Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವರ್ಷ ಕಳಿದರೂ ಮಗು ಮಾತನಾಡುತ್ತಿಲ್ಲವೇ?
ಮಕ್ಕಳು ಒಂದು ವರ್ಷದೊಳಗೆ ತೊದಲು ಮಾತನಾಡಲಾರಂಭಿಸುತ್ತಾರೆ. ಅಮ್ಮ, ಅಪ್ಪ, ಮನೆಯವರ ಹತ್ತಿರ ತೊದಲು ನುಡಿಯಲ್ಲಿ ಮಾತನಾಡುತ್ತದೆ. ತುಂಬಾ ಮಾತನಾಡದಿದ್ದರೂ ಅಲ್ಪ ಸ್ವಲ್ಪವಾಗಿ ಮಾತನಾಡುತ್ತದೆ. ಆದರೆ ಕೆಲ ಮಕ್ಕಳು ಮಾತನಾಡಲು ಸ್ವಲ್ಪ ಲೇಟಾಗುತ್ತದೆ.
ಒಂದೂವರೆ 2 ವರ್ಷ ಕಳೆದ ಮೇಲೆ ನಿಧಾನಕ್ಕೆ ಮಾತನಾಡುತ್ತದೆ. ಮಗು ಒಂದು ವರ್ಷ ತುಂಬುವಾಗಲೇ ಮಾತನಾಡುವುದಿಲ್ಲವೆಂದು ಭಯ ಬೀಳಬೇಕಾಗಿಲ್ಲ. ಮಗು ಬೇಗನೆ ಮಾತನಾಡುವಂತಾಗಲು ನಿಮ್ಮ ಪ್ರಯತ್ನವು ಬೇಕು. ಇಲ್ಲಿ ನಾವು ನಿಮ್ಮ ಮಗು ಬೇಗನೆ ಮಾತನಾಡಲು ನೀವು ಏನು ಮಾಡಬೇಕೆಂದು ಹೇಳಿದ್ದೇವೆ:

ಮಗುವಿನ ಜೊತೆ ಮಾತನಾಡಿ:ಮಗುವಿನ ಜೊತೆ ತುಂಬಾ ಹೊತ್ತು ಮಾತನಾಡಿ. ಆಗ ಮಗು ಕೂಡ ತಾನು ಮಾತನಾಡಲು ಪ್ರಯತ್ನಿಸುತ್ತದೆ. ಹೀಗೆ ಮಾತನಾಡುವಾಗ ತೊದಲು ಮಾತನಾಡಬೇಡಿ, ಮಗುವಿನೊಂದಿಗೆ ಸ್ಪಷ್ಟವಾಗಿ ಮಾತನಾಡಿ. ಮಗು ಸುಮ್ಮೆನಿದ್ದರೂ ಅದನ್ನು ಕರೆದು ಕರೆದು ಮಾತನಾಡಿಸಿ.
ಸವಿಸ್ತಾರವಾಗಿ ಹೇಳಿ: ಮಕ್ಕಳು ನಾವು ಹೇಳುವುದನ್ನು ಸುಲಭವಾಗಿ ಗ್ರಹಿಸುತ್ತದೆ. ಆದ್ದರಿಂದ ಮಗುವಿಗೆ ಪ್ರತಿಯೊಂದು ವಸ್ತುವಿನ ಬಗ್ಗೆ ಸ್ಪಷ್ಟವಾಗಿ, ವಿಸ್ತಾರವಾಗಿ ಹೇಳಿ. ಮಗು ಯಾವುದಾದರೂ ವಸ್ತು ನೋಡುತ್ತಿದ್ದರೆ ಅದನ್ನು ಹೇಳಿ. ಉದಾಹರಣೆಗೆ ಟಿವಿ ನೋಡುತ್ತಿದ್ದರೆ, ಇದು ಟಿವಿ ಅಂತ ಹೇಳಿ.
ಓದಿಸಿ: ಮಾತನಾಡಲಿಕ್ಕೆ ಬರದಿದ್ದರೂ ನೀವು ಮಕ್ಕಳ ಪುಸ್ತಕ ಹಿಡಿದು ಅದರಲ್ಲಿರುವ ಚಿತ್ರಗಳನ್ನು ತೋರಿಸುತ್ತಾ, ಇದು ಆನೆ, ಇದು ಕುರಿ ಅಂತ ಹೇಳಿ, ಆಗ ಮಗುವು ನಿಧಾನಕ್ಕೆ ಆ ಶಬ್ದಗಳನ್ನು ಉಚ್ಛಾರಣೆ ಮಾಡಲು ಪ್ರಯತ್ನಿಸುತ್ತದೆ.
ಹಾಡುಹೇಳಿ: ಮಗುವಿಗೆ ಪದ ಹೇಳುವುದು, ಹಾಡು ಹೇಳುವುದು ಮಾಡಿ , ಇದರಿಂದ ಮಗು ನಿಮ್ಮ ಶಬ್ದವನ್ನು ಗ್ರಹಿಸಿ ತಾನು ಕೂಡ ನಿಧಾನಕ್ಕೆ ಮಾತನಾಡಲು ಪ್ರಯತ್ನಿಸುತ್ತದೆ.
ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿ: ನಿಮ್ಮ ಮಗುವನ್ನು ಇತರ ಮಕ್ಕಳ ಜೊತೆ ಬೆರೆಯಲು ಬಿಡಿ. ಮಗು ಭಾಷೆ ಕಲಿಯಲು ಅನುಕೂಲವಾಗುವ ಚಟುವಟಿಕೆಗಳನ್ನು ಮಾಡಿಸಿ.
ಈ ರೀತಿ ಮಾಡಿದರೆ ಮಗು ಬೇಗನೆ ಮಾತನಾಡಲಾರಂಭಿಸುತ್ತದೆ.



Click it and Unblock the Notifications
