Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರಾಶಿಯವರಲ್ಲಿ ಸೇವಾ ಮನೋಭಾವ ಹೆಚ್ಚಾಗಿರುತ್ತದೆ !
ದೇವರ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆಯೋ ಅದೇ ರೀತಿ ಹಿರಿಯರ ಸೇವೆ ಮಾಡಿದರೂ ಕೂಡ ಪುಣ್ಯ ಪ್ರಾಪ್ತಿಯಾಗತ್ತಂತೆ. ಆದರೆ ಇತ್ತೀಚಿನ ಕಾಲದಲ್ಲಿ ಹಿರಿಯರ ಸೇವೆ ಮಾಡೋದಕ್ಕೆ ಯಾರು ಕೂಡ ಇಷ್ಟ ಪಡೋದಿಲ್ಲ. ಮನೆಯಲ್ಲಿ ವಯಸ್ಸಾದವರಿದ್ದರೆ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಕೈ ತೊಳೆದುಕೊಳ್ಳುವವರೇ ಹೆಚ್ಚು. ಅಂತದ್ರಲ್ಲಿ ಕೆಲ ರಾಶಿಯವರು ತಮ್ಮ ಸ್ವ ಇಚ್ಛೆಯಿಂದ ಹಿರಿಯರ ಸೇವೆ ಮಾಡೋದಕ್ಕೆ ಇಷ್ಟ ಪಡುತ್ತಾರಂತೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ವೃಷಭ ರಾಶಿಯವರಲ್ಲಿ ನಾಯಕತ್ವದ ಗುಣ ಇರುತ್ತದೆ. ಒಡಹುಟ್ಟಿದವರಲ್ಲಿ ಅವರೇ ಹೆಚ್ಚಾಗಿ ಗಮನ ಸೆಳೆಯುತ್ತಾರೆ. ಈ ರಾಶಿಯವರಲ್ಲಿ ಪರೋಪಕಾರದ ಗುಣ ಹೆಚ್ಚಾಗಿರುತ್ತದೆ. ವೃದ್ಧಾಶ್ರಮದಲ್ಲಿ ಸ್ವಯಂಸೇವಕರಾಗಿರಲಿ, ಮನೆಯಿಲ್ಲದ ಹಿರಿಯರಿಗೆ ಸಹಾಯ ಮಾಡೋದ್ರಲ್ಲಿ ಇವರು ಯಾವತ್ತೂ ಮುಂದಿರುತ್ತಾರೆ. ಈ ರಾಶಿಯವರು ದುರ್ಬಲರಿಗೆ ಸಹಾಯ ಮಾಡೋದಕ್ಕೆ ಯಾವತ್ತೂ ಸಿದ್ಧರಿರುತ್ತಾರೆ. ಇವರಲ್ಲಿ ಪರೋಪಕಾರದ ಗುಣವಿದೆ. ಮನೆಯಲ್ಲಾಗಲಿ ಹೊರಗಾಗಲಿ ಒಬ್ಬರಿಗೆ ಸಹಾಯ ಮಾಡಬೇಕು ಅಂದಾಗ ಹಿಂಜರಿಯೋ ಮಾತೇ ಇಲ್ಲ.

ಮಿಥುನ ರಾಶಿ
ಮಿಥುನ ರಾಶಿಯವರು ಕುಟುಂಬದ ಹಿರಿಯರನ್ನು ಆರೈಕೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಇವರಲ್ಲಿ ಎಲ್ಲರಿಗೂ ಆದರ್ಶರಾಗಿ ಬದುಕುವ ಗುಣ ಇದೆ. ಈ ರಾಶಿಯವರು ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ಹಿರಿಯರ ಸೇವೆ ಮಾಡೋದು, ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಸಮಯ ಮೀಸಲಿಡೋದನ್ನು ಮರೆಯೋದಿಲ್ಲ. ಸಾಮಾನ್ಯವಾಗಿ ವೃದ್ಧರು ದಿನನಿತ್ಯದ ದಿನಚರಿಯಿಂದ ಬೇಸರ ಪಟ್ಟುಕೊಂಡಿರುತ್ತಾರೆ. ಇದನ್ನು ಅರಿತುಕೊಳ್ಳುವ ಈ ರಾಶಿಯವರು ಅವರನ್ನು ಬೇರೆ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪ್ರೇರೇಪಿಸುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಹಿರಿಯರನ್ನು ನೋಡಿಕೊಳ್ಳೋದ್ರಲ್ಲಿ ತಮ್ಮ ಖುಷಿಯನ್ನು ಕಂಡುಕೊಳ್ಳುತ್ತಾರೆ. ವಯಸ್ಸಾದ ಹಿರಿಯರನ್ನು ತಮ್ಮ ಮನೆಯಲ್ಲೇ ಇಟ್ಟುಕೊಳ್ಳೋದಕ್ಕೆ ಇವರು ಇಷ್ಟ ಪಡುತ್ತಾರೆ. ಹಾಗೂ ಅವರ ಕಾಳಜಿಯನ್ನು ಮಾಡುತ್ತಾರೆ. ಈ ರಾಶಿಯರು ಕುಟುಂಬ ಹಾಗೂ ಸ್ನೇಹಿತರಿಗೆ ತುಂಬಾನೇ ಗೌರವ ನೀಡುತ್ತಾರೆ. ಹಾಗೂ ಕರ್ಕಾಟಕ ರಾಶಿಯವರು ಕೂಡು ಕುಟುಂಬದಲ್ಲಿ ಎಲ್ಲರೂ ಒಟ್ಟಾಗಿ ಬದುಕಬೇಕು ಎನ್ನುವ ಇಚ್ಛೆಯನ್ನು ಹೊಂದಿರುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ನಿಷ್ಠಾವಂತರು ಹಾಗೂ ಪ್ರೀತಿಗಾಗಿ ಪ್ರಾಣ ಕೊಡುವ ಗುಣದವರು. ವಿಶ್ವಾಸಾರ್ಹ ಸ್ನೇಹಿತ ಮತ್ತು ವಯಸ್ಸಾದ ಕುಟುಂಬದ ಸದಸ್ಯರಿಗೆ ಸಾಂದರ್ಭಿಕವಾಗಿ ಅಗತ್ಯವಿರುವ ಆರೈಕೆಯನ್ನು ನೀಡುವುದನ್ನು ಸಿಂಹ ರಾಶಿಯವರು ಮರೆಯೋದಿಲ್ಲ. ಹಿರಿಯರಿಗಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಾರೆ. ಹಾಗೂ ಅವರ ಕಾಳಜಿಯನ್ನು ಮಾಡುತ್ತಾರೆ. ಹಿರಿಯರ ಸೇವೆ ಮಾಡೋದಕ್ಕೆ ಇವರು ಎಂದಿಗೂ ಬೇಸರ ಪಟ್ಟುಕೊಂಡವರಲ್ಲ. ಮುಕ್ತ ಮನಸ್ಸಿನಿಂದ ಸೇವೆ ಮಾಡುತ್ತಾರೆ.
ಹಾಗಂತ ಬೇರೆ ರಾಶಿಯವರು ಹಿರಿಯರ ಸೇವೆ ಮಾಡೋದಲ್ಲ ಅಂತೇನಿಲ್ಲ. ಆದರೆ ಈ ನಾಲ್ಕು ರಾಶಿಯ ಜನರಲ್ಲಿ ಈ ಗುಣ ಹೆಚ್ಚಾಗಿರುತ್ತದೆ.



Click it and Unblock the Notifications
