Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಈ 5 ರಾಶಿಯವರು ತಾಳ್ಮೆಯಿಂದ ದೀರ್ಘಾವದಿ ಸಂಬಂಧ ಉಳಿಸಿಕೊಳ್ಳುತ್ತಾರೆ!
ಒಂದು ಸಂಬಂಧವನ್ನು ದೀರ್ಘಕಾಲಿಕವಾಗಿ ಉಳಿಸಿಕೊಂಡು ಹೋಗೋದಂದ್ರೆ ಸುಲಭದ ಮಾತಲ್ಲ. ಪ್ರತಿಯೊಬ್ಬರೂ ಪ್ರೀತಿಯಲ್ಲಿ ಬೀಳ್ತಾರೆ. ಆದ್ರೆ ಅದನ್ನು ಎಲ್ಲರೂ ಉಳಿಸಿಕೊಂಡು ಹೋಗೋದಿಲ್ಲ. ಕೆಲವೇ ಕೆಲವು ಜನ ಮಾತ್ರ ದೀರ್ಘಕಾಲಿಕವಾಗಿ ಸಂಬಂಧವನ್ನು ಉಳಿಸಿಕೊಂಡು ಕೊನೆಗೆ ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ.
ಸಂಬಂಧ ಎಂದ ಮೇಲೆ ಅಲ್ಲಿ ಜಗಳ ಮನಸ್ಥಾಪಗಳು ಇದ್ದೇ ಇರುತ್ತದೆ. ಆದರೆ ಅದನ್ನೆಲ್ಲಾ ನಿಭಾಯಿಸಿಕೊಂಡು ಹೋಗಬೇಕು. ಇದಕ್ಕೆಲ್ಲಾ ಮುಖ್ಯವಾಗಿ ಬೇಕಾಗಿರೋದು ತಾಳ್ಮೆ. ತಾಳ್ಮೆ ಒಂದಿದ್ದರೆ ಜಗತ್ತಿನಲ್ಲಿ ಏನನ್ನೂ ಬೇಕಾದರೂ ಗೆಲ್ಲೋದಕ್ಕೆ ಸಾಧ್ಯವಾಗುತ್ತದೆ. ಅಷ್ಟಕ್ಕು ಯಾವ ರಾಶಿಯವರಿಗೆ ಸಂಬಂಧದಲ್ಲಿ ತಾಳ್ಮೆ ಹೆಚ್ಚಾಗಿರುತ್ತದೆ ಅನ್ನೋದನ್ನು ತಿಳಿಯೋಣ.

1. ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ಸ್ಥಿರ ಮತ್ತು ವಿಶ್ವಾಸಾರ್ಹ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಸಂಬಂಧದ ವಿಚಾರಕ್ಕೆ ಬಂದರೆ ಇವರು ತುಂಬಾನೇ ತಾಳ್ಮೆಯಿಂದ ಇರುತ್ತಾರೆ. ಇವರ ಸಂಬಂಧದಲ್ಲಿ ಎಷ್ಟೇ ಸಮಸ್ಯೆ ಬಂದರೂ, ಸವಾಲುಗಳು ಎದುರಾದರೂ ಕೂಡ ಅದನ್ನು ಉಳಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗುತ್ತಾರೆ. ಈ ರಾಶಿಯವರು ತಮ್ಮ ಸಂಬಂಧದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳುತ್ತಾರೆ.
2. ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಭಾವನಾತ್ಮಕವಾಗಿ ಇರುತ್ತಾರೆ. ಯಾವುದೇ ವಿಚಾರದ ಬಗ್ಗೆ ಮಾತನಾಡಬೇಕಾದರೆ ಅರ್ಥಗರ್ಭಿತವಾಗಿ ಮಾತನಾಡುತ್ತಾರೆ. ಇವರು ತಮ್ಮ ಪ್ರೇಮಿಯಿಂದ ದೂರ ಇದ್ದರೂ ಆ ಸಂಬಂಧವನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ಸಮಸ್ಯೆಗಳು ಬಂದರೆ ಸರಿಪಡಿಸಿಕೊಂಡು ಮುನ್ನುಗ್ಗುತ್ತಾರೆ. ದೀರ್ಘಕಾಲದವರೆಗೆ ಸಂಬಂಧ ಉಳಿಸಿಕೊಳ್ಳೋದಕ್ಕೆ ಸಾಕಷ್ಟು ಶ್ರಮ ಹಾಕುತ್ತಾರೆ.
3. ಕನ್ಯಾ ರಾಶಿ
ಕನ್ಯಾ ರಾಶಿಯವರು ಸಂಬಂಧದಲ್ಲಿ ತುಂಬಾನೇ ತಾಳ್ಮೆಯಿಂದ ಇರುತ್ತಾರೆ. ಇವರ ಸಂಬಂಧದಲ್ಲಿ ಏನೇ ಸಮಸ್ಯೆ ಬಂದರೂ ಕೂಡ ಅದನ್ನು ಬಗೆಹರಿಸಿ ಸಂಗಾತಿಯ ಜೊತೆಗೆ ಚೆನ್ನಾಗಿ ಇರುತ್ತಾರೆ. ಈ ರಾಶಿಯವರು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದ್ದಾರೆ. ಸಂಬಂಧದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ. ದೀರ್ಘಾವಧಿಯ ಸಂಬಂಧದಲ್ಲಿ ತಾಳ್ಮೆಯಿಂದಿರಲು ಮತ್ತು ಬದ್ಧವಾಗಿರುತ್ತಾರೆ.
4. ಮಕರ ರಾಶಿ
ಮಕರ ರಾಶಿಯವರು ಮಹತ್ವಾಕಾಂಕ್ಷೆಯುಳ್ಳವರಾಗಿದ್ದಾರೆ. ಇವರು ಸಂಬಂಧಗಳನ್ನು ತುಂಬಾನೇ ತಾಳ್ಮೆಯಿಂದ ನಿಭಾಯಿಸುತ್ತಾರೆ. ಯಶಸ್ಸು ಮತ್ತು ಬೆಳವಣಿಗೆಗೆ ಸಮಯ ಮತ್ತು ಶ್ರಮ ಬೇಕಾಗುತ್ತದೆ ಎಂದು ಅವರು ಅರ್ಥಮಾಡಿಕೊಂಡಿರುತ್ತಾರೆ. ಮತ್ತು ತಮ್ಮ ಗುರಿಗಳನ್ನು ಸಾಧಿಸುವತ್ತ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಮಾಡುವ ಪ್ರತಿಯೊಂದು ಕೆಲಸದಲ್ಲೂ ಶಿಸ್ತನ್ನು ಅಳವಡಿಸಿಕೊಂಡಿರುತ್ತಾರೆ. ಇದು ದೀರ್ಘಾವಧಿಯ ಸಂಬಂಧದಲ್ಲಿ ತಾಳ್ಮೆಯಿಂದಿರಲು ಮತ್ತು ಸಮರ್ಪಿತವಾಗಿರಲು ಸಹಾಯ ಮಾಡುತ್ತದೆ.
5. ಮೀನ ರಾಶಿ
ಮೀನ ರಾಶಿಯವರು ತಮ್ಮ ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಹಾಗೂ ಸಂಗಾತಿ ತಪ್ಪು ಮಾಡಿದಾಗ ಅವರನ್ನು ತಿದ್ದಿ ನಡೆಸುವ ಗುಣವನ್ನು ಹೊಂದಿದ್ದಾರೆ. ಇವರಿಗಿರುವ ತಾಳ್ಮೆಯಿಂದಾಗಿ ಇವರು ತಮ್ಮ ಸಂಬಂಧವನ್ನು ದೀರ್ಘ ಕಾಲದವರೆಗೂ ಉಳಿಸಿಕೊಂಡು ಹೋಗುತ್ತಾರೆ. ಸಂಗಾತಿಗೆ ಪ್ರೋತ್ಸಾಹ ನೀಡುತ್ತಾ ಅವರಿಗೆ ಸಹಾಯವಾಗಿ ನಿಲ್ಲತ್ತಾರೆ.



Click it and Unblock the Notifications
