Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ಮಗು ತುಂಬಾ ಹೊತ್ತು ನಿದ್ರಿಸಲು ಹೀಗೆ ಮಾಡಿ
ತಾಯ್ತನದ ಪ್ರಯಾಣ ಅನುಭವಗಳ ಮೂಟೆಯನ್ನು ಹೊರುತ್ತಾ ಸಾಗುವಂತದ್ದು. ಮಗು ಜನಿಸಿದ ಮೇಲೆ ಮಗುವಿನ ಆರೈಕೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಮೊದಲ ಬಾರಿಗೆ ತಾಯಿಯಾದವರದ್ದು ಮಗು ಮಲಗುವುದೇ ಕಡಿಮೆ, ನಿದ್ದೆಯೇ ಇಲ್ಲ ಎನ್ನುವ ಕಂಪ್ಲೈಂಟ್‌ಗಳನ್ನು ನೀವು ಕೇಳಿಯೇ ಕೇಳುತ್ತೀರಿ. ತೊಟ್ಟಿಲು ತೂಗಿ ತೂಗಿ ಮಲಗಿಸಿದ ಒಂದು ಘಳಿಗೆಯಲ್ಲೇ ಎದ್ದು ಅಳೋದಿಕ್ಕೆ ಸ್ಟಾರ್ಟ್, ಈ ಮಗುವನ್ನು ಮಲಗಿಸುವುದಾದರೂ ಹೇಗಪ್ಪಾ ಎನ್ನುತ್ತಾರೆ. ಮಗುವನ್ನು ಮಲಗಿಸುವುದೂ ಒಂದು ಸ್ಕಿಲ್ ಎನ್ನಬಹುದು. ಇದಕ್ಕೆ ಸಮಯವೂ ಬೇಕು, ಜೊತೆಗೆ ತಾಳ್ಮೆಯೂ ಬೇಕು. ರಾತ್ರಿಯಿಡೀ ನಿದ್ದೆ ಇಲ್ಲ ಪದೇ ಪದೇ ಎಚ್ಚರವಾಗಿ ಅಳು,ಹಗಲೂ ಕೂಡಾ ನಿದ್ದೆ ಮಾಡುವುದಿಲ್ಲ ಎನ್ನುವ ತಾಯಂದಿರಿಗೆ ನಿಮ್ಮ ಮಗುವನ್ನು ಮಲಗಿಸುವ ಸಿಂಪಲ್ ಟಿಪ್ಸ್ ಈ ಲೇಖನದ ಮೂಲಕ ವಿವರಿಸುತ್ತೇವೆ.. ಆ ಟಿಪ್ಸ್ ಏನಪ್ಪಾ ಅಂದ್ರೆ..

1. ನವಜಾತ ಶಿಶುವನ್ನು ಬಟ್ಟೆಯಲ್ಲಿ ಕಟ್ಟಿ ಮಲಗಿಸಿ
ನೀವು ನೋಡಿರಬಹುದು ಮಗು ಜನಿಸಿದ ಮೇಲೆ ಮಗುವನ್ನು ಬಿಳಿ ಕಾಟನ್ ಬಟ್ಟೆಯಿಂದ ಬಿಗಿಯಾಗಿ ಕಟ್ಟುತ್ತಾರೆ. ಯಾಕೆಂದರೆ ಅದುವರೆಗೂ ತಾಯಿಯ ಹೊಟ್ಟೆಯಲ್ಲಿ ಬೆಚ್ಚಗೆ ಮಲಗಿರುತ್ತದೆ. ಹೊರಗೆ ಬಂದ ಮೇಲೆ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ. ಈ ರೀತಿ ಬಟ್ಟೆಯಿಂದ ಕಟ್ಟುವುದರಿಂದ ಸುರಕ್ಷತೆಯ ಅನಜಭ ಮಗುವಿಗಾಗುತ್ತದೆ. ಅಲ್ಲದೇ ಮಗು ನಿದ್ದೆಯಲ್ಲಿ ಕೈ ಕಾಲು ಆಡಿಸುವುದು, ಬೆಚ್ಚಿ ಬೀಳುವುದು ಹೆಚ್ಚು. ಕೈಕಾಲು ಆಡಿದಾಗ ನಿದ್ದೆಯಲ್ಲಿರುವ ಮಗುವಿಗೆ ಎಚ್ಚರವಾಗುತ್ತದೆ. ಹಾಗಾಗಿ ನಿಮ್ಮ ಮಗುವನ್ನು ಬಿಗಿಯಾಗಿ ಕಾಟನ್ ಬಟ್ಟೆಯಲ್ಲಿ ಕೈಕಾಲು ಆಡಿಸದಂತೆ ಕಟ್ಟಿದರೆ ಮಗು ದೀರ್ಘ ಸಮಯದವರೆಗೂ ನಿದ್ದೆ ಮಾಡಲು ಅನುಕೂಲಕರ. ಅಲ್ಲದೇ ಮಗುವಿಗೆ ತಾಯಿಯ ಉದರದಲ್ಲಿದಂತೆಯೇ ಅನುಭವವಾಗುತ್ತದೆ. ಬಟ್ಟೆಯನ್ನು ಕಟ್ಟುವ ವಿಧಾನವನ್ನು ಅಜ್ಜಿ, ಅಥವಾ ಅಮ್ಮನಿಂದ ಕೇಳಿ ತಿಳಿದುಕೊಳ್ಳಿ, ಮಗುವಿಗೆ ಸ್ವಾಡಲ್ ಮಾಡುವ ವಿಧಾನದ ಬಗ್ಗೆ ವಿಡಿಯೋಗಳೂ ಸಾಕಷ್ಟಿವೆ.ಚ್ಚಾಗುತ್ತದೆ.

2. ಡಿಮ್ ಲೈಟ್ ಬಳಸಿ
ಸಾಮಾನ್ಯವಾಗಿ ನವಜಾತ ಶಿಶು ರಾತ್ರಿಯೂ ಎರಡು ಗಂಟೆಗಳಿಗೊಮ್ಮೆ ಎದ್ದೇಳುತ್ತದೆ, ಕೆಲವೊಮ್ಮೆ ಅದು ಮೂರು ಗಂಟೆಯೂ ಮಲಗಬಹುದು. ಮಗು ಬೆಳವಣಿಗೆ ಹೊಂದುತ್ತಾ ಬಂದಂತೆ ರಾತ್ರಿ ಮಲಗುವ ಅವಧಿ ಹೆಚ್ಚಾಗುತ್ತದೆ. ಹೆಚ್ಚಿನವರು ಮಗುವಿನ ರೂಮ್‌ನಲ್ಲಿ ಹೆಚ್ಚು ಉರಿಯುವ ಬಲ್ಬ್ ಹಾಕಿರುತ್ತಾರೆ. ಯಾಕೆಂದರೆ ಮಗು ಇರುವ ರೂಮ್‌ನಲ್ಲಿ ಬೆಳಕಿರಬೇಕೆಂದು. ಆದರೆ ಇದು ತಪ್ಪು. ಮಗುವಿಗೂ ರಾತ್ರಿ ,ಹಗಲಿನ ವ್ಯತ್ಯಾಸ ತಿಳಿಯುವಂತೆ ಮಾಡಿ. ಹಗಲು ಸಹಜ ಬೆಳಕು ಬರುವಂತೆ ಮಾಡಿ, ರಾತ್ರಿ ಮಂದವಾಗಿ ಬೆಳಗುವ ಡಿಮ್ ಲೈಟ್ ಬಳಸಿ. ಈ ರೀತಿ ಮಾಡಿದಲ್ಲಿ ಮಗು ಬೆಳೆಯುತ್ತಾ ಹೋದಂತೆ ರಾತ್ರಿ ಹೆಚ್ಚು ನಿದ್ರಿಸಲು ಪ್ರಾರಂಭ ಮಾಡುತ್ತದೆ. ಇನ್ನೊಂದು ಮುಖ್ಯವಾಗಿ ತಾಯಂದಿರು ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಮಗುವಿಗೆ ದಿನಚರಿಯನ್ನು ಯೋಜಿಸಿ. ಹಗಲಿನಲ್ಲಿ ಬೆಳಕಿದ್ದರೆ, ರಾತ್ರಿ ಮಲಗುವಾಗ ದೀಪಗಳನ್ನು ಆರಿಸಿ, ಡಿಮ್ ಲೈಟ್ ಆನ್ ಮಾಡಿ. ಇದು ಮಗುವಿಗೆ ನಿದ್ದೆಯ ಸಮಯ ಎನ್ನುವ ಸಂಕೇತವನ್ನು ನೀಡುತ್ತದೆ.

3. ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಿ
ಮೊದಲೇ ವಿವರಿಸಿದಂತೆ ಮಗುವಿನ ದಿನಚರಿಯಲ್ಲಿ ರಾತ್ರಿಯ ಸ್ನಾನ ಕೂಡಾ ಆಡ್ ಮಾಡಿ. ಬೆಳಗ್ಗೆ ಮಗುವಿಗೆ ಸ್ನಾನ ಮಾಡಿಸುತ್ತೇವಲ್ಲಾ, ಮತ್ತೆ ರಾತ್ರಿ ಸ್ನಾನ ಮಾಡಿದರೆ ಶೀತವಾದರೆ ಎನ್ನುವ ಭಯ ಬಿಡಿ. ಹಗಲಿಡೀ ಕೈಕಾಲು ಆಡಿಸುತ್ತಾ ಆಡುವ ಮಗುವಿಗೆ ಬೆಚ್ಚಗಿನ ಸ್ನಾನದ ರಿಲೀಫ್ ಬೇಕು. ಜೊತೆಗೆ ಹಗಲಿನಲ್ಲಿ ಮೂತ್ರ ವಿಸರ್ಜನೆ, ಮಲ ವಿಸರ್ಜನೆ ಮಾಡುವ ಮಗುವಿಗೆ ರಿಫ್ರೆಶ್ ಆಗಲು ಮಲಗುವ ಮೊದಲು ಬೆಚ್ಚಗಿನ ನೀರಿನಿಂದ ಸಣ್ಣ ಸ್ನಾನ ಮಾಡಿಸಿ. ಮಗು ಬೆಳೆಯುತ್ತಿದ್ದಂತೆ ಅದೂ ಅರ್ಥ ಮಾಡಿಕೊಳ್ಳುತ್ತೆ, ಸ್ನಾನವಾದ ಮೇಲೆ ಮುಂದಿನ ಕಾರ್ಯಕ್ರಮ ನಿದ್ದೆ ಎನ್ನುವುದು. ಸ್ನಾನವಾದ ನಂತರ ಬೆಚ್ಚಗಿನ, ಸ್ವಚ್ಛವಾದ ಬಟ್ಟೆ ಹಾಕಿ, ಡೈಪರ್ ಚೇಂಜ್ ಮಾಡಿ ಲಾಲಿ ಹಾಡಿ ಮಲಗಿಸಿ. ರಾತ್ರಿಯ ಸ್ನಾನ ಕೂಡಾ ಮಗುವಿನ ಆರಾಮದಾಯಕ ನಿದ್ದೆಗೆ ಸಹಕಾರಿ.

4. ಮಗುವಿನ ಕೋಣೆಯಲ್ಲು ವೈಟ್ ನಾಯ್ಸ್ ಬಳಸಿ
ತಾಯಿಯ ಗರ್ಭದಲ್ಲಿರುವಾಗ ಮಗುವಿಗೆ ತಾಯಿಯ ರಕ್ತ ನಾಳಗಳಲ್ಲಿ ಹರಿಯುವ ರಕ್ತದ ಶಬ್ದವೇ ಜೋಗುಳವಾಗಿರುತ್ತದೆ. ಹಾಗಾಗಿ ಮಗುವಿನ ಜನನದ ನಂತರವೂ ಮಗುವಿನ ನಿದ್ದೆಯನ್ನು ಸುಗಮಗೊಳಿಸಲು ವೈಟ್ ನಾಯ್ಸ್ ಬಳಸಿ. ಇದರ ಶಬ್ದವೂ ರಕ್ತನಾಳಗಳಲ್ಲಿ ಹರಿಯುವ ರಕ್ತದ ಶಬ್ದದಂತಿರುತ್ತದೆ.ನಿಮ್ಮ ಮೊಬೈಲ್‌ನಲ್ಲೂ ಈ ವೈಟ್ ನಾಯ್ಸ್ ಆಡಿಯೋ ಹಾಕಬಹುದು. ಆದರೆ ಮೊಬೈಲ್ ಮಗುವಿನಿಂದ ದೂರದಲ್ಲಿ ಇಡಿ. ಇಲ್ಲವಾದರೆ ಫ್ಯಾನ್ ಅನ್ನು ಮಧ್ಯಮ ವೇಗದಲ್ಲಿ ಆನ್ ಮಾಡಿ. ಇದು ಮಗುವಿನ ನಿದ್ದೆಗೆ ಸಹಾಯ ಮಾಡುವುದಲ್ಲದೇ ಮಗುವನ್ನು ಶಾಂತಗೊಳಿಸುತ್ತದೆ. ಇದೂ ವರ್ಕ್‌ಔಟ್ ಆಗದಿದ್ದಲ್ಲಿ ಮೆಲುವಾದ ಮ್ಯೂಸಿಕ್ ಪ್ಲೇ ಮಾಡಿ. ಮಕ್ಕಳು ಮಲಗಲು ಅನುಕೂಲವಾಗುವಂತಹ ಅನೇಕ ಮ್ಯೂಸಿಕ್‌ಗಳಿದೆ ಅದನ್ನು ಪ್ಲೇ ಮಾಡಿ. ಇದರಿಂದ ಮಗು ಹೊರಗಿನ ಶಬ್ದಕ್ಕೂ ಎಚ್ಚರಗೊಳ್ಳುವುದು ತಪ್ಪುತ್ತದೆ ಮಾತ್ರವಲ್ಲ. ಮೆಲುವಾದ ಸಂಗೀತ ಮಗುವಿಗೆ ಸುರಕ್ಷತೆಯ ಅನುಭವವನ್ನೂ ನೀಡುತ್ತದೆ.

5. ಮಗು ನಿದ್ರಿಸಲು ಪ್ರಯತ್ನಿಸುವಾಗ ಮಗುವಿನ ಕಣ್ಣುಗಳನ್ನು ದಿಟ್ಟಿಸಬೇಡಿ
ತಾಯಿ ಮಗುವಿನೊಂದಿಗೆ ಸಂಪರ್ಕ ಬೆಳೆಯುವುದೇ ಕಣ್ಣಿನ ಸಂಪರ್ಕದ ಮೂಲಕ. ಮಗು ಮಲಗಲು ಪ್ರಯತ್ನಿಸುತ್ತಿರುವಾಗ ಮಗುವನ್ನು ದಿಟ್ಟಿಸಿ ನೋಡಿದರೆ ಅದು ಅವರನ್ನು ಎಚ್ಚರವಾಗಿಡುವಂತೆ ಮಾಡುತ್ತೆ. ಕಾರಣವಿಷ್ಟೇ. ಮಗುವಿನೊಂದಿಗೆ ಕಣ್ಣಿನ ಮೂಲಕ ಸಂಪರ್ಕ ಸಾಧಿಸುವುದು ಪ್ರೀತಿಯ ಹಾರ್ಮೋನ್ ಆದ ಆಕ್ಸಿಟೋಸಿನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಮಗುವಿನ ಹೃದಯ ಬಡಿತವನ್ನು ಹೆಚ್ಚಿಸುತ್ತೆ, ಇದರಿಂದ ಮಗುವಿಗೆ ನಿದ್ರಿಸಲು ಕಷ್ಟವಾಗುತ್ತದೆ. ಹಾಗಾಗಿ ಮಲಗುವನ್ನು ಮಲಗಿಸುತ್ತಿರುವಾಗ ಆಗಲಿ, ತೊಟ್ಟಿಲಲ್ಲಿ ತೂಗುವಾಗ ಆಗಲಿ ಮಗುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ.
ತಾಯಿಯಾದವರಿಗೆ ಇನ್ನೊಂದು ಮುಖ್ಯವಾದ ಸೂಚನೆ ಏನೆಂದರೆ ಪ್ರತಿ ಮಗುವೂ ವಿಭಿನ್ನವಾದದ್ದು.ಪ್ರತಿಯೊಂದು ಮಗುವಿನ ನಿದ್ರಿಸುವ ವಿಧಾನವೂ ಬೇರೆ ಬೇರೆಯದ್ದಾಗಿರುತ್ತದೆ. ಕೆಲವು ಮಕ್ಕಳು ಹಗಲಿಡೀ ನಿದ್ರಿಸಿದರೆ, ಕೆಲವು ಮಕ್ಕಳು ರಾತ್ರಿಯಿಡೀ ನಿದ್ರಿಸುತ್ತವೆ. ಹಾಗಾಗಿ ಮಗು ಜನಿಸಿದಾಗಿನಿಂದ ಮಗುವಿನ ನಿದ್ದೆಯ ಪ್ಯಾಟರ್ನ್ ಗಮನಿಸಿ, ಅದರಂತೆ ಮಗುವಿಗಾಗಿ ದಿನಚರಿಯನ್ನು ಯೋಜಿಸಿ. ಇದರಂತೆ ಮಗುವೂ ರಾತ್ರಿ ನೆಮ್ಮದಿಯಿಂದ ಮಲಗಿದರೆ, ನಿಮಗೂ ಸುಖ ನಿದ್ದೆ..!



Click it and Unblock the Notifications