Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ 4 ರಾಶಿಯವರು ಎಷ್ಟೇ ದೂರ ಇದ್ದರೂ ಪ್ರೀತಿಯನ್ನು ಬಿಟ್ಟು ಕೊಡೋದಿಲ್ಲ!
ಪ್ರೇಮಿಗಳಬ್ಬರು ಹತ್ತಿರ ಇದ್ದರೇನೇ ಪ್ರೀತಿಯನ್ನು ಉಳಿಸೋದಕ್ಕೆ ಸಾಧ್ಯವಾಗದ ಈ ಕಾಲದಲ್ಲಿ ಪ್ರೇಮಿಗಳು ದೂರ ದೂರ ಇದ್ದಾಗ ಆ ಪ್ರೀತಿಯನ್ನು ಉಳಿಸಿಕೊಳೋದು ತುಂಬಾನೇ ಕಷ್ಟ. ಲಾಂಗ್ ಡೆಸ್ಟೆನ್ಸ್ ರಿಲೇಶನ್ ಶಿಪ್ ನಲ್ಲೂ ಇದ್ದೂ ಕೂಡ ಪ್ರೀತಿಯನ್ನು ಉಳಿಸಿಕೊಳ್ಳೋದು ಅಂದುಕೊಂಡಷ್ಟು ಸುಲಭವಲ್ಲ. ಅಂತಹ ಸಂಬಂಧದಲ್ಲಿ ತಾಳ್ಮೆ, ಸಮರ್ಪಣೆ, ಶಿಸ್ತು ಮುಖ್ಯವಾಗುತ್ತದೆ. ಆ ಮಾತ್ರ ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್ ಉಳಿಯೋದಕ್ಕೆ ಸಾಧ್ಯವಾಗುತ್ತದೆ.
ದೂರ ದೂರ ಇದ್ದರೂ ಕೂಡ ಪ್ರೀತಿಯನ್ನು ಉಳಿಸಿಕೊಳ್ಳೋದು ಎಲ್ಲರಿಂದ ಸಾಧ್ಯವಾಗೋದಿಲ್ಲ. ಕೆಲವೇ ಕೆಲವು ಜನ ಮಾತ್ರ ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್ ಅನ್ನು ಕೊನೆವರೆಗೂ ಉಳಿಸಿಕೊಳ್ಳುತ್ತಾರೆ. ಅದ್ರಲ್ಲಿ ಈ ನಾಲ್ಕು ರಾಶಿಯವರು ಎಷ್ಟೇ ದೂರದಲ್ಲಿ ಇದ್ದರೂ ಕೂಡ ಪ್ರೀತಿಯನ್ನು ಉಳಿಸಿಕೊಳ್ಳುವ ತಾಕತ್ತು ಹೊಂದಿದ್ದಾರಂತೆ. ಅಷ್ಟಕ್ಕು ಆ ನಾಲ್ಕು ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಧನು ರಾಶಿ
ಧನು ರಾಶಿಯವರು ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್ ಅನ್ನು ಕೊನೆವರೆಗೂ ಉಳಿಸಿಕೊಳ್ಳುತ್ತಾರಂತೆ. ಅವರು ಸಂಗಾತಿಯಿಂದ ದೂರ ಇದ್ದರೂ ಕೂಡ ಆ ಸಂಬಂಧ ಅಷ್ಟೇ ಗಟ್ಟಿಯಾಗಿ ಇರುತ್ತಂತೆ. ದೀರ್ಘಾವಧಿಗಳ ಕಾಲ ಅವರಿಬ್ಬರೂ ದೂರ ದೂರ ಇದ್ದರೂ ಕೂಡ ಸಂಬಂಧಕ್ಕೆ ಒಂಚೂರು ಧಕ್ಕೆ ಬರದಂತೆ ಕಾಪಾಡಿಕೊಂಡು ಹೋಗುತ್ತಾರೆ. ಇನ್ನೂ ಈ ರಾಶಿವರು ಸಂಗಾತಿಯಿಂದ ದೂರ ಇದ್ದರೂ ಕೂಡ ಅವರ ಮೇಲೆ ಅನುಮಾನ ಪಡೋದಾಗಲಿ, ಅವರಿಗೆ ಹಿಂಸೆ ನೀಡೋದನ್ನಾಗಲಿ ಮಾಡೋದಿಲ್ಲ. ಸಂಗಾತಿಯ ಜೊತೆಗೆ ಖುಷಿ ಖುಷಿಯಾಗಿ ಜೀವನ ನಡೆಸುತ್ತಾರೆ.
ಮಿಥುನ ರಾಶಿ
ಮಿಥುನ ರಾಶಿಯವರು ಉತ್ತಮ ಮಾತುಗಾರರು. ಇವರು ತಮ್ಮ ಮಾತಿನ ಮೂಲಕವೇ ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್ ಅನ್ನು ಜೀವಂತವಾಗಿ ಇಡುತ್ತಾರೆ. ಸಾಮಾನ್ಯವಾಗಿ ಪ್ರೇಮಿಗಳು ಹತ್ತಿರ ಇರಲಿ ಅಥವಾ ದೂರವೇ ಇರಲಿ ಅವರ ಮಧ್ಯೆ ಉತ್ತಮ ಸಂವಹನ ಇದ್ದಾಗ ಮಾತ್ರ ಆ ಸಂಬಂಧ ಜೀವಂತವಾಗಿ ಇರುತ್ತದೆ. ಮಿಥುನ ರಾಶಿಯವರು ಕೂಡ ದೂರದಲ್ಲಿರುವ ತಮ್ಮ ಸಂಗಾತಿಯ ಜೊತೆಗೆ ಉತ್ತಮ ಸಂವಹನವನ್ನು ಹೊಂದಿರುತ್ತಾರೆ. ಅದು ಫೋನ್ ಅಥವಾ ಮೆಸೇಜ್ ಮೂಲಕ ಸಂಗಾತಿಯ ಬಳಿ ಮಾತನಾಡುತ್ತಾರೆ.
ಪ್ರತಿನಿತ್ಯ ಏನೆಲ್ಲಾ ನಡೆಯಿತು ಎಲ್ಲಾ ವಿಚಾರಗಳನ್ನು ಸಂಗಾತಿಯ ಬಳಿ ಹಂಚಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅವರ ಸಂಗಾತಿಯ ಬಗ್ಗೆ ಮಾಹಿತಿ ಪಡೆಯುತ್ತಾರೆ. ಪರಸ್ಪರ ಒಬ್ಬರಿಗೊಬ್ಬರು ಮಾರ್ಗದರ್ಶನ ನೀಡುತ್ತಾರೆ. ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಾರೆ. ಒಟ್ಟಿನಲ್ಲಿ ದೂರ ಇದ್ದರೂ ಇವರ ಸಂಬಂಧ ಗಟ್ಟಿಯಾಗಿರುತ್ತದೆ.
ಮಕರ ರಾಶಿ
ಮಕರ ರಾಶಿಯವರು ಪ್ರೀತಿಯಲ್ಲಿ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುತ್ತಾರೆ. ಸಂಗಾತಿಯ ಖುಷಿಗಾಗಿ ಏನು ಮಾಡೋದಕ್ಕೂ ಈ ರಾಶಿಯವರು ಸಿದ್ಧರಿರುತ್ತಾರೆ. ಹೀಗಾಗಿ ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್ ನಲ್ಲೂ ಇವರು ಖುಷಿಯಾಗಿ ಇರುತ್ತಾರೆ. ಇನ್ನೂ ಪ್ರೀತಿಯನ್ನು ಕೊನೆವರೆಗೂ ಉಳಿಸಿಕೊಂಡು, ಪ್ರೀತಿಸಿದವರನ್ನೇ ಇವರು ಮದುವೆಯಾಗುತ್ತಾರೆ. ಇನ್ನೂ ಈ ರಾಶಿಯವರು ಒಬ್ಬರನ್ನು ಪ್ರೀತಿಸೋದಕ್ಕೆ ಶುರು ಮಾಡಿದ್ರೆ ಕಡೆವರೆಗೂ ಅವರ ಜೊತೆಗೆ ಇರುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ಯಾವಾಗಲೂ ಸ್ವತಂತ್ರವಾಗಿರೋದಕ್ಕೆ ಇಷ್ಟ ಪಡುತ್ತಾರೆ. ಹೀಗಾಗಿ ಅಷ್ಟು ಬೇಗ ಇವರು ಪ್ರೀತಿಯಲ್ಲಿ ಬೀಳೋದಿಲ್ಲ. ಆದರೆ ಒಂದು ಸಾರಿ ಇವರು ಪ್ರೀತಿಯಲ್ಲಿ ಬಿದ್ದರೆ ಆ ಪ್ರೀತಿಯನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ. ಒಂದು ವೇಳೆ ಇವರು ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್ ನಲ್ಲಿ ಇದ್ದರೂ ಕೂಡ ಆ ಪ್ರೀತಿಯನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವವರಲ್ಲ. ಮನಸ್ಥಾಪ, ಜಗಳ ಪ್ರೇಮಿಗಳ ಮಧ್ಯೆ ಬಂದರೂ ಕೂಡ ಅದನ್ನು ಸರಿದೂಗಿಸಿಕೊಂಡು ಹೋಗುವ ಗುಣ ಇವರಲ್ಲಿದೆ. ಹೀಗಾಗಿ ತಮ್ಮ ಸಂಗಾತಿಯ ಜೊತೆಗೆ ಅನ್ಯೋನ್ಯವಾಗಿದ್ದು, ಅದೇ ಪ್ರೀತಿಯನ್ನು ಕೊನೆವರೆಗೂ ಉಳಿಸಿಕೊಳ್ಳುತ್ತಾರೆ.



Click it and Unblock the Notifications
