Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಮಕ್ಕಳು ಓದಿನತ್ತ ಗಮನ ಹರಿಸಲು ಈ 5 ಸಿಂಪಲ್ ಕೆಲಸ ಮಾಡಿ ಸಾಕು..!!
ಪರೀಕ್ಷಾ ದಿನಗಳು ಹತ್ತಿರ ಬರುತ್ತಿವೆ. ಪರೀಕ್ಷೆ ಬಂತೆಂದರೆ ಮಕ್ಕಳಿಗಿಂತಲೂ ಪೋಷಕರೇ ಹೆಚ್ಚು ಆತಂಕಕ್ಕೆ ಒಳಗಾಗಿರುತ್ತಾರೆ. ಏಕೆಂದರೆ ಮಕ್ಕಳು ಚೆನ್ನಾಗಿ ಓದದಿದ್ದರೆ ಒಳ್ಳೆಯ ಅಂಕ ಗಳಿಸಲು ಸಾಧ್ಯವಿಲ್ಲ, ಒಳ್ಳೆಯ ಅಂಕ ಬಾರದಿದ್ದರೆ ಮುಂದೆ ಸರಿಯಾಗಿ ಅಂದುಕೊಂಡ ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ. ಹೀಗೆ ಒಂದಿಲ್ಲೊಂದು ಯೋಚನೆ ಅವರ ತಲೆಗೆ ಬರುತ್ತದೆ.
ಆದರೆ ಮಕ್ಕಳನ್ನು ಓದಿನ ಕಡೆ ಗಮನ ಹರಿಸುವಂತೆ ಮಾಡುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿದೆ. ಏಕೆಂದರೆ ಇಂದಿನ ಮಕ್ಕಳು ಓದು ಒಂದನ್ನು ಬಿಟ್ಟು ಬೇರೆಲ್ಲ ವಿಷಯದ ಮೇಲೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ ಆದರೆ ಎಂದಿಗೂ ಅಗರು ಓದಿನ ಕಡೆ ಹೆಚ್ಚು ಗಮನ ಕೊಡುವುದಿಲ್ಲ.

ಹೀಗಾಗಿ ಮಕ್ಕಳು ಹೆಚ್ಚು ಹೊತ್ತು ಓದಿನಲ್ಲಿ ಕಳೆಯುವಂತ ಮಾಡಲು ಪೋಷಕರು ನಾನಾ ರೀತಿಯ ಪ್ರಯತ್ನ ಮಾಡುತ್ತಾರೆ. ಇಷ್ಟು ಮಾಡಿದರು ಪೋಷಕರಿಗೆ ಇದು ಸಾಧ್ಯವಾಗುವುದಿಲ್ಲ, ಅವರಿಗೆ ಹೊಡೆಯುವುದು, ಬಯ್ಯುವುದು, ಒತ್ತಾಯವಾಗಿ ಓದುವಂತೆ ಮಾಡುವುದು, ಅವರ ಮೊಬೈಲ್ ಕಸಿದುಕೊಳ್ಳುವುದು, ಊಟ, ತಿಂಡಿ ಕೊಡುವುದಿಲ್ಲ ಎಂದು ಬೆದರಿಸುವುದು ಹೀಗೆ ಹತ್ತಾರು ರೀತಿಯ ಪ್ರಯತ್ನವಂತೂ ಮಾಡಿರುತ್ತಾರೆ. ಆದ್ರೆ ಇದೆಲ್ಲವೂ ಮಕ್ಕಳಿಗೆ ಮಾನಸಿಕ ಕಿರಿ ಕಿರಿ ಉಂಟು ಮಾಡಬಹುದೇ ಹೊರತು ಓದಿನ ಕಡೆ ಹೆಚ್ಚು ಗಮನ ಕೊಡುವಂತೆ ಮಾಡಲು ಸಾಧ್ಯವಿಲ್ಲ.
ಹಾಗಾದರೆ ಮಕ್ಕಳು ಓದಿನ ಕಡೆ ಹೆಚ್ಚು ಗಮನ ಹರಿಸುವಂತೆ ಮಾಡುವುದು ಹೇಗೆ? ಮಕ್ಕಳು ಓದಿನಲ್ಲಿ ತೊಡಗಬೇಕು ಎಂದಾದರೆ ಪೋಷಕರು ಯಾವ ರೀತಿ ಅವರೊಂದಿಗೆ ಬೆರೆಯಬೇಕು ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಮಕ್ಕಳ ಓದಿನ ಸಮಯ ನೀವೆ ನಿರ್ಧರಿಸಿ
ಮಕ್ಕಳು ದಿನದ ಎಲ್ಲಾ ಸಮಯ ಓದಿನಲ್ಲಿ ಮುಳುಗಲು ಸಾಧ್ಯವಿಲ್ಲ. ಅವರಿಗೂ ಒಂದಿಷ್ಟು ಸಮಯ ಆಟದಲ್ಲಿ ಇಲ್ಲವೆ ದೈಹಿಕ ಚಟುವಟಿಕೆಯಲ್ಲಿ ಕಳೆಯಬೇಕಾಗುತ್ತದೆ. ಆದರೆ ಮಕ್ಕಳು ಯಾವ ಸಮಯದಲ್ಲಿ ಓದಬೇಕು ಎಂಬುದನ್ನು ನೀವೆ ನಿರ್ಧರಿಸಿ. ಏಕೆಂದರೆ ಓದಿನ ಸಮಯ ಬಿಟ್ಟು ಉಳಿದ ಸಮಯದಲ್ಲಿ ಅವರನ್ನು ಯಾವುದೇ ಕಾರಣಕ್ಕೂ ಓದಿಕೊಳ್ಳುವಂತೆ ಒತ್ತಾಯಿಸಬೇಡಿ. ಓದಿನ ಸಮಯ ಆರಂಭವಾದ ಕೂಡಲೇ ಮಕ್ಕಳಿಗೆ ಓದಿಕೊಳ್ಳುವಂತೆ ನೆನಪಿಸಿ. ಈ ವೇಳೆ ಅವರು ಮಾತು ಕೇಳದಿದ್ದರೆ, ನಾಳೆಯಿಂದ ಈ ಓದಲೇಬೇಕು ಎಂದು ಕಡ್ಡಾಯ ನಿಯಮ ರೂಪಿಸಿ.
ಓದಿಗಾಗಿ ಹೊಸ ಗ್ಯಾಜೆಟ್ ನೀಡಿ
ಮೊಬೈಲ್, ಟ್ಯಾಬ್ಲೆಟ್‌ಗಳು ಕೇವಲ ಆಟದ ಉದ್ದೇಶದಿಂದ ಮಾತ್ರವಲ್ಲ ಓದಿಗೂ ಸಹಾಯಕಾರಿ ಎಂಬುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಿ. ಇಂಟರ್‌ನೆಟ್ ಅನ್ನು ಓದಿಗೆ ಯಾವ ರೀತಿ ಬಳಸಬಹುದು ಎಂಬುದನ್ನು ಅವರಿಗೆ ತಿಳಿಸಿಕೊಡಿ. ಇದರಿಂದ ಅವರಲ್ಲಿ ಓದಿನ ಕಡೆ ಹೆಚ್ಚು ಗಮನ ಹರಿಯಬಹುದು.
ಓದಿನ ನಡುವೆ ವಿರಾಮ ತೆಗೆದುಕೊಳ್ಳಲು ನೀವೇ ಉತ್ತೇಜಿಸಿ
ಮಕ್ಕಳು ಓದಿನಲ್ಲಿ ಹೆಚ್ಚು ಗಮನವಿಟ್ಟಿದ್ದರೆ ಓದಿನ ನಡುವೆ ಆಗಾಗ ವಿರಾಮ ತೆಗೆದುಕೊಳ್ಳಲು ನೀವೇ ಅವರಿಗೆ ಹೇಳಿ. ಈ ರೀತಿ ಹೇಳುವುದರಿಂದ ಅವರಲ್ಲೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಮಾತನ್ನು ಅವರು ಪಾಲಿಸುತ್ತಾರೆ ಜೊತೆಗೆ ಮುಂದೊಂದು ಬಾರಿ ನೀವು ಹೇಳಿದ ಎಲ್ಲಾ ಮಾತನ್ನು ಅನುಸರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಕ್ಕಳ ಓದಿಗೆ ನೀವು ಸಹಕರಿಸಿ
ಮಕ್ಕಳು ಓದುತ್ತಿದ್ದಾರೆ ಎಂದು ನಿರ್ಲಕ್ಷಿಸದೆ ಅವರು ಏನು ಓದುತ್ತಿದ್ದಾರೆ, ಎಷ್ಟು ಓದಿದ್ದಾರೆ? ಇನ್ನೂ ಎಷ್ಟು ಓದಿನ ಅಗತ್ಯವಿದೆ? ಯಾವ ವಿಷಯವನ್ನು ಹೆಚ್ಚಿಗೆ ಓದಬೇಕು ಎಂಬೆಲ್ಲಾ ಕುರಿತು ನೀವೆ ತಿಳಿದುಕೊಂಡು ಅವರಿಗೂ ಮನವರಿಕೆ ಮಾಡಿಕೊಡಿ. ಅವರ ಬುಕ್, ನೋಟ್ ಬುಕ್‌ಗಳನ್ನು ನೀವು ಹಿಡಿದು ಓದುವ ಯತ್ನ ಮಾಡಿ. ನಿಮ್ಮ ಜ್ಞಾನಕ್ಕೆ ಅದು ಕಷ್ಟವಾಗಿದ್ದರೂ ಅವರಿಂದಲೇ ಆ ಬಗ್ಗೆ ಮಾಹಿತಿ ಪಡೆಯಿರಿ. ನಿಮಗೆ ಮಾಹಿತಿ ಹೇಳುವ ಉದ್ದೇಶದಿಂದ ಆದರು ಅವರು ಓದಿನ ಕಡೆ ಹೆಚ್ಚು ಗಮನ ಹರಿಸುತ್ತಾರೆ.
ಓದಿಗಾಗಿ ಅವರಿಗೆ ಅಗತ್ಯವಿರುವುದನ್ನು ಅರಿತುಕೊಳ್ಳಿ
ನಿಮ್ಮ ಮಕ್ಕಳು ಓದಿನಲ್ಲಿ ಹೆಚ್ಚು ಸಮಯ ಕಳೆಯದಿದ್ದರೆ ಅವರಲ್ಲಿ ಏನೋ ಕೊರತೆಯಾದಂತಹ ಮನೋಭಾವ ಹೊಂದಿರುತ್ತಾರೆ. ಅಂದರೆ ಟೇಬಲ್, ಆಟಿಕೆ ವಸ್ತು, ಟೇಬಲ್ ಲ್ಯಾಂಪ್, ನೋಟ್ ಬುಕ್, ಹೀಗೆ ಯಾವುದಾದರು ವಸ್ತು ಅವರಿಗೆ ಅಗತ್ಯವಿದ್ದರೆ ಅದನ್ನು ಆದಷ್ಟು ನೀಡುವ ಯತ್ನ ಮಾಡಿ, ಅವರ ಓದಿಗಾಗಿ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿದರೆ ಅವರಿಗೂ ಓದಬೇಕು ಎಂಬ ಮನಸ್ಸು ಬರುತ್ತದೆ.



Click it and Unblock the Notifications