Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬಾಟಲ್ ಹಾಲು ಕೊಡುವ ಮೊದಲು ಕೆಲವೊಂದು ಸಲಹೆ
ನಿಮ್ಮ ಮಗುವಿಗೆ ಎದೆ ಹಾಲು ಕೊಡುವುದನ್ನು ನಿಲ್ಲಿಸಿ ಹಾಲಿನ ಬಾಟಲ್ ಅನ್ನು ಮಗುವಿನ ಕೈ ನೀಡುವ ಮೊದಲು ಕೆಲವೊಂದು ವಿಷಯವನ್ನು ನೀವು ಗಮನದಲ್ಲಿರಿಸಿಕೊಳ್ಳುವುದು ಅತ್ಯವಶ್ಯಕ. ಬಾಟಲ್ ಹಾಲನ್ನು ಕುಡಿಯುವುದಕ್ಕೆ ನಿಮ್ಮ ಮಗು ರೆಡಿಯಾಗಿದ್ದರೆ ಪೋಷಕರಾದವರು ನೀವು ಕೂಡ ಸಿದ್ಧತೆಯನ್ನು ಹೊಂದಿರಬೇಕು. ಮಗುವಿಗೆ ಬಾಟಲ್ ಹಾಲನ್ನು ಕೊಡುವ ಮೊದಲು ನೀವು ಕೆಲವೊಂದು ವಿಷಯವನ್ನು ಗಮನದಲ್ಲಿರಿಸಿಕೊಳ್ಳಬೇಕು.
ಎದೆ ಹಾಲು ಕುಡಿಯುತ್ತಿರುವ ಮಗು ತಕ್ಷಣಕ್ಕೆ ಬಾಟಲ್ ಹಾಲು ಅನ್ನು ಕುಡಿಯುವುದಕ್ಕೆ ಕಷ್ಟವಾಗಬಹುದು. ಹಾಗಾಗಿ ಮಗುವಿಗೆ ಇಂತಹ ಸಮಸ್ಯೆಯಿಂದ ದೂರ ಮಾಡಲು ಪೋಷಕರಾದವರು ಕೆಲವೊಂದು ಅಂಶಗಳ ಕಡೆ ಕಾಳಜಿವಹಿಸಬೇಕು. ಕೆಲವೊಮ್ಮೆ ಮಗು ಎದೆ ಹಾಲಿನಿಂದ ಬಾಟಲ್ ಹಾಲಿಗೆ ಪರಿವರ್ತನೆಗೊಳ್ಳುವ ಸಂದರ್ಭದಲ್ಲಿ ಮಗು ಹಲವಾರು ತೊಂದರೆಗಳನ್ನು ಎದುರಿಸಬಹುದು ಅಂದರೆ ಮಗುವಿನಲ್ಲಿ ಕೆಲವೊಮ್ಮೆ ಮಲಬದ್ಧತೆ ಅಥವಾ ಲೂಸ್ ಮೋಷನ್ ಕೂಡ ಕಂಡುಬರಬಹುದು.
ಅಂತೆಯೇ ಮಗುವಿಗೆ ಬಾಟಲ್ ಹಾಲು ಕುಡಿಸುವುದಕ್ಕಿಂತ ಎದೆ ಹಾಲನ್ನು ಕುಡಿಸುವುದು ತುಂಬಾ ಸರಳ ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು. ಸಾಮಾನ್ಯವಾಗಿ ಮಗು ಎದೆ ಹಾಲು ಕುಡಿದಷ್ಟು ಸರಳವಾಗಿ ಬಾಟಲಿ ಹಾಲು ಕುಡಿಯುವುದಿಲ್ಲ. ಮಗುವಿಗೆ ಎದೆ ಹಾಲು ಕೊಡುವುದನ್ನು ನಿಲ್ಲಿಸಿ, ಹಾಲಿನ ಬಾಟಲ್ ಅನ್ನು ಮಗುವಿನ ಕೈ ನೀಡುವ ಮೊದಲು ಕೆಲವೊಂದು ಮಾಹಿತಿಯನ್ನು ಇಂದು ಬೋಲ್ಡ್ ಸ್ಕೈ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ.
ಇಲ್ಲಿ ಪೋಷಕರು ಅನುಸರಿಬೇಕಾದ ಕೆಲವೊಂದು ಪ್ರಮುಖ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಬಾಟಲ್ ಆಯ್ಕೆ ಮಾಡುವ ಮೊದಲು ಯೋಚಿಸಿ:
ನೀವು ಬಾಟಲ್ ಆಯ್ಕೆ ಮಾಡುವ ಮೊದಲು ಅದರ ಗುಣಮಟ್ಟವನ್ನು ನೋಡಿ ಆಯ್ಕೆ ಮಾಡುವುದು ಅತ್ಯವಶ್ಯಕ. ಗ್ಲಾಸಿನ ಬಾಟಲ್ ಮಗುವಿಗೆ ಅಪಾಯಕಾರಿ ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಅದಕ್ಕಿಂತಲೂ ಅಪಾಯಕಾರಿ ಪ್ಲಾಸ್ಟಿಕ್ ಬಾಟಲ್ ಎಂಬುದು ನಿಮ್ಮ ಗಮನದಲ್ಲಿರಲಿ. ಅದಾಗಿಯೂ ಕೆಲವೊಂದು ಪೋಷಕರು ಬಿಸ್ಫೆನಾಲ್ ಎ (BPA) ನಿಂದ ಮುಕ್ತವಾಗಿರುವ (ಕೆಲವೊಂದು ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಬಳಸಲಾಗುತ್ತದೆ) ಗ್ಲಾಸ್ ಬಾಟಲ್‍ಗೆ ಪ್ರಾಶಸ್ತ್ಯ ನೀಡುತ್ತಾರೆ.

ನಿಪ್ಪಲ್‌ಗಳು:
ಸಾಮಾನ್ಯವಾಗಿ ನಿಪ್ಪಲ್‌ಗಳನ್ನು ರಬ್ಬರ್ ಅಥವಾ ಸಿಲಿಕೋನ್‌ನಿಂದ ಮಾಡಲಾಗಿರುತ್ತದೆ. ಪರಿಣಿತರ ಪ್ರಕಾರ, ರಬ್ಬರ್ ಅಥವಾ ಸಿಲಿಕೋನ್ ಇರುವ ನಿಪ್ಪಲ್‌ಗಳು ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಪ್ರತಿ ದಿನ ಬಾಟಲ್ ನಿಪ್ಪಲ್‌ಗಳ ಬಣ್ಣ ಮಾಸಿ ಹೋಗಿದೆಯೇ ಅಥವಾ ಸೀಳಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಅತ್ಯವಶ್ಯಕ.

ಬಾಟಲ್ ಅನ್ನು ಸ್ವಚ್ಚಗೊಳಿಸಿ:
ಮಗುವಿಗೆ ಬಾಟಲ್ ಹಾಲನ್ನು ಕೊಡುವ ಮೊದಲು, ಬಾಟಲ್ ಅನ್ನು ಸ್ವಚ್ಚಗೊಳಿಸುವುದನ್ನು ಮರೆಯಬೇಡಿ. ಕೆಲವೊಮ್ಮೆ ಬಾಟಲ್‌ನಲ್ಲಿ ಕೂಡ ಬ್ಯಾಕ್ಟೀರಿಯಾಗಳು ಕಂಡುಬರುತ್ತದೆ, ಅದರಲ್ಲಿಯೂ ಪ್ಲಾಸ್ಟಿಕ್ ಬಾಟಲ್ ಅನ್ನು ನೀವು ಬಳಸುತ್ತಿದ್ದರೆ, ಮೊದಲು ಸ್ವಚ್ಚತೆಗೆ ಗಮನ ಹರಿಸಿ.

ಹಾಲು ಕುಡಿಸುವ ಮೊದಲು ಪರಿಶೀಲಿಸಿ:
ಮಗುವಿಗೆ ಹಾಲು ಕುಡಿಸುವ ಮೊದಲು ಬಾಟಲ್‌ನಲ್ಲಿರುವ ಹಾಲು ಬಿಸಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದನ್ನು ಮರೆಯಬೇಡಿ. ನಿಮ್ಮ ಮಗುವಿಗೆ ಬಾಟಲ್ ಹಾಲು ಕೊಡುವ ಮೊದಲು, ಹಾಲು ತಂಪಾಗಿರುವುದನ್ನು ಪರಿಶೀಲಿಸಿಕೊಳ್ಳಿ. ಅಲ್ಲದೆ ಸ್ವಲ್ಪ ಹಾಲನ್ನು ನಿಮ್ಮ ಕೈ ಹಸ್ತಕ್ಕೆ ಹಾಕಿ ಹಾಲು ಬಿಸಿಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನಿಮ್ಮ ಮಗುವನ್ನು ಬಿಗಿಹಿಡಿದಿಟ್ಟುಕೊಳ್ಳಿ:
ನೀವು ಮಗುವಿಗೆ ಬಾಟಲ್ ಹಾಲು ಕೊಡುವ ವಿಷಯಕ್ಕೆ ಬಂದಾಗ, ಮಗುವನ್ನು ನಿಮ್ಮ ಕೈ ತೋಳಿನಿಂದ ಹಿಡಿದಿಟ್ಟುಕೊಳ್ಳಬೇಕು. ಎದೆ ಹಾಲಿನಷ್ಟೇ ಪೌಷ್ಟಿಕಾಂಶದಿಂದ ಕೂಡಿರುವ ಇಂತಹ ಹಾಲು, ನಿಮ್ಮ ಮಗುವಿನ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಮಗು ಹಾಲು ಕುಡಿದ ನಂತರ:
ಮಗು ಹಾಲು ಕುಡಿದು ಮುಗಿಸಿದ ನಂತರ, ಹಾಲಿನ ಬಾಟಲ್ ನಿಪ್ಪಲ್ ಹೀರುವುದನ್ನು ನಿಲ್ಲಿಸುತ್ತದೆ, ಎಂಬುದು ನಿಮ್ಮ ಗಮನಕ್ಕೆ ಬಂದಿರಬಹುದು. ಹಾಗಾಗಿ ಪೋಷಕರು ಮಗು ಹಾಲಿನ ಬಾಟಲ್ ನಿಪ್ಪಲ್ ಅನ್ನು ಸರಿಯಾಗಿ ಹೀರುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಮಗುವಿನ ಬೆನ್ನು ನೀವಿ ತೇಗಿಸಿ
ಇದನ್ನು ಪೋಷಕರು ಗಮನದಲ್ಲಿರಿಸಿಕೊಳ್ಳುವುದು ಅತ್ಯವಶ್ಯಕ. ನಿಮ್ಮ ಮಗು ಹಾಲು ಕುಡಿದ ನಂತರ, ನೀವು ಮಗುವನ್ನು ಭುಜದ ಮೇಲೆ ಎತ್ತಿಹಿಡಿದು ಮೃದುವಾಗಿ ಮಗುವಿನ ಬೆನ್ನು ನೀವಿದನ್ನು ಮರೆಯಬೇಡಿ ಹಾಗೂ ಅವನು/ ಅವಳಿಗೆ ತೇಗು ಬರುವಂತೆ ಮಾಡಿ. ಮಗು ನಿಮ್ಮ ಭುಜದಲ್ಲಿರುವಾಗ ಮಗುವಿನ ಬೆನ್ನನ್ನು ಮೆಲ್ಲನೆ ಉಜ್ಜಿ, ಈ ರೀತಿ ಮಾಡುವುದರಿಂದ ಕೂಡ ನಿಮ್ಮ ಮಗು ವೇಗವಾಗಿ ತೇಗು ಮಾಡಲು ಸಹಕಾರಿಯಾಗುತ್ತದೆ. ಸಾಮಾನ್ಯವಾಗಿ ಬಾಟಲ್ ಹಾಲನ್ನು ಕೊಡುವಾಗ ಇಂತಹ ವಿಷಯವನ್ನು ನೀವು ಅನುಸರಿಸುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.



Click it and Unblock the Notifications
