ಆಯುರ್ವೇದ ಪ್ರಕಾರ ಮಗುವಿಗೆ ಹೀಗೆ ಸ್ನಾನ ಮಾಡಿಸಿದರೆ ದೇಹಕ್ಕೆ ಒಳ್ಳೆಯದು

ಒಬ್ಬ ತಾಯಿ ಮಗುವನ್ನು ಹೆತ್ತ ನಂತರ ಅದನ್ನು ಸಾಕಿ ಸಲಹುದು ಅಷ್ಟು ಸುಲಭವಲ್ಲ ಯಾಕೆಂದರೆ ಮಗು ಒಂದು ವರ್ಷದವರೆಗೆ ಸರಿಯಾದ ರೀತಿಯ ಲಾಲನೆ ಪಾಲನೆ ಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿರುವಂತದ್ದು ಮಗು ಹುಟ್ಟಿದಾಗಿನಿಂದ ಸುಮಾರು ಆರು ತಿಂಗಳವರೆಗೆ ಮಗುವಿಗೆ ಸರಿಯಾದ ರೀತಿಯಲ್ಲಿ ಸ್ನಾನ ಮಾಡಿಸಬೇಕು.

ಸ್ನಾನ ಮಾಡಿಸುವ ಪ್ರಕ್ರಿಯೆಯಲ್ಲಿ ತಪ್ಪಾದರೆ ಮಗುವಿನ ಆರೋಗ್ಯದಲ್ಲಿಯೂ ಏರುಪೇರು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಆಯುರ್ವೇದದಲ್ಲಿ ಮಗುವಿನ ಸ್ನಾನದ ಬಗ್ಗೆ ಸರಿಯಾದ ಕ್ರಮವನ್ನು ಹೇಳಲಾಗುತ್ತದೆ. ನೀವು ಕೂಡ ಆಯುರ್ವೇದ ಪದ್ಧತಿಯಲ್ಲಿ ಮಗುವಿನ ಸ್ನಾನ ಮಾಡಿಸಿದರೆ ಅದರ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು.

Baby Bath Tips

ಅಭ್ಯಂಗನ:
ಶಿಶುವಿನ ಅಭ್ಯಂಗ ಅಥವಾ ಬೇಬಿ ಮಸಾಜ್ ಮಾಡಿ ಸ್ನಾನ ಮಾಡಿಸುವುದು ಬಹಳ ಮುಖ್ಯ. ಬಾಲ್ಯದಲ್ಲಿ ನಾವು ಯಾವ ರೀತಿ ಮಗುವನ್ನು ತಿದ್ದಿ ತೀಡಿ ಸರಿಯಾದ ರೂಪ ನೀಡುತ್ತೇವೆವೋ ಭವಿಷ್ಯದಲ್ಲಿ ಅಷ್ಟು ಉತ್ತಮವಾಗಿ ಜೀವನ ನಡೆಸಲು ಸಾಧ್ಯ. ಉದಾಹರಣೆಗೆ ಹುಟ್ಟಿದ ಮಗುವಿಗೆ ಆರಂಭದಿಂದಲೇ ಕಾಲು ಕೈಗಳಿಗೆ ಸರಿಯಾದ ಮಸಾಜ್ ಮಾಡುವುದು ತಲೆ ಮೂಗು, ಮೊದಲಾದ ಭಾಗಗಳನ್ನು ಸರಿಯಾಗಿ ತಿದ್ದಿ ತೀಡುವುದು ಈ ರೀತಿ ಮಾಡಿದರೆ ಮುಂದೆ ಮಗುವಿನ ಬಾಹ್ಯ ಸೌಂದರ್ಯವೂ ಕೂಡ ಉತ್ತಮವಾಗಿರುತ್ತದೆ.

ಎಣ್ಣೆ ಮಸಾಜ್:
ಕಂದಮ್ಮನಿಗೆ ಎಣ್ಣೆ ಮಸಾಜ್ ಮಾಡಿಸುವುದು ಬಹಳ ಮುಖ್ಯ ಇದು ಬಹಳ ಹಳೆಯ ಕಾಲದ ಹಾಗೂ ಸಾಂಪ್ರದಾಯಿಕ ಪದ್ಧತಿ. ನಿಮ್ಮ ಮನೆಗಳಲ್ಲಿಯೂ ಕೂಡ ಅಜ್ಜಿ ಮಗುವನ್ನು ಕಾಲ ಮೇಲೆ ಮಲಗಿಸಿಕೊಂಡು ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡುವುದನ್ನು ನೋಡಿರಬಹುದು. ಆದರೆ ಈಗ ಆಧುನಿಕ ಯುಗದಲ್ಲಿ ಇದೆಲ್ಲದಕ್ಕೂ ಬ್ರೇಕ್ ಬಿದ್ದಿದೆ! ಆದರೆ ಎಣ್ಣೆ ಮಸಾಜ್ ಮಾಡಿಸಿದರೆ ಮಕ್ಕಳಲ್ಲಿ ಸ್ನಾಯು ಗಟ್ಟಿಯಾಗುವುದು, ಇಂದ್ರಿಯಗಳು ಬಲಗೊಳ್ಳುವುದು, ಮೆದುಳು ಬೆಳವಣಿಗೆಯಾಗುವುದು ಹೀಗೆ ಹಲವಾರು ಪ್ರಯೋಜನಗಳು ಇವೆ.
ಆಯುರ್ವೇದ ಹೇಳುವಂತೆ ಮಗು ಹುಟ್ಟಿದ ನಂತರ ಹೆರಿಗೆಯಾದ ತಾಯಿ ಹಾಗೂ ಮಗುವಿಗೆ ಎಣ್ಣೆ ಮಸಾಜ್ ಮಾಡಿಸುವುದು ನೈಸರ್ಗಿಕ ಪ್ರಕ್ರಿಯೆಯು ಆಗಿದೆ ಇದು ದೇಹದಲ್ಲಿ ವಾತ ದೋಷವನ್ನು ಕೂಡ ನಿವಾರಿಸುತ್ತದೆ. ಎಣ್ಣೆ ಅಭ್ಯಂಗ ಅಥವಾ ಎಣ್ಣೆ ಮಸಾಜ್ ಮಗುವಿಗೆ ಮಾತ್ರವಲ್ಲದೇ ತಾಯಿಗೂ ಕೂಡ ಬಹಳ ಮುಖ್ಯ.

ಇಂದಿನ ಆಧುನಿಕ ಯುಗದಲ್ಲಿ ಮಗುವಿಗೆ ಎಣ್ಣೆ ಮಸಾಜ್ ಮಾಡುವುದನ್ನು ಹಲವು ವೈದ್ಯರು ನಿರಾಕರಿಸುತ್ತಾರೆ ಕೂಡ. ಆದರೆ ಎಣ್ಣೆ ಮಸಾಜ್ ನ ಸ್ಪರ್ಶದಿಂದ ಉಂಟಾಗುವ ಪ್ರಚೋದನೆಯ ಆಕ್ಸಿಟೋಸಿಸ್ ಹಾರ್ಮೋನ್ ಗಳು ಬಿಡುಗಡೆ ಆಗುತ್ತದೆ ಇದರಿಂದ ತಾಯಿ ಮತ್ತು ಮಗುವಿನಲ್ಲಿ ಭಾಂಧವ್ಯ ಮೂಡುತ್ತದೆ ಮಾನಸಿಕವಾಗಿ ಬಾಂಧವ್ಯ ಗಟ್ಟಿಯಾಗಿಸುತ್ತದೆ ಅಂದರೆ ನೀವು ನಂಬಲೇಬೇಕು.

ಶಿಶುವಿಗೆ ಎಣ್ಣೆ ಸ್ನಾನ ಯಾಕೆ ಮಾಡಿಸಬೇಕು:
•ಶಿಶುವಿಗೆ ಎಣ್ಣೆ ಸ್ನಾನ ಮಾಡಿಸುವುದರಿಂದ ಸಾಕಷ್ಟು ಉತ್ತಮ ಪ್ರಯೋಜನಗಳಿವೆ. ಮೊಟ್ಟಮೊದಲನೆಯದಾಗಿ ದೇಹದಲ್ಲಿ ಯಾವುದೇ ರೀತಿಯಾದಂತಹ ಚರ್ಮದ ಕಾಯಿಲೆ ಬಾರದೇ ಇರಲು ಚಿಕ್ಕ ವಯಸ್ಸಿನಿಂದ ಮಾಡಿಸುವ ಈ ಎಣ್ಣೆ ಸ್ನಾನ ಅಥವಾ ಎಣ್ಣೆ ಮಸಾಜ್ ಬಹಳ ಸಹಾಯಕವಾಗುತ್ತದೆ.
•ಮಗು ವಿಶ್ರಾಂತಿಯಿಂದ ಹಾಗೂ ಆರಾಮದಾಯಕವಾಗಿ ನಿದ್ದೆ ಮಾಡಲು ಸಹಾಯವಾಗುತ್ತದೆ
•ಶಿಶುವಿನ ಚರ್ಮ ಹೊಳಪನ್ನು ಪಡೆದುಕೊಳ್ಳುತ್ತದೆ ಜೊತೆಗೆ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ.
•ಶಿಶುವಿನ ಸ್ನಾಯು ಗಳು ಗಟ್ಟಿಯಾಗುತ್ತವೆ.
•ಮಗುವಿನ ದೇಹದಲ್ಲಿ ತಾಪಮಾನ ಸಮತೋಲಿತದಲ್ಲಿರಲು ಕೂಡ ಇದು ಸಹಾಯಕವಾಗುತ್ತದೆ.
•ಮೆದುಳಿನ ಆರೋಗ್ಯಕ್ಕೂ ಕೂಡ ಎಣ್ಣೆ ಮಸಾಜ್ ಹಾಗೂ ಎಣ್ಣೆ ಸ್ನಾನ ಬಹಳ ಒಳ್ಳೆಯದು ಅಷ್ಟೇ ಅಲ್ಲದೆ ಕೂದಲಿನ ಬೆಳವಣಿಗೆಗೂ ಕೂಡ ಇದು ಸಹಾಯಕವಾಗುತ್ತದೆ ಜೊತೆಗೆ ಮಗುವಿನ ಪೋಷಿಸಿ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ.
•ಪುಟ್ಟ ಮಗುವಿಗೆ ಸರಿಯಾಗಿ ಎಣ್ಣೆ ಮಸಾಜ್ ಮಾಡಿಸಿದರೆ ಹೊಟ್ಟೆಯಲ್ಲಿ ಕಾಣಿಸುವಂತಹ ಮಲಬದ್ಧತೆ ಇರಬಹುದು, ಗ್ಯಾಸ್ ಇರಬಹುದು ಅಥವಾ ಇತರ ಯಾವುದೇ ಸಮಸ್ಯೆಗಳು ಕೂಡ ಮುಂದೆ ಬರುವುದಿಲ್ಲ.
•ಮಗುವಿನ ತೂಕ ಹೆಚ್ಚಿಸಲು ಇದನ್ನು ಮಸಾಜ್ ಬಹಳ ಮುಖ್ಯ.
ಮಗುವಿನ ಒಟ್ಟಾರೆ ಬೆಳವಣಿಗೆಗೆ ಆರಂಭದಿಂದಲೇ ಎಣ್ಣೆ ಮಸಾಜ್ ಮಾಡಿಸುವುದು ಅತ್ಯಂತ ಪ್ರಯೋಜನಕಾರಿ ಆಗಿದೆ.

ಎಣ್ಣೆ ಸ್ನಾನ ಮಾಡಿಸುವುದು ಹೇಗೆ:
•ಮಗುವಿಗೆ ಎಣ್ಣೆಯಲ್ಲಿ ಯಾವುದೇ ಸಮಯದಲ್ಲಿ ಮಸಾಜ್ ಮಾಡಬಹುದು ಬೆಳಗ್ಗೆ ಅಥವಾ ಸಂಜೆ ಮಗು ಖಾಲಿ ಹೊಟ್ಟೆಯಲ್ಲಿರುವಾಗ ಮಸಾಜ್ ಮಾಡಿದರೆ ಒಳ್ಳೆಯದು. ಮಸಾಜ್ ಮಾಡಿದ ನಂತರ ಹಾಗೆಯೇ ಒಂದು ಗಂಟೆಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಿಸಬೇಕು.
•ಇನ್ನು ಸಂಜೆ ಹೊತ್ತಿನಲ್ಲಿ ಮಸಾಜ್ ಮಾಡಿದರೆ ಆಗ ಸ್ನಾನ ಮಾಡಿಸುವ ಅಗತ್ಯ ಇರುವುದಿಲ್ಲ ಆದರೆ ಸುಮಾರು ಒಂದು ಗಂಟೆಗಳ ಕಾಲ ಮಸಾಜ್ ಮಾಡಿ ಮಗುವನ್ನು ಹಾಗೆಯೇ ಕ್ಲೀನ್ ಶೀಟ್ ಮೇಲೆ ಮಲಗಿಸಿ.
•ಸ್ವಲ್ಪ ಉಗುರು ಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿದರೆ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಅದರ ಬದಲು ಬಿಸಿಯಾಗಿರುವ ನೀರಿನಲ್ಲಿ ಎಣ್ಣೆಯನ್ನು ಇಟ್ಟು ತುಸು ಬಿಸಿ ಮಾಡಿ ನಂತರ ಮಗುವಿಗೆ ಹಚ್ಚಿ.
•ನಿಮ್ಮ ಬೆರಳುಗಳನ್ನು ವೃತ್ತಾಕಾರದಲ್ಲಿ ತಿರುಗಿಸುವುದರ ಮೂಲಕ ಮಗುವಿಗೆ ಮಸಾಜ್ ಮಾಡುತ್ತಾ ಹೋಗಬೇಕು ಅಗತ್ಯ ಇರುವ ಭಾಗದಲ್ಲಿ ತುಸು ಒತ್ತಡದ ಮಸಾಜ್ ಮಾಡಬಹುದು.
•ಇನ್ನು ಮಸಾಜ್ ಮಾಡುವಾಗ ಮಕ್ಕಳು ಅಳುವುದು ಸಹಜ ಹಾಗಂದ ಮಾತ್ರಕ್ಕೆ ಈ ಮಸಾಜ್ ಮಗುವಿಗೆ ತೊಂದರೆ ಆಗುತ್ತಿದೆ ಎಂದು ಅರ್ಥವಲ್ಲ ಹಾಗಾಗಿ ಮಸಾಜ್ ಮಾಡುವಾಗ ನಿಧಾನವಾಗಿ ಆರಾಮವಾಗಿ ಮಾಡಿ ಮಗುವಿಗೆ ನೋವಾಗಬಾರದು ಆದರೆ ಮಗು ಅಳುತ್ತದೆ ಎನ್ನುವ ಕಾರಣಕ್ಕೆ ಮಸಾಜ್ ಮಾಡುವುದನ್ನು ನಿಲ್ಲಿಸಲು ಬಾರದು.
•ಇನ್ನು ಎಣ್ಣೆ ಮಸಾಜ್ ಅಥವಾ ಎಣ್ಣೆ ಸ್ನಾನ ಮಾಡಿಸುವವರು ನಿಮ್ಮ ಕೈಗಳ ಉಗುರುಗಳನ್ನು ತೆಗೆದುಕೊಳ್ಳಿ ಮಗುವಿಗೆ ಯಾವುದೇ ರೀತಿಯಾದಂತಹ ಗಾಯಗಳಾದಂತೆ ನೋಡಿಕೊಳ್ಳಿ.
•ಕಣ್ಣು ಹಾಗೂ ಕಿವಿಗೆ ಎಣ್ಣೆ ಹೋಗದಂತೆ ನೋಡಿಕೊಳ್ಳಿ.
•ಇನ್ನು ಮಗುವಿಗೆ ಸ್ನಾನ ಮಾಡಿಸುವಾಗಲು ಅತಿಯಾದ ಬಿಸಿ ನೀರನ್ನು ಹಾಕಬೇಡಿ ತುಸು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿದರೆ ಸಾಕು.
•ಎಣ್ಣೆಯಲ್ಲಿ ಮಸಾಜ್ ಮಾಡಿ ಸ್ನಾನ ಆದ ನಂತರ ಮಗುವನ್ನು ಬಹಳ ಬೆಚ್ಚಗಿಡಬೇಕು. ಮಗುವನ್ನು ಸಂಪೂರ್ಣವಾಗಿ ಬಟ್ಟೆಯಿಂದ ಸುತ್ತಿ ಶೀತ ಗಾಳಿ ಒಳಗೆ ಹೋಗದಂತೆ ನೋಡಿಕೊಳ್ಳಿ ಹೀಗೆ ಮಸಾಜ್ ಮಾಡಿ ಮಗುವನ್ನು ಮಲಗಿಸಿದರೆ ಕನಿಷ್ಠ ನಾಲ್ಕೈದು ಗಂಟೆಗಳ ಕಾಲ ಆರಾಮಾಗಿ ನಿದ್ರೆ ಮಾಡಬಹುದು.

ಎಣ್ಣೆ ಮಸಾಜ್ ಗೆ ಯಾವ ಎಣ್ಣೆ ಬೆಸ್ಟ್?
ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ವಿಧದ ಮಸಾಜ್ ತೈಲಗಳು ಕೂಡ ಬಂದಿದೆ. ಹಾಗಾಗಿ ನಿಮ್ಮ ಮಗುವಿನ ಚರ್ಮಕ್ಕೆ ಅನುಗುಣವಾಗಿ ಮಸಾಜ್ ಎಣ್ಣೆಯನ್ನು ಆಯ್ದುಕೊಳ್ಳಿ ಆಯುರ್ವೇದದ ಸಲಹೆ ಪ್ರಕಾರ ನೋಡುವುದಾದರೆ ತೆಂಗಿನ ಎಣ್ಣೆ ಮಕ್ಕಳ ಮಸಾಜ್ ಗೆ ಹೆಚ್ಚು ಒಳ್ಳೆಯದು. ಇದರ ಜೊತೆಗೆ ಬಾದಾಮಿ ಎಣ್ಣೆ, ದ್ರಾಕ್ಷಿ ಬೀಜದ ಎಣ್ಣೆ, ಆಲಿವ್ ಎಣ್ಣೆ, ಎಲಾಡಿ ಕೇರಂ ಮೊದಲಾದ ಎಣ್ಣೆಗಳನ್ನು ಕೂಡ ಮಸಾಜ್ ಮಾಡಲು ಬಳಸುತ್ತಾರೆ. ಆದರೆ ಇಂತಹ ಎಣ್ಣೆಗಳಿಂದ ಮಗುವಿಗೆ ಮಸಾಜ್ ಮಾಡುವ ಮೊದಲು ಅದು ನಿಮ್ಮ ಮಗುವಿನ ದೇಹಕ್ಕೆ ಸರಿಹೊಂದುಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮಗುವಿಗೆ ಮಸಾಜ್ ಮಾಡುವಾಗ ಅದು ಹೊಟ್ಟೆ ತುಂಬಿಕೊಂಡಿರುವಾಗ ಮಸಾಜ್ ಮಾಡಬಾರದು ಇದರಿಂದ ವಾಕರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಇನ್ನು ಮಗು ಅನಾರೋಗ್ಯದ ಪರಿಸ್ಥಿತಿಯಲ್ಲಿ ಇರುವಾಗಲೂ ಮಸಾಜ್ ಮಾಡುವುದನ್ನು ತಪ್ಪಿಸಿ.

ಮಗು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯಕರವಾಗಿರಲು ಎಣ್ಣೆ ಮಸಾಜ್ ಹಾಗೂ ಸ್ನಾನ ಬಹಳ ಅಗತ್ಯ. ಇಂದಿನ ಆಧುನಿಕ ಶೈಲಿಗೆ ಮರುಳಾಗಿ ಮಕ್ಕಳಿಗೆ ಅಗತ್ಯ ಇರುವ ಹಾಗೂ ನೀಡಲೇ ಬೇಕಾಗಿರುವ ಇಂತಹ ಸಾಂಪ್ರದಾಯಿಕ ಅಭ್ಯಂಗ ವಿಧಾನವನ್ನು ತಪ್ಪಿಸಬೇಡಿ. ಎಣ್ಣೆ ಮಸಾಜ್ ಅಥವಾ ಸ್ನಾನದ ಬಗ್ಗೆ ಸರಿಯಾಗಿ ನಿಮಗೆ ಗೊತ್ತಿಲ್ಲದಿದ್ದರೆ ಮನೆಯಲ್ಲಿರುವ ಹಿರಿಯರ ಸಲಹೆ ಪಡೆದುಕೊಳ್ಳಿ. ಅಥವಾ ಆಯುರ್ವೇದಿಕ್ ತಜ್ಞರನ್ನು ಸಂಪರ್ಕಿಸಿ.

English summary

Baby Bath Tips: According To Ayurveda How Should Give Bath To Baby

Baby Bath Tips: If you give bath to baby in this method baby's immunity power get boost read on...
X
Desktop Bottom Promotion