Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಮಗುವಿಗೆ ಕಾಡುವ ತುರಿಕೆಗೆ ಪರಿಣಾಮಕಾರಿ ಚಿಕಿತ್ಸೆ
ನಿಮ್ಮ ಮಗುವಿಕೆ ಚರ್ಮದಲ್ಲಿ ಇಸಬು ಕಟ್ಟಿಕೊಂಡಿದ್ದರೆ ಮತ್ತು ತುರಿಕೆ ಇದ್ದರೆ ಅದು ಮಗುವಿನ ಬೆಳಗ್ಗೆ ಮತ್ತು ರಾತ್ರಿಯನ್ನೆಲ್ಲ ಹಾಳುಮಾಡುತ್ತದೆ. ಈ ರೀತಿ ಉಂಟಾಗದಿರಲು ಮಗುವಿನ ತ್ವಚೆ ಆರೈಕೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಋತುವಿಗೆ ತಕ್ಕಂತೆ ಮಾಯಿಸ್ಚರೈಸರ್ ಅನ್ನು ಬಳಸಬೇಕಾಗಬಹುದು. ಪೆಟ್ರೋಲಿಯಂ ಅಂಶವಿರುವ ಮಾಯಿಸ್ಚರೈಸರ್ ಚಳಿಗಾಲದ ತಿಂಗಳುಗಳಲ್ಲಿ ಸೂಕ್ತವಾದರೆ ಬೇಸಿಗೆಯಲ್ಲಿ ತುಂಬಾ ಗಟ್ಟಿ ಅಥವಾ ದಪ್ಪವಾಗುತ್ತದೆ. ಹಗುರವಾದ ತೆಳು ಕ್ರೀಮ್ ಬಿಸಿ ವಾತಾವರಣಕ್ಕೆ ಸೂಕ್ತ. ಇನ್ನೂ ಬಳಸುವ ಸೋಪ್ ಬಗ್ಗೆ ಎಚ್ಚರ.
ಮಗುವಿನಲ್ಲಿ ಇಸಬು ಕಂಡು ಬಂದರೆ ಈ ಕೆಳಗಿನ ಪರಿಣಾಮಕಾರಿ ಚಿಕಿತ್ಸೆಯಿಂದ ಇಸಬಿಗೆ ಪರಿಹಾರ ಕಂಡುಕೊಳ್ಳಬಹುದು.

ಪದೇ ಪದೇ ಸ್ನಾನ ಮಾಡಿಸಿ
ಪ್ರತೀದಿನ ಸ್ನಾನ ಮಾಡಿಸುವುದರಿಂದ ಮಗುವಿಗಾದ ಇಸಬನ್ನು ಕಡಿಮೆ ಮಾಡಬಹುದು ಎಂದು ಮಕ್ಕಳ ಚರ್ಮರೋಗ ತಜ್ಞರು ಹೇಳುತ್ತಾರೆ. ಸ್ನಾನ ಮಾಡಿಸುವುದು ಮಗುವಿನ ದೇಹಕ್ಕೆ ತೇವವನ್ನು ಒದಗಿಸುತ್ತದೆ ಇದರಿಂದ ಮಗುವಿಗೆ ಸೊಂಕಿನಿಂದಾದ ಒಣ ಚರ್ಮ ಮತ್ತು ಬ್ಯಾಕ್ಟೀರಿಯ ದಿಂದ ಮುಕ್ತಿ ಸಿಗುತ್ತದೆ ಎನ್ನುತ್ತಾರೆ.
ಪರಿಮಳರಹಿತವಾದ ಸೋಪುಗಳನ್ನು ಅಥವಾ ಕ್ಲೀನ್ಸರ್ ಗಳನ್ನು ಬಳಸುವುದು ಮಗುವಿನ ಸೂಕ್ಷ್ಮ ಚರ್ಮಕ್ಕೆ ಸೂಕ್ತ .ಮಗುವನ್ನು 5 ರಿಂದ 10 ನಿಮಿಷಗಳವರೆಗೆ ಸ್ನಾನ ಮಾಡಿಸಿ ನಂತರ ಮಾಯಿಶ್ಚರೈಸರ್ ಹಚ್ಚುವುದರಿಂದ ಮಗುವಿನ ಚರ್ಮ ತೇವವನ್ನು ಕಳೆದುಕೊಳ್ಳುವುದಿಲ್ಲ .

ಪ್ರತೀದಿನ ಮಾಯಿಸ್ಚರೈಸ್ ಬಳಸಿ
ತುರಿಕೆ ಮತ್ತು ಒಣಗುವಿಕೆಯನ್ನು ತಡೆಯಲು ದಿನದಲ್ಲಿ ಕೊನೆಪಕ್ಷ ಎರಡು ಬಾರಿ ಮಾಯಿಸ್ಚರೈಸರ್ ಅನ್ನು ಮಗುವಿಗೆ ಹಚ್ಚಿ.
ಒಣ ಚರ್ಮವು ಇಸುಬನ್ನು ಹೆಚ್ಚಿಸುವುದಲ್ಲದೆ ಉರಿಯನ್ನು ಕೂಡ ತರುವ ಸಾಧ್ಯತೆ ಇದೆ . ಹೆಚ್ಚು ನೀರಿರುವ ಲೋಶನ್ ಗಿಂತ ಗಟ್ಟಿ ಮಾಯಿಸ್ಚರೈಸರ್ ಕ್ರೀಂ ಮತ್ತು ಮುಲಾಮುಗಳು ಮಗುವಿನ ಚರ್ಮಕ್ಕೆ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತವೆ. ನಿಮ್ಮ ವೈದ್ಯರು ಕಜ್ಜಿ ವಿರೋಧಿ ಕ್ರೀಂ ಅನ್ನು ನೀಡಿದ್ದಾರೆ ಅದನ್ನು ಮಾಯಿಸ್ಚರೈಸರ್ ಹಚ್ಚುವ ಮೊದಲೇ ಹಚ್ಚಿ.

ನೈಸರ್ಗಿಕ ಕ್ರೀಂ ಗಳಿಂದ ದೂರವಿಡಿ
ನೈಸರ್ಗಿಕ ಮಕ್ಕಳ ಉತ್ಪನ್ನಗಳು ಜನಪ್ರಿಯ ಆದರೆ ಹೆಚ್ಚಿನವು ಸಸ್ಯಗಳು ಮತ್ತು ಮೂಲಿಕೆಗಳಿಂದ ಕೂಡಿರುವುದರಿಂದ ಅದು ಮಗುವಿನ ಮೃದು ಚರ್ಮದ ಮೇಲೆ ಪ್ರತಿಕ್ರಿಯಿಸಬಹುದು .
ಹೆಚ್ಚಿನ ಮಕ್ಕಳು ಹೂವಿನ ಸತ್ವ ಮತ್ತು ಪರಿಮಳದ ಬಗ್ಗೆ ಸೂಕ್ಷ್ಮವಾಗಿರುತ್ತವೆ . ಆದ್ದರಿಂದ ಮಕ್ಕಳ ಮೇಲೆ ಪರೀಕ್ಷೆ ನಡೆಸಿ ಸೂಕ್ಷ ಚರ್ಮಗಳಿಗೆ ಸರಿ ಹೊಂದುತ್ತದೆ ಎಂದು ನಿಮ್ಮ ವೈದ್ಯರಿಂದ ದೃಢ ಪಡಿಸಿಕೊಳ್ಳಿ.

ತೆಳುವಾದ ಬ್ಲೀಚ್ ನಲ್ಲಿ ಸ್ನಾನ
ಇಸುಬು ಅಥವಾ ಕಜ್ಜಿ ಇರುವ 6 ತಿಂಗಳವರೆಗಿನ ಮಕ್ಕಳಿಗೆ ತೆಳುವಾದ ಬ್ಲೀಚ್ ನಲ್ಲಿ ಸ್ನಾನ ಮಾಡಿಸಬೇಕು ಎಂದು ಸಿಲ್ವರ್ ಬರ್ಗ್ ತಿಳಿಸುತ್ತದೆ. ಚರ್ಮದಲ್ಲಿ ಗಡಸುತನವನ್ನು ಹೊಂದಿದ ಮಗುವಿಗೆ ಇದು ಸಹಾಯಕವಾಗಿದೆ. ಕಜ್ಜಿಯನ್ನು ಪ್ರಚೋದಿಸುವ ಸ್ಟಾಫ್ ಬ್ಯಾಕ್ಟೀರಿಯ ವನ್ನು ತೆಗೆಯಲು ಬ್ಲೀಚ್ ಸಹಕರಿಸುತ್ತದೆ. ನಿಮ್ಮ ಮಗುವಿಗೆ ಬ್ಲೀಚ್ ಸ್ನಾನ ಮಾಡಿಸುವ ಮೊದಲು ಮಕ್ಕಳ ತಜ್ಞರಿಂದ ಸಲಹೆ ಪಡೆಯಿರಿ.

ಮಗುವಿನ ಉಗುರು ಬೆಳೆಸಬೇಡಿ
ಚಿಕ್ಕ ಮಗು ತುರಿಸಿಕೊಳ್ಳುವುದನ್ನು ತಡೆಯಲು ಮಗುವಿನ ಕೈಗೆ ಕೈಗವಸನ್ನು ಉಪಯೋಗಿಸಿ ಆದರೆ ಸ್ವಲ್ಪ ದೊಡ್ಡ ಮಕ್ಕಳಿಗೆ ಇದು ಅಷ್ಟೊಂದು ಉಪಯೋಗವಾಗುವುದಿಲ್ಲ.
ಕೆರೆತವನ್ನು ಕಡಿಮೆ ಮಾಡಲು ನಿಮ್ಮ ಮಗುವಿನ ಕೈ ಉಗುರನ್ನು ಕತ್ತರಿಸಿ ಮತ್ತು ಚೂಪಾಗಿ ಇಲ್ಲದಂತೆ ನೋಡಿಕೊಳ್ಳಿ. ನಿಮ್ಮ ಮಗು ಹೆಚ್ಚು ತುರಿಸಿಕೊಳ್ಳುವುದು ಕಂಡುಬಂದಲ್ಲಿ ಮಗುವನ್ನು ನಿಮ್ಮ ವೈದ್ಯರ ಬಳಿ ಕರೆದುಕೊಂಡು ಹೋಗಿ ಮತ್ತು ಔಷಧಿ ಕೊಡಿಸಿ.



Click it and Unblock the Notifications
