ಶಿಶುವಿನ ಹೊಕ್ಕಳು ಬಳ್ಳಿಯ ಆರೋಗ್ಯ, ಅನಾರೋಗ್ಯ ಮತ್ತು ಸಲಹೆಗಳು

By Sushma Charhra

ಗರ್ಭಾವಸ್ಥೆಯಲ್ಲಿ ಹೊಕ್ಕಳು ಬಳ್ಳಿಯ ಜೊತೆ ಹಲವು ರೀತಿಯ ದೈಹಿಕ ಮತ್ತು ಮಾನಸಿಕ ಸಂಬಂಧವು ಬೆಳೆಯುತ್ತದೆ. ಮಗುವಿಗೆ ಪೋಷಕಾಂಶಗಳು ತಾಯಿಯಿಂದ ಲಭ್ಯವಾಗುವುದೇ ಹೊಕ್ಕಳು ಬಳ್ಳಿಯ ಮೂಲಕ. ಆದರೆ, ಬೆಳೆಯುತ್ತಿರುವ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕೆಲವು ಸಾಮಾನ್ಯ ಸಮಸ್ಯೆಗಳಿಗೂ ಹೊಕ್ಕಳು ಬಳ್ಳಿಗೂ ಸಂಬಂಧವಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೊಕ್ಕಳು ಬಳ್ಳಿಯು ದೇಹದ ಇತರೆ ಭಾಗಗಳೊಂದಿಗೆ ಸಂಬಂಧ ಹೊಂದಿರುತ್ತದೆ.

ಇದರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಯನ್ನು ಹೊಕ್ಕುಳಿನ ಅಂಡವಾಯು ಎಂದು ಕರೆಯಲಾಗುತ್ತದೆ.ಈ ಸ್ಥಿತಿಯಲ್ಲಿ ಮಗುವಿನ ಹೊಕ್ಕುಳು ಬಳ್ಳಿಯ ಹೊರ ಚಿಮ್ಮಲ್ಪಟ್ಟಿರುತ್ತದೆ. ಹೆಚ್ಚಿನ ಪೋಷಕರು ಈ ಸ್ಥಿತಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಭಾವಿಸುತ್ತಾರೆ. ಆದರೆ ಇದು ಸತ್ಯಕ್ಕೆ ದೂರವಾದದ್ದು.
ಹೊಕ್ಕಳಿನ ಅಂಡವಾಯು ಸಮಸ್ಯೆಯ ಬಗ್ಗೆ ನಿಮಗಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ, ಮಗುವಿನ ಹೊಕ್ಕಳಿನ ರಕ್ಷಣೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಕೆಲವು ಸರಳ ಸಲಹೆಗಳನ್ನು ಈ ಲೇಖನದಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ.

reasons for baby belly button popping out

• ಶಿಶುಗಳಲ್ಲಿ ಹೊಕ್ಕಳಿನ ಆರೈಕೆ
• ಹೊಕ್ಕಳು ಅಂಡವಾಯು ಎಂದರೇನು?
• ಯಾವಾಗ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ?
• ಈ ಸ್ಥಿತಿಯನ್ನು ನಿಭಾಯಿಸುವುದು ಹೇಗೆ?

ಶಿಶುಗಳಲ್ಲಿ ಹೊಕ್ಕಳಿನ ಆರೈಕೆ

ಒಮ್ಮೆ ಶಿಶು ಜನಿಸಿದ ನಂತರ, ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ಅದಕ್ಕೆ ಕ್ಲಿಪ್ ಹಾಕಲಾಗಿರುತ್ತದೆ. ಮಗು ಯಾವುದೇ ಕಾರಣಕ್ಕೂ ಮಗುವಿಗೆ ನೋವಾಗಬಾರದು ಮತ್ತು ಇನ್ಫೆಕ್ಷನ್ ಆಗಬಾರದು ಎಂಬ ಕಾರಣದಿಂದಾಗಿ ಹೀಗೆ ಕ್ಲಿಪ್ ಹಾಕಲಾಗುತ್ತದೆ. ನೈಸರ್ಗಿಕವಾಗಿಯೇ ಈ ಹೊಕ್ಕಳು ಬಳ್ಳಿಯು 7 ರಿಂದ 21 ದಿನಗಳ ಒಳಗೆ ಒಣಗುತ್ತದೆ ಮತ್ತು ಮಗುವಿನ ದೇಹದಿಂದ ಬಿದ್ದು ಹೋಗುತ್ತದೆ. ಆದರೆ ಈ ಸಮಯದಲ್ಲಿ ಹೆಚ್ಚಿನ ಜಾಗೃತಿಯನ್ನು ಮಗುವಿನ ಬಗ್ಗೆ ಪೋಷಕರು ವಹಿಸಬೇಕಾಗುತ್ತದೆ. ಮಗುವಿನ ಹೊಕ್ಕಳು ಬಳ್ಳಿಯು ಯಾವಾಗಲೂ ಸ್ವಚ್ಛವಾಗಿರುವ ಬಗ್ಗೆ ಕಾಳಜಿ ಇರಬೇಕು. ರಕ್ತ ಸೋರದಂತೆ ನೋಡಿಕೊಳ್ಳಬೇಕು.

ಎಲ್ಲಕ್ಕಿಂತ ಪ್ರಮುಖವಾಗಿ ಮಗುವಿನ ಮೂತ್ರವು ಹೊಕ್ಕಳು ಬಳ್ಳಿಗೆ ತಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಮಗುವಿನ ಹೊಕ್ಕಳು ಬಳ್ಳಿಗೆ ಗಾಳಿಯಾಡುವಂತೆ ಇರಬೇಕು. ದೇಹಕ್ಕೆ ಹೊಂದಿಕೊಂಡಿರುವಂತ ಬಟ್ಟೆಯನ್ನು ಧರಿಸಿದೆ ಮಗುವಿಗೆ ಸೂಕ್ತವಾದ ಬಟ್ಟೆ ಧರಿಸುವುದು ಈ ದಿನಗಳಲ್ಲಿ ಬಹಳ ಮುಖ್ಯವಾಗಿರುತ್ತದೆ.

ಶಿಶುವಿನ ಪ್ರಾರಂಭಿಕ ದಿನಗಳಲ್ಲಿ ಟಬ್ ಸ್ನಾನ ಮಾಡಿಸುವುದು ಕಷ್ಟಕರವಾಗಿರಬಹುದು. ಹಾಗಾಗಿ ಸ್ಪಾಂಜ್ ನಿಂದ ಸ್ನಾನ ಮಾಡಿಸಲು ಬೇಕಿದ್ದರೆ ರೂಢಿ ಮಾಡಿಕೊಳ್ಳಬಹುದು. ಈ ರೀತಿ ಆರೋಗ್ಯಕರವಾಗಿ ಹೊಕ್ಕಳಿನ ಸುರಕ್ಷತೆಯನ್ನು ಪ್ರಾರಂಭಿಕ ದಿನಗಳಲ್ಲಿ ಕಾಪಾಡಿಕೊಳ್ಳುವುದರಿಂದಾಗಿ ಮಗುವಿನ ಜೀವನ ಮುಂದೆಯೂ ಆರೋಗ್ಯಕರವಾಗಿರುವುದಕ್ಕೆ ನೆರವಾಗುತ್ತದೆ ಎಂಬುದು ಎಲ್ಲಾ ಪೋಷಕಿರಿಗೂ ತಿಳಿದಿದ್ದರೆ ಒಳಿತು.

• ಹೊಕ್ಕಳು ಅಂಡವಾಯು ಎಂದರೇನು?

ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಅಂಡವಾಯು ಅಥವಾ ಹರ್ನಿಯಾ ಎನ್ನುವುದು ದೇಹದ ಆಂತರಿಕ ಭಾಗದ ಮುಂಚಾಚುವಿಕೆ ಆಗಿರುತ್ತದೆ. ಆದರೆ ಶಿಶುವಿನ ವಿಚಾರದಲ್ಲಿ ಎಲ್ಲರೂ ಗಮನಿಸಬೇಕಾಗಿರುವ ಸಂಗತಿ ಎಂದರೆ, ಶಿಶುವಿನ ದೇಹದ ಭಾಗಗಳು ಇನ್ನು ಸಂಪೂರ್ಣವಾಗಿ ಬೆಳವಣಿಗೆ ಹೊಂದಿರುವುದಿಲ್ಲ ಮತ್ತು ಹರ್ನಿಯಾ ಬರುವುದು ಹೊಟ್ಟೆಯಲ್ಲಿ ಆಂತರಿಕ ಅಂಗವು ದುರ್ಬಲ ಸ್ಥಾನದ ಮೂಲಕ ಹೊರತಳ್ಳಲ್ಪಟ್ಟಾಗ ಉಂಟಾಗುತ್ತದೆ. ಆಗ ಅದು ಗಡ್ಡೆಯ ರೂಪದಲ್ಲಿ ಹೊರಗಡೆ ಗೋಚರಿಸುತ್ತದೆ.

ಶಿಶುಗಳಲ್ಲಿ ಕಾಣಿಸಿಕೊಳ್ಳುವ ಒಂದು ಸಾಮಾನ್ಯ ಹರ್ನಿಯಾದ ವಿಧವೆಂದರೆ ಅದು ಹೊಕ್ಕಳು ಬಳ್ಳಿಯ ಹರ್ನಿಯಾ. ಶಿಶುಗಳಲ್ಲಿ ಏನಾಗುತ್ತದೆಯೆಂದರೆ ಅವರು ಅತ್ತಾಗ ಅಥವಾ ಇನ್ಯಾವುದೇ ರೀತಿಯ ನೋವು, ಒತ್ತಡ ಕಾಣಿಸಿದಾಗ ಬೆಲ್ಲಿಯ ಕೆಳಭಾಗವು ತನ್ನಷ್ಟಕ್ಕೇ ತಾನೆ ತಳ್ಳಲ್ಪಡುತ್ತದೆ.

ಸಹಜವಾದ ಸ್ಥಿತಿಯಲ್ಲಿ ಶಿಶುವಿನ ಹೊಟ್ಟೆಯ ಗುಂಡಿ ಅಂದರೆ ಹೊಕ್ಕಳು ಸಹಜ ಸ್ಥಿತಿಯಲ್ಲೇ ಇರುತ್ತದೆ. ಸುಮಾರು 10 ಶೇಕಡಾ ಮಕ್ಕಳು ತಮ್ಮ ಪ್ರಾರಂಭಿಕ ದಿನಗಳಲ್ಲಿ ಹೊಕ್ಕಳು ಬಳ್ಳಿಯ ಹರ್ನಿಯಾ ಎದುರಿಸುತ್ತಾರೆ. ಆದರೆ ಹೆಚ್ಚಿನ ಪ್ರಕರಣಗಳು ತಿಳಿಯುವುದೇ ಇಲ್ಲ ಯಾಕೆಂದರೆ ಇದು ತನ್ನಷ್ಟಕ್ಕೆ ತಾನೆ ಗುಣವಾಗಿ ಬಿಡುತ್ತದೆ. ಅದಕ್ಕಾಗಿ ಯಾವುದೇ ವೈದ್ಯಕೀಯ ಬೆಂಬಲದ ಅಗತ್ಯವೂ ಬೀಳುವುದಿಲ್ಲ.

• ಯಾವಾಗ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ?

ಮಗುವಿನ ಮುಂಡವು ತೊಡೆಯನ್ನು ಸಂಧಿಸುವ ಪ್ರದೇಶದಲ್ಲಿ, ಹೆತ್ತವರು ಹೆಚ್ಚಾಗಿ ಗಂಟು ಗಮನಿಸುತ್ತಾರೆ. ಆ ಗಡ್ಡೆಯು ಒಂದೊಂದು ಶಿಶುವಿನಲ್ಲಿ ಒಂದೊಂದು ರೀತಿಯಲ್ಲಿ ಇರಬಹುದು. ಕೆಲವರಲ್ಲಿ ಸಾಧಾರಣ ಮೃದು, ಇನ್ನೂ ಕೆಲವರಲ್ಲಿ ಸ್ವಲ್ಪ ಕಠಿಣವಾಗಿ ಇರಬಹುದು.ಒಂದು ವೇಳೆ ನೀವು ಇದನ್ನೇನಾದರೂ ನಿಮ್ಮ ಮಗುವಿನಲ್ಲಿ ಗಮನಿಸಿದ್ದೇ ಆದಲ್ಲಿ ಕೂಡಲೇ ವೈದ್ಯರ ಬಳಿ ಒಮ್ಮೆ ಪರೀಕ್ಷಿಸಿ.

ಹಾಗಂತ ನೀವು ಇದಕ್ಕಾಗಿ ಭಯ ಪಡುವ ಅಗತ್ಯವಿಲ್ಲ. ಯಾವಾಗಲೂ ನಿಮ್ಮ ಮಗುವಿನ ಹೊಕ್ಕಳಿನ ಸುರಕ್ಷತೆಯ ಬಗ್ಗೆ ಒಂದು ಕಣ್ಣನ್ನು ವೈದ್ಯರೂ ಇಟ್ಟಿರುವಂತೆ ನೋಡಿಕೊಳ್ಳುವುದು ಸೂಕ್ತವಷ್ಟೇ. ಆ ಮೂಲಕ ನಿಮ್ಮ ಮಗುವು ಆರೋಗ್ಯವಾಗಿದೆ ಮತ್ತು ಯಾವುದೇ ಅನಾರೋಗ್ಯಕಾರಿ ಗುಣಲಕ್ಷಣಗಳು ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಅಷ್ಟೇ.

ಹೊಕ್ಕಳು ಬಳ್ಳಿಯ ಹರ್ನಿಯಾ ಮಗುವಿನ ನೋವುದಾಯಕವಾಗಿ ಇರುವುದಿಲ್ಲ.ಒಂದು ವೇಳೆ ಅದು ಮಗುವಿಗೆ ನೋವಾಗಿದ್ದರೆ, ಕೂಡಲೇ ನೀವು ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಲೇಬೇಕು. ಯಾಕೆಂದರೆ ಇದು ಕರುಳಿನ ತಿರುಚುವಿಕೆಯ ಕಾರಣದಿಂದ ಆಗಿರಬಹುದು ಮತ್ತು ಇದಕ್ಕೆ ಸರಿಯಾದ ಮತ್ತು ಸೂಕ್ತ ಸಮಯದ ವೈದ್ಯಕೀಯ ನೆರವಿನ ಅಗತ್ಯವಿರುತ್ತದೆ. ಒಂದು ವೇಳೆ ನಿರ್ಲಕ್ಷಿಸಿದರೆ ಅದು ಪ್ರಾಣಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಇದೆ.

ಈ ಸ್ಥಿತಿಯನ್ನು ನಿಭಾಯಿಸುವುದು ಹೇಗೆ?

ಒಂದು ವಿಚಾರ ನೀವು ನೆನಪಿಡಬೇಕಾದ ಸಂಗತಿ ಎಂದರೆ ನೀವು ಕಾಯಿಲೆಯನ್ನು ಗುರುತಿಸಿದ ನಂತರ ರೋಗ ಲಕ್ಷಣಗಳು ಮಗುವಿನಲ್ಲಿ ಭಿನ್ನವಾಗಿರಬಹುದು. ಕೆಲವು ಕೇಸ್ ಗಳಲ್ಲಿ ಹರ್ನಿಯಾ ಕಠಿಣವಾಗಿರಬಹುದು ಮತ್ತು ಚಲಿಸದೇ ಇರಬಹುದು. ಮಕ್ಕಳ ತಜ್ಞರಿಗೂ ಕೆಲವು ಅನುಮಾನಗಳು ಕಾಣಿಸಬಹುದು. ಅವರು ಮಗುವಿಗೆ ಅಲ್ಟ್ರಾಸೌಂಡ್ ಅಥವಾ ಕಿಬ್ಬೊಟ್ಟೆಯ ಎಕ್ಸ್-ರೇ ಮಾಡಿಸುವ ಮೂಲಕ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಾರೆ.

ಆದರೆ, ಧನಾತ್ಮಕವಾಗಿ ನಿಮಗೆ ಹೇಳುವುದಾದರೆ, ಹೆಚ್ಚಿನ ಹೊಕ್ಕಳಿನ ಹರ್ನಿಯಾ ಸಮಸ್ಯೆಗೆ ಚಿಕಿತ್ಸೆಯ ಅಗತ್ಯವೇ ಬೀಳುವುದಿಲ್ಲ. ಆದರೆ ಒಂದು ವೇಳೆ ಪರಿಸ್ಥಿತಿ ಗಂಭೀರವಾಗಿದ್ದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡದೇ ಇದ್ದಲ್ಲಿ ಮಗು ಬೆಳೆದಂತೆ ಸಮಸ್ಯೆಗೆ ಕಾರಣವಾಗಬಹುದು. ಯಾಕೆಂದರೆ ಮಗು ಬೆಳೆದಂತೆ ಕಿಬ್ಬೊಟ್ಟೆಯ ಮಾಂಸಖಂಡಗಳು ಬೆಳೆದು ಬಲಗೊಳ್ಳುತ್ತದೆ ಮತ್ತು ಆಂತರ್ಯದ ಅಂಗಗಳು ತಮ್ಮನ್ನ ತಳ್ಳಲು ವಿಫಲವಾಗುತ್ತದೆ. ಬಹಳ ಕಡಿಮೆ ಕೇಸ್ ಗಳಲ್ಲಿ ಎಕ್ಸ್-ರೇ ಮತ್ತು ಆಲ್ಟ್ರಾಸೌಂಡ್ ಅಗತ್ಯ ಬೀಳುತ್ತದೆ. ಮಗು 4 ರಿಂದ 5 ವರ್ಷ ಆಗುವವರೆಗೆ ಹೆಚ್ಚಿನ ಮಕ್ಕಳ ತಜ್ಞರು ಸರ್ಜರಿ ಮಾಡುವುದನ್ನು ತಪ್ಪಿಸುವುದಕ್ಕೆ ಪ್ರಯತ್ನಿಸುತ್ತಾರೆ. ಸಮಯಕ್ಕೆ ಸರಿಯಾದ ನಿರ್ಧಾರ ಮತ್ತು ಕಾಯಿಲೆ ಲಕ್ಷಣ, ಚಿಕಿತ್ಸಾ ವಿಧಾನವನ್ನು ಪೋಷಕರು ತಿಳಿದಿದ್ದರೆ ಎಂತಹದ್ದೇ ಸಂದರ್ಬವನ್ನೇ ಆದರೂ ಧನಾತ್ಮಕವಾಗಿ ಎದುರಿಸಲು ಸಾಧ್ಯವಾಗುತ್ತದೆ.

ಮಗುವಿನ ಬಗೆಗಿನ ಕೆಲವು ಸಣ್ಣಪುಟ್ಟ ವಿಚಾರಗಳು ಪ್ರತಿ ಪೋಷಕರೂ ಕೂಡ ತಿಳಿದಿರಬೇಕು. ಆಗ ನಿಮ್ಮ ಪ್ರೀತಿಯ ಮಗುವನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಸಣ್ಣಪುಟ್ಟದಕ್ಕೂ ಭಯ ಪಡುವ ಅಗತ್ಯವಿರುವುದಿಲ್ಲ. ನಾವು ಕೂಡ ಆಶಿಸುವುದು ಅದನ್ನೇ ಆಗಿದೆ. ನಿಮ್ಮ ಪುಟ್ಟ ಕಂದಮ್ಮ ಯಾವಾಗಲೂ ಆರೋಗ್ಯವಾಗಿ ಮನೆಯ ಸಂತೋಷಕ್ಕೆ ಕಾರಣವಾಗಲಿ.

English summary

Is Your Baby’s Belly Button Popping Out?

One of the most common causes of concern in growing babies is an issue that is associated with their umbilical cord. Known as umbilical hernia, this is where the baby's belly button is seen to pop out. Many parents find this particular condition alarming and mistake it for something that would require surgical intervention. However, that is far from being true.
Story first published: Thursday, August 30, 2018, 9:00 [IST]
X
Desktop Bottom Promotion