Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 7 ರಾಶಿಯ ಮಹಿಳೆಯರು ಪ್ರೀತಿಯಲ್ಲಿ ಹೊಟ್ಟೆ ಕಿಚ್ಚು ಪಡೋದಿಲ್ಲ!
ನಾವು ಒಂದು ಸಂಬಂಧದಲ್ಲಿ ಇದ್ದಾಗ ನಮ್ಮ ಹುಡುಗ ನಮಗೆ ಮೊದಲ ಪ್ರಾಮುಖ್ಯತೆಯನ್ನು ಕೊಡಬೇಕು ಅಂತ ನಾವು ಅಂದುಕೊಳ್ತೀವಿ. ನಮ್ಮನ್ನು ಬಿಟ್ಟು ಅವರ ಬಾಳಿನಲ್ಲಿ ಬೇರ್ಯಾರಿಗೂ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟರೆ ನಮಗೆ ಇಷ್ಟ ಆಗೋದಿಲ್ಲ. ಅಷ್ಟೇ ಯಾಕೆ, ಅವರು ಯಾರ ಜೊತೆಗಾದರೂ ಮಾತನಾಡಿದರೆ ನಾವು ಹೊಟ್ಟೆ ಕಿಚ್ಚು ಪಡುತ್ತೇವೆ.
ಒಟ್ಟಿನಲ್ಲಿ ನಮ್ಮ ಸಂಗಾತಿಯ ಪ್ರೀತಿ ನಮಗೆ ಮೀಸಲಾಗಿ ಇರಬೇಕು ಅಂತ ಅಂದುಕೊಳ್ತೀವಿ. ಅಂತದ್ರಲ್ಲಿ ಕೆಲ ರಾಶಿಯವರಿಗೆ ಹೊಟ್ಟೆಕಿಚ್ಚು ಅನ್ನೋದು ಅಷ್ಟಾಗಿ ಇರೋದಿಲ್ವಂತೆ. ಅವರ ಸಂಗಾತಿ ಯಾರ ಜೊತೆಗೆ ಚೆನ್ನಾಗಿ ಮಾತನಾಡಿಸಿದರೂ ತನಗೆ ಮೊದಲ ಪ್ರಾಮುಖ್ಯತೆ ಕೊಡುತ್ತಾರೆ ಅನ್ನೋದು ಚೆನ್ನಾಗಿ ಗೊತ್ತಿರುತ್ತದೆ. ಸಂಗಾತಿಯ ಮೇಲೆ ಹೆಚ್ಚಾಗಿ ನಂಬಿಕೆ ಇಟ್ಟಿರುತ್ತಾರೆ. ಅಷ್ಟಕ್ಕು ಯಾವ ರಾಶಿಯವರಿಗೆ ಹೊಟ್ಟೆ ಕಿಚ್ಚು ಕಡಿಮೆ ಇರುತ್ತೆ ಅನ್ನೋದನ್ನು ತಿಳಿಯೋಣ.

ಕುಂಭ ರಾಶಿ
ಕುಂಭ ರಾಶಿಯ ಮಹಿಳೆಯರು ತಮ್ಮ ಸ್ವಾತಂತ್ರವನ್ನು ಗೌರವಿಸುತ್ತಾರೆ. ಇವರು ತಮ್ಮ ಸಂಗಾತಿಯ ಬಗ್ಗೆ ಪೊಸೆಸಿವ್ ಆಗಿರೋದಿಲ್ಲ. ಮುಕ್ತ ಮನಸ್ಸನ್ನು ಹೊಂದಿರುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರು ತಮ್ಮ ಸಂಗಾತಿಯಲ್ಲಿ ನಂಬಿಕೆ ಇಟ್ಟಿರುತ್ತಾರೆ. ಇವರು ಹೆಚ್ಚಾಗಿ ಅಸೂಯೆ ಪಟ್ಟುಕೊಳ್ಳುವವರಲ್ಲ. ತಮ್ಮ ಸಂಗಾತಿಯ ಗುಣ-ನಡತೆ ಬಗ್ಗೆ ಗೊತ್ತಿರೋದ್ರಿಂದ ಹೆಚ್ಚಾಗಿ ತಲೆ ಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ.
ಧನು ರಾಶಿ
ಧನು ರಾಶಿಯ ಮಹಿಳೆಯರು ಸಾಹಸಮಯ ಸ್ವಭಾವವನ್ನು ಹೊಂದಿರುತ್ತಾರೆ. ಹಾಗೂ ಸ್ವಾತಂತ್ರವಾಗಿರಲು ಇವರು ಇಷ್ಟ ಪಡುತ್ತಾರೆ. ಸಂಗಾತಿಯ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಹೀಗಾಗಿ ಏನೇ ಘಟನೆ ನಡೆದರೂ ಕೂಡ ಹೆಚ್ಚಾಗಿ ಪ್ರತಿಕ್ರಿಯೆ ನೀಡೋದಕ್ಕೆ ಹೋಗೋದಿಲ್ಲ. ತಮ್ಮಷ್ಟಕ್ಕೆ ತಾವು ಸುಮ್ಮನೆ ಇದ್ದು ಬಿಡುತ್ತಾರೆ. ಚಿಕ್ಕ-ಪುಟ್ಟ ವಿಚಾರಕ್ಕೆ ಇವರು ಸಂಗಾತಿಯ ಜೊತೆಗೆ ಜಗಳವಾಡಿ ಪ್ರೀತಿ ಕಳೆದುಕೊಳ್ಳುವವರಲ್ಲ.
ಮೇಷ ರಾಶಿ
ಮೇಷ ರಾಶಿಯ ಮಹಿಳೆಯರು ಆತ್ಮವಿಶ್ವಾಸ ಮತ್ತು ದೃಢತೆಯನ್ನು ಹೊಂದಿರುತ್ತಾರೆ. ಅವರು ಬಲವಾದ ಸ್ವಯಂ ಪ್ರಜ್ಞೆಯನ್ನು ಹೊಂದಿದ್ದಾರೆ. ಮತ್ತು ಅಸೂಯೆ ಪಡುವ ಬದಲು ಇವರು ತಮ್ಮ ವೈಯಕ್ತಿಕ ಬೆಳವಣಿಗೆ ಮತ್ತು ಗುರಿಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಇವರು ಸಂಗಾತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಯಾವುದೇ ಕಾರಣಕ್ಕೂ ಅವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳೋದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯ ಮಹಿಳೆಯರಲ್ಲಿ ಕುತೂಹಲ ಹೆಚ್ಚಾಗಿರುತ್ತದೆ. ಇನ್ನೂ ಸಂಬಂಧಗಳ ವಿಚಾರಕ್ಕೆ ಬಂದಾಗ ಇವರು ಹೆಚ್ಚು ಹೊಂದಿಕೊಳ್ಳುವ ಮನಸ್ಥಿತಿಯನ್ನು ಹೊಂದಿದ್ದಾರೆ. ಹೀಗಾಗಿ ಇವರಲ್ಲಿ ಹೆಚ್ಚಾಗಿ ಅಸೂಯೆ ಭಾವನೆ ಇರೋದಿಲ್ಲ. ಇವರು ಸಂಬಂಧದಲ್ಲಿ ಏನೇ ಸಮಸ್ಯೆ ಇದ್ದರೂ ಅದನ್ನು ಸಂವಹನದ ಮೂಲಕ ಬಗೆ ಹರಿಸಿಕೊಳ್ಳುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯ ಮಹಿಳೆಯರು ಹೆಚ್ಚಾಗಿ ಪ್ರಾಯೋಗಿಕವಾಗಿ ಚಿಂತನೆ ಮಾಡುತ್ತಾರೆ. ಅವರು ಸಂಬಂಧಗಳಲ್ಲಿ ಸ್ಥಿರತೆ ಮತ್ತು ನಿಷ್ಠೆಗೆ ಆದ್ಯತೆ ನೀಡುತ್ತಾರೆ. ಇದರಿಂದ ಸಂಬಂಧದಲ್ಲಿ ನಂಬಿಕೆಯನ್ನು ನಿರ್ಮಿಸಲು ಮತ್ತು ಅಸೂಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರಾಶಿಯವರು ಅಸೂಯೆಗೆ ಒಳಗಾಗುವುದಕ್ಕಿಂತ ಹೆಚ್ಚಾಗಿ ಅವರು ಸಂಬಂಧದಲ್ಲಿ ಸಕಾರಾತ್ಮಕ ಅಂಶಗಳ ಮೇಲೆ ಹೆಚ್ಚು ಗಮನಹರಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯ ಮಹಿಳೆಯರು ಹೆಚ್ಚು ಸಹಾನುಭೂತಿಯುಳ್ಳವರಾಗಿದ್ದಾರೆ. ಅವರು ತಮ್ಮ ಸಂಗಾತಿಯ ಭಾವನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ತಪ್ಪಾದಾಗ ಸಂಗಾತಿಯನ್ನು ಕ್ಷಮಿಸಿ ಅವರನ್ನು ಅರ್ಥ ಮಾಡಿಕೊಳ್ಳುವ ಗುಣ ಹೊಂದಿದ್ದಾರೆ. ಇವರು ತಮ್ಮ ಸಂಗಾತಿಯ ಮೇಲೆ ಅತಿಯಾಗಿ ನಂಬಿಕೆಯನ್ನು ಇಟ್ಟಿರೋದ್ರಿಂದ ಅಸೂಯೆ ಪಡುವ ಪ್ರವೃತ್ತಿಗೆ ಅವಕಾಶವೇ ಇಲ್ಲದಂತಾಗುತ್ತದೆ.
ಮಕರ ರಾಶಿ
ಮಕರ ರಾಶಿಯ ಮಹಿಳೆಯರು ಮಹತ್ವಾಕಾಂಕ್ಷೆಯ ಸ್ವಭಾವವನ್ನು ಹೊಂದಿರುತ್ತಾರೆ. ಮತ್ತು ಇವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳ ಮೇಲೆ ಕೇಂದ್ರೀಕರಿಸುತ್ತಾರೆ. ಇವರು ತಮ್ಮ ಬೆಳವಣಿಗೆ ಮತ್ತು ಸಾಧನೆಗಳಿಗೆ ಆದ್ಯತೆ ನೀಡುತ್ತಾರೆ. ಇದರಿಂದ ಅಸೂಯೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ. ಇವರು ತಮ್ಮ ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಬಾಳ್ವೆ ನಡೆಸುತ್ತಾರೆ.



Click it and Unblock the Notifications
