Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಕ್ಕಳ ಡೇ ಕೇರ್ ಬಗ್ಗೆ ಎಚ್ಚರ!

ಹೀಗೆಲ್ಲಾ ಅವಿಭಕ್ತ ಕುಟುಂಬಗಳು ಕಾಣ್ಮರೆಯಾಗುತ್ತಿವೆ. ಈಗ ಮಕ್ಕಳಿಗೆ ಇಂತಹ ಸೌಲಭ್ಯಗಳಿಲ್ಲ. ದುಡಿಯುವ ದಂಪತಿಗಳ ಮಕ್ಕಳನ್ನು ನೋಡಿಕೊಳ್ಳಲು ಬೇಬಿ ಡೇ ಕೇರ್ ಗಳಿವೆ. ಇಲ್ಲಿ ಬಿಟ್ಟು ಹೆತ್ತವರು ಯಾವುದೆ ಆತಂಕವಿಲ್ಲದೆ ಕೆಲಸಕ್ಕೆ ಹೋಗಿ ಬರುತ್ತಾರೆ. ಮಕ್ಕಳು ಇತರ ಮಕ್ಕಳೊಂದಿಗೆ ಬೆರತು ಬಾಳುವುದು ಇಲ್ಲಿಂದ ಪ್ರಾರಂಭವಾಗುತ್ತದೆ. ಈ ರೀತಿಯ ಡೇ ಕೇರ್ ಗಳಿಗೆ ಬಿಡುವ ಮುನ್ನ ಹೆತ್ತವರು ಈ ಕೆಳಗಿನ ಅಂಶಗಳ ಕಡೆಗೆ ಹೆಚ್ಚಿನ ಗಮನವನ್ನು ಕೊಡಬೇಕು.
1. ಸುರಕ್ಷತೆ: ಸುರಕಲ್ಷತೆ ಇರುವ ಡೇ ಕೇರ್ ಆಯ್ಕೆ ಮಾಡಬೇಕು. ಮಕ್ಕಳ ಕಳ್ಳಸಾಗಣಿಕೆ ಮಾಡುವವರ ಸಂಖ್ಯೆ ಹೆಚ್ಚಿರುವುದರಿಂದ ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಆಧುನಿಕ ಡೇ ಕೇರ್ ನಲ್ಲಿ ಮಕ್ಕಳ ಆಯಾ ದಿನದ ಚಟುವಟಿಕೆಯ ಬಗ್ಗೆ ವರದಿ ಇರುವ ಸಿ.ಡಿ ನೀಡಲಾಗುತ್ತದೆ.
2. ಮಕ್ಕಳನ್ನು ನೋಡಿಕೊಳ್ಳುವವರ ಬಗ್ಗೆ ಮಾಹಿತಿ: ಮಕ್ಕಳನ್ನು ನೋಡಿಕೊಳ್ಳುವವರ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು. ಅವರ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ಇರಬಾರದು. ಅವರು ನಿಮ್ಮ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಲು ತಕ್ಕವರೆಂದು ಖಾತ್ರಿ ಮಾಡಿಕೊಳ್ಳಿ.
3. ಮಕ್ಕಳ ಅನುಪಾತ: ನಿಮ್ಮ ಮಗುವನ್ನು ಸರಿಯಾಗಿ ನೋಡುತ್ತಿದ್ದಾರೆಯೆ ಎಂದು ತಿಳಿಯಲು ಅಲ್ಲ ಮಕ್ಕಳನ್ನು ನೋಡಿಕೊಳ್ಳಲು ಎಷ್ಟು ಜನರಿದ್ದಾರೆ ಎಂದು ತಿಳಿಯಬೇಕು. ಮಕ್ಕಳ ಸಂಖ್ಯೆ ಜಾಸ್ತಿ ಇದ್ದು ನೋಡಿಕೊಳ್ಳುವವರ ಸಂಖ್ಯೆ ಕಡಿಮೆ ಇದ್ದರೆ ಅಲ್ಲಿಗೆ ಮಕ್ಕಳನ್ನು ಬಿಡಬಾರದು.
4. ಸಮಯ: ಡೇ ಕೇರ್ ನಲ್ಲಿ ಮಕ್ಕಳನ್ನು ಇರಿಸಿಕೊಳ್ಳುವ ಸಮಯ ಮತ್ತು ನಿಮ್ಮ ಕೆಲಸದ ಸಮಯಕ್ಕೆ ಹೊಂದಿಕೆಯಾಗುವಂತಹ ಸಮಯವನ್ನು ಆಯ್ಕೆ ಮಾಡಬೇಕು.
5. ರಜಾ ದಿನ: ಸಾಕಷ್ಟು ಡೇ ಕೇರ್ ಗಳಲ್ಲಿ ಭಾನುವಾರ ರಜಾ ದಿನವಾಗಿರುತ್ತದೆ. ಆದರೆ ಕಂಪನಿಗಳಲ್ಲಿ ಅಥವಾ ರಿಪೋರ್ಟ್ ಗಳಿಗೆ ಭಾನುವಾರ ಕೆಲಸವಿರುತ್ತದೆ. ಆದ್ದರಿಂದ ನಿಮ್ಮ ರಜಾ ದಿನಕ್ಕೆ ಹೊಂದಿಕೆಯಾಗುವ ಡೇ ಕೇರ್ ಆಯ್ಕೆ ಮಾಡಬೇಕು.
6. ವೆಚ್ಚ: ಡೇ ಕೇರ್ ಗೆ ಕೊಡುವ ದುಡ್ಡು ನಿಮ್ಮ ಬಡ್ಜೆಟ್ ಗೆ ಹೊಂದಿಕೆಯಾಗುವಮತೆ ಇರಬೇಕು. ಇಲ್ಲದಿದ್ದರೆ ಸಮಸ್ಯೆಗಳು ಪ್ರಾರಂಭವಾಗುತ್ತದೆ.
7. ದೂರ: ಮನೆಯಿಂದ ಡೇ ಕೇರ್ ಗೆ ಇರುವ ಅಂತರ ಕಡಿಮೆ ಇರಬೇಕು. ಇದರಿಂದ ತುರ್ತಾಗಿ ಬರಬೇಕಾದಾಗ ಹೋಗಲು ಸುಲಭವಾಗಿರುತ್ತದೆ. ಅಲ್ಲದಿದ್ದರೆ ಕೆಲಸ ಮಾಡುವ ಸಮಿಪದಲ್ಲಿ ಇದ್ದರೆ ಕೂಡ ಒಳ್ಳೆಯದು.
ಮಕ್ಕಳಿಗೆ ಅಪ್ಪಅಮ್ಮನ ಸಾನಿಧ್ಯಕ್ಕಿಂತ ಅತ್ಯುತ್ತಮವಾದದ್ದು ಬೇರೆ ಯಾವುದೂ ಇಲ್ಲ. ಹೀಗಾಗಿ ಅನಿವಾರ್ಯವಾದರೆ ಮಾತ್ರ ಡೇ ಕೇರಿಗೆ ಕಳುಹಿಸಿ. ಡೇ ಕೇರಿನಿಂದ ಬಂದ ಮಗುವನ್ನು ಮುದ್ದಿಸಲು ಮರೆಯದಿರಿ.



Click it and Unblock the Notifications
