Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಕ್ಕಳ ಅಳುವನ್ನು ನಿಲ್ಲಿಸಲು 7 ಮಾರ್ಗಗಳು
ಸ್ತ್ರೀ, ಪರಿಪೂರ್ಣ ಎನಿಸುವುದೇ ತಾಯಿಯಾಗುವುದರ ಮೂಲಕ ಎಂಬುದು ನಮ್ಮ ನಂಬಿಕೆ. ತಾಯ್ತನದ ಸುಖವನ್ನು ಅನುಭವಿಸಿಯೇ ತೀರಬೇಕು ಎಂಬುದು ಸಾಮಾನ್ಯವಾಗಿ ವಾಡಿಕೆ. ಅದರಂತೆ ಮಗುವಿನ ಜವಾಬ್ದಾರಿಯನ್ನು ನಿಭಾಯಿಸುವುದು ಕೂಡ ಅಷ್ಟೇ ಪ್ರಮುಖವಾದುದು. ಮಕ್ಕಳು ನಗುವುದನ್ನು ನೋಡಲು ಎಷ್ಟು ಚಂದವೋ ಅದೇ ರೀತಿ ಆ ಮಕ್ಕಳು ಅಳುವಾಗ ಕೆಲವೊಮ್ಮೆ ಕಾರಣಗಳೇ ತಿಳಿಯದೆ ತಾಯಂದಿರಲ್ಲಿ ಗೊಂದಲ ಮೂಡುವುದು ಸಹಜ. ಎಷ್ಟೋ ಸಲ ನೀವು ಹೇಳುವುದನ್ನೂ ಕೇಳದೆ ಅವು ಒಂದೇ ಸಮನೆ ಅಳುತ್ತವೆ. ಆ ಸಂದರ್ಭವನ್ನು ನಿಯಂತ್ರಿಸುವುದು ಕಷ್ಟ. ಆದ್ದರಿಂದ ಮಕ್ಕಳು ಅಳುವಾಗ ಅವರನ್ನು ನಿಯಂತ್ರಿಸುವುದನ್ನು ಮೊದಲು ಕಲಿಯಬೇಕು. ಮಕ್ಕಳು ಅಳುವುದು ಅವು ನಿಮ್ಮೊಂದಿಗೆ ಮಾತನಾಡುವ ಪರಿ ಎಂದೇ ಹೇಳಬಹುದು. ಏಕೆಂದರೆ ಅವರಾಗಿಯೇ ಸ್ವತಃ ಯಾವ ಕೆಲಸವನ್ನೂ ಮಾಡಿಕೊಳ್ಳಲಾರವು. ಅವರ ಹಸಿವು, ನೋವು, ಭಯ, ಬೇಸರ, ಹೊಟ್ಟೆ ನೋವು, ಬಾಯಾರಿಕೆ, ಅಲರ್ಜಿ, ಗ್ಯಾಸ್, ಸುಸ್ತು, ಗಲಿಜಾದ ಬಟ್ಟೆ ಹೀಗೆ ಪ್ರತಿಯೊಂದು ಅಂಶವನ್ನೂ ಸಹ ಅವು ಅಳುವಿನ ಮೂಲಕವೇ ನಿಮ್ಮೊಂದಿಗೆ ಹೇಳಿಕೊಳ್ಳುತ್ತವೆ. ಆದರೆ ಕೆಲವೊಮ್ಮೆ ಅವರು ಯಾವ ಕಾರಣಕ್ಕೆ ಅಳುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದೆ ಕಷ್ಟವಾಗಿ ಅವರ ಅಳು ನಿಲ್ಲಿಸುವುದು ಕಷ್ಟವಾಗಬಹುದು.
ನಿಮ್ಮ ಮುದ್ದು ಕಂದಮ್ಮನ ಅಳುವನ್ನು ನಿಲ್ಲಿಸಲು ಇಲ್ಲಿ ಕೆಲವು ವಿಧಾನಗಳನ್ನು ಹೇಳಲಾಗಿದೆ. ನಿಮ್ಮ ಮಗುವಿನ ಅಳುವನ್ನು ನಿಲ್ಲಿಸಲು ಅವರ ಗಮನವನ್ನು ಬೇರೆಡೆಗೆ ಸೆಳೆಯುವಂತೆ ಮಾಡಲು ಕೆಲವು ಹೊಸ ವಿಧಾನಗಳನ್ನು ಅನುಸರಿಸಿ.

1. ಪಾಪ್ ಸ್ಟಾರ್ ಸಂಗೀತ:
ನಿಮ್ಮ ಮಗುವಿನ ಅಳುವನ್ನು ನಿಲ್ಲಿಸಲು ಉತ್ತಮವಾದ ಮಾರ್ಗವೆಂದರೆ ಅವರಿಗೆ ಮೃದುವಾದ ಸಂಗೀತವನ್ನು ಕೇಳಿಸುವುದು. ಅಥವಾ ಅವರಿಗೆ ಇಷ್ಟವಾಗುವ ಸಂಗೀತವನ್ನು ಕೇಳಿಸುವುದು. ಅಲ್ಲದೇ ಮಕ್ಕಳಿಗೆ ಅತ್ಯಂತ ಇಷ್ಟವಾದ 'ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್' ನಂತಹ ಹಾಡುಗಳನ್ನು ಹಾಕಿ ಅವರನ್ನು ಸಂತೋಷಪಡಿಸಬಹುದು.

2. ಜೋಕಾಲಿ ಆಟ:
ನಿಮ್ಮ ಮಗುವಿನ ಅಳುವನ್ನು ನಿಲ್ಲಿಸಲು ಇರುವ ಮಂತ್ರ, ತೂಗುಯ್ಯಾಲೆ. ಮಕ್ಕಳನ್ನು ಸಮಾಧಾನ ಮಾಡಲು ಅವರನ್ನೊಮ್ಮೆ ತೂಗುಯ್ಯಾಲೆಯಲ್ಲಿ ಕೂರಿಸಿ ಆಟವಾಡಬಹುದು. ಅಥವಾ ನಿಮ್ಮ ಕಾಲಿನ ಮೇಲೆ ಮಲಗಿಸಿಕೊಂಡು ತೂಗುಯ್ಯಾಲೆ ಆಟ ಮಾಡಬಹುದು. ಅಥವಾ ಅವರನ್ನು ಕಾಲಿನ ಮೇಲೆ ಕೂರಿಸಿಕೊಂಡು ಅವರ ತಲೆಯನ್ನು ಹಿಡಿದು ತೂಗುಯ್ಯಾಲೆಯಂತೆ ಮಾಡಿ ಅವರ ಅಳುವನ್ನು ನಿಲ್ಲಿಸಬಹುದು.

3. ಮಕ್ಕಳನ್ನು ಸುತ್ತಾಡಿಸಿ
ಮಕ್ಕಳ ಅಳುವನ್ನು ನಿಲ್ಲಿಸಲು ಸ್ಟ್ರೋಲರ್ ನಲ್ಲಿ ಮಕ್ಕಳನ್ನು ಕೂರಿಸಿಕೊಂಡು ಮನೆಯ ಹೊರಗಡೆ ಅಥವಾ ಮೈದಾನದಲ್ಲಿ ತಿರುಗಾಡಿಸಿ. ಆಗ ಮಕ್ಕಳ ಕಣ್ಣು ಬೇರೆನನ್ನೋ ನೋಡುತ್ತ ತನ್ನ ಅಳುವನ್ನೇ ಮರೆಯುತ್ತದೆ.

4. ಮಗುವಿನೊಂದಿಗೆ ಡ್ರೈವ್ / ಸಂಚಾರ ಮಾಡಿ
ನಿಮ್ಮ ಮಗು ಅಳುವುದನ್ನು ನಿಲ್ಲಿಸಲು ಮಗುವನ್ನು ಒಮ್ಮೆ ಹೊರಗಡೆ ಸುತ್ತಾಡಿಸಿ. ಅವರನ್ನು ಕಾರ್ ಅಥವಾ ಇನ್ಯಾವುದೇ ವಾಹನಗಳಲ್ಲಿ ಹತ್ತಿರದ ಸ್ಥಳದಲ್ಲಿ ತಿರುಗಾಡಿದರೆ ಅವರು ಅಳುವನ್ನು ನಿಲ್ಲಿಸಿ ಸಂಚಾರವನ್ನು ಆನಂದಿಸಬಹುದು.

5. ಬೆಚ್ಚಗಿನ ನೀರಿನ ಸ್ನಾನ
ಮಕ್ಕಳು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿದರೆ ಹಿತವಾದ ಅನುಭವವನ್ನು ಪಡೆಯುತ್ತವೆ. ಅವರ ವಿಶ್ರಾಂತಿಗಾಗಿ ಅವರನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಅಗತ್ಯ. ಅಲ್ಲದೇ ಮಕ್ಕಳಿಗೆ ನೀರಿನಲ್ಲಿ ಆಟವಾಡುವುದೆಂದರೆ ಇಷ್ಟ. ಆದ್ದರಿಂದ ಸ್ನಾನ ಮಾಡುವಾಗ ಬೀಳುವ ನೀರಿನ ಶಬ್ದವನ್ನೂ ಅವರು ಆನಂದಿಸುತ್ತಾರೆ.

6. ಶ್ ಶ್ ಶ್..
ಮಕ್ಕಳು ಅಳುವುದನ್ನು ನೋಡಲು ಯಾರಿಗೂ ಇಷ್ಟವಾಗುವುದಿಲ್ಲ. ಆದರೆ ಅವರ ಅಳುವನ್ನು ಕೆಲವೊಮ್ಮೆ ನಿಲ್ಲಿಸುವುದು ಕಷ್ಟ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ತುಟಿಯ ಮೇಲೆ ಬೆರಳಿಟ್ಟು ಶ್ ಶ್ ಶ್ ಎಂಬ ಶಬ್ದವನ್ನು ಮಾಡಿದರೆ ಮಕ್ಕಳು ಅಳುವ ಪ್ರಮಾಣ ಕಡಿಮೆಯಾಗಬಹುದು!



Click it and Unblock the Notifications











