Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ರಾಶಿಯವರು ತಮಗಾಗಿ ಬೆಸ್ಟ್ ಜೋಡಿಯನ್ನೇ ಹುಡುಕುತ್ತಾರೆ!
ಮದುವೆ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅಂತಾರೆ. ಆದರೆ ನಿಜವಾಗಿಯೂ ಮದುವೆ ಹಾಗೂ ಸ್ವರ್ಗಕ್ಕೂ ಸಂಬಂಧ ಇದ್ಯಾ? ಈಗಂತೂ ಎಷ್ಟ ಬೇಗ ಮದುವೆಯಾಗುತ್ತೋ ಅಷ್ಟೇ ಬೇಗ ದೂರ ದೂರವಾಗೋ ಜೋಡಿಗಳನ್ನು ಕೂಡ ನಾವು ನೋಡಿರ್ತೀವಿ. ಯಾವಾಗ ಎರಡು ಜೋಡಿಗಳ ನಡುವಿನ ಕೆಮಿಸ್ಟ್ರಿ ಚೆನ್ನಾಗಿರುತ್ತೋ ಅಂತಹ ಜೋಡಿಗಳು ಮಾತ್ರ ಕಡೆವರೆಗೂ ತಮ್ಮ ಪ್ರೀತಿಯನ್ನು ಉಳಿಸಿಕೊಂಡು ಹೋಗೋದು.
ಇತ್ತೀಚಿಗಂತೂ ಮದುವೆಯಾಗೋದಕ್ಕೆ ಹುಡುಗ ಹುಡುಗಿಯನ್ನು ಹುಡುಕೋದೇ ಕಷ್ಟ ಎಂಬಂತಾಗಿದೆ. ಗಂಡು- ಹೆಣ್ಣು ಜಾತಕ ಕೂಡಿ ಬಂದ್ರೆ ಸಾಕು ಮದುವೆ ಮಾಡಿಬಿಡೋದಕ್ಕೆ ಪೋಷಕರು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ಕೆಲ ರಾಶಿಯವರು ತಮಗೆ ಎಷ್ಟೇ ಕಷ್ಟವಾದ್ರು ಸರಿ, ಅದೆಷ್ಟೇ ವರ್ಷ ಹುಡುಕಿದ್ರೂ ಸರಿ ತಮಗೆ ಒಪ್ಪುವ ಸಂಗಾತಿ ಸಿಗೋವರೆಗೂ ಮದುವೆಯಾಗೋದಿಲ್ವಂತೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಕನ್ಯಾರಾಶಿ
ಕನ್ಯಾ ರಾಶಿಯವರು ವಿಶ್ವಾಸಾರ್ಹ ಹಾಗೂ ಶಾಶ್ವತ ಸಂಬಂಧಕ್ಕಾಗಿ ಹುಡುಕಾಡುತ್ತಾರೆ. ಹೀಗಾಗಿ ತಮಗೆ ಹೋಲುವ ಗುಣ ಲಕ್ಷಣಗಳಿರುವ ಸಂಗಾತಿಗಾಗಿ ಇವರು ಹುಡುಕಾಡುತ್ತಾರೆ. ಯಾರೋ ಹೇಳಿದರೆಂದು ಇನ್ಯಾರನ್ನೋ ಮದುವೆಯಾಗೋ ಗುಣ ಇವರದಲ್ಲ. ಇವರು ತಮ್ಮ ಸಂಗಾತಿಯೊಂದಿಗೆ ಭವಿಷ್ಯದ ಕನಸು ಕಾಣುತ್ತಾರೆ. ಹೀಗಾಗಿ ಸೂಕ್ತ ಸಂಗಾತಿ ಸಿಗುವವರೆಗೂ ಬಿಡುವವರಲ್ಲ ಇವರು.
ವೃಶ್ಚಿಕ ರಾಶಿ
ಈ ರಾಶಿಯವರು ಸಂಗಾತಿಯನ್ನು ಹುಡುಕುವಾಗ ಮುಕ್ತ ಹೃದಯದ ಪರಿಪೂರ್ಣ ಮಹಿಳೆಯನ್ನು ಹುಡುಕುತ್ತಾರೆ. ಇವರು ತಮ್ಮ ಜೀವನ ಸಂಗಾತಿಗೆ ತಮ್ಮ ಹೃದಯದಲ್ಲಿ ಪವಿತ್ರ ಸ್ಥಾನ ಕೊಡಲು ಬಯಸುತ್ತಾರೆ. ಹಾಗೂ ತಮ್ಮ ಸಂಗಾತಿಯ ಹೃದಯದಲ್ಲಿ ಶಾಶ್ವತವಾಗಿ ನೆಲೆಸೋದಕ್ಕೆ ಬಯಸುತ್ತಾರೆ. ಇನ್ನೂ ಈ ರಾಶಿಯವರು ತಾವು ಮದುವೆಯಾಗುವವರಲ್ಲಿ ತಮ್ಮ ಹಳೆಯ ಸಂಬಂಧದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರೆ. ಹಾಗೂ ಅವರಿಂದ ಕೂಡ ಅದನ್ನೇ ಬಯಸುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ತಾವು ಮದುವೆಯಾಗೋ ಹುಡುಗಿಯೊಂದಿಗೆ ಯಾವುದೇ ವಿಚಾರವನ್ನು ಮುಚ್ಚುಮರೆ ಮಾಡೋದಿಲ್ಲ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ. ಹುಡುಗಿಯ ಆಸಕ್ತಿ, ಹವ್ಯಾಸಗಳ ಬಗ್ಗೆ ಇವರು ತಿಳಿದುಕೊಳ್ಳೋದಕ್ಕೆ ಉತ್ಸುಕರಾಗಿರುತ್ತಾರೆ. ಹಾಗೂ ಇವರ ಆಸಕ್ತಿ, ಇಷ್ಟ-ಕಷ್ಟಗಳ ಬಗ್ಗೆ ಕೂಡ ಮುಕ್ತವಾಗಿ ಮಾತನಾಡುತ್ತಾರೆ. ಈ ರಾಶಿಯವರು ತಮ್ಮ ಜೀವನ ಸಂಗಾತಿಯೊಂದಿಗೆ ಜೀವನದದ್ದಕ್ಕೂ ಕಳೆಯೋದಕ್ಕೆ ಇಷ್ಟ ಪಡುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ತಮಗೆ ಹೊಂದಾಣಿಕೆಯಾಗುವ ಸಂಗಾತಿಗಾಗಿ ಹುಡುಕಾಡುತ್ತಾರೆ. ಯಾಕಂದ್ರೆ ಇವರು ಮದುವೆಯಾದ ಮೇಲೆ ದಾಂಪತ್ಯದಲ್ಲಿ ರಾಜಿ ಮಾಡಿಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ಈ ರಾಶಿಯವರು ಸಂಬಂಧದ ಮೇಲೆ ದೃಢವಾದ ನಂಬಿಕೆ ಹೊಂದಿರುತ್ತಾರೆ. ಒಂದು ಸಂಬಂಧದಿಂದ ಮತ್ತೊಂದು ಸಂಬಂಧಕ್ಕೆ ಜಿಗಿಯುವವರಲ್ಲ ಇವರು. ಹಾಗೂ ಅದೇ ರೀತಿ ಸಂಗಾತಿ ಕೂಡ ಪ್ರಾಮಾಣಿಕವಾಗಿರಲಿ ಎಂದು ಬಯಸುತ್ತಾರೆ.



Click it and Unblock the Notifications
