Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 5 ರಾಶಿಯ ಮಹಿಳೆಯರು ಬೋಲ್ಡ್ ಆಗಿರುತ್ತಾರೆ!
ಮಹಿಳೆ ಎಂದರೆ ಆಕೆ ಅಬಲೆ, ದುರ್ಬಲಳು ಎಂಬ ಮಾತಿತ್ತು. ಆದ್ರೆ ಈಗ ಹಾಗಿಲ್ಲ. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಅಭೂತಪೂರ್ವ ಸಾಧನೆಯನ್ನು ಮಾಡುತ್ತಿದ್ದಾರೆ. ಮನೆಯಲ್ಲಿಯೂ ಮಹಿಳೆಯರಿಗೆ ಸಾಕಷ್ಟು ಪ್ರೋತ್ಸಾಹ ಲಭ್ಯವಾಗುತ್ತಿದೆ. ಅದ್ರಲ್ಲೂ ಯಾರು ಹೆಚ್ಚು ಬೋಲ್ಡ್ ಆಗಿ ಇರುತ್ತಾರೆಯೋ ಅವರು ಹೆಚ್ಚು ಹೆಚ್ಚು ಸಾಧನೆ ಮಾಡೋದಕ್ಕೆ ಸಾಧ್ಯವಾಗುತ್ತದೆ.

ಕೆಲವು ರಾಶಿಯ ಮಹಿಳೆಯರು ತುಂಬಾನೇ ಬೋಲ್ಡ್ ಆಗಿರುತ್ತಾರೆ. ಅವರು ಯಾವುದೇ ಕೆಲಸ ಮಾಡೋದಕ್ಕೂ ಹಿಂಜರಿಯೋದಿಲ್ಲ. ಹಾಗೂ ಯಾರಿಗೂ ಭಯ ಪಡುವವರಲ್ಲ. ಅಷ್ಟಕ್ಕೂ ಯಾವೆಲ್ಲಾ ರಾಶಿಯ ಮಹಿಳೆಯರು ಬೋಲ್ಡ್ ಆಗಿ ಇರುತ್ತಾರೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ಮಂಗಳದಿಂದ ಆಳಲ್ಪಡುತ್ತಾರೆ. ಹೀಗಾಗಿ ಅವರು ನಿರ್ಭೀತ ಮತ್ತು ದೃಢವಾದ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಮೇಷ ರಾಶಿಯ ಮಹಿಳೆಯರು ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಮತ್ತು ಸವಾಲುಗಳನ್ನು ಎದುರಿಸಲು ಹೆದರುವುದಿಲ್ಲ. ಅವರು ಬಲವಾದ ಸ್ವಯಂ ಪ್ರಜ್ಞೆಯನ್ನು ಹೊಂದಿದ್ದಾರೆ. ಮತ್ತು ಅಚಲವಾದ ನಿರ್ಣಯದೊಂದಿಗೆ ತಮ್ಮ ಗುರಿಗಳನ್ನು ತಲುಪಲು ಸಿದ್ಧರಿರುತ್ತಾರೆ. ಮೇಷ ರಾಶಿಯ ಮಹಿಳೆಯರು ಸ್ವಾಭಾವಿಕ ನಾಯಕತ್ವದ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಇವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೆದರುವುದಿಲ್ಲ.
ತುಲಾ ರಾಶಿ
ತುಲಾ ರಾಶಿಯನ್ನು ಸೂರ್ಯನು ಆಳುತ್ತಿದ್ದಾನೆ. ಹೀಗಾಗಿ ಇವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಸಿಂಹ ರಾಶಿಯ ಮಹಿಳೆಯರು ಧೈರ್ಯಶಾಲಿಗಳಾಗಿರುತ್ತಾರೆ. ಏನೇ ಇದ್ದರೂ ಕೂಡ ದೈರ್ಯದಿಂದ ಮುನ್ನುಗ್ಗುತ್ತಾರೆ. ಅವರು ಸೃಜನಶೀಲತೆಯ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಯಾವುದೇ ಕೆಲಸ ಮಾಡಬೇಕಾದರೂ ಕಷ್ಟ ಪಟ್ಟು ಪ್ರಯತ್ನಿಸುತ್ತಾರೆ. ಸಿಂಹ ರಾಶಿಯ ಮಹಿಳೆಯರು ತಮ್ಮಲ್ಲಿರುವ ಆತ್ಮವಿಶ್ವಾಸ ಮತ್ತು ವರ್ಚಸ್ಸಿನಿಂದ ಇತರರನ್ನು ಪ್ರೇರೇಪಿಸುತ್ತಾರೆ.
ಧನು ರಾಶಿ
ಧನು ರಾಶಿಯನ್ನು ಗುರು ಗ್ರಹವು ಆಳುತ್ತಿದೆ. ಈ ರಾಶಿಯವರು ತಮ್ಮ ಸಾಹಸಮಯ ಮತ್ತು ಮುಕ್ತ ಮನೋಭಾವಕ್ಕೆ ಹೆಸರುವಾಸಿ ಆಗಿರ್ತಾರೆ. ಕನ್ಯಾ ರಾಶಿಯ ಮಹಿಳೆಯರು ಯಾವಾಗಲೂ ದೈರ್ಯಶಾಲಿಗಳೇ. ಪ್ರತಿಯೊಂದು ಹೆಜ್ಜೆಯನ್ನೂ ಬೋಲ್ಡ್ ಆಗಿ ಇಡುತ್ತಾರೆ. ಇವರು ತಮ್ಮ ಕಂಫರ್ಟ್ ಜೋನ್ ನಲ್ಲಿ ಇರೋದಕ್ಕೆ ಇಷ್ಟ ಪಡುವವರಲ್ಲ. ಅವರು ತಮ್ಮ ಪರಿಧಿಯನ್ನು ವಿಸ್ತರಿಸಲು ಮತ್ತು ಹೊಸ ಅನುಭವಗಳನ್ನು ಸ್ವೀಕರಿಸಲು ಪ್ರಯತ್ನಿಸುತ್ತಾರೆ. ಧನು ರಾಶಿಯ ಮಹಿಳೆಯರು ಸ್ವಾಭಾವಿಕ ಕುತೂಹಲವನ್ನು ಹೊಂದಿರುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತೀವ್ರವಾದ ಮತ್ತು ಭಾವೋದ್ರಿಕ್ತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ರಾಶಿಯವರು ಸವಾಲನ್ನು ಎದುರಿಸೋದಕ್ಕೆ ಭಯ ಪಡೋದಿಲ್ಲ. ಎಷ್ಟೇ ರಿಸ್ಕ್ ಇದ್ದರೂ ಕೂಡ ದೈರ್ಯದಿಂದಲೇ ಮುನ್ನುಗ್ಗುತ್ತಾರೆ. ವೃಶ್ಚಿಕ ರಾಶಿಯ ಮಹಿಳೆಯರು ಸಾಮಾಜಿಕ ನ್ಯಾಯ ಮತ್ತು ಪರಿವರ್ತಕ ಬದಲಾವಣೆಗಾಗಿ ದಿಟ್ಟ ಹೆಜ್ಜೆಯನ್ನಿಡುತ್ತಾರೆ. ತಮಗಾಗಿ ಹಾಗೂ ಇತರರಿಗಾಗಿ ಕೂಡ ಇವರುಸದಾ ಹೋರಾಡುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯನ್ನು ಶನಿಯು ಆಳುತ್ತಿದ್ದಾನೆ. ಈ ರಾಶಿಯವರು ನವೀನ ಚಿಂತನೆ ಮತ್ತು ಬಂಡಾಯ ಮನೋಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಈ ರಾಶಿಯ ಮಹಿಳೆಯರು ಸಾಮಾಜಿಕ ಸವಾಲುಗಳು ಮತ್ತು ಪ್ರಗತಿಪರ ವಿಚಾರಗಳನ್ನು ಪ್ರತಿಪಾದಿಸುವಲ್ಲಿ ದಿಟ್ಟತನವನ್ನು ಹೊಂದಿದ್ದಾರೆ. ನ್ಯಾಯಕ್ಕಾಗಿ ಹೋರಾಡೋದಕ್ಕೆ ಇವರು ಹೆದರೋದಿಲ್ಲ. ಕುಂಭ ರಾಶಿಯ ಮಹಿಳೆಯರು ಸಾಮಾನ್ಯವಾಗಿ ಸಾಮಾಜಿಕ ಮತ್ತು ಮಾನವೀಯ ಚಳುವಳಿಗಳಲ್ಲಿ ಮುಂಚೂಣಿಯಲ್ಲಿರುತ್ತಾರೆ.



Click it and Unblock the Notifications
