Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಗು ಆರೋಗ್ಯವಾಗಿದೆ ಎಂದು ತಿಳಿಯುವುದು ಹೇಗೆ?

ಕೆಲ ತಿಂಗಳು ಕಳೆದರೂ, ಸೂಚಿಸಲಾದ ನಿರ್ದಿಷ್ಟ ಚಟುವಟಿಕೆಯಲ್ಲಿ ಮಗುವು ತೊಡಗದಿದ್ದರೆ ಮಾತ್ರ ಮಕ್ಕಳ ತಜ್ಞರನ್ನು ಸಂಪರ್ಕಿಸಬೇಕು. ಮಗುವಿಗೆ ಯಾವುದಾದರೂ ಕಾಯಿಲೆ ಇದ್ದರೆ ಇತರ ಮಕ್ಕಳಗಿಂತ ಭಿನ್ನವಾಗಿ ವರ್ತಿಸುತ್ತದೆ. ಆರೋಗ್ಯಕರ ಮಕ್ಕಳಲ್ಲಿ ಈ ಕೆಳಗಿನ ಲಕ್ಷಣಗಳು ಕಂಡುಬರುತ್ತದೆ.
ಜನನದಿಂದ 6 ವಾರಗಳ ವರೆಗೆ
ಅಂಗಾತ ಮಲಗಿರುವ ಮಗು ಒಂದು ಬದಿಗೆ ತನ್ನ ಕತ್ತನ್ನು ಹೊರಳಿಸುತ್ತದೆ, ಜೋರಾದ ಸದ್ದಿಗೆ ಮಗು ಚಕಿತಗೊಂಡು ದೇಹವನ್ನು ಬಿಗಿಗೊಳಿಸುತ್ತದೆ ಮುಷ್ಠಿಯನ್ನು ಗಟ್ಟಿಯಾಗಿ ಹಿಡಿಯುತ್ತದೆ ಯಾವುದೇ ವಸ್ತುವನ್ನು ಸ್ಪರ್ಶಿಸಿದಾಗ ಅದನ್ನು ಬಿಗಿಯಾಗಿ ಅಂಗೈಯಿಂದ ಹಿಡಿಯುತ್ತದೆ.
6 ರಿಂದ 12 ವಾರಗಳು
ತಲೆಯನ್ನು ಸ್ಥಿರವಾಗಿರಲು ಕಲಿಯುತ್ತದೆ ವಸ್ತುಗಳನ್ನು ಗುರುತಿಸಲು ಕಲಿಯುತ್ತದೆ. ಅಂಗಾತ ಮಲಗಿದಾಗ ತನ್ನೆರಡೂ ಕೈ ಹಾಗೂ ಕಾಲುಗಳನ್ನು ಅಲ್ಲಾಡಿಸುತ್ತದೆ. ಅಳುವಾಗಲೂ, ಸಂತೋಷ ವ್ಯಕ್ತ ಪಡಿಸಲು ಈ ರೀತಿ ಮಾಡುತ್ತದೆ. ತಾಯಿಯನ್ನು ಗುರುತಿಸುತ್ತದೆ. ಮಗು ತನ್ನ ಕೈಗಳೊಂದಿಗೇ ಆಟವಾಡುತ್ತದೆ.ತನ್ನ ಸುತ್ತಮುತ್ತಲಿಂದ ಕೇಳಿ ಬರುವ ಶಬ್ದಕ್ಕೆ ಪ್ರತಿಕ್ರಿಯಿಸುತ್ತದೆ. ಸದ್ದು ಬಂದ ಕಡೆ ತನ್ನ ತಲೆ ಹೊರಳಿಸುತ್ತದೆ ಮಗುವು ಬೋರಲು ಬೀಳಲಾರಂಭಿಸುತ್ತದೆ. ನಂತರ ನಿಧಾನಕ್ಕೆ ಎದ್ದು ಕೂರಲು ನೋಡುತ್ತದೆ. ಮೊದ ಮೊದಲು ಮಗುವಿಗೆ ನೇರವಾಗಿ ಕೂರಲು ಕಷ್ಟವಾಗುತ್ತದೆ. ನಂತರ ಯಾವುದೇ ಆಧಾರವಿಲ್ಲದೆ ಕೂರಲು ಕಲಿಯುತ್ತದೆ. ನಂತರ ನಿಧಾನಕ್ಕೆ ಎದ್ದು ನಿಲ್ಲಲು ಕಲಿಯುತ್ತದೆ.
8 -12ತಿಂಗಳು
ಕೆಲ ಮಕ್ಕಳು 8 ತಿಂಗಳಿಗೆ ಅಮ್ಮ ಅಂತ ಕರೆಯಲಾರಂಭಿಸುತ್ತದೆ. ತೊದಲು ಮಾತನಾಡಲು ಪ್ರಾರಂಭಿಸುತ್ತದೆ. ನಂತರ ಬೀಳದಂತೆ ನಡೆಯಲು ಪ್ರಾರಂಭಿಸುತ್ತದೆ. ತನ್ನ ಸುತ್ತ ಮುತ್ತ ಪ್ರತಿದಿನ ನೋಡುವವರನ್ನು ಗುರುತಿಸುತ್ತದೆ. ನಿಮ್ಮ ಮಾತಿಗೆ ಪ್ರತಿಕ್ರಿಯೆಸುತ್ತದೆ. ಈ ರೀತಿಯ ಲಕ್ಷಣಗಳು ಇದ್ದರೆ ಮಗು ನಾರ್ಮಲ್ ಆಗಿದೆ ಎಂದು ಅರ್ಥ. ಕೆಲವೊಂದು ಮಕ್ಕಳು ಮಾತನಾಡಲು ಒಂದೂವರೆ ವರ್ಷ ಅಗಬಹುದು. ಒಂದೂವರೆ ನಂತರ ಮಾತನಾಡುತ್ತಿಲ್ಲ ಅಥವಾ ನಡೆಯುತ್ತಿಲ್ಲ ಅಂದರೆ ವೈದ್ಯರನ್ನು ಸಂಪರ್ಕಿಸಬೇಕು.



Click it and Unblock the Notifications
