ಚರವಹಿಸಿ. ಇನ್ನು ಚೂಪಾದ ವಸ್ತುಗಳು, ಆಟಿಕೆಗಳನ್ನು ನೀಡಬೇಡಿ. ಇನ್ನು ಮಗು ಓಡಾಡುವಾಗ ಮಗುವಿಗೆ ಅನುಕೂಲವಾಗುವಂತೆ ಮನೆಯ ವಸ್ತುಗಳನ್ನು ಜೋಡಿಸಿ ಇಡಿ. ಮನೆಯಲ್ಲಿ ಬಕೆಟ್‌ಗಳಲ್ಲಿ ನೀರು ತುಂಬಿಡಬೇಡಿ.
ಹೀಗೆ ಮಗು ಸ್ವಲ್ಪ ದೊಡ್ಡದಾಗಿ ಅದಕ್ಕೆ ಬುದ್ಧಿ ಬರುವವರೆಗೆ ಪೋಷಕರು ತುಂಬಾನೇ ಎಚ್ಚರಿಕೆವಹಿಸಬೇಕಾಗಿದೆ. ಅಲ್ಲದೆ ಅಪರಿಚಿತರ ಬಳಿ ಮಗುವನ್ನು ನೀಡಬೇಡಿ. ಮಗು ಜೊತೆ ಮನೆಯಲ್ಲಿರುವಾಗ ಯಾರಾದರೂ ಏನಾದರೂ ಮಾರಿಕೊಂಡು ಬರುವವರ ಬಗ್ಗೆ ಎಚ್ಚರ. ಮಗುವಿಗೆ ಮನೆ ಹಾಗೂ ಪರಿಸರ ಸುರಕ್ಷಿತವಾಗಿಸಿ.



Click it and Unblock the Notifications