Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 4 ರಾಶಿಯವರು ತಮ್ಮ ಸಂಗಾತಿಯ ಮೇಲೆ ಜೀವಾನೇ ಇಟ್ಟುಕೊಂಡಿರ್ತಾರೆ
ನಾವು ಮದುವೆಯಾಗೋ ಬಾಳ ಸಂಗಾತಿ ಇದೇ ರೀತಿ ಇರಬೇಕು ಎಂದು ನೂರಾರು ಆಸೆ, ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ. ಆದರೆ ನಮ್ಮನ್ನು ತುಂಬಾ ಪ್ರೀತಿ ಮಾಡುವವರು ಸಿಗೋದು ತುಂಬಾನೇ ಕಡಿಮೆ. ನಾವು ಹುಷಾರಿಲ್ಲದ ಸಂದರ್ಭದಲ್ಲಿ ನಮಗಾಗಿ ಯಾರಾದರೂ ಇರಬೇಕು ಎಂದು ಖಂಡಿತ ಅನ್ನಿಸುತ್ತದೆ. ಈ ರೀತಿ ಹುಷಾರಿಲ್ಲದ ಸಮಯದಲ್ಲಿ ಗಂಡ/ಹೆಂಡತಿಯ ಸೇವೆ ಮಾಡುವವರು ಕೆಲವೇ ಕೆಲವು ಜನ ಮಾತ್ರ ಸಿಗುತ್ತಾರೆ. ಈ ಸಮಯದಲ್ಲಿ ಅವರ ಜೊತೆಗೆ ಇದ್ದು ಯೋಗ-ಕ್ಷೇಮ ವಿಚಾರಿಸಿಕೊಳ್ಳುತ್ತಾರೆ. ಇಂತಹ ಗುಣ ಎಲ್ಲರಲ್ಲೂ ಇರೋದಿಲ್ಲ. ಈ ನಾಲ್ಕು ರಾಶಿಯವರಲ್ಲಿ ಮಾತ್ರ ಈ ಗುಣ ಇರುತ್ತಂತೆ. ಹಾಗಾದ್ರೆ ಆ ನಾಲ್ಕು ರಾಶಿಗಳು ಯಾವುದು ಅನ್ನೋದನ್ನು ನೋಡೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಸಂಗಾತಿಯನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ. ತಮ್ಮ ಸಂಗಾತಿಗೆ ಸ್ವಲ್ಪ ನೋವಾದರೂ ಇವರು ಸಹಿಸಿಕೊಳ್ಳೋದಿಲ್ಲ. ಒಂದು ವೇಳೆ ತಮ್ಮ ಸಂಗಾತಿ ಏನಾದ್ರು ಸ್ವಲ್ಪ ಜ್ವರದಿಂದ ಬಳಲಿದ್ರು ಕೂಡ ಇವರು ಪಕ್ಕದಲ್ಲೇ ಕುಳಿತು ಅವರ ಸೇವೆ ಮಾಡುತ್ತಾರೆ. ತಮ್ಮ ಸಂಗಾತಿಯ ಬೇಕು, ಬೇಡಗಳನ್ನು ಇವರು ವಿಚಾರಿಸುತ್ತಾರೆ. ಮನೆ ಕೆಲಸದಲ್ಲೂ ಸಹಾಯ ಮಾಡುತ್ತಾರೆ. ಈ ರಾಶಿಯವರನ್ನು ಮದುವೆಯಾದರೆ ನೀವು ಎಂದಿಗೂ ಒಂಟಿ ಅನ್ನೋ ಭಾವನೆ ಕಾಡೋದಿಲ್ಲ.
ಸಿಂಹ
ಸಿಂಹ ರಾಶಿಯವರು ತಮ್ಮ ಸಂಗಾತಿಯನ್ನು ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸಂಗಾತಿ ಹುಷಾರಿಲ್ಲದ ಸಮಯದಲ್ಲಿ ಅವರ ಕಾಳಜಿ ವಹಿಸೋದು ಮಾತ್ರವಲ್ಲದೇ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಮನೆಯಲ್ಲಿ ಅಡುಗೆ ಮಾಡೋದ್ರಿಂದ ಹಿಡಿದು ಮನೆಯನ್ನು ಸ್ವಚ್ಛಗೊಳಿಸೋದು, ಮಕ್ಕಳನ್ನು ಕೂಡ ಇವರೇ ನೋಡಿಕೊಳ್ಳುತ್ತಾರೆ. ಸಿಂಹ ರಾಶಿಯವರು ಯಾವತ್ತಿದ್ದರೂ ಅತ್ಯತ್ತಮ ಸಂಗಾತಿ ಅನ್ನಿಸಿಕೊಳ್ಳುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ತಮ್ಮ ಸಂಗಾತಿಯನ್ನು ತುಂಬಾನೇ ಇಷ್ಟ ಪಡುತ್ತಾರೆ. ಸಂಗಾತಿಗೆ ಹುಷಾರಿಲ್ಲದ ಸಂದರ್ಭದಲ್ಲಿ ಯಾವುದೇ ಉದಾಸೀನವನ್ನು ತೋರದೇ ಅವರ ಸೇವೆ ಮಾಡುತ್ತಾರೆ. ತಮ್ಮ ಸಂಗಾತಿಯನ್ನು ಯಾರಾದರೂ ಟೀಕಿಸಿದರೆ ತುಲಾ ರಾಶಿಯವರು ತಮ್ಮ ಸಂಗಾತಿಯ ಪರ ವಹಿಸಿ ಮಾತನಾಡುತ್ತಾರೆ. ಹೀಗಾಗಿ ಎಂತಹ ಸಂದರ್ಭದಲ್ಲಿ ತಮ್ಮ ಸಂಗಾತಿಯನ್ನು ಇವು ಬಿಟ್ಟು ಕೊಡೋದಿಲ್ಲ.
ಮೀನ ರಾಶಿ
ಮೀನ ರಾಶಿಯವರು ಮದುವೆಯಾದ ಮೇಲೆ ಗಂಡ/ಹೆಂಡತಿಯ ಪಾತ್ರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ತಮ್ಮ ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಅವರ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ನಂತರ ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಮೀನ ರಾಶಿಯವರು ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ವಹಿಸಿಸುತ್ತಾರೆ. ಒಂದು ವೇಳೆ ಸಂಗಾತಿಗೆ ಹುಷಾರಿಲ್ಲ ಅಂತಾದರೆ ಅವರೇ ಮುಂದೆ ನಿಂತು ಎಲ್ಲಾ ಕೆಲಸವನ್ನು ನೋಡಿಕೊಳ್ಳುತ್ತಾರೆ.



Click it and Unblock the Notifications

