Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಿರುತೆರೆ ನಟಿ ಶಾಂಭವಿ ಮಗನ ಬಗ್ಗೆ ಬರೆದ ಬರಹ ನೋಡಿದಾಗ ನಮ್ಮ ಕಣ್ಣುಗಳು ಒದ್ದೆಯಾಗುತ್ತೆ
ಕಿರುತೆರೆ ನಟಿ ಶಾಂಭವಿ ಬದುಕಿಗೆ ಬರಸಿಡಿಲು ಬಂದೆರಗಿದೆ, ಅವರಿಗೆ ಬಂದಂಥ ಸಂಕಟ ಕೇಳಿದಾಗ ನಮಗೇ ಸಂಕಟ ಉಂಟಾಗುತ್ತೆ, ಅವರು ಇಂಥ ಕಷ್ಟದ ಸಮಯವನ್ನು ಹೇಗೆ ಎದುರಿಸುತ್ತಿದ್ದಾರೋ, ಎಲ್ಲರ ಆಶೀರ್ವಾದದಿಂದ ಅವರ ಪುಟ್ಟ ಕಂದ ಬೇಗನೆ ಚೇತರಿಸಿಕೊಳ್ಳಲಿ ಎಂಬುವುದೇ ನಮ್ಮೆಲ್ಲರ ಪ್ರಾರ್ಥನೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಚಟುವಟಿಕೆಯಿಂದ ಇರುವ ಶಾಂಭವಿ ಅವರು ತಮ್ಮ ಕುಟುಂಬದ ಬಗ್ಗೆ ಕೂಡ ಪೋಸ್ಟ್ ಮಾಡ್ತಾ ಇರ್ತಾರೆ, ವರಿಗೆ ಒಂದು ಹೆಣ್ಣು, ಒಂದು ಗಂಡು ಮಗು, ಇತ್ತೀಚೆಗಷ್ಟೇ ಮಕ್ಕಳ 3ನೇ ವರ್ಷದ ಹುಟ್ಟು ಹಬ್ಬದ ವೀಡಿಯೋ ಪೋಸ್ಟ್ ಮಾಡಿದ್ದರು. ಆದರೆ ಅವರು ಈಗ ಪೋಸ್ಟ್ ಮಾಡಿರುವ ಪೋಸ್ಟ್ ನಮ್ಮ ಕಣ್ಣಂಚು ಒದ್ದೆ ಮಾಡಿದೆ, ಮನಸ್ಸು ಭಾರವಾಗಿದೆ.

ತಮ್ಮ ಬದುಕಿನಲ್ಲಿ, ತಮ್ಮ ಮಗನ ಬದುಕಿನಲ್ಲಿ ಏನು ನಡೆಯುತ್ತಿದೆ ಎಂಬುವುದರ ಬಗ್ಗೆ ಅವರು ಹೇಳಿಕೊಂಡಿರುವುದು ಹೀಗೆ....
ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ "3rd stage ಬ್ಲಡ್ ಕ್ಯಾನ್ಸರ್" ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ "ಇದು ಕ್ಯಾನ್ಸರ್ ಆಗಿರದೆ ಇರಲಿ" ಅಂತಾ ಪ್ರಾರ್ಥಿಸ್ತಾ ಇದ್ವಿ. ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% curable ಅಂತಾ doctors ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. "ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ" ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ.
Chemotherapyಯ ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ therapy ಯ ಮೊದಲ ದಿನದಂದು ಕ್ಲಿಕ್ಕಿಸಿದ shots ಇದು.
ವೈದ್ಯರು ಶೇ. 95ರಷ್ಟು ಗುಣಮುಖರಾಗಬಹುದು ಎಂದು ಭರವಸೆ ನೀಡಿದ್ದಾರೆ
ಬ್ಲಡ್ ಕ್ಯಾನ್ಸರ್‌ನಿಂದ ಅನೇಕ ಮಕ್ಕಳು ಚೇತರಿಸಿಕೊಂಡು ಸಹಜ ಬದುಕಿರುವ ಉದಾಹರಣೆಗಳಿವೆ, ಆದರೆ ಚಿಕ್ಕ ಮಗುವಿಗೆ ಕೀಮೋಥೆರಪಿ, ಆ ನೋವು, ಸಂಕಟ ಎಲ್ಲಾ ನೋಡುವಾಗ ಪೋಷಕರಿಗೆ ಒಂದೊಂದು ದಿನವೂ ನರಕವಾಗುವುದು. ಮುದ್ದಾಗಿ ನಕ್ಕು ಓಡಾಡಿಕೊಂಡು ಇರಬೇಕಾಗಿದ್ದ ಮಗುವಿನ ತಲೆ ಕೂದಲು ಉದುರಿ ಹೋಗುತ್ತಿದೆ, ಕೀಮೋದಿಂದ ದೇಹ ಸೊರಗುತ್ತಿದೆ ಎಂದಾಗ ಪೋಷಕರು ಕೂಡ ತುಂಬಾನೇ ನೋವುಅನುಭವಿಸುತ್ತಾರೆ. ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಳ್ಳುವವರ ಜೊತೆಗೆ ಮನೆಯವರಿಗೂ ಅಷ್ಟೇ ಆತ್ಮವಿಶ್ವಾಸ, ಧೈರ್ಯ ತುಂಬಬೇಕು. ಇವರ ಪುಟ್ಟ ಆ ಮಗುವಿನ ಆ ನಗು ಮರಳಿ ಸಿಗಲಿ, ಬೇಗನೆ ಚೇತರಿಸಿಕೊಳ್ಳಲಿ ಎಂಬುವುದೇ ಎಲ್ಲರ ಪ್ರಾರ್ಥನೆ.
ಮಕ್ಕಳಲ್ಲಿ ಬ್ಲಡ್ ಕ್ಯಾನ್ಸರ್
ಚಿಕ್ಕ ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್‌ನಲ್ಲಿ ಬ್ಲಡ್ ಕ್ಯಾನ್ಸರ್ ಹೆಚ್ಚಾಗಿಕಂಡು ಬರುತ್ತದೆ. ವರ್ಷದಲ್ಲಿ ಸುಮಾರು 3000 ಮಕ್ಕಳಲ್ಲಿ ಈ ರೀತಿ ಬ್ಲಡ್ ಕ್ಯಾನ್ಸರ್ ಕಂಡು ಬರುವುದು, ಅದಲ್ಲಿ 2-6 ವರ್ಷದ ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತದೆ. ಅದರಲ್ಲಿಯೂ ಕಂಡು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಮಕ್ಕಳಲ್ಲಿ ಬ್ಲಡ್ ಕ್ಯಾನ್ಸರ್ ಲಕ್ಷಣಗಳೇನು?
ರಕ್ತಹೀನತೆ: ಮಕ್ಕಳಲ್ಲಿ ಸುಸ್ತು ಕಂಡು ಬರುವುದು, ದೇಹದಲ್ಲಿ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದು
ರಕ್ತಸ್ರಾವ: ಚಿಕ್ಕ ಗುಳ್ಳೆಗಳಾಗಿ ರಕ್ತಸ್ರಾವ ಕಂಡು ಬರುವದು.
ಆಗಾಗ ಕಾಯಿಲೆ ಬೀಳುವುದು: ಜ್ವರ, ಶೀತ, ಕೆಮ್ಮು, ಬ್ಯಾಕ್ಟಿರಿಯಾ ಸೋಂಕು ಈ ಬಗೆಯ ಸಮಸ್ಯೆ ಪದೇ ಪದೇ ಕಾಡುವುದು
ಕೈ ಕಾಲುಗಳಲ್ಲಿ ನೋವು: ಮಕ್ಕಳ ಮೂಳೆಗಳಲ್ಲಿ ನೋವು ಕಂಡು ಬರುವುದು
ಹೊಟ್ಟೆ ನೋವು: ಹೊಟ್ಟೆ ನೋವು, ತೂಕ ಇಳಿಕೆ, ಸರಿಯಾಗಿ ತಿನ್ನಿದಿರುವುದು ಈ ಬಗೆಯ ಸಮಸ್ಯೆ ಕಂಡು ಬರುವುದು
ಉಸಿರಾಟದ ತೊಂದರೆ ಕಂಡು ಬರುವುದು: ಕೆಮ್ಮು, ಉಸಿರಾಟದಲ್ಲಿ ತೊಂದರೆ ಈ ಬಗೆಯ ಸಮಸ್ಯೆ ಕಂಡು ಬರುವುದು.



Click it and Unblock the Notifications


