Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮಗು ಅಳುತ್ತಿದ್ದರೆ ಅದು ಹೊಟ್ಟೆ ನೋವು ಆಗಿರಬಹುದೆ ?

ಮಗು ಸರಿಯಾಗಿ ನಿದ್ರೆ ಮಾಡದೆ ಒಂದೆ ಸಮನೆ ಅಳುತ್ತಿದೆ ಅಂದರೆ ಅದು ಹೊಟ್ಟೆ ನೋವಿನಿಂದ ಎಂದು ಅರ್ಥೈಹಿಸಿಕೊಳ್ಳಬೇಕಾಗುತ್ತದೆ.
ಏಕೆಂದರೆ ಚಿಕ್ಕ ಮಕ್ಕಳಲ್ಲಿ ಕುಡಿದ ಹಾಲನ್ನು ಜೀರ್ಣಮಾಡಿಕೊಳ್ಳವಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ. ಆದ್ದರಿಂದ ಮಕ್ಕಳಲ್ಲಿ ಇದ್ದಕ್ಕಿದ್ದ ಹಾಗೆ ಹೊಟ್ಟೆ ನೋವು ಬಂದು ಜೋರಾಗಿ ಕಿರುಚಲಾರಂಭಿಸುತ್ತವೆ.
ಮಗುವಿನಲ್ಲಿ ಹೊಟ್ಟೆನೋವಿನ ಲಕ್ಷಣಗಳು ಈ ರೀತಿ ಇರುತ್ತದೆ.
1. ಮಗು ಹುಟ್ಟಿ ಒಂದು ವಾರದ ಬಳಿಕ ಈ ರೀತಿಯ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ, ಕೆಲವೊಮ್ಮೆ ಕೆಲವು ವಾರಗಳ ಬಳಿಕ ಕೂಡ ಈ ರೀತಿಯ ಹೊಟ್ಟೆನೋವು ಕಾಣಿಸಿಕೊಳ್ಳಬಹುದು.
2. ಈ ರೀತಿಯ ಹೊಟ್ಟೆನೋವು ಎದೆ ಹಾಲನ್ನು ಕುಡಿದ ಬಳಿಕ ಪ್ರಾರಂಭವಾಗುತ್ತದೆ, ಏಕೆಂದರೆ ಪುಟ್ಟ ಕರುಳು ತಾಯಿಯ ಹಾಲನ್ನು ಕರಗಿಸಿಕೊಳ್ಳುವಷ್ಟು ಶಕ್ತಿಯನ್ನು ಹೊಂದಿರುವುದಿಲ್ಲ, ಆದ್ದರಿಂದ ಹೊಟ್ಟೆನೋವು ಉಂಟಾಗುತ್ತದೆ.
3. ಮಕ್ಕಳು ಹೊಟ್ಟೆನೋವಿನಿಂದ ಅಳುವುದಾದರೆ ಎರಡು ಕಾಲನ್ನು ಮೇಲಕ್ಕೆ ಎತ್ತಿ ಅಳುತ್ತಿರುತ್ತದೆ.
4. ಮಗುವಿಗೆ ಮಲವಕಿಸರ್ಜನೆಗೆ ಸಹ ಕಷ್ಟವಾಗುವುದು ಮತ್ತು ಅದರ ಮಲ ತುಂಬಾ ಕೆಟ್ಟ ವಾಸನೆಯಿಂದ ಕೂಡಿರುತ್ತದೆ.
5. ಮಕ್ಕಳು ಸಂಜೆ 6-7 ಗಂಟೆಯಲ್ಲಿ ಜೋರಾಗಿ ಅಳುತ್ತಿದ್ದರೆ ಅದು ಹೊಟ್ಟೆನೋವಿನಿಂದ ಬಳಲುತ್ತಿದೆ ಎಂದು ಅರ್ಥ. ಏಕೆಂದರೆ ಈ ಸಮಯದಲ್ಲಿ ನೋವು ತುಂಬಾ ಹೆಚ್ಚಾಗುತ್ತದೆ.
ಈ ರೀತಿಯ ಹೊಟ್ಟೆನೋವಿಗೆ ಪರಿಹಾರ:
1. ಮಕ್ಕಳ ತಜ್ಞರು ಈ ರೀತಿಯ ಸಮಸ್ಯೆಗೆ ಕಡಿಮೆ ಸಾಂದ್ರತೆಯ ನೋವು ನಿರೋಧಕವನ್ನು ಕೊಡುತ್ತಾರೆ, ಆದರೆ ಅತಿ ಹೆಚ್ಚಿನ ವೈದ್ಯರಗಳು ಇಂತಹ ಸಮಸ್ಯೆಗೆ ಮನೆ ಮದ್ದೆ ಸಾಕು ಎನ್ನುತ್ತಾರೆ.
2. ಮಗುವನ್ನು ಟವಲ್ ನಲ್ಲಿ ಸುತ್ತಿ ಮಗುಚಿ ಮಲುಗುವಂತೆ ಹಿಡಿದರೆ ಈ ರೀತಿಯ ನೋವು ಕಡಿಮೆಯಾಗುವುದು.
3. ಹದ ಬಿಸಿ ತೆಂಗಿನ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಮಸಾಜ್ ಮಾಡುವುದರಿಂದ ಸಹ ಈ ರೀತಿಯ ನೋವು ಕಡಿಮೆಯಾಗುತ್ತದೆ.
4. ಮಗುವಿಗೆ ಹೊಳೆಯುವ ವಸ್ತುಗಳನ್ನು ತೋರಿಸಿದರೆ ಅದರ ಗಮನ ಆ ವಸ್ತುವಿನ ಕಡೆ ಹೋಗುವುದರಿಂದ ಸ್ವಲ್ಪ ಹೊತ್ತು ಅಳುವುದನ್ನು ನಿಲ್ಲಿಸುತ್ತದೆ.
5. ಮಗುವನ್ನು ತಾಯಿ ಅಪ್ಪಿಕೊಳ್ಳುವುದರಿಂದ ಮಗು ಅಳು ನಿಲ್ಲಿಸುವುದು, ಏಕೆಂದರೆ ತಾಯಿಯ ಹೃದಯ ಬಡಿತದ ಶಬ್ದವು ಮಗುವಿಗೆ ಪ್ರಪಂಚದಲ್ಲಿನ ಅತೀ ಮಧುರವಾದ ಶಬ್ದ ಎಂದು ಹೇಳಲಾಗುತ್ತದೆ.



Click it and Unblock the Notifications
