Latest Updates
-
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು!
ಊಟಕ್ಕೆ ನೀಡುವ ಹಣದಿಂದ ಟೂತ್‌ಪೇಸ್ಟ್, ಇತರ ಮನೆಯ ವಸ್ತು ಖರೀದಿಸಿದ ಮೆಟಾ ಉದ್ಯೋಗಿಗಳನ್ನು ಕೆಲಸದಿಂದ ತೆಗೆದ ಫೇಸ್‌ಬುಕ್
ಮೀಲ್ ಕ್ರೆಡಿಟ್‌ನಿಂದ ಟೂತ್‌ಪೇಸ್ಟ್ ಹಾಗೂ ಇತರ ಸಾಮಗ್ರಿ ಖರೀದಿಸಿದರು ಎಂದು ಮೆಟಾ 24 ಉದ್ಯೋಗಗಳನ್ನು ಕೆಲಸದಿಂದ ತೆಗೆದು ಹಾಕಿದೆ, ಈ ಕಾರಣ ಸ್ವಲ್ಪ ವಿಚಿತ್ರ ಅನಿಸಿದರೂ ಹೌದು ಲಾಸ್ ಏಂಜೆಲ್ಸ್‌ನ 24 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಫರ್ಮಾನ್ಸ್ ಇಲ್ಲ, ಕಂಪನಿ ಲಾಸ್‌ನಲ್ಲಿದೆ ಎಂದೆಲ್ಲಾ ಕೆಲಸದಿಂದ ತೆಗೆದು ಹಾಕುವುದನ್ನು ನೋಡುತ್ತೇವೆ, ಆದರೆ ಮೀಲ್ ಕ್ರೆಡಿಟ್‌ನಿಂದ ಬಟ್ಟೆ, ಡಿಟರ್ಜೆಂಟ್, ವೈನ್ ಗ್ಲಾಸ್ ಖರೀದಿ ಮಾಡಿರುವುದರಿಂದ ಕೆಲಸ ಕಳೆದುಕೊಂಡಿದ್ದಾರೆ.

ಮೆಟಾ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮಾಲೀಕ ಝಕರ್‌ಬರ್ಗ್ ಕಳೆದ ವಾರ ತನ್ನ ಮೆಟಾ ಸಿಬ್ಬಂದಿಗಳಲ್ಲಿ ಹಲವರನ್ನು ವಿಚಿತ್ರ ಕಾರಣಕ್ಕೆ ಮನೆಗೆ ಕಳುಹಿಸಿದ್ದಾರೆ. ಕಳೆದ ವಾರ ಇದರ ಬಗ್ಗೆ ತನಿಖೆ ನಡೆಸಿದ ಕಂಪನಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಕೆಲವರು ಆಫೀಸ್‌ನಲ್ಲಿ ಇರದಿದ್ದರೂ ಮನೆಗೆ ಫುಡ್ ಪಾರ್ಸಲ್ ಕಳುಹಿಸುತ್ತಿದ್ದರು ಎಂಬುವುದು ತನಿಖೆಯಿಂದ ತಿಳಿದು ಬಂದಿದೆ.
ಹೆಸರು ತಿಳಿಸದ ಉದ್ಯೋಗಿಯೊಬ್ಬರು ಅವರ ಸಂಬಳ $400,000 ಹೇಳ್ತಾರೆ ನಾನು ಮೀಲ್ ಕ್ರೆಡಿಟ್‌ನಿಂದ ಟೂತ್‌ಪೇಸ್ಟ್, ಮನೆಗೆ ಕೆಲ ವಸ್ತುಗಳನ್ನು ಖರೀದಿಸಿದೆ, ಈ ಕಾರಣದಿಂದ ಕೆಲಸದಿಂದ ತೆಗೆದು ಹಾಕಿದ್ದಾರೆ ಎಂದಿದ್ದಾರೆ.
ಬಹುತೇಕ ದೊಡ್ಡ ಕಂಪನಿಗಳಲ್ಲಿ ಫುಡ್ ವೋಚರ್ , ಫ್ರೀ ಫುಡ್ ಅಂತ ಇರುತ್ತದೆ
ಮೆಟಾದ ಮಾಲೀಕ ಝುಕರ್‌ಬರ್ಗ್, ತನ್ನ ಉದ್ಯೋಗಿಗಳಿಗೆ ಊಟವನ್ನೂ ನೀಡುತ್ತಾರೆ. ಮೀಲ್ ಕ್ರೆಡಿಟ್ ಬಳಸಿ ತಮಗೆ ಬೇಕಾದ ಆಹಾರ ಸೇವಿಸಬಹುದು. ಬ್ರೇಕ್‌ಫಾಸ್ಟ್‌ಗೆ $20 ಲಂಚ್ ಮತ್ತು ಡಿನ್ನರ್‌ಗೆ $25 ಅಂತ ನೀಡಲಾಗುತ್ತಿತ್ತು, ಕೆಲ ಉದ್ಯೋಗಿಗಳು ಈ ಹಣವನ್ನು ಮನೆಯ ವಸ್ತುಗಳನ್ನು ಖರೀದಿಸಲು ಬಳಸಿದ್ದಕ್ಕೆ ಕೆಲಸದಿಂದ ತೆಗೆದು ಹಾಕಲಾಗಿದೆ.
ತುಂಬಾ ಕಂಪನಿಗಳಲ್ಲಿ ಈ ರೀತಿಯ ಸೌಲಭ್ಯವಿದೆ
ತುಂಬಾ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಈ ಬಗೆಯ ಸೌಲಭ್ಯವಿದೆ, ಕೆಲವರಿಗೆ ಫುಡ್ ವೋಚರ್ ಸಿಗುತ್ತೆ, ಅದರಲ್ಲಿ ಆಹಾರವಸ್ತುಗಳನ್ನು ಖರೀದಿಸುತ್ತಾರೆ, ಇನ್ನು ಕೆಲವರಿಗೆ ಬೋನಸ್ ಅಂತೆಲ್ಲಾ ದೊರೆಯುತ್ತದೆ. ಇದೆಲ್ಲಾ ಉದ್ಯೋಗಿಗಳನ್ನು ಆಕರ್ಷಿಸಲು ಇರುವ ಕಂಪನಿಯ ಸ್ಟ್ರಾಟಜಿಗಳು, ಆದರೆ ಅದರಿಂದಲೇ ಕೆಲಸಕ್ಕೆ ಕುತ್ತು ಬರುತ್ತೆ ಅಂದಾದರೆ ಕಷ್ಟ... ಕಷ್ಟ.
ಕೆಲಸದಿಂದ ತೆಗೆದು ಹಾಕಲು ಈ ನೆಪ ಬಳಸಿತೇ ಮೆಟಾ?
ಮೆಟಾ ಸ್ವಲ್ಪ ದಿನಗಳ ತುಂಬಾ ಉದ್ಯೋಗಿಗಳನ್ನು ತೆಗೆದಿದ್ದರು, ತುಂಬಾ ಜನ ಕೆಲಸ ಕಳೆದುಕೊಳ್ಳಬೇಕಾಯ್ತು. ಈಗ ಕೂಡಲೇ ಆಫ್ ಅಂತ ತೆಗೆಯುವ ಬದಲು ಈ ನೆಪ ಹೇಳಿ ತೆಗೆದು ಹಾಕಿರಬಹುದು ಎಂದು ಹೇಳಲಾಗುತ್ತಿದೆ. 2022 ಹಾಗೂ 2023ರಲ್ಲಿ ಸುಮಾರು 21, 000 ಉದ್ಯೋಗಿಗಳನ್ನು ತೆಗೆದು ಹಾಕಿತ್ತು. ಕಳೆದ ಜೂನ್‌ನಲ್ಲಿ 70,799 ಸ್ಟಾಫ್ ಮಾತ್ರ ಇತ್ತು.
ಕೆಲಸದಿಂದ ತೆಗೆದು ಹಾಕುವಂಥ ಅಪರಾಧವೇನು ಅಲ್ಲ ಅಲ್ವಾ?
ಫುಡ್ ಕ್ರೆಡಿಟ್‌ನಿಂದ ಅವರು ಬೇರೆ ವಸ್ತುಗಳನ್ನು ಖರೀದಿಸಬಾರದು ಎಂದಾದರೆ ಅವರು ಆ ಫುಡ್ ಕ್ರೆಡಿಟ್ ತೆಗೆದು ಹಾಕಬಹುದಾಗಿತ್ತು, ಅಲ್ಲದೆ ಅವರಿಗೆ ನೀಡಿದ ಫುಡ್ ಕ್ರೆಡಿಟ್‌ನಿಂದಲೇ ತಗೊಂಡಿರುವುದು, ಹಾಗಾಗಿ ಇದು ದೊಡ್ಡ ತಪ್ಪು, ಕೆಲಸದಿಂದ ತೆಗೆದು ಹಾಕುವಾಗ ಬೇರೆ ಯಾವುದೋ ಕಾರಣ ನೀಡಬಹುದಿತ್ತು. ಆದರೆ ಈ ಕಾರಣದಿಂದ ಮೆಟಾ ಕೆಲಸದಿಂದ ತೆಗೆದು ಹಾಕಿರುವುದು ಸುದ್ದಿಯಾಗಿದೆ.
ಅನೇಕ ದೊಡ್ಡ-ದೊಡ್ಡ ಕಂಪನಿಗಳು ಕೆಲಸದಿಂದ ತೆಗೆದು ಹಾಕುತ್ತೇವೆ
ಎಷ್ಟೋ ಕಂಪನಿಗಳಲ್ಲಿ ಕೆಲಸದಿಂದ ತೆಗೆದು ಹಾಕುವುದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಸಾವಿರಾರು ಉದ್ಯೋಗಿಗಳನ್ನು ಒಂದೇ ವಾರದೊಳಗೆ ತೆಗೆದು ಹಾಕಿರುವ ಘಟನೆಗಳನ್ನು ನೋಡಿದ್ದೇವೆ. ಈ ರೀತಿ ಕಂಪನಿಗಳಲ್ಲಿ ನಡೆದರೆ ಉದ್ಯೋಗಿಗಳಿಗೆ ಕೆಲಸದಲ್ಲಿ ಅಭದ್ರತೆ ಕಾಡುವುದಂತು ನಿಜ.



Click it and Unblock the Notifications











