Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಕ್ಕಳ ತ್ವಚೆಗೆ ಆರೋರೂಟ್ ಪೌಡರ್ ತುಂಬಾ ಒಳ್ಳೆಯದು, ನೀವೇ ತಯಾರಿಸಬಹುದು
ನಿಮ್ಮ ಮಗುವಿನ ಕೋಮಲ ತ್ವಚೆ ತುಂಬಾ ಸೂಕ್ಷ್ಮವಾದದ್ದು, ಆದ್ದರಿಂದ ತುಂಬಾ ಹೊತ್ತು ಡಯಾಪರ್ ಹಾಕಿದರೆ ರ‍್ಯಾಶಶ್ ಉಂಟಾಗುವುದು. ಡಯಾಪರ್ ರ‍್ಯಾಶಶ್‌ಗೆ ಕ್ರೀಮ್ ಅಥವಾ ಟಾಲ್ಕಾಂ ಪೌಡರ್ ಹಾಕುತ್ತೇವೆ, ಆದರೆ ಕೆಮಿಕಲ್ ಇರುವ ಪೌಡರ್ ಕ್ರೀಮ್ ಅಥವಾ ಪೌಡರ್ ಬದಲಿಗೆ ಆರ್ಗಾನಿಕ್ ಪೌಡರ್ ಸಿಕ್ಕರೆ ಒಳ್ಳೆಯದು ಎಂದು ಯೋಚಿಸುತ್ತಿದ್ದರೆ ಆರೋರುಟ್ ಪೌಡರ್ ಮಕ್ಕಳ ತ್ವಚೆಗೆ ತುಂಬಾನೇ ಒಳ್ಳೆಯದು.

ಆರೋರೋಟ್ ಪೌಡರ್ ಮಕ್ಕಳ ತ್ವಚೆ ತುಂಬಾನೇ ಸುರಕ್ಷಿತ ಮಾತ್ರವಲ್ಲ ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ತಯಾರಿಸುವುದು ಹೇಗೆ, ಇದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಡಯಾಪರ್‌ನಿಂದ ಉಂಟಾದ ಕಿರಿಕಿರಿ ಕಡಿಮೆಯಾಗುವುದು
ಡಯಾಪರ್ ರ‍್ಯಾಶಶ್ ಉಂಟಾದರೆ ಉಚ್ಚೆ ಹೋದಾಗ ಮಗುವಿಗೆ ಉರಿಉರಿಯಾಗಿ ಅಳಲಾರಂಭಿಸುವುದು. ಅದೇ ಆರೋರೂಟ್ ಪೌಡರ್ ಹಚ್ಚಿದರೆ ತೇವಾಂಶ ಹೀರಿಕೊಳ್ಳುವುದರಿಂದ ಬ್ಯಾಕ್ಟಿರಿಯಾ ಉತ್ಪತ್ತಿ ತಡೆಗಟ್ಟುತ್ತದೆ. ಡಯಾಪರ್ ರ‍್ಯಾಶಶ್ ಆದ ಕಡೆ ಆರೋರೂಟ್ ಪೌಡರ್ ಹಚ್ಚಿದರೆ ಗುಳ್ಳೆಗಳು ಎದಿದ್ದರೆ ಅಥವಾ ತ್ವಚೆ ಹೋಗಿದ್ದರೆ ಬೇಗನೆ ಒಣಗುವುದು.
ಆರೋರೂಟ್ ಪೌಡರ್ ಇತರ ಪ್ರಯೋಜನಗಳೆಂದರೆ
ಮಗುವಿನ ತ್ವಚೆಗೆ ತುಂಬಾ ಒಳ್ಳೆಯದು
ಇದು ಮಗುವಿನ ತ್ವಚೆಯ ಹೊಳಪು ಹೆಚ್ಚಿಸುತ್ತದೆ, ಅತ್ಯಧಿಕ ಜಿಡ್ಡಿನಂಶ ಉತ್ಪತ್ತಿ ತಡೆಗಟ್ಟುತ್ತದೆ. ಬೇಸಿಗೆಯಲ್ಲಿ ಸೆಕೆ ಬೊಬ್ಬೆಗಳು ಏಳುವುದನ್ನೂ ತಡೆಗಟ್ಟಿ ಮಗುವಿನ ತ್ವಚೆ ಆರೈಕೆ ಮಾಡುತ್ತದೆ. ಮಗುವಿನ ತ್ವಚೆಯ ಆರೋಗ್ಯಕ್ಕೆ ಈ ನೈಸರ್ಗಿಕ ಪೌಡರ್ ತುಂಬಾನೇ ಪ್ರಯೋಜನಕಾರಿ.
ಪೌಡರ್ ಬದಲಿಗೆ ಇದನ್ನು ಬಳಸಬಹುದು
ಬೇಬಿ ಪೌಡರ್ ಆದರೂ ಅವುಗಳು ನೈಸರ್ಗಿಕ ಪೌಡರ್‌ನಷ್ಟು ಸುರಕ್ಷಿತವಲ್ಲ, ಆದ್ದರಿಂದ ನೀವು ಮಗುವಿನ ತ್ವಚೆಯ ಆರೋಗ್ಯಕ್ಕೆ ನೈಸರ್ಗಿಕ ಪೌಡರ್ ಬಳಸುವುದು ಒಳ್ಳೆಯದು. ಇದು ತೇವಾಂಶ ಹೀರಿಕೊಳ್ಳುವುದರಿಂದ ಇತರ ಪೌಡರ್ ಬದಲಿಗೆ ಇದನ್ನು ಬಳಸಬಹುದು.
ಆರೋರೂಟ್ ಪೌಡರ್ ನಾವೇ ತಯಾರಿಸಬಹುದೇ?
ಈ ಪೌಡರ್ ಅನ್ನು ನೀವು ಸುಲಭವಾಗಿ ತಯಾರಿಸಬಹುದು. ನೀವು ಪೌಡರ್ ಅನ್ನು ನೇರವಾಗಿ ಮಗುವಿನ ಮೈಗೆ ಹಾಕಬಹುದು, ಅಥವಾ ತೆಂಗಿನೆಣ್ಣೆ ಜೊತೆ ಮಿಕ್ಸ್ ಮಾಡಿ ಹಚ್ಚಬಹುದು.
ಆರೋರೂಟ್ ಪೌಡರ್ ತಯಾರಿಸಲು ಬೇಕಾಗುವ ಸಾಮಗ್ರಿ
1 ಕೆಜಿ ಆರೋರೂಟ್
ಮಾಡುವ ವಿಧಾನ
* ಅದರ ಸಿಪ್ಪೆ ತೆಗೆಯಿರಿ, ನಂತರ ಚೆನ್ನಾಗಿ ತೊಳೆದು ತುದಿಗಳನ್ನು ಕತ್ತರಿಸಿ
* ನಂತರ ಚಿಕ್ಕ-ಚಿಕ್ಕ ತುಂಡುಗಳನ್ನಾಗಿ ಮಾಡಿ ಮಾಡಿ ಸ್ವಚ್ಛವಾದ ಗ್ರೈಂಡರ್‌ನಲ್ಲಿ ಹಾಕಿ ರುಬ್ಬಿ, ಮಸಾಲೆ ರುಬ್ಬಿದ ಮೇಲೆ ರುಬ್ಬಬೇಡಿ, ಅಕ್ಕಿ ರುಬ್ಬಿದ ಮೇಲೆ ರುಬ್ಬಿ.
* ರುಬ್ಬುವಾಗ ನೀರು ಸೇರಿಸಬಹುದು.
* ನಂತರ ಸೋಸಿ ರಸವನ್ನು ಒಂದು ಬಟ್ಟಲಿಗೆ ಹಾಕಿ. ಬೇಕಿದ್ದರೆ ಇನ್ನು ಸ್ವಲ್ಪ ನೀರು ಹಾಕಿ ರಸ ತೆಗೆಯಿರಿ.
* ನಂತರ ನೀರು ಹಾಗೂ ತೆಳು ಪೇಸ್ಟ್ ಪ್ರತ್ಯೇಕವಾಗಲು ಬಿಡಿ
* ಮೇಲಿನ ನೀರು ನಿಧಾನಕ್ಕೆ ಸೋಸಿ ತೆಗೆಯಿರಿ
* ನಂತರ ಮತ್ತೊಮ್ಮೆ ಮಿಕ್ಸ್ ಮಾಡಿ.
* ನಂತರ ತಳದಲ್ಲಿರುವ ಹಿಟ್ಟನ್ನು ಬಿಸಿಲಿನಲ್ಲಿ ಒಣಗಿಸಿ.
* ಒಂದರಿಂದ ಎರಡು ದಿನ ಒಣಗಿಸಿದರೆ ಪೌಡರ್ ರೆಡಿ, ಇದನ್ನು ನೀವು ಬಳಸಬಹುದು.



Click it and Unblock the Notifications
