Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಶಿಶುಗಳ ಕುತ್ತಿಗೆಯಲ್ಲಿ ಕಾಣಿಸಿಕೊಳ್ಳುವ ದದ್ದುಗಳಿಗೆ ಮನೆಮದ್ದುಗಳು
ನವಜಾತ ಶಿಶುಗಳ ಚರ್ಮವು ಅತ್ಯಂತ ಎಳಸು ಹಾಗೂ ಕೋಮಲವಾಗಿರುತ್ತದೆ. ಹೀಗಾಗಿ ಮಗುವಿನ ಮೃದುವಾದ ತ್ವಚೆಯ ಆರೋಗ್ಯಕ್ಕೆ ಪಾಲಕರು ಎಲ್ಲ ರೀತಿಯ ಕಾಳಜಿ ವಹಿಸುವುದು ಅಗತ್ಯ. ಒಂದು ವೇಳೆ ಶಿಶುಗಳ ಚರ್ಮದ ಬಗ್ಗೆ ಸೂಕ್ತ ಆರೈಕೆ ಮಾಡದಿದ್ದರೆ ಮಗುವಿನ ದೇಹದ ಮೇಲೆ ದದ್ದುಗಳುಂಟಾಗುವ ಸಾಧ್ಯತೆಗಳಿರುತ್ತವೆ. ಅದರಲ್ಲೂ ದೇಹದ ಕಂಕುಳ, ತೊಡೆ ಹಾಗೂ ಕುತ್ತಿಗೆಯ ಬಳಿ ಚರ್ಮದ ಪದರುಗಳಲ್ಲಿ ದದ್ದುಗಳಾಗುವುದು ಸಾಮಾನ್ಯವಾಗಿದೆ. ಶಿಶುಗಳಲ್ಲಿ ಮಾತ್ರ ಹೆಚ್ಚಾಗಿ ಕುತ್ತಿಗೆ ಭಾಗದಲ್ಲಿ ದದ್ದುಗಳೇಳುತ್ತವೆ.

ಶಿಶುಗಳ ಕುತ್ತಿಗೆಯ ಚರ್ಮ ಮೃದುವಾಗಿದ್ದು ಹೆಚ್ಚು ಪದರು ಪದರಾಗಿರುತ್ತದೆ. ಈ ಭಾಗ ಅತಿ ಸೂಕ್ಷ್ಮ ವಾಗಿರುವುದರಿಂದ ಇಲ್ಲಿ ಸೋಂಕು ತಗುಲಿ ದದ್ದುಗಳಾಗುತ್ತವೆ(ರಾಶಸ್) . ಇನ್ನೂ ಕುತ್ತಿಗೆಯನ್ನು ತಮ್ಮಷ್ಟಕ್ಕೆ ತಾವೇ ಸಮತೋಲನ ಮಾಡಲಾಗದ ಪುಟ್ಟ ಕಂದಮ್ಮಗಳಲ್ಲಿ ಈ ದದ್ದುಗಳು ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇಂಥ ದದ್ದುಗಳು ತಾವಾಗಿಯೇ ವಾಸಿಯಾಗುವುದರಿಂದ ತೀರಾ ಆತಂಕ ಪಡುವ ಅಗತ್ಯವಿರುವುದಿಲ್ಲ. ಆದರೆ ದದ್ದುಗಳಾಗುವುದರಿಂದ ಮಗುವಿಗೆ ಕುತ್ತಿಗೆಯ ಮೇಲೆ ನಿಯಂತ್ರಣ ಸಾಧಿಸುವಿಕೆಯನ್ನು ಕಲಿಯುವುದು ನಿಧಾನವಾಗುತ್ತದೆ.

ಕುತ್ತಿಗೆಯ ದದ್ದುಗಳು ಎಂದರೇನು?
ಶಿಶುಗಳ ಕುತ್ತಿಗೆಯ ಮೇಲಿನ ಚರ್ಮದ ಮೇಲೆ ಕೆಂಪು ಕಲೆಗಳಾಗಿ ಅವು ತುರಿಕೆ ಬಿಡಲಾರಂಭಿಸಿದರೆ ಅದನ್ನು ದದ್ದು ಎಂದು ಕರೆಯಲಾಗುತ್ತದೆ. ದದ್ದು ಆಗಿರುವ ಚರ್ಮದ ಭಾಗ ಸ್ವಲ್ಪ ಉಬ್ಬಿರುತ್ತದೆ. ನಾಲ್ಕರಿಂದ ಆರು ತಿಂಗಳ ವಯಸ್ಸಿನ ಶಿಶುಗಳ ಕುತ್ತಿಗೆಯಲ್ಲಿ ದದ್ದುಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಫಂಗಸ್ ಸೋಂಕು, ಚರ್ಮದ ಉರಿಯೂತ ಅಥವಾ ಬೆವರುಸಾಲೆಗಳಿಂದ ಕುತ್ತಿಗೆಯ ಮೇಲೆ ದದ್ದುಗಳುಂಟಾಗುತ್ತವೆ.

ಕುತ್ತಿಗೆಯ ದದ್ದುಗಳಿಗೆ ಕಾರಣಗಳೇನು?
ಶಿಶುಗಳ ಕುತ್ತಿಗೆಯಲ್ಲಿ ಕಾಣಿಸಿಕೊಳ್ಳುವ ದದ್ದುಗಳಿಗೆ ಚಿಕಿತ್ಸೆ (ಮನೆಮದ್ದು ಅಥವಾ ಇನ್ನಿತರ ಚಿಕಿತ್ಸೆ) ಆರಂಭಿಸುವ ಮುನ್ನ ಇದಕ್ಕೆ ಕಾರಣವಾಗುವ ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯ. ದದ್ದುಗಳುಂಟಾಗಲು ಕೆಲ ಸಾಮಾನ್ಯ ಕಾರಣಗಳು ಹೀಗಿವೆ:

ಸ್ಟಾರ್ಕ್ ಬೈಟ್ ಅಥವಾ ಜನ್ಮಜಾತ ಮಚ್ಚೆಗಳು
ಶಿಶುಗಳ ಕುತ್ತಿಗೆಯ ಮೇಲೆ ಕಾಣಿಸಿಕೊಳ್ಳುವ ಕೆಂಪು ಅಥವಾ ಗುಲಾಬಿ ವರ್ಣದ ಕಲೆಗಳನ್ನು ಸ್ಟಾರ್ಕ್ ಬೈಟ್ ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯವಾಗಿ ಮಗುವಿಗೆ ಬರುವ ಜನ್ಮಜಾತ ಕಲೆಗಳಂತೆಯೇ ಇರುತ್ತವೆ. ಚರ್ಮದ ಕೆಳಭಾಗದ ರಕ್ತನಾಳಗಳ ಹಿಗ್ಗುವಿಕೆ ಅಥವಾ ವಿಸ್ತರಣೆಯಿಂದ ಈ ರೀತಿಯ ಕಲೆಗಳು ಉಂಟಾಗುತ್ತವೆ. ವಾಸಿಸುವ ಕೋಣೆಯ ಉಷ್ಣತಾಮಾನದಲ್ಲಿ ವ್ಯತ್ಯಾಸವಾದಾಗ ಅಥವಾ ಮಗು ಹೆಚ್ಚು ಅತ್ತಾಗ ಈ ರೀತಿಯ ಕಲೆಗಳನ್ನು ಢಾಳಾಗಿ ಕಾಣಿಸುತ್ತವೆ. ಇವು ತಾತ್ಕಾಲಿಕವಾಗಿದ್ದು ತಂತಾನೇ ವಾಸಿಯಾಗುತ್ತವೆ.

ಚರ್ಮದ ಉರಿಯೂತ
ಶಿಶುವಿನ ಕುತ್ತಿಗೆ ಬಳಿಯ ಚರ್ಮದ ಪದರುಗಳು ಒಂದನ್ನೊಂದು ಘರ್ಷಿಸುವುದರಿಂದ ಸಹ ದದ್ದುಗಳಾಗುವ ಸಾಧ್ಯತೆ ಇರುತ್ತದೆ. ಕೆಲ ಬಾರಿ ಬಟ್ಟೆಗಳ ಉಜ್ಜುವಿಕೆಯ ಕಾರಣದಿಂದಲೂ ದದ್ದುಗಳಾಗಬಹುದು. ಸತತವಾಗಿ ಚರ್ಮದ ಉಜ್ಜುವಿಕೆಯಿಂದ ಈ ರೀತಿಯ ದದ್ದುಗಳು ಏಳುತ್ತವೆ.

ಫಂಗಸ್ ಸೋಂಕು
ಕೆಲ ಬಾರಿ ಫಂಗಸ್ಸಿನ ಸೋಂಕು ತಗಲುವುದರಿಂದ ಶಿಶುಗಳಲ್ಲಿ ದದ್ದುಗಳಾಗುತ್ತವೆ. ತೇವಾಂಶ ಹೆಚ್ಚಿರುವ ಹಾಗೂ ಅದರ ಜೊತೆಗೆ ಬೆಚ್ಚಗಿನ ವಾತಾವರಣ ಇದ್ದಲ್ಲಿ ಕ್ಯಾಂಡಿಡಾ ಎಂಬ ಫಂಗಸ್ ಬೆಳೆದು ಸಮಸ್ಯೆ ತಲೆದೋರುತ್ತದೆ. ಶಿಶುಗಳ ಕುತ್ತಿಗೆ ಚರ್ಮದ ಪದರುಗಳಲ್ಲಿ ಈ ಫಂಗಸ್ ಬಹು ಬೇಗನೆ ಹರಡುತ್ತದೆ. ಕುತ್ತಿಗೆಯಲ್ಲಿ ಬೆವರು ಹಾಗೂ ಧೂಳು ಸೇರಿದಾಗ ಫಂಗಸ್ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಬೆವರು ಸಾಲೆ ದದ್ದುಗಳು
ಬೇಸಿಗೆ ಕಾಲದಲ್ಲಿ ಶಿಶುಗಳಿಗೆ ಬೆವರು ಸಾಲೆ ಬಾಧಿಸುವುದು ಹೆಚ್ಚು. ಉಷ್ಣತಾಮಾನ ಹೆಚ್ಚಾಗಿದ್ದಾಗ ಚರ್ಮದ ಸಂದುಗಳಲ್ಲಿ ಬೆವರು ಸಂಗ್ರಹವಾಗಿ ಬೆವರು ಗ್ರಂಥಿಗಳು ಮುಚ್ಚಲ್ಪಡುತ್ತವೆ. ಇಂಥ ಸಂದರ್ಭಗಳಲ್ಲಿ ಚರ್ಮದ ಮೇಲೆ ವಿಪರೀತ ತುರಿಕೆಯಿಂದ ಕೂಡಿದ ಕೆಂಪು ವರ್ಣದ ಕಲೆಗಳು ಕಾಣಿಸಿಕೊಳ್ಳುತ್ತವೆತೀ ರೀತಿಯ ದದ್ದುಗಳಿಗೆ ಬೆವರು ದದ್ದು ಅಥವಾ ಉಷ್ಣತೆಯ ದದ್ದುಗಳೆಂದು ಕರೆಯಲಾಗುತ್ತದೆ.

ಹಾಲು ಸ್ರವಿಸುವಿಕೆಯಿಂದಾಗುವ ದದ್ದುಗಳು
ಮೊಲೆ ಹಾಲು ಕುಡಿಯುವ ಶಿಶುಗಳ ಕುತ್ತಿಗೆ ಭಾಗದಲ್ಲಿ ದದ್ದುಗಳಾಗುವುದು ಸಾಮಾನ್ಯ ಸಂಗತಿಯಾಗಿದೆ. ಮಗು ಹಾಲು ಕುಡಿಯುವಾಗ ಕುತ್ತಿಗೆ ಬಳಿ ಹಾಲು ಚೆಲ್ಲುವುದರಿಂದ ಇಂಥ ದದ್ದುಗಳಾಗುತ್ತವೆ. ಕುತ್ತಿಗೆಯ ಮೇಲೆ ಬಿದ್ದ ಹಾಲನ್ನು ಸ್ವಚ್ಛಗೊಳಿಸದಿದ್ದಲ್ಲಿ ಅಲ್ಲಿ ತೇವಾಂಶ ಸಂಗ್ರಹಗೊಂಡು ದದ್ದುಗಳಾಗುವ ಸಾಧ್ಯತೆಗಳಿರುತ್ತವೆ.

ಶಿಶುಗಳ ಕುತ್ತಿಗೆ ದದ್ದು ಲಕ್ಷಣಗಳು
ಶಿಶುಗಳ ಕುತ್ತಿಗೆಯ ಭಾಗದಲ್ಲಿ ಉಂಟಾಗುವ ದದ್ದುಗಳು ಈ ಸಾಮಾನ್ಯ ಲಕ್ಷಣಗಳನ್ನು ಹೊಂದಿರುತ್ತವೆ:
* ಕೆಂಪು ಬಣ್ಣದ ಕಲೆಗಳು
* ಬಾಧಿತ ಜಾಗದಲ್ಲಿ ತುರಿಕೆ ಹಾಗೂ ನೋವು
* ಕೆಲ ಬಾರಿ ಜ್ವರ ಬರಬಹುದು
* ಹಸಿವು ಕಡಿಮೆಯಾಗುವುದು
* ಮಗು ಕಿರಿಕಿರಿ ಮಾಡುವುದು ಹಾಗೂ ಅಸೌಖ್ಯದಿಂದಿರುವುದು

ಶಿಶುಗಳ ದದ್ದುಗಳ ನಿವಾರಣೋಪಾಯಗಳು
ಶಿಶುಗಳ ಕುತ್ತಿಗೆ ದದ್ದುಗಳ ಸಾಮಾನ್ಯ ನಿವಾರಣೋಪಾಯಗಳು ಹೀಗಿವೆ:
* ಚರ್ಮದ ಶುಚಿತ್ವ ಕಾಪಾಡುವುದು
ಮಗುವಿನ ಕೋಮಲ ತ್ವಚೆಯ ಸ್ವಚ್ಛತೆಗಾಗಿ ಮೃದುವಾದ ಬೇಬಿ ಸೋಪ್ ಅಥವಾ ಬಾಡಿ ವಾಶ್ ಬಳಸಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಮಗುವಿಗೆ ಸ್ನಾನ ಮಾಡಿಸುವಾಗ ಸೋಪನ್ನು ಅತ್ಯಂತ ಮೃದುವಾಗಿ ಮೈಗೆ ಸವರಬೇಕು. ಸ್ನಾನದ ನಂತರ ಕುತ್ತಿಗೆಯಲ್ಲಿ ಯಾವುದೇ ತೇವಾಂಶ ಉಳಿಯದಂತೆ ಟವೆಲ್‌ನಿಂದ ಮೃದುವಾಗಿ ಒರೆಸಬೇಕು. ಚರ್ಮದ ಪದರುಗಳು ಗಾಳಿಗೆ ಸಹಜವಾಗಿ ಒಣಗಲು ಬಿಡಬೇಕು ಹಾಗೂ ತೇವಾಂಶ ಸಂಗ್ರಹವಾಗದಂತೆ ಜಾಗೃತಿ ವಹಿಸಬೇಕು.

ಕುತ್ತಿಗೆ ದದ್ದುಗಳಿಗೆ ಚಿಕಿತ್ಸೆ
ದದ್ದುಗಳಿಂದ ಉಂಟಾಗುವ ಉರಿಯೂತ ಶಮನಕ್ಕೆ ತಣ್ಣಗಿನ ನೀರಿನಿಂದ ಕುತ್ತಿಗೆಯನ್ನು ತೊಳೆಯಬೇಕು. ಸಾಮಾನ್ಯವಾಗಿ ದದ್ದುಗಳು ತಾವಾಗಿಯೇ ವಾಸಿಯಾಗುತ್ತವಾದರೂ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ದದ್ದುಗಳ ನಿವಾರಣೆಗೆ ವೈದ್ಯರು ಫಂಗಲ್ ಕ್ರೀಂ ಅಥವಾ ಯೀಸ್ಟ್ ಕ್ರೀಂ ಬಳಸುವಂತೆ ಸಲಹೆ ನೀಡುತ್ತಾರೆ. ಶೇ.೧ ಪ್ರಮಾಣದ ಹೈಡ್ರೊಕಾರ್ಟಿಸೋನ್ ಕ್ರೀಂ ಹಚ್ಚುವುದರಿಂದ ದದ್ದುಗಳನ್ನು ಶೀಘ್ರ ಗುಣಪಡಿಸಬಹುದಾಗಿದೆ.

ಬೆವರಿನ ದದ್ದು ಚಿಕಿತ್ಸೆ
ಬೇಸಿಗೆ ಕಾಲದಲ್ಲಿ ಶಿಶುವಿಗೆ ಆದಷ್ಟೂ ತೆಳ್ಳಗಿನ ಬಟ್ಟೆ ತೊಡಿಸಿ ಚರ್ಮ ಸಹಜವಾಗಿ ಉಸಿರಾಡಲು ಅವಕಾಶ ನೀಡಬೇಕು. ಬೆವರು ಸಾಲೆಗಳಾಗಿದ್ದರೆ ಕೂಲರ್ ಇರುವ ಕೋಣೆಯಲ್ಲಿ ಕೆಲ ಹೊತ್ತು ಮಗುವನ್ನಿರಿಸುವುದರಿಂದ ಉರಿ ಕಡಿಮೆಯಾಗುತ್ತದೆ. ಬೆವರು ಸಾಲೆ ನಿವಾರಣೆಗೆ ಹೆಚ್ಚಾಗಿ ಲ್ಯಾಕ್ಟೊ ಕ್ಯಾಲಮೈನ್ ಬಳಸಲಾಗುತ್ತದೆ.

ಶಿಶುಗಳ ಕುತ್ತಿಗೆ ದದ್ದುಗಳ ನಿವಾರಣೆಗೆ ಮನೆ ಮದ್ದುಗಳು
ಮನೆಯಲ್ಲಿಯೇ ಕೆಲ ಸುಲಭ ಮದ್ದುಗಳ ಮೂಲಕ ಶಿಶುಗಳ ಕುತ್ತಿಗೆ ದದ್ದುಗಳನ್ನು ಶಮನಗೊಳಿಸಬಹುದು. ದದ್ದುಗಳ ನಿವಾರಣೆಗೆ ಅನುಸರಿಸಬಹುದಾದ ಮನೆ ಮದ್ದುಗಳು ಹೀಗಿವೆ:

ಕಾರ್ನಸ್ಟಾರ್ಚ್
ದದ್ದುಗಳಾಗಿರುವ ಮಗುವಿಗೆ ಸ್ನಾನ ಮಾಡಿಸಿದ ನಂತರ ಕುತ್ತಿಗೆ ಭಾಗದಲ್ಲಿ ಕಾರ್ನ ಸ್ಟಾರ್ಚ್ (ಮೆಕ್ಕೆಜೋಳದ ಸ್ಟಾರ್ಚ್) ಹಚ್ಚುವ ಮೂಲಕ ದದ್ದುಗಳನ್ನು ನಿವಾರಿಸಬಹುದು. ಕಾರ್ನ ಸ್ಟಾರ್ಚ್‌ನಿಂದ ದದ್ದುಗಳಾಗಿರುವ ಭಾಗದಲ್ಲಿನ ತೇವಾಂಶ ಕಡಿಮೆಯಾಗಿ ದದ್ದು ಮಾಯುತ್ತವೆ.

ಹತ್ತಿ ಬಟ್ಟೆ ತೊಡಿಸುವುದು
ಶಿಶುವಿಗೆ ಯಾವಾಗಲೂ ಗಾಳಿಯಾಡುವ ತೆಳ್ಳಗಿನ ಹತ್ತಿ ಬಟ್ಟೆಗಳನ್ನೇ ತೊಡಿಸಬೇಕು. ಸಿಂಥೆಟಿಕ್ ಬಟ್ಟೆಗಳಿಂದ ಚರ್ಮದ ಉರಿಯೂತ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಇಂಥ ಬಟ್ಟೆಗಳನ್ನು ತೊಡಿಸಬಾರದು. ಇನ್ನು ಮಗುವಿಗೆ ತೀರಾ ಹೆಚ್ಚು ಬಟ್ಟೆಗಳನ್ನು ಹಾಕಬಾರದು.

ತಣ್ಣನೆಯ ಪಟ್ಟಿ
ದದ್ದುಗಳ ಮೇಲೆ ತಣ್ಣನೆಯ ಬಟ್ಟೆಯ ಪಟ್ಟಿಯನ್ನು ಇಡುವುದರಿಂದ ಉರಿಯನ್ನು ನಿವಾರಿಸಬಹುದಾಗಿದೆ. ಈ ರೀತಿ ದಿನದಲ್ಲಿ ಹಲವಾರು ಬಾರಿ ಪಟ್ಟಿ ಇಡುವುದು ಉಪಯುಕ್ತವಾಗಿದೆ. ಆದರೆ ತಣ್ಣನೆಯ ಪಟ್ಟಿ ಇಟ್ಟ ನಂತರ ಚರ್ಮವನ್ನು ತೇವಾಂಶ ರಹಿತವಾಗಿರುವಂತೆ ಮೃದುವಾಗಿ ಒರೆಸಬೇಕು.

ತೆಂಗಿನೆಣ್ಣೆ
ತೆಂಗಿನೆಣ್ಣೆ ಸೋಂಕು ನಿರೋಧಕ ಗುಣಗಳನ್ನು ಹೊಂದಿರುವುದರಿಂದ ದದ್ದುಗಳ ಮೇಲೆ ತೆಂಗಿನೆಣ್ಣೆ ಸವರಿದರೆ ಸಾಕಷ್ಟು ಉಪಶಮನ ದೊರಕುತ್ತದೆ.

ಬೇಕಿಂಗ್ ಸೋಡಾ
ಮಗುವನ್ನು ಸ್ನಾನ ಮಾಡಿಸುವಾಗ ಸ್ನಾನದ ನೀರಿನಲ್ಲಿ ಒಂದೆರಡು ಚಮಚೆ ಬೇಕಿಂಗ್ ಸೋಡಾ ಬೆರೆಸಬೇಕು. ಇದರಿಂದ ಶಿಶುಗಳ ಕುತ್ತಿಗೆಯ ದದ್ದುಗಳು ಶೀಘ್ರ ನಿವಾರಣೆಯಾಗುತ್ತವೆ.
* ಉಗುರು ಬೆಚ್ಚಗಿನ ನೀರು ಬಳಕೆ
ಮಗುವಿಗೆ ಸ್ನಾನ ಮಾಡಿಸುವಾಗ ಒಂಚೂರು ಉಗುರು ಬೆಚ್ಚಗಿರುವ ನೀರನ್ನೇ ಬಳಸಬೇಕು.
* ಟಾಲ್ಕಂ ಪೌಡರ್ ಬಳಕೆ
ಮಗುವಿನ ಚರ್ಮ ತೇವಾಂಶ ರಹಿತವಾಗಿಸಲು ಮಗುವಿನ ಚರ್ಮದ ಮೇಲೆ ಸ್ವಲ್ಪ ಪ್ರಮಾಣದ ಬೇಬಿ ಟಾಲ್ಕಂ ಪೌಡರ್ ಅನ್ನು ಸಿಂಪಡಿಸಬೇಕು.

ಓಟ್ಸ್ ಬಳಕೆ
ಮಗುವಿಗೆ ಸ್ನಾನ ಮಾಡಿಸುವಾಗ ನೀರಿಗೆ 2 ರಿಂದ 4 ಚಮಚೆ ಓಟ್ಸ್ ಸೇರಿಸಬೇಕು. ಹೀಗೆ ಮಾಡುವುದರಿಂದ ಶಿಶುಗಳ ಮೈಮೇಲಿನ ದದ್ದು ಬೇಗನೆ ಶಮನವಾಗುತ್ತವೆ. ದದ್ದು ಬಾರದಂತೆ ತಡೆಯಲು ಮುಂಜಾಗ್ರತೆ ಶಿಶುಗಳ ಕುತ್ತಿಗೆಯಲ್ಲಿ ದದ್ದುಗಳಾಗದಂತೆ ತಡೆಯಲು ಈ ಕೆಳಗಿನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು:
* ಶಿಶುವಿಗೆ ಹೆಚ್ಚು ಪ್ರಮಾಣದ ಬಟ್ಟೆಗಳನ್ನು ತೊಡಿಸಬಾರದು. ಹಾಗೆಯೇ ಶಿಶುವನ್ನು ಯಾವಾಗಲೂ ದಪ್ಪ ಬ್ಲಾಂಕೆಟ್ ಹೊದಿಸುವುದು ಸಹ ಸರಿಯಲ್ಲ. ಅತಿಯಾದ ಬಟ್ಟೆಗಳನ್ನು ತೊಡಿಸುವುದರಿಂದ ಬೆವರು ಹೆಚ್ಚಾಗಿ ಸಮಸ್ಯೆಯಾಗುತ್ತದೆ.
* ಶಿಶುವಿಗೆ ಪದೆ ಪದೆ ಸ್ನಾನ ಮಾಡಿಸುವುದು ಸೂಕ್ತವಲ್ಲ. ಇದರಿಂದ ಶಿಶುವಿನ ಚರ್ಮ ಡ್ರೈ ಆಗುತ್ತದೆ. ಅವಶ್ಯಕವಾದಲ್ಲಿ ಒದ್ದೆ ಬಟ್ಟೆಯಿಂದ ಮಗುವಿನ ಮೈ ಒರೆಸುವುದು ಸರಿಯಾದ ಕ್ರಮವಾಗಿದೆ.
* ಶಿಶುವಿನ ಕುತ್ತಿಗೆ ಭಾಗ ಯಾವಾಗಲೂ ಶುಷ್ಕ ಹಾಗೂ ಸ್ವಚ್ಛವಾಗಿರುವಂತೆ ನಿಗಾ ವಹಿಸಿ.
* ಬಿಸಿಲಿನ ಝಳ ಹೆಚ್ಚಾಗಿರುವಾಗ ಅಥವಾ ಒಟ್ಟಾರೆ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿರುವಾಗ ಮಗುವನ್ನು ಗಾಳಿಯಾಡುವ ಕೋಣೆಯಲ್ಲಿಯೇ ಇಡಬೇಕು. ಉಷ್ಣಾಂಶ ಹೆಚ್ಚಳದ ತೇವಾಂಶದಿಂದ ತೀವ್ರ ತರದ ದದ್ದುಗಳಾಗುವ ಸಾಧ್ಯತೆಗಳಿರುತ್ತವೆ.
* ಮಗುವಿನ ಕುತ್ತಿಗೆ ಭಾಗ ಸೇರಿದಂತೆ ಮೈಮೇಲೆ ಬೀಳುವ ಹಾಲನ್ನು ಆಗಾಗ ಸ್ವಚ್ಛಗೊಳಿಸಿ ಶಿಶುವಿನ ದೇಹ ನಿರ್ಮಲವಾಗಿರುವಂತೆ ಜಾಗೃತಿ ವಹಿಸಬೇಕು.



Click it and Unblock the Notifications











