Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿಕ್ಕ ಮಕ್ಕಳಲ್ಲಿಯೂ ಕಂಡು ಬರುತ್ತಿರುವ ಕೆಮ್ಮು, ಉಸಿರಾಟದ ಸಮಸ್ಯೆಗೆ ಕಾರಣವೇನು, ಮಕ್ಕಳ ತಜ್ಞರುನೀಡಿರುವ ಸಲಹೆಯೇನು?
ಇತ್ತೀಚಿನ ದಿನಗಳಲ್ಲಿ 6 ತಿಂಗಳಿಗಿಂತ ಚಿಕ್ಕ ಮಕ್ಕಳಲ್ಲಿಯೂ ಶ್ವಾಸಕೋಶ ಸಂಬಂಧಿತ ಮತ್ತು ಬ್ರಾಂಕೈಟಿಸ್ ಸಮಸ್ಯೆಯು ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಈ ಬಗೆಯ ಸಮಸ್ಯೆ 6-7 ವರ್ಷದ ಮೇಲಿನ ಮಕ್ಕಳಲ್ಲಿ ಕಂಡು ಬರ್ತಾ ಇತ್ತು, ಆದರೆ ಇತ್ತೀಚೆಗೆ ಮೂರು ತಿಂಗಳ ಮಕ್ಕಳಲ್ಲಿ ಈ ರೀತಿ ಕಂಡು ಬರುತ್ತಿದೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ. ಹೇಳುತ್ತಾರೆ.
ಆಶ್ಚರ್ಯಕರ ಸಂಗತಿಯೆಂದರೆ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಮೂರರಿಂದ ಆರು ತಿಂಗಳ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ, ಹೀಗಾಗಿ ಮನೆಯಲ್ಲಿರುವ ಚಿಕ್ಕ ಮಕ್ಕಳಿದ್ದರೆ ಅವರನ್ನು ಹೆಚ್ಚು ಹೊರಗಡೆ ಕರೆದುಕೊಂಡು ಹೋಗಬೇಡಿ.ಪೋಷಕರು ಕೂಡ ಎಚ್ಚರವಹಿಸಬೇಕು, ಹೊರಗಡೆ ಓಡಾಡುವಾಗ ಮಾಸ್ಕ್ ಧರಿಸಿ, ಮನೆಗೆ ಬಂದಾಗ ಕೈಗಳನ್ನು ತೊಳೆದು ಮಗುವನ್ನು ಎತ್ತಿ, ಕೆಮ್ಮು ಶೀತ ಈ ಬಗೆಯ ಸಮಸ್ಯೆವಿದ್ದರೆ ಮಗುವನ್ನು ಎತ್ತುವುದು, ಆಡಿಸುವುದು ಮಾಡಬೇಡಿ, ತಾಯಿಗೆ ಇದ್ದರೆ ಮಾಸ್ಕ್ ಧರಿಸಿ.

ಚಿಕ್ಕ ಮಕ್ಕಳಲ್ಲಿಯೂ ಬ್ರಾಂಕೈಟಿಸ್ ಸಮಸ್ಯೆಗೆ ಕಾರಣವೇನು?
ಹವಾಮಾನ ವೈಪರೀತ್ಯ, ಚಳಿಯಿಂದಾಗಿ , ಶೀತ, ಕೆಮ್ಮು ಮತ್ತು ಉಬ್ಬಸ ಸಮಸ್ಯೆ ತುಂಬಾನೇ ಹೆಚ್ಚಾಗುತ್ತಿದೆ, ಕಳೆದ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಹವಾಮಾನದಲ್ಲಿ ಏರುಪೇರು ಕಂಡುಬರುತ್ತಿ ದೆ. ಇದರಿಂದ ಮಕ್ಕಳಿಗೆ ಬಹುಬೇಗನೆ ವೈರಲ್ ಸೋಂಕು ತಗುಲುವುದು ಹೀಗಾಗಿ ಅವರಲ್ಲಿ ಉಬ್ಬಸ, ಅಸ್ತಮಾ, ಶ್ವಾಸಕೋಶ ಸಂಬಂಧಿತ ಮತ್ತು ಇತರೆ ಉಸಿರಾಟ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುವುದುದು.
ಮಕ್ಕಳಲ್ಲಿ ಬ್ರಾಂಕೈಟಿಸ್‌ಗೆ ಕಾರಣವೇನು?
ಆಗಾಗ ಕಾಡುವ ಸೈನಸೈಟಿಸ್
ಅಲರ್ಜಿ
ಅಸ್ತಮಾ ಟಾನ್ಸಲಿಟಿಸ್
ಸೆಕೆಂಡ್‌ಹ್ಯಾಂಡ್ ಸ್ಮೋಕ್
ಮಕ್ಕಳಲ್ಲಿ ಬ್ರಾಂಕೈಟಿಸ್ ಲಕ್ಷಣಗಳು
ಒಣಕೆಮ್ಮು ಅಥವಾ ಕೆಮ್ಮು ಜೊತೆ ಕಫ ಬರುವುದು
ವಾಂತೊ
ಶೀತ
ಎದೆ ನೋವು
ಮಕ್ಕಳಲ್ಲಿ ಚಟುವಟಿಕೆ ಕಡಿಮೆಯಾಗುವುದು
ಜ್ವರ
ಬೆನ್ನುನೋವು
ದಮ್ಮು
ಗಂಟಲು ಕೆರೆತ
ಈ ಬಗೆಯ ಲಕ್ಷಣಗಳು7-14 ವರ್ಷದ ಮಕ್ಕಳಲ್ಲಿ ಕಂಡು ಬರುತ್ತದೆ, ಕೆಲವೊಮ್ಮೆ ಇತರ ಆರೋಗ್ಯ ಸಮಸ್ಯೆಯಿಂದಲೂ ಈ ಬಗೆಯ ಲಕ್ಷಣಗಳು ಕಂಡು ಬರುವುದು, ನೀವು ಮಕ್ಕಳ ತಜ್ಞರ ಭೇಟಿ ಮಾಡಿ ಅವರ ಸಲಹೆ ಪಡೆಯುವುದು ಸೂಕ್ತ.
ಬ್ರಾಂಕೈಟಿಸ್ ಸಮಸ್ಯೆ ಉಂಟಾದರೆ ಆಗುವ ತೊಂದರೆಗಳೇನು?
ಬ್ರಾಂಕೈಟಿಸ್ ಸಮಸ್ಯೆ ಉಂಟಾದಾಗ ಮಕ್ಕಳು ಇತರ ಯಾವುದೇ ತೊಂದರೆಯಿಲ್ಲದೆ ಹುಷಾರಾಗುತ್ತಾರೆ,ಆದರೆ ಕೆಲವೊಮ್ಮೆ ಇದರಿಂದ ನ್ಯೂಮೋನಿಯಾ ಉಂಟಾಗಬಹುದು.
ಯಾವ ಲಕ್ಷಣ ನಿರ್ಲಕ್ಷ್ಯ ಮಾಡಬಾರದು?
ಉಸಿರಾಟದಲ್ಲಿ ತೊಂದರೆ
ಅತ್ಯಧಿಕ ಜ್ವರ
ಈ ಬ್ರಾಂಕೈಟಿಸ್ ಹರಡುವುದೇ?
ಚಿಕ್ಕ ಮಕ್ಕಳಲ್ಲಿ ಬ್ರಾಂಕೈಟಿಸ್ ಹೆಚ್ಚಾಗಿ ಕಂಡು ಬರುತ್ತಿದೆ.ಇದು ಒಂದು ಮಗುವಿಗೆ ಬಂದರೆ ಬಂದರೆ ಮತ್ತೊಂದು ಮಗುವಿಗೆ ಹರಡುತ್ತಿದೆ, ಶಾಲೆಗೆ ಹೋಗುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದೆ. ಧೂಳು ಮತ್ತು ವೈರಲ್ ಸೋಂಕುಗಳಿಂದಲೂ ಮಕ್ಕಳಲ್ಲಿ ಅಸ್ತಮಾ ಕಂಡುಬರಬಹುದು. ಕುಟುಂಬದಲ್ಲಿ ಯಾರಾದರು ಅಸ್ತಮಾ ಹೊಂದಿದ್ದಲ್ಲಿಯೂ ಕೂಡ ಮಕ್ಕಳು ಬಹು ಬೇಗ ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
ಮಕ್ಕಳಲ್ಲಿ ಈ ಸಮಸ್ಯೆ ಬರದಂತೆ ತಡೆಗಟ್ಟುವುದು ಹೇಗೆ?
ಪೋಷಕರು ನಿಗದಿತ ಸಮಯದಲ್ಲಿ ವ್ಯಾಕ್ಸಿನ್ ಹಾಕಿಸುವ ಮೂಲಕ ಈ ಸಮಸ್ಯೆ ತಡೆಗಟ್ಟಲು ಸಾಧ್ಯವಾಗುವುದು. ಇನ್ನು ಈ ರೀತಿ ಕಂಡು ಬಂದಾಗ ನೆಬ್ಯುಲೈಸೇಶನ್ ಮತ್ತು ದೊಡ್ಡ ಮಕ್ಕಳಿಗೆ ಕೆಮ್ಮಿನ ಔಷಧಿಯನ್ನು ನೀಡಲಾಗುತ್ತದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಹೈಪೋಕ್ಸಿಯಾ ಗೆ ಕಾರಣವಾಗಬಹುದು. ದೇಹದಲ್ಲಿ ಕಡಿಮೆ ಆಮ್ಲಜನಕದ ಪರಿಣಾಮ ನ್ಯುಮೋನಿಯಾ ಗೆ ತಿರುಗಬಹುದು. ದೇಹದಲ್ಲಿ ಆಮ್ಲಜನಕವು ಕಡಿಮೆಯಾದಂತೆ ಆರೋಗ್ಯವು ತೀರಾ ಹದಗೆಡುವ ಸಾಧ್ಯತೆ ಇರುತ್ತದೆ. ಹಾಗಾಗು ಸಮಯಕ್ಕೆ ಚಿಕಿತ್ಸೆ ನೀಡುವುದು ಮುಖ್ಯ ಎಂದು ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ. ಹೇಳುತ್ತಾರೆ.



Click it and Unblock the Notifications









