Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
BENTA Disease: ಬೆಂಗಳೂರಿನ ಮಗುವಿನಲ್ಲಿ ಬಲು ಅಪರೂಪದ ಬೆಂಟಾ ಕಾಯಿಲೆ: ಏನಿದರ ಲಕ್ಷಣ?
ಬೆಂಗಳೂರಿನ ಏಳು ತಿಂಗಳ ಮಗನಲ್ಲಿ ತುಂಬಾ ಅಪರೂಪದಲ್ಲಿ ಅಪರೂಪದ ಕಾಯಿಲೆ ಬೆಂಟಾ ಪತ್ತೆಯಾಗಿದೆ. ವಿಶ್ವದಲ್ಲಿಯೇ 14 ಜನರಲ್ಲಿ ಈ ಕಾಯಿಲೆ ಇದೆ. ಬೆಂಗಳೂರಿನ ವಿಜಯೇಂದ್ರ ಎಂಬ ಮಗುವಿನಲ್ಲಿ ಬಲು ಅಪರೂಪದ ಕಾಯಿಲೆ ಪತ್ತೆಯಾಗಿದೆ. ಅದರಲ್ಲೂ ಈ ಕಾಯಿಲೆ ಅತೀ ಬೇಗನೆ ಪತ್ತೆಯಾಗಿರುವುದು ವಿಜಯೇಂದ್ರನದ್ದೇ ಆಗಿದೆ, ಈ ಕಾಯಿಲೆ ಹೊಂದಿರುವ ಅತೀ ಚಿಕ್ಕ ಪ್ರಾಯದ ಹಾಗೂ ರೋಗ ಲಕ್ಷಣಗಳು ಗಂಭೀರವಾಗುವ ಮುನ್ನ ಪತ್ತೆಯಾದ ಮಗು ವಿಜಯೇಂದ್ರನೇ ಆಗಿದೆ.

ಮಗು ವಿಜಯೇಂದ್ರ ಬದುಕಬೇಕೆಂದರೆ ಬ್ಲಡ್ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲ್ಯಾಂಟ್ (ರಕ್ತದ ಕಾಂಡಕೋಶ ಕಸಿ) ಮಾಡಬೇಕಾಗಿದೆ ಎಂದು ಭಾರತದ DKMS BMSTಫೌಂಡೇಷನ್ ಹೇಳಿದೆ. ಬೆಂಗಳೂರಿನ ಬ್ಲಡ್ ಸ್ಟೆಮ್ ರಿಜೆಸ್ಟ್ರಿ ಮಗುವಿಗೆ ಹೊಂದುವ ದಾನಿಗಾಗಿ ಹುಡುಕುತ್ತಿದೆ. ಭಾರತದಲ್ಲಿ ಬ್ಲಡ್ ಸ್ಟೆಮ್ ದಾನಿಗಳು 0.04ರಷ್ಟು ಮಾತ್ರ ಇದೆ, ಹೆಚ್ಚಿನವರಿಗೆ ಬ್ಲಡ್ ಸ್ಟೆಮ್ ದಾನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಹಾಗಾಗಿ ಬ್ಲಡ್ ಸ್ಟೆಮ್ ದಾನಿಗಳು ತುಂಬಾ ಕಡಿಮೆ ಇದೆ.

ಮಗು ಜೀವ ಉಳಿಯಲು ಬೇಕಾಗಿದ್ದಾರೆ ಬ್ಲೆಡ್ ಸ್ಟೆಮ್ ದಾನಿ
ಮಗು ವಿಜಯೇಂದ್ರ ಬದುಕಬೇಕೆಂದರೆ ಬ್ಲಡ್ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲ್ಯಾಂಟ್ (ರಕ್ತದ ಕಾಂಡಕೋಶ ಕಸಿ) ಮಾಡಬೇಕಾಗಿದೆ ಎಂದು ಭಾರತದ DKMS BMST ಫೌಂಡೇಷನ್ ಹೇಳಿದೆ. ಬೆಂಗಳೂರಿನ ಬ್ಲಡ್ ಸ್ಟೆಮ್ ರಿಜೆಸ್ಟ್ರಿ ಮಗುವಿಗೆ ಹೊಂದುವ ದಾನಿಗಾಗಿ ಹುಡುಕುತ್ತಿದೆ. ಭಾರತದಲ್ಲಿ ಬ್ಲಡ್ ಸ್ಟೆಮ್ ದಾನಿಗಳು 0.04ರಷ್ಟು ಮಾತ್ರ ಇದೆ, ಹೆಚ್ಚಿನವರಿಗೆ ಬ್ಲಡ್ ಸ್ಟೆಮ್ ದಾನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಹಾಗಾಗಿ ಬ್ಲಡ್ ಸ್ಟೆಮ್ ದಾನಿಗಳು ತುಂಬಾ ಕಡಿಮೆ ಇದೆ.

ಬೆಂಟಾ ಕಾಯಿಲೆ ಎಂದರೇನು?
* ಬೆಂಟಾ ತುಂಬಾ ಅಪಾಯಕಾರಿಯಾದ ಕಾಯಿಲೆಯಾಗಿದೆ. ಬೆಂಟಾದ ವಿಸ್ತೃತ ರೂಪ B-cell expansion with NF-κB and T-cell anergy ಎಂಬುವುದಾಗಿದೆ.
* ಬಿ ಸೆಲ್ ಅಂದ್ರೆ ಮೂಳೆ ಮಜ್ಜೆಯ ಇಮ್ಯೂನ್ ಸೆಲ್‌ನ ಒಂದು ರೂಪವಾಗಿದ್ದು ಈ ಕೇಸ್‌ನಲ್ಲಿ ಅದು ಸಹಜಗಿಂತ ತುಂಬಾನೇ ಹೆಚ್ಚಿರುತ್ತದೆ.
* NF-κB ಪ್ರೊಟ್ರೀನ್ ಕಾಂಪ್ಲೆಕ್ಸ್ ಆಗಿದ್ದು ಇದು ಇದರಿಂದ ಕೆಲವೊಮದು ಜೀನ್‌ಗಳು ಆನ್ -ಆಫ್ ಆಗುತ್ತಿರುತ್ತದೆ.
* T-cell ಎಂಬುವುದು ಇಮ್ಯೂನೆ ಸೆಲ್ ಆಗಿದ್ದು ಅದು ಥೈಮಸ್‌ನಲ್ಲಿ ಬೆಳೆಯುತ್ತದೆ. ಥೈಮಸ್ ಎಂಬ ಅಂಗ ಎದೆ ಮೇಲ್ಬಾಗದ ಎದೆಯ ಬಳಿ ಇರುವ ಮೂಳೆಯಲ್ಲಿರುತ್ತದೆ.
* Anergy ಅಂದ್ರೆ ಸಾಮಾನ್ಯಕ್ಕಿಂತ ಹೆಚ್ಚಿನ ಇಮ್ಯೂನೆ ರಿಯಾಕ್ಷನ್ ಹೊಂದಿರುವುದು.
ಬೆಂಟಾ ಕಾಯಿಲೆ ಎಂದರೆ ಒಂದು ಬಗೆಯ ಇಮ್ಯೂನೆ ಸೆಲ್ ಸಹಜಕ್ಕಿಂತ ಹೆಚ್ಚು ಇರುವುದಾಗಿದೆ. ಇದರಿಂದಾಗಿ ಗುಲ್ಮ ದೊಡ್ಡದಾಗುವುದು, ದುಗ್ಧರಸ ಗ್ರಂಥಿಗಳು ದೊಡ್ಡದಾಗುವುದು, ಲಿಂಫೋಮಾ ಎಂಬ ಬಗೆಯ ಕ್ಯಾನ್ಸರ್ ಉಂಟಾಗುವುದು.

ಬೆಂಟಾ ಪತ್ತೆ ಹೇಗೆ?
* ಇದನ್ನು ಲ್ಯಾಬ್ ಪರೀಕ್ಷೆ ಮೂಲಕ ಕಂಡು ಹಿಡಿಯಲಾಗುವುದು.
*'CARD11 mutation' ಇರುವ ವ್ಯಕ್ತಿಗಳ ಮಕ್ಕಳಿಒಗೆ ಬರುವ ಸಾಧ್ಯತೆ ಶೇ.50ರಷ್ಟಿದೆ.
* ಇದರ ಪ್ರಮುಖ ಲಕ್ಷಣವೆಂದರೆ ಗಲ್ಮ ದೊಡ್ಡದಾಗುವುದು, ಕಿವಿ, ಮೂಗು, ಶ್ವಾಸಕೋಶದ ಸೋಂಕು ಕಂಡು ಬರುವುದು.
ಪ್ರತಿಯೊಬ್ಬ ವ್ಯಕ್ತಿಯಲ್ಲಿ ಎರಡು CARD 11 ಜೀನ್ ಇರುತ್ತದೆ, ಅದರಲ್ಲಿ ಒಂದು ಪೋಷಕರಿಂದ ಬರುತ್ತದೆ.
ಈ ಎರಡರಲ್ಲಿ ಒಂದು CARD 11 ಜೀನ್‌ನಲ್ಲಿ ಅಸಹಜತೆ ಉಂಟಾದರೆ ಬೆಂಟಾ ಕಾಯಿಲೆ ಬರುವುದು.



Click it and Unblock the Notifications
