Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈ ರಾಶಿಯವರು ಕಂಪನಿಯನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ
ನಾವೀಗ ವೃತ್ತಿಪರ ಜಗತ್ತಿನ ಬಗ್ಗೆ ಮಾತನಾಡುತ್ತಾ ಹೋದರೆ ಪ್ರತಿಯೊಬ್ಬರು ಒಂದೇ ಜಾಗದಲ್ಲಿ ನಿಲ್ಲೋದಿಕ್ಕಾಗೋದಿಲ್ಲ. ಕೆಲವರಲ್ಲಿ ಅತ್ಯತ್ತಮ ಕೌಶಲ್ಯಗಳಿರುತ್ತದೆ. ಹಾಗೂ ಅವರು ಜೀವನದಲ್ಲಿ ನಿರ್ದಿಷ್ಟವಾದ ಗುರಿಯನ್ನು ಹೊಂದಿರುತ್ತಾರೆ. ಅವರು ಒಂದಲ್ಲ ಒಂದು ಕ್ಷೇತ್ರದಲ್ಲಿ ಖಂಡಿತ ಸಾಧನೆ ಮಾಡುತ್ತಾರೆ. ಆದರೆ ಇನ್ನೂ ಕೆಲವರಿಗೆ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳೋದಕ್ಕೆ ಇಷ್ಟ ಇರೋದಿಲ್ಲ. ಅವರು ಇದ್ದುದರಲ್ಲೇ ಸಂತೋಷ ಪಟ್ಟುಕೊಳ್ಳುತ್ತಾರೆ.
ಇನ್ನೂ ಕೆಲವರು ಅದಕ್ಕೂ ಮೀರಿದ ಸಾಧನೆಯನ್ನು ಮಾಡೋದಕ್ಕೆ ಬಯಸುತ್ತಾರೆ. ತಮ್ಮದೇ ಒಂದು ಕಂಪನಿಯನ್ನು ಕಟ್ಟಬೇಕು ಬಾಸ್ ಆಗಿ ಮೆರೆಯಬೇಕು ಅನ್ನೋ ಆಸೆ ಖಂಡಿತ ಇರುತ್ತದೆ. ಅಷ್ಟೇ ಅಲ್ಲ, ಇವರಲ್ಲಿ ಕೆಲಸಗಾರರನ್ನು ಉತ್ತಮವಾಗಿ ನಡೆಸಿಕೊಳ್ಳುವ ಗುಣ ಕೂಡ ಇರುತ್ತದೆ. ಕೆಲವೇ ಕೆಲವು ರಾಶಿಯವರು ಮಾತ್ರ ನಾಯಕತ್ವ ಗುಣ ಹೊದಿರುತ್ತಾರೆ, ಜೊತೆಗೆ ಒಂದು ಕಂಪನಿಯನ್ನು ನಡೆಸುವ ಸಾಮರ್ಥ್ಯ ಇವರಲ್ಲಿರುತ್ತದೆ. ಅಷ್ಟಕ್ಕು ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಮೇಷ ರಾಶಿ
ಮೇಷ ರಾಶಿಯವರಲ್ಲಿ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಇವರು ತಮ್ಮ ಕೆಳಗಿನ ಕೆಲಸಗಾರರರಿಗೆ ಉತ್ತಮವಾದ ಮಾರ್ಗದರ್ಶನ ನೀಡುತ್ತಾರೆ. ಇವರಿಗೆ ಉತ್ತಮವಾದ ತಿಳುವಳಿಕೆ ಇದೆ. ಇವರು ಉತ್ತಮ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಮತ್ತು ಇವರಲ್ಲಿ ಸ್ಪರ್ಧಾತ್ಮಕ ಗುಣವಿದೆ. ಇವರು ಯಾವಾಗಲೂ ತಮ್ಮ ಗುರಿಯೆಡೆಗೆ ಕೆಲಲಸ ಮಾಡುತ್ತಾರೆ. ಕೆಲಸದಲ್ಲಿ ಇವರು ಪರಿಪೂರ್ಣತೆಯನ್ನು ಹೊಂದಿರುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲೂ ಕೂಡ ನಾಯಕತ್ವದ ಗುಣ ಹುಟ್ಟಿನಿಂದಲೇ ಬಂದಿರುತ್ತದೆ. ಇವರು ನಿರ್ಣಯ ಮತ್ತು ದೃಢತೆಗೆ ಹೆಸರುವಾಸಿಯಾಗಿದ್ದಾರೆ. ಇವರು ಯಾವುದೇ ವಿಚಾಋಕ್ಕೂ ಕೆಲಸದಲ್ಲಿ ರಾಜಿ ಮಾಡಿಕೊಳ್ಳೋದಿಲ್ಲ. ಇವರು ಕೊಂಚ ಅಹಂಕಾರಿಗಳು. ಇನ್ನೂ ಬೇರೆಯವರು ಹೇಳಿದ ಮಾತನ್ನು ಕೇಳುವವರಲ್ಲ ಇವರು. ಆದರೆ ಎಲ್ಲರ ಭಾವನೆಗಳನ್ನು ಇವರು ಅರ್ಥ ಮಾಡಿಕೊಳ್ಳುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಉತ್ತಮವಾದ ನಾಯಕತ್ವದ ಗುಣವಿದೆ. ಇವರು ಉದ್ಯೋಗಿಗಳಿಂದ ಉತ್ತಮವಾದ ಸಾಮರ್ಥ್ಯವನ್ನು ಹೊರ ತರುವ ಗುಣ ಹೊಂದಿದ್ದಾರೆ. ಕೆಲಸದಲ್ಲಿ ಪರಿಪೂರ್ಣತೆಯನ್ನು ಹೊಂದಿರುವವರು ಇವರು. ಕೆಲಸ ಸರಿ ಹೋಗದೆ ಇರುವಾಗ ಇವರು ಉದ್ಯೋಗಿಗಳನ್ನು ಟೀಕಿಸುತ್ತಾರೆ. ಆದರೆ ಉದ್ಯೋಗಿಗಳ ನಸುಗಳು ಮತ್ತು ಉದ್ದೇಶಗಳನ್ನು ಸಾಧಿಸಲು ಮಾತ್ರ ಸಹಾಯ ಮಾಡುತ್ತದೆ.
ಧನು ರಾಶಿ
ಧನು ರಾಶಿಯವರು ಕೂಡ ಉತ್ತಮ ನಾಯಕರು. ಒಂದು ಕಂಪನಿಯನ್ನು ಸದೃಢವಾಗಿ ನಡೆಸುವ ಗುಣ ಇವರಲ್ಲಿದೆ. ಇವರು ಹೊಸ ಹೊಸ ಆಲೋಚನೆಗಳನ್ನು ಸ್ವಾಗತಿಸುತ್ತಾರೆ. ಹಾಗೂ ನವೀನ ಆಲೋಚನೆಗಳಿಗೆ ಇವರು ಅವಕಾಶ ಕೊಡುತ್ತಾರೆ. ಉದ್ಯೋಗಿಗಳನ್ನು ಈ ರಾಶಿಯವರು ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ತರ್ಕಬದ್ಧ ಮತ್ತು ಬುದ್ಧಿವಂತ ವ್ಯಕ್ತಿಗಳಾಗಿದ್ದಾರೆ. ಎಂತಹ ಸಂದರ್ಭಗಳಾದರೂ ಇವರು ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ. ಇವರನ್ನು ನಾಯಕತ್ವದ ಗುಣ ಇರೋದ್ರಿಂದ ಎಂತಹ ಸಮಸ್ಯೆಗಳಾದರೂ ಕೂಡ ಇವರು ಬಹು ಬೇಗನೆ ಪತ್ತೆ ಹಚ್ಚುತ್ತಾರೆ. ಉದ್ಯೋಗಿಗಳಿಗೂ ಕೂಡ ಹೆಗಲಾಗಿ ನಿಲ್ಲವ ಗುಣ ಇವರಲ್ಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಬಹಳಷ್ಟು ಸೃಜನಶೀಲ ವ್ಯಕ್ತಿಗಳು. ಇವರು ತಮ್ಮ ಉದ್ಯೋಗಿಗಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಾರೆ. ಹಾಗೂ ಅವರ ಗುರಿಯನ್ನು ಹೊಂದಲು ಸಹಾಯ ಮಾಡುತ್ತಾರೆ. ಈ ರಾಶಿಯವರು ಉದ್ಯೋಗಿಗಳಿಗೆ ಕೆಲಸ ಮಾಡೋದಕ್ಕೆ ಸ್ವಾತಂತ್ರ ನೀಡುತ್ತಾರೆ. ಅವರ ಆಲೋಚನೆಗಳಿಗೆ ಅವಕಾಶವನ್ನು ನೀಡುತ್ತಾರೆ. ಹೀಗಾಗಿ ಇವರು ತಮ್ಮ ಉದ್ಯಮದಲ್ಲಿ ಯಶಸ್ಸು ಕಾಣುತ್ತಾರೆ.



Click it and Unblock the Notifications
