Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಿವಿ ಚುಚ್ಚುವ ಮೊದಲು ಅನುಸರಿಸಬೇಕಾಗಿರುವ ಸಲಹೆ
ನಿಮ್ಮ ಮುದ್ದಿನ ಮಗುವಿಗೆ ಕವಿ ಚುಚ್ಚುವ ಆಲೋಚನೆಯನ್ನು ನೀವು ಹೊಂದಿರುವಿರಾದರೆ, ಕೆಲವೊಂದು ಮಾಹಿತಿಯನ್ನು ನೀವು ಗಮನದಲ್ಲಿ ಇಟ್ಟುಕೊಳ್ಳುವುದು ಅತ್ಯವಶ್ಯಕ. ನಿಮ್ಮ ಮಗುವಿಗೆ ಕಿವಿ ಚುಚ್ಚುವಾಗ, ಪೋಷಕರು ಇದರ ಕುರಿತು ತುಂಬಾ ಕಾಳಜಿ ವಹಿಸಬೇಕು. ನೀವು ನಿಮ್ಮ ಮಗುವಿನ ಕಿವಿ ಚುಚ್ಚುವ ಸಂದರ್ಭದಲ್ಲಿ ಮಗುವಿನ ಆರೋಗ್ಯದ ಕುರಿತು ಸಾಕಷ್ಟು ಪ್ರಮಾಣದಲ್ಲಿ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ, ಏಕೆಂದರೆ ಮಗುವಿಗೆ ಇಂತಹ ಸಮಯದಲ್ಲಿ ಸೊಂಕು ತಗಳುವ ಅಪಾಯ ಹೆಚ್ಚಾಗಿರುತ್ತದೆ..!
ಪರಿಣಿತರ ಪ್ರಕಾರ, ಮಗುವಿಗೆ ಕಿವಿ ಚುಚ್ಚುವ ಸಂದರ್ಭದಲ್ಲಿ ಮಗು ಜ್ವರ, ಅಥವಾ ಯಾವುದೇ ರೀತಿಯ ಸೊಂಕುವಿಗೆ ತುತ್ತಾಗದಂತೆ ಪೋಷಕರು ಕಾಳಜಿವಯಿಸಬೇಕು. ಕಿವಿ ಚುಚ್ಚುವ ಸಂದರ್ಭದಲ್ಲಿ ಮಗುವಿನ ಕಿವಿಯಲ್ಲಿ ಯಾವುದೇ ರೀತಿಯ ಗಾಯ, ಅಥವಾ ರಕ್ತ ಸೋರಿ ಹೋಗಿರುವುದರ ಕುರಿತು ಪೋಷಕರು ಗಮನ ಹರಿಸುವುದು ಅತ್ಯವಶ್ಯಕ.

ಅಲ್ಲದೆ ಪೋಷಕರು ತಮ್ಮ ಮಗುವಿಗೆ ಕಿವಿ ಚುಚ್ಚುವ ಮೊದಲು ಮಗುವಿಗೆ 6 ತಿಂಗಳು ಕಾಲ ಕಳೆದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇಂದು ಬೋಲ್ಡ್ ಸ್ಕೈ ನಿಮ್ಮ ಮಗುವಿಗೆ ಕಿವಿ ಚುಚ್ಚುವ ಸಂದರ್ಭದಲ್ಲಿ ಪೋಷಕರು ಗಮನದಲ್ಲಿ ಇರಿಸಿಕೊಳ್ಳಬೇಕಾದ , ಕೆಲವೊಂದು ಮಾಹಿತಿಯನ್ನು ಈ ಕೆಳಗೆ ನೀಡಿದೆ.
ಈ ಕೆಳಗಿನ ಕೆಲವೊಂದು ಮಾಹಿತಿಯನ್ನು ನೀವು ಪಾಲಿಸಿದರೆ, ನಿಮ್ಮ ಪುಟ್ಟ ಮಗು ನೋವಿನಿಂದ ಬಳಲುವುದನ್ನು ತಪ್ಪಿಸಬಹುದು.
1. ಮಗುವಿಗೆ ಕಿವಿ ಚುಚ್ಚಲು ದಿನ ನಿಗದಿಪಡಿಸುವ ಮೊದಲು, ಮಗುವಿಗೆ ಅವಶ್ಯಕತೆ ಇರುವ ಎಲ್ಲಾ ಚುಚ್ಚು ಮದ್ದುಗಳನ್ನು ನೀಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಮಗುವಿಗೆ ಸೊಂಕಿನಿಂದ ಅಥವಾ ನೋವಿನಿಂದ ಉಂಟಾಗುವ ಜ್ವರವನ್ನು ಕೂಡ ರಕ್ಷಿಸಬಹುದು.
2. ಮಗುವಿಗೆ ಕಿವಿ ಚುಚ್ಚುವ ಮೊದಲು, ವೈದ್ಯರ ಸಲಹೆಯನ್ನು ಪಡೆದುಕೊಂಡು, ಮಗುವಿಕೆ ನೋವು ನಿವಾರಕ ಔಷಧಿಯನ್ನು ನೀಡುವುದು ಅತ್ಯವಶ್ಯಕ. ಇದರಿಂದ ಕಿವಿ ಚುಚ್ಚುವ ಸಂದರ್ಭದಲ್ಲಿ ಮಗುವಿಗೆ ಉಂಟಾಗುವ ನೋವನ್ನು ತಡೆಗಟ್ಟಬಹುದು.
3. ಮಗುವಿಗೆ ಕಿವಿ ಚುಚ್ಚಿದ ನಂತರ, ಮಗುವಿನ ಕಿವಿಯ ಭಾಗವನ್ನು, ಹೈಡ್ರೋಜನ್ ಪಿರೋಕ್ಷೈಡ್ ಅಥವಾ ವೈದ್ಯರ ಸಲಹೆ ಪಡೆದುಕೊಂಡು ಮಗುವಿನ ಕಿವಿ ಚುಚ್ಚಿದ ಭಾಗವನ್ನು, ಚೆನ್ನಾಗಿ ಸ್ವಚ್ಚ ಮಾಡಿ, ಔಷಧಿಯನ್ನು ಲೇಪಿಸಬೇಕು ಎಂಬುದನ್ನು ಪೋಷಕರು ಮರೆಯಬಾರದು.
4. ಮಗುವಿಗೆ ಮೊದಲ ಬಾರಿ ಕಿವಿ ಚುಚ್ಚಿದ ಸಂದರ್ಭದಲ್ಲಿ, ಮಗು ಕಿವಿಯೋಲೆಯನ್ನು ಕನಿಷ್ಠ ಒಂದು ವರ್ಷ ಧರಿಸಿರಬೇಕು ಎಂಬುದನ್ನು ಪೋಷಕರು ಮರೆಯಬಾರದು. ಮಗುವಿಗೆ ಕಿವಿ ಚುಚ್ಚಿದ ಸ್ವಲ್ಪ ದಿನದ ನಂತರ, ಕಿವಿ ಚುಚ್ಚಿದ ಭಾಗಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಲು ಮರೆಯದಿರಿ.
5. ಮಗುವಿನ ಕಿವಿ ಚುಚ್ಚಿದ ಭಾಗ ಎಂದೂ ಸೊಂಕಿಗೆ ಗುರಿಯಾಗದಂತೆ ಪೋಷಕರು ಕಾಳಜಿವಹಿಸಬೇಕು.



Click it and Unblock the Notifications
