Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಈ 5 ರಾಶಿಯವರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳೋಕಾಗದೇ ಹೃದಯದಲ್ಲೇ ಬಚ್ಚಿಡುತ್ತಾರೆ!
ನಮೆಗೆಲ್ಲರಿಗೂ ಯಾರಾದರೂ ಒಬ್ಬರ ಮೇಲೆ ಖಂಡಿತ ಪ್ರೀತಿ ಆಗಿರುತ್ತೆ ಅಲ್ವಾ. ನಮಗೆ ಗೊತ್ತಿಲ್ಲದ ಹಾಗೆ ಅವರನ್ನು ನಾವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋದಕ್ಕೆ ಶುರು ಮಾಡುತ್ತೇವೆ. ಆದ್ರೆ ನಮ್ಮ ಮನಸ್ಸಿನಲ್ಲಿರೋ ಪ್ರೀತಿಯನ್ನು ನಾವು ಪ್ರೀತಿಸುವವರ ಬಳಿ ಹೇಳಿಕೊಳ್ಳೋದು ಸುಲಭದ ವಿಚಾರ ಖಂಡಿತ ಅಲ್ಲ. ಅವರು ನಮ್ಮನ್ನು ಒಪ್ಪಿಕೊಳ್ಳುತ್ತಾರೋ ಇಲ್ವೋ? ಒಂದು ವೇಳೆ ತಿರಸ್ಕರಿಸಿದರೆ ಏನು ಮಾಡೋದು ಅನ್ನೋ ಭಯ ಇರುತ್ತೆ.
ಆದರೆ ಕೆಲವರು ಸುಲಭವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ಎಷ್ಟೋ ದಿನ ಕಾದು ನಂತರ ದೈರ್ಯ ಮಾಡಿ ಪ್ರೀತಿಯನ್ನು ಹೇಳುತ್ತಾರೆ. ಆದರೆ ಮತ್ತೂ ಕೆಲವರು ಕೊನೆಯವರೆಗೂ ತಮ್ಮ ಪ್ರೀತಿಯನ್ನು ಹೇಳೋದೇ ಇಲ್ಲ. ಅಷ್ಟಕ್ಕು ಯಾವ ರಾಶಿಯವರು ತಮ್ಮ ಪ್ರೀತಿಯನ್ನು ಹೇಳೋದಕ್ಕೆ ಸಾಧ್ಯವಾಗದೇ ಹೃದಯದಲ್ಲೇ ಇಟ್ಟುಕೊಳ್ಳುತ್ತಾರೆ ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತುಂಬಾನೇ ಸೂಕ್ಷ್ಮ ಸ್ವಭಾವದವರು. ಇವರು ಭಾವನಾತ್ಮಕ ಜೀವಿಗಳು ಆಗಿರೋದ್ರಿಂದ ಚಿಕ್ಕ-ಪುಟ್ಟ ವಿಚಾರಕ್ಕೂ ಮನಸ್ಸಿಗೆ ತುಂಬಾ ನೋವು ಮಾಡಿಕೊಳ್ಳುತ್ತಾರೆ. ಈ ರಾಶಿಯವರು ಒಬ್ಬರನ್ನು ತುಂಬಾನೇ ಪ್ರೀತಿ ಮಾಡುತ್ತಾರೆ. ಆದರೆ ಅದನ್ನು ಹೇಳಿಕೊಳ್ಳೋದಕ್ಕೆ ಭಯ. ಎಲ್ಲಿ ಅವರು ತಿರಸ್ಕಾರ ಮಾಡೋತ್ತಾರೋ ಅನ್ನೋ ಭೀತಿ ಇವರನ್ನು ಕಾಡುತ್ತಿರುತ್ತದೆ. ಹೀಗಾಗಿ ಪ್ರೀತಿಯನ್ನು ಹೇಳಿಕೊಳ್ಳೋದಕ್ಕೆ ಆಗದೆ ಇವರು ಮನಸ್ಸಿನಲ್ಲೇ ಒದ್ದಾಡುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಕೂಡ ಪ್ರೀತಿಸಿದವರ ಬಳಿ ತಮ್ಮ ಪ್ರೀತಿಯನ್ನು ಹೇಳೋದಕ್ಕೆ ತುಂಬಾನೇ ಕಷ್ಟ ಪಡುತ್ತಾರೆ. ಇವರ ಚಿಂತನೆಗಳು ವಿಶ್ಲೇಷಣಾತ್ಮಕವಾಗಿ ಮತ್ತು ಪ್ರಾಯೋಗಿಕವಾಗಿ ಇದ್ದರೂ ಕೂಡ ಭಾವನೆಗಳ ವಿಚಾರಕ್ಕೆ ಬಂದರೆ ಇವರು ತುಂಬಾನೇ ಸೂಕ್ಷ್ಮ. ಇವರ ಪ್ರೀತಿ ನಿಜ ಅಂತ ಗೊತ್ತಿದ್ದರೂ ಕೂಡ ಪ್ರೀತಿಸಿದವರ ಬಳಿ ಹೇಳಿಕೊಳ್ಳೋದಕ್ಕೆ ಹೋಗೋದಿಲ್ಲ. ಅವರು ಒಪ್ಪುತ್ತಾರೋ? ಇಲ್ವೋ? ಎಂದು ಚಿಂತಿಸುತ್ತಲೇ ಕಾಲ ಕಳೆದು ಬಿಡುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ತುಂಬಾ ರಿಸರ್ವ್ಡ್ ಸ್ವಭಾವ ಹೊಂದಿರುತ್ತಾರೆ. ಹೆಚ್ಚು ಯಾರೊಂದಿಗೂ ಬೆರೆಯೋದಕ್ಕೆ ಹೋಗುವವರಲ್ಲ ಈ ರಾಶಿಯವರು. ಹೀಗಾಗಿ ಇವರ ಭಾವನೆಗಳನ್ನು ಪ್ರೀತಿಸಿದವರಲ್ಲಿ ವ್ಯಕ್ತ ಪಡಿಸೋದಕ್ಕೆ ಆಗದೇ ಒದ್ದಾಡುತ್ತಾರೆ. ಇವರು ಕೂಡ ನಿರಾಕರಣೆಗೆ ಹೆದರುತ್ತಾರೆ. ಈ ರಾಶಿಯವರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳುವ ಮೊದಲು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ಸ್ವತಂತ್ರವಾಗಿರಲು ಇಷ್ಟ ಪಡುತ್ತಾರೆ. ಹೀಗಾಗಿ ಹೆಚ್ಚಾಗಿ ಬೇರೆಯವರ ಜೊತೆಗೆ ಇವರು ಬೆರೆಯೋದಿಲ್ಲ. ಜನಗಳ ಜೊತೆಗೆ ಬೆರೆತು ಇವರಿಗೆ ಅಷ್ಟಾಗಿ ಅಭ್ಯಾಸ ಇಲ್ಲದೇ ಇರೋದ್ರಿಂದ ಪ್ರೀತಿಯನ್ನು ಹೇಳಿಕೊಳ್ಳೋದಕ್ಕೆ ಭಯ ಪಡುತ್ತಾರೆ. ಅವರ ಜೊತೆಗೆ ಯಾವ ರೀತಿ ಮಾತನಾಡಬೇಕು ಅನ್ನೋದು ಇವರಿಗೆ ಗೊತ್ತಾಗೋದಿಲ್ಲ. ಹೆಚ್ಚಾಗಿ ಇವರು ಪ್ರತ್ಯೇಕವಾಗಿರಲು ಆಧ್ಯತೆಯನ್ನು ನೀಡುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಕರುಣಾಮಯಿಗಳು ಹಾಗೂ ಸಹಾನುಭೂತಿಯನ್ನು ಹೊಂದಿರುವವರಾಗಿದ್ದಾರೆ. ಇವರೂ ಕೂಡ ಪ್ರೀತಿಸಿದವರ ಬಳಿ ಪ್ರೀತಿಯನ್ನು ಹೇಳಿಕೊಳ್ಳೋದಿಲ್ಲ. ತಿರಸ್ಕಾರದ ಭಯ ಇವರನ್ನು ಕಾಡುತ್ತಿರುತ್ತದೆ. ಇವರು ಭಾವನಾತ್ಮಕ ಜೀವಿಗಳಾಗಿರೋದ್ರಿಂದ ಪ್ರೀತಿಯು ತಿರಸ್ಕಾರದಿಂದ ಮುರಿದು ಹೋದರೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಇವರಿಗೆ ಇರೋದಿಲ್ಲ. ಹೀಗಾಗಿ ಪ್ರೀತಿಯನ್ನು ಹೇಳದೆ ಸುಮ್ಮನ್ನಿದ್ದು ಬಿಡುತ್ತಾರೆ.
ಯಾವ ರಾಶಿಯವರು ಸುಲಭವಾಗಿ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ?
ಮೇಷ, ವೃಷಭ, ಮಿಥುನ, ಸಿಂಹ, ವೃಶ್ಚಿಕ ಮತ್ತು ಧನು ರಾಶಿಯವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಹೀಗಾಗಿ ಇವರು ಸುಲಭವಾಗಿ ತಮ್ಮ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ. ತಿರಸ್ಕಾರದ ಭಯ ಇವರನ್ನು ಅಷ್ಟಾಗಿ ಕಾಡೋದಿಲ್ಲ.



Click it and Unblock the Notifications

