Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೇಷ ರಾಶಿಯಲ್ಲಿ ಗುರು ಸಂಚಾರ : ಈ 5 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
ಗುರು ಏಪ್ರಿಲ್ 22ರಂದು ಮೀನ ರಾಶಿಯಿಂದ ಹೊರಬಂದು ಮೇಷ ರಾಶಿಗೆ ಸಾಗಲಿದ್ದಾನೆ. ಈಗಾಗಲೇ ಮೇಷ ರಾಶಿಯಲ್ಲಿ ಸೂರ್ಯ, ಬುಧ, ರಾಹು, ಯುರೇನಸ್ ಇದ್ದು, ಗುರುವಿನ ಪ್ರವೇಶದ ನಂತರ ಈ ಐದು ರಾಶಿಗಳು ಸಂಯೋಜನೆಗೊಳ್ಳಲಿದೆ. ಇತ್ತ ಗುರು ಮತ್ತು ರಾಹುವಿನ ಸಂಯೋಗದಿಂದ ಗುರು ಚಂಡಾಲ ಯೋಗವೂ ನಿರ್ಮಾಣವಾಗಲಿದೆ. ಹಾಗಾದ್ರೆ ಗುರು ಮೇಷ ರಾಶಿಗೆ ಸಂಚಾರ ಮಾಡಿರೋದ್ರಿಂದ ಈ 5 ರಾಶಿಗಳ ಮೇಲೆ ಗುರುವಿನ ಪ್ರಭಾವ ಹೇಗಿದೆ ಅನ್ನೋದನ್ನು ತಿಳಿಯೋಣ :
ಮೇಷ ರಾಶಿ
ಗುರು ಮೇಷ ರಾಶಿಗೆ ಸಂಚಾರ ಮಾಡಿರೋದ್ರಿಂದ ಮದುವೆಯಾಗಲು ಇಚ್ಛಿಸಿರುವವರಿಗೆ ಕಂಕಣ ಭಾಗ್ಯವಿದೆ. ಈ ಸಮಯದಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಮಂಗಳಕರ ಫಲಿತಾಂಶಗಳನ್ನು ಈ ರಾಶಿಯವರು ಪಡೆಯುತ್ತಾರೆ. ಪೋಷಕರ ಆಶೀರ್ವಾದ ಮತ್ತು ಅವರ ಸಹಾಯದಿಂದ ಅನೇಕ ಕಾರ್ಯಗಳು ಪೂರ್ಣಗೊಳ್ಳುತ್ತವೆ. ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ.
ಸರ್ಕಾರಿ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ದಾಂಪತ್ಯ ಜೀವನದ ಕಲಹಗಳೆಲ್ಲಾ ಬಗೆಹರಿದು ಭಾಂದವ್ಯ ಇನ್ನಷ್ಟು ಗಟ್ಟಿಯಾಗಲಿದೆ. ಕುಟುಂಬಸ್ಥರ ಜೊತೆಗಿನ ಕಲಹಗಳೆಲ್ಲಾ ಬಗೆ ಹರಿಯುತ್ತದೆ. ಉದ್ಯೊಗಿಗಳ ಆದಾಯ ಹೆಚ್ಚಾಗುತ್ತದೆ. ನಿಮ್ಮ ಕಷ್ಟ ಕಾಲದಲ್ಲಿ ಒಡ ಹುಟ್ಟಿದವರು ಕೈ ಹಿಡಿಯುತ್ತಾರೆ. ಈ ಅವಧಿಯಲ್ಲಿ ಉದ್ಯೋಗಿಗಳು ಉತ್ತಮ ಫಲ ನಿರೀಕ್ಷಿಸಬಹುದು.

ಸಿಂಹ ರಾಶಿ
ಗುರು ಗ್ರಹದ ಸಂಚಾರವು ಸಿಂಹ ರಾಶಿಯವರಿಗೆ ಶುಭ ಫಲಗಳನ್ನು ಹೊತ್ತು ತರಲಿದೆ. ಕುಟುಂಬ ಸದಸ್ಯರೊಂದಿಗೆ ಧಾರ್ಮಿಕ ಸ್ಥಳಗಳಿಗೆ ತೀರ್ಥಯಾತ್ರೆ ಮಾಡುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಸಂಕಷ್ಟದ ಸಮಯದಲ್ಲಿ ಸಹೋದರರು ಮತ್ತು ಸಹೋದರಿಯರು ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ. ಸಂಬಂಧದ ಮಹತ್ವ ಏನು ಅನ್ನೋದು ಅರ್ಥವಾಗುತ್ತದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಎದುರಾಗಿದ್ದ ಅಡೆತಡೆಗಳು ದೂರವಾಗುತ್ತವೆ. ವ್ಯಾಪಾರಿಗಳಿಗೆ ಈ ಅವಧಿ ತುಂಬಾನೇ ಒಳ್ಳೆಯದು.
ಕನ್ಯಾ ರಾಶಿ
ಗುರು ಮೇಷರಾಶಿಯಲ್ಲಿ ಸಂಚಾರ ಮಾಡುತ್ತಿರೋದ್ರಿಂದ ನಿಮ್ಮ ಬಾಳಲ್ಲಿ ಎಲ್ಲವೂ ಒಳ್ಳೆಯದಾಗಲಿದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಲಿದೆ. ವ್ಯಾಪಾರದಲ್ಲಿ ಸುಧಾರಣೆಯನ್ನು ಕಾಣುತ್ತೀರಿ. ಉದ್ಯೋಗಸ್ಥರು ಈ ಸಮಯದಲ್ಲಿ ಉತ್ತಮ ಅವಕಾಶವನ್ನು ಪಡೆಯುವ ಸಾಧ್ಯತೆ ಇದೆ. ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಬಹುದು. ನ್ಯಾಯಾಲಯದ ವ್ಯಾಜ್ಯಗಳೆಲ್ಲಾ ಬಗೆ ಹರಿಯಲಿದೆ. ತಂದೆಯ ಆರೋಗ್ಯ ತೊಂದರೆಗಳು ಕ್ರಮೇಣ ಸುಧಾರಿಸುತ್ತವೆ. ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ.
ತುಲಾ ರಾಶಿ
ಮೇಷ ರಾಶಿಯಲ್ಲಿ ಗುರುವಿನ ಸಂಚಾರ ತುಲಾರಾಶಿಯವರಿಗೆ ಶುಭ ಫಲಗಳನ್ನೇ ನೀಡಲಿದೆ. ಈ ಅವಧಿಯಲ್ಲಿ ತುಲಾ ರಾಶಿಯವರು ಆಸ್ತಿ ಅಥವಾ ವಾಹನಗಳನ್ನು ಖರೀದಿಸಬಹುದು. ನೀವು ಕೊಟ್ಟ ಸಾಲದ ಹಣ ವಾಪಾಸ್ಸ್ ಆಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗುತ್ತದೆ. ನೀವಿಬ್ಬರೂ ಒಟ್ಟಾಗಿ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಗುರುವಿನ ಪ್ರಭಾವದಿಂದ ಸರ್ಕಾರಿ ಕೆಲಸಗಳಲ್ಲಿನ ಅಡೆತಡೆಗಳು ನಿವಾರಣೆಯಾಗಲಿದ್ದು, ವ್ಯಾಪಾರದಲ್ಲಿ ಪ್ರಗತಿ ಕಾಣುವುದರಿಂದ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಈ ಸಮಯದಲ್ಲಿ, ಮನಸ್ಸು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿರುತ್ತದೆ ಮತ್ತು ಕುಟುಂಬ ಜೀವನದಲ್ಲಿ ಸಂತೋಷವನ್ನೇ ಕಾಣುತ್ತೀರಿ. ವಿದೇಶಿ ಪ್ರಯಾಣ ಸಾಧ್ಯತೆಗಳಿದೆ. ನಿಮ್ಮ ಮಗುವಿನ ಪ್ರಗತಿಯಿಂದ ನೀವು ಮತ್ತಷ್ಟು ಸಂತೋಷವನ್ನು ಕಾಣುತ್ತೀರಿ.
ಮೀನ ರಾಶಿ
ಮೇಷ ರಾಶಿಯಲ್ಲಿ ಗುರು ಸಂಚಾರ ಮಾಡುತ್ತಿರೋದ್ರಿಂದ ಮೀನ ರಾಶಿಯವರ ಬಾಳು ಬೆಳಗಲಿದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಮತ್ತು ನಿಮ್ಮ ಪ್ರತಿಭೆಯನ್ನು ತೋರಿಸಲು ನಿಮಗೆ ಅವಕಾಶ ಸಿಗುತ್ತದೆ. ಸಂಬಂಧಿಕರೊಂದಿಗಿದ್ದ ಸಮಸ್ಯೆಗಳು ಬಗೆ ಹರಿಯಲಿದೆ. ನಿಮಗೆ ಆಸ್ತಿ ಸಿಗುವ ಶುಭ ಸೂಚನೆಯಿದೆ. ಈ ಸಮಯದಲ್ಲಿ ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಸಣ್ಣ ಪ್ರಯಾಣಗಳು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಯಶಸ್ಸನ್ನು ಪಡೆಯಲು ನೀವು ಹೋರಾಡಬೇಕಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ. ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧ ಉತ್ತಮವಾಗುತ್ತದೆ.



Click it and Unblock the Notifications
