Latest Updates
-
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್?
ಈ ರಾಶಿಯವರು ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ಒತ್ತಡ ಹೇರೋದಿಲ್ಲ !
ಚಿಕ್ಕ ಮಕ್ಕಳ ಆಟ-ತುಂಟಾಟಗಳನ್ನು ನೋಡೋದೇ ಚಂದ. ಮನೆಯಲ್ಲಿ ಒಂದು ಮಗುವಿದ್ರೆ ಸಾಕು ಆ ಮನೆಯಲ್ಲಿ ಸಂತಸ ತುಂಬಿರುತ್ತದೆ. ಇಂತಹ ಮಕ್ಕಳು ಕೆಲವೊಂದು ಸಲ ತಮ್ಮ ಅರಿವಿಗೆ ಬಾರದ ಹಾಗೇ ಸಣ್ಣ-ಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ತಿದ್ದಿ ಬುದ್ಧಿ ಹೇಳೋದು ಪೋಷಕರ ಕರ್ತವ್ಯ. ಆದರೆ ಕೆಲ ಪೋಷಕರಂತೂ ಮಕ್ಕಳು ಎಷ್ಟೇ ತಪ್ಪು ಮಾಡಿದ್ರು ಕೂಡ ಮಕ್ಕಳಿಗೆ ಹೊಡೆಯೋದಾಗಲಿ, ಶಿಕ್ಷೆಕೊಡೋದಾಗಲಿ ಮಾಡೋದಿಲ್ಲ. ಹಾಗಾದ್ರೆ ಯಾವ ರಾಶಿಯ ಪೋಷಕರು ಮಕ್ಕಳು ಎಷ್ಟೇ ತಪ್ಪು ಮಾಡಿದ್ರು ಕೂಡ ಶಿಕ್ಷೆ ಕೊಡೋದೇ ಇಲ್ಲ ಅನ್ನೋದನ್ನು ತಿಳಿಯೋಣ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಶಾಂತ ಸ್ವಭಾವದವರಾಗಿರುತ್ತಾರೆ. ಮನೆಯಲ್ಲಿಯೂ ಕೂಡ ಸುಖಾ ಸುಮ್ಮನೇ ಕೂಗಾಡೋದನ್ನು ಮಾಡೋದಿಲ್ಲ. ಎಲ್ಲಾ ಸಮಯದಲ್ಲೂ ಕೂಲ್ ಆಗಿ ಇರ್ತಾರೆ. ಇವರು ಯಾವಾಗಲಾದರೂ ಒಂದು ಸಲ ಮನೆಯಲ್ಲಿ ಕೆಲವೊಂದು ನಿಯಮಗಳನ್ನು ಪಾಲಿಸುವಂತೆ ಮಕ್ಕಳಲ್ಲಿ ಹೇಳುತ್ತಾರೆ ಅಷ್ಟೇ. ಆದರೆ ಮಕ್ಕಳು ಏನು ಮಾಡುತ್ತಾರೆ ಅನ್ನೋ ಬಗ್ಗೆ ಹೆಚ್ಚು ಗಮನ ನೀಡೋದಿಲ್ಲ. ಇವರು ತಮ್ಮ ಮಕ್ಕಳಿಗೆ ಸ್ವಾತಂತ್ರವಾಗಿರಲು ಅವಕಾಶ ನೀಡ್ತಾರೆ. ಹಾಗೂ ಅವರಿಗೆ ಪ್ರೋತ್ಸಾಹ ಕೊಡ್ತಾರೆ.

ಸಿಂಹ ರಾಶಿ
ಸಿಂಹ ರಾಶಿಯವರು ಮಕ್ಕಳೊಂದಿಗೆ ಉತ್ತಮ ಬಾಂಡ್ ಹೊಂದಿರುತ್ತಾರೆ. ಇವರು ಮಕ್ಕಳೊಂದಿಗೆ ಪೋಷಕರಾಗಿ ಇರೋದಕ್ಕಿಂತ ಹೆಚ್ಚಾಗಿ ಒಂದೊಳ್ಳೆ ಸ್ನೇಹಿತನ ಹಾಗಿರುತ್ತಾರೆ. ಮಕ್ಕಳನ್ನು ಪುಸಲಾಯಿಸೋದಕ್ಕೆ ಯಾವಾಗಲಾದರೂ ಒಮ್ಮೆ ಇವರು ಮಕ್ಕಳಿಗಾಗಿ ಗಿಫ್ಟ್, ಆಟದ ಸಾಮಾನು ಕೊಡ್ತಾರೆ. ಇನ್ನೂ ಮಕ್ಕಳು ದೊಡ್ಡ ತಪ್ಪು ಅಥವಾ ಚಿಕ್ಕ ತಪ್ಪನ್ನೇ ಮಾಡಿದ್ರು ಕೂಡ ಅವರಿಗೆ ಶಿಕ್ಷೆ ಕೊಡೋದಕ್ಕೆ ಹಿಂಜರಿಯುತ್ತಾರೆ.
ತುಲಾ ರಾಶಿ
ತುಲಾ ರಾಶಿಯ ಪೋಷಕರು ಕೂಡ ಸೌಮ್ಯ ಸ್ವಭಾವದವರು ಹಾಗೂ ಇವರು ಮಕ್ಕಳನ್ನು ತುಂಬಾನೇ ಪ್ರೀತಿಸುತ್ತಾರೆ. ಇವರು ಮಕ್ಕಳಿಗೆ ಹೀಗೆ ಇರಬೇಕು, ಇದೇ ನಿಯಮವನ್ನು ಪಾಲಿಸಬೇಕು ಎಂದು ಕಡಿವಾಣ ಹಾಕೋದಿಲ್ಲ. ಇವರು ಪೋಷಕರಾಗಿ ಮಕ್ಕಳ ಮೇಲೆ ಗದರೋದರ ಬದಲಾಗಿ ಅವರಿಗೆ ಒಬ್ಬ ಸ್ನೇಹಿತನಾಗಿ ಸಲಹೆಯನ್ನು ನೀಡುತ್ತಾರೆ. ಮಕ್ಕಳ ಮೇಲೆ ಯಾವ ರೀತಿಯ ಒತ್ತಡವನ್ನು ಇವರು ಹೇರೋದಿಲ್ಲ.
ಮಕರ ರಾಶಿ
ಮಕರ ರಾಶಿಯವರು ಮಕ್ಕಳ ಮೇಲೆ ಎಂದಿಗೂ ಅಧಿಕಾರವನ್ನು ಚಲಾಯಿಸೋದಿಲ್ಲ. ಇವರು ಮಕ್ಕಳಿಗೆ ಶಿಸ್ತಾಗಿ ಇರಬೇಕೆಂದು ಒತ್ತಡ ಹೇರೋದಿಲ್ಲ. ಬದಲಾಗಿ ಮಕ್ಕಳು ಅವರಿಷ್ಟದ ಹಾಗೆ ಇದ್ದು ಬಿಡಲು ಎಂದು ಬಿಟ್ಟು ಬಿಡುತ್ತಾರೆ. ಮನೆಯಲ್ಲಿ ಕೆಲವೊಂದು ನಿಯಮಗಳು ಇದ್ದರೂ ಕೂಡ ಮಕ್ಕಳು ಇದನ್ನು ಪಾಲಿಸಲೇಬೇಕು ಎಂದು ಇವರು ಒತ್ತಾಯ ಮಾಡೋದಿಲ್ಲ. ಮಕ್ಕಳು ಸ್ವತಂತ್ರವಾಗಿ ಇದ್ದು ಬಿಡಲಿ ಎಂದು ಇವರು ಬಯಸುತ್ತಾರೆ.



Click it and Unblock the Notifications
