Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಆಟಿಸಂ ಹುಡುಗನ ಎಕ್ಸ್ಟ್ರಾರ್ಡಿನರಿ ಡ್ಯಾನ್ಸ್‌ಗೆ ನೀವಾಗುವಿರಿ ಫಿದಾ
ಆಟಿಸಂ ಇರುವ ಹದಿಹರೆಯದ ಹುಡುಗನ ಡ್ಯಾನ್ಸ್ ನೋಡಿದರೆ ವಾವ್ ಎಂಥ ಎನರ್ಜಿ,ಎಂಥ ಸ್ಟೆಪ್ ಎಂದು ಹೇಳುವಿರಿ,ಅಷ್ಟೊಂದು ಚೆನ್ನಾಗಿ ಡ್ಯಾನ್ಸ್ ಮಾಡ್ತಾ ಇದ್ದಾನೆ. ಆತನಲ್ಲಿರುವ ಕೌಶಲ್ಯ ಗಮನಿಸಿ ಪ್ರೋತ್ಸಾಹಿಸಿರುವ ಅವನ ಪ್ರೋತ್ಸಾಹಕರಿಗೆ ಹ್ಯಾಟ್ಸಪ್ ಹೇಳಲೇಬೇಕ. ಅದೊಂದು ಡ್ಯಾನ್ಸ್ ಕ್ಲಾಸ್ ಅಲ್ಲಿ ಇತರ ಮಕ್ಕಳ ಜೊತೆ ಈ ವಿಶೇಷ ಚೇತನ ಮಗು ಕೂಡ ಡ್ಯಾನ್ಸ್ ಮಾಡುತ್ತಿದೆ, ಆದರೆ ಅಷ್ಟೂ ಮಕ್ಕಳಲ್ಲಿ ಈ ಹುಡುಗನ ಡ್ಯಾನ್ಸ್ ಒಂದು ಸ್ಟೆಪ್ ಮಿಗಿಲು.

ಎಷ್ಟೊಂದು ಪರ್ಫೆಕ್ಟ್ ಆಗಿ ಹೆಜ್ಜೆ ಹಾಕುತ್ತಿದ್ದಾನೆ
ಒಂದು ಸ್ಟೆಪ್ ಮಿಸ್ ಆಗಿಲ್ಲ, ಒಂದೊಂದು ಸ್ಟೆಪ್ಸ್ ಅಷ್ಟೊಂದು ಪರ್ಫೆಕ್ಟ್ ಆಗಿ ಮಾಡುತ್ತಿದ್ದಾನೆ, ಆತನ ವೀಡಿಯೋ ನೋಡಿದವರು ಫುಲ್ ಫಿದಾ ಆಗಿದ್ದಾರೆ, ಅವನಲ್ಲಿರುವ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಆಟಿಸಂ ಮಕ್ಕಳಲ್ಲಿ ಏನೂ ಕೌಶಲ್ಯ ಇರಲ್ಲ ಎಂದು ಭಾವಿಸುವುದು ತಪ್ಪು
ಆ ಮಗು ಇತರ ಮಗುವಿನಂತೆ ಇರದೆ ಇರಬಹುದು, ಆದರೆ ಆಟಿಸಂ ಇರುವ ಮಕ್ಕಳಲ್ಲಿ ಅಸಾಧಾರಣ ಕೌಶಲ್ಯವಿರುತ್ತದೆ, ಅದನ್ನು ಗುರುತಿಸಬೇಕು. ಆ ಕೌಶಲ್ಯ ಗುರುತಿಸಿ ಅವರನ್ನು ಅದರಲ್ಲಿಯೇ ಮುಂದುವರೆಯುವಂತೆ ಮಾಡಿದರೆ ಆ ವಿಶೇಷ ಚೇತನ ಮಕ್ಕಳು ಅಸಾಧಾರಣ ಪ್ರತಿಭೆಯಾಗುವುದರಲ್ಲಿ ನೋ ಡೌಟು.
ಆಟಿಸಂ ಮಕ್ಕಳಲ್ಲಿ ಈ ಕೌಶಲ್ಯ ಕಂಡು ಬರುವುದು:
- ಬೇಗನೆ ಓದಲು ಪ್ರಾರಂಭಿಸಬಹುದು
- ತುಂಬಾ ಬೇಗ ಕಲಿಯಬಹುದು, ಕಲಿತಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಬಹುದು
- ಆಲೋಚನಾ ಸಾಮರ್ಥ್ಯ ತುಂಬಾ ಚೆನ್ನಾಗಿರುತ್ತದೆ
- ವಿಜ್ಞಾನ, ಇಂಜಿನಿಯರ್, ಗಣಿತ ಈ ಕ್ಷೇತ್ರದಲ್ಲಿ ಪರಿಣಿತರಾಗಿರುತ್ತಾರೆ
- ಅವರ ಜ್ಞಾಪಕ ಶಕ್ತಿ ಅತ್ಯಾದ್ಭುತವಾಗಿರುತ್ತದೆ, ಅವರ ಜ್ಞಾಪಕ ಶಕ್ತಿ ನಮ್ಮನ್ನು ಬೆರಾಗಿಸುತ್ತದೆ.
- ತುಂಬಾನೇ ನಿಯತ್ತು ಇರಲಿದೆ.
- ತುಂಬಾನೇ ಶ್ರದ್ಧೆ, ನಿಷ್ಠೆ
- ಅವರಿಗೆ ಸ್ವಲ್ಪ ಉತ್ತೇಜನ ನೀಡಿದರೆ ಅವರಲ್ಲಿ ಏಕಾಗ್ರತೆ ತುಂಬಾ ಚೆನ್ನಾಗಿರಲಿದೆ.
- ಕೆಲವೊಂದು ಸಮಸ್ಯೆ ಬಗೆಹರಿಸುವ ಕೌಶಲ್ಯ ಅವರಲ್ಲಿ ಇರುತ್ತದೆ.
- ಆಟಿಸಂ ಮಕ್ಕಳು ಬೇರೆಯವರುಏನು ಯೋಚಿಸುತ್ತಾರೆ ಎಂದು ಅರಿತುಕೊಳ್ಳಲು ಕಷ್ಟಪಡುತ್ತಾರೆ, ಹೀಗಾಗಿ ಅವರ ಮನಸ್ಸು ತುಂಬಾನೇ ಪರಿಶುದ್ಧವಾಗಿರುತ್ತದೆ. ಈ ಮಕ್ಕಳ ಗಾಸಿಪ್ ಮಾಡಲ್ಲ, ಯಾರ ಬಗ್ಗೆ ಕೆಡಕು ಆಲೋಚಿಸಲ್ಲ.
ಆಟಿಸಂ ಮಕ್ಕಳಲ್ಲಿ ವಿಶೇಷ ಕೌಶಲ್ಯವಿರುತ್ತದೆ ಏಕೆ?
ಆಟಿಸಂ ಮಕ್ಕಳಲ್ಲಿ ಇರುವ ಕೌಶಲ್ಯ ನೋಡುವಾಗ ನಿಜಕ್ಕೂ ತುಂಬಾನೇ ಅಚ್ಚರಿ ಉಂಟಾಗುತ್ತದೆ. ಅವರಲ್ಲಿ ಕೆಲವೊಂದು ಕೌಶಲ್ಯಗಳು ಅವರಲ್ಲಿ ಅಡಗಿರುತ್ತದೆ. ಈ ಮಕ್ಕಳು ಇತರ ಮಕ್ಕಳಂತೆ ಓದಲು ಬರೆಯಲು ಸಾಧ್ಯವಾಗದೆ ಇರಬಹುದು ಅಥವಾ ನಾವು ಹೇಳಿದ್ದು ಅವರಿಗೆ ಅರ್ಥವಾಗದೆ ಇರಬಹುದು, ಆದರರೆ ಈ ಮಕ್ಕಳಲ್ಲಿ ತುಂಬಾ ಕೌಶಲ್ಯವಿರುತ್ತದೆ, ಅದನ್ನು ಗುರುತಿಸುವ ಕಾರ್ಯವನ್ನು ಪೋಷಕರು ಮಾಡಬೇಕಾಗುತ್ತದೆ. ಅವರಲ್ಲಿ ಕೆಲವೊಂದು ಕಲೆ ಅಡಗಿರುತ್ತದೆ, ಅದೇ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡಿದರೆ ಅವರ ಬದುಕು ಅವರು ಕಟ್ಟಿಕೊಳ್ಳುತ್ತಾರೆ.



Click it and Unblock the Notifications