Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮ ಮಗುವಿನ ಆಲ್ಬಂ ಹೇಗೆ ಮಾಡುತ್ತಿದ್ದೀರಾ?
ಮದುವೆಯಾಗಿ ಸ್ವಲ್ಪ ಸಮಯದ ಬಳಿಕ ನಮಗೊಂದು ಮಗುಬೇಕೆಂದು ದಂಪತಿಗಳು ಆಸೆ ಪಡುತ್ತಾರೆ. ಅವರ ಆಸೆಯಂತೆ ಅವರ ಮನೆಗೆ ಹೊಸ ಅತಿಥಿ ಬರುತ್ತಿದ್ದಾನೆ/ಳೆ ಎಂಬ ಸುದ್ಧಿ ತಿಳಿದಾಕ್ಷಣದಿಂದ ತಮಗೆ ಹುಟ್ಟಲಿರುವ ಮಗುವಿನ ಬಗ್ಗೆ ತುಂಬಾ ಕನಸ್ಸು ಕಾಣುತ್ತಾರೆ. ನಮಗೆ ಹುಟ್ಟುವ ಮಗುವಿಗೆ ಏನು ಹೆಸರಿಡಬೇಕು? ಅದನ್ನು ಯಾವ ರೀತಿಯಲ್ಲಿ ಬೆಳಸಬೇಕು ಎಂಬುದೆಲ್ಲಾ ಕನಸ್ಸು ಕಾಣುತ್ತಾರೆ. ಹೀಗೆ 9 ತಿಂಗಳು ತುಂಬಿ ಮಗು ಹುಟ್ಟಿ, ಮಗುವಿನ ನಾಮಕರಣ ಮಾಡಿ, ಸ್ವಲ್ಪ ತಿಂಗಳಿನಲ್ಲಿಯೇ ಮಗುವಿಗೆ ವರ್ಷವಾಗುತ್ತದೆ. ಸಮಯ ಉರುಳಿದಿದ್ದೇ ಗೊತ್ತಾಗುವುದಿಲ್ಲ.
ಮಗು ಶಾಲೆಗೆ ಹೋಗಲಾರಂಭಿಸುತ್ತದೆ. ವರ್ಷಗಳು ಉರುಳಿದ್ದೇ ಗೊತ್ತಾಗುವುದಿಲ್ಲ. ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಆಗ ಅವರಿಗೆ ನೀವು ಚಿಕ್ಕ ಮಗುವಿರುವಾಗ ಆ ರೀತಿ ಮಾಡಿದಿರಿ, ಎಷ್ಟೊಂದು ಕೀಟಲೆ ಮಾಡುತ್ತಿದ್ದೆ ಎಂದೆಲ್ಲಾ ಹೇಳುವಿರಿ. ಆದರೆ ಅವರಿಗೆ ಅವೆಲ್ಲಾ ನೆನೆಪಿರುವುದಿಲ್ಲಾ. ಹೀಗೆ ಹೇಳುವಾಗ ಜೊತೆಗೆ ಒಂದು ಫ್ರೂಫ್ ಇಟ್ಟು ತೋರಿಸಿದರೆ ಅವರಿಗೆ ಎಷ್ಟೊಂದು ಖುಷಿಯಾಗುತ್ತದೆಯಲ್ವಾ? ಅದರಲ್ಲೂ ಅವರ ಪ್ರತಿಯೊಂದು ಚಟುವಟಿಕೆಗಳನ್ನು ವೀಡಿಯೋ ಕೂಡ ಮಾಡಿಟ್ಟು ನಿಮ್ಮ ಮಗು ಹದಿನಾರನೇ ಹುಟ್ಟು-ಹಬ್ಬ ಆಚರಿಸುವಾಗ ಅಥವಾ 18ನೇ ವರ್ಷದ ಹುಟ್ಟು ಹಬ್ಬ ಆಚರಿಸುವಾಗ ಗಿಫ್ಟ್ ಮಾಡಿ, ಐಡಿಯಾ ಸೂಪರ್ ಆಗಿದೆ ಅಲ್ವಾ?

ಮೊದಲ ಫೋಟೊ ಕ್ಲಿಕ್:
ಮಗು ಹುಟ್ಟಿದಾಗ ಹೇಗೆ ಕಾಣುತ್ತಿದ್ದಳು/ನು ಎಂದು ಫೋಟೊದಲ್ಲಿ ಮುದ್ರಿಸಿ. ನಂತರ ತಿಂಗಳ ನಂತರ ಮತ್ತೊಂದು ಫೋಟೊ ತೆಗೆದಿಡಿ.

ಮಗು ನಿದ್ದೆ ಮಾಡುತ್ತಿರುವಾಗ:
ನಿದ್ರಿಸುತ್ತಿರುವ ಮಗುವನ್ನು ನೋಡಲು ತುಂಬಾ ಮುದ್ದಾಗಿರುತ್ತದೆ. ಆ ಪೋಟೊ ಕೂಡ ನಿಮ್ಮಲ್ಲಿ ಇರಲಿ.

ಸ್ನಾನ ಮಾಡಿಸುವುದು:
ಮಗುವನ್ನು ಎಣ್ನೆ ಹಚ್ಚಿ ಸ್ನಾನ ಮಾಡಿಸುವ ಫೋಟೊ ತೆಗೆಯಿರಿ. ಸ್ನಾನ ಮಡಿಸುವಾಗ ಅದು ರಂಪಾಟದ ಮಾಡುವುದನ್ನು ಫೋಟೊ ತೆಗೆದರೆ ದೊಡ್ಡದಾದ ಮೇಲೆ ಆ ಫೋಟೊ ತೋರಿಸಲು ತುಂಬಾ ಮಜವಾಗಿರುತ್ತದೆ.

ಕಾಲು ಬೆರಳು ಚೀಪುವುದು:
ಮಗು 3-4 ತಿಂಗಳು ಆಗುವಾಗ ಕಾಲನ್ನು ಮೇಲಕ್ಕೆ ಎತ್ತಿ ಕಾಲಿನ ಹೆಬ್ಬೆರಳು ಚೀಪುತ್ತದೆ. ಇದನ್ನು ಫೋಟೊ ತೆಗೆದಿಡಿ.

ಅಂಬೆ ಕಾಲಿಡುವುದು:
ಮಗು ಅಂಬೆ ಕಾಲಿಟ್ಟು ಹೋಗುವುದನ್ನು ನೋಡಲು ತುಂಬಾ ಮುದ್ದು-ಮುದ್ದಾಗಿರುತ್ತದೆ. ಇದನ್ನು ನಿಮ್ಮ ಆಲ್ಬಂನಲ್ಲಿ ಸೇರಿಸಲು ಮರೆಯಬೇಡಿ.

ಕೂರುವುದು:
ಮಗು ಮೆಲ್ಲನೆ ಕೂರಲಾರಂಭಿಸುತ್ತದೆ. ಈ ರೀತಿ ಮೊದಮೊದಲು ಕೂರುವಾಗ ಬ್ಯಾಲೆನ್ಸ್ ಸಿಗದೆ ಕಷ್ಟ ಪಡುತ್ತದೆ. ಅಂತಹ ಫೋಟೊ ನಿಮ್ಮ ಆಲ್ಬಂ ಕಲೆಕ್ಷನ್ ನಲ್ಲಿರಲಿ.

ಮಗು ತಿನ್ನುವುದು:
ಮಗುವಿಗೆ ತಿನಿಸುವುದು ಈ ರೀತಿಯ ಫೋಟೊದಲ್ಲಿ ತಿನಿಸುವಾಗ ಮುಖಕ್ಕೆ ತುಂಬಾ ಮೆತ್ತಿಕೊಂಡಂತಹ ಫೋಟೊ ತೆಗೆದಿಡಿ.

ಮೆಲಮೆಲ್ಲನೆ ನಡೆ:
ತೆವಳಿಕೊಂಡು, ಬಿದ್ಕೊಂಡು ನಡೆಯುವುದು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಅವುಗಳನ್ನು ನಿಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಿರಿ. ಏಕೆಂದರೆ ಮಕ್ಕಳು ದೊಡ್ಡದಾದ ಮೇಲೆ ಅವರನ್ನು ಹಾಗೇ ನಡೆ ಎನ್ನಲು ಸಾಧ್ಯವೇ?

ಆಟವಾಡುವುದು:
ಮಗು ಆಡುತ್ತಿದ್ದ ಆಟ ಇವುಗಳೆನ್ನೆಲ್ಲಾ ನಿಮ್ಮ ನೆನಪಿಗೋಸ್ಕರ ಮಾತ್ರವಲ್ಲ ಮಗು ದೊಡ್ಡವನಾದ/ಳಾದ ಮೇಲೆ ತುಂಬಾ 5 ವರ್ಷಕ್ಕಿಂತ ಚಿಕ್ಕದಿರುವಾಗ ನಾನು ಏನೆಲ್ಲಾ ಮಾಡಿದೆ ಎಂದು ಮರೆತಿರುತ್ತದೆ. ಈ ಫೋಟೊಗಳು ನಿಮ್ಮ ಮಗ/ಮಗಳಿಗೆ ಒಂದು ಸ್ಪೆಷೆಲ್ ಗಿಫ್ಟ್ ಆಗಬಹುದು.



Click it and Unblock the Notifications
