Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 5 ರಾಶಿಯವರು ಫ್ಯಾಷನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ!
ಈ ಮಾರ್ಡನ್ ಜಗತ್ತಿನಲ್ಲಿ ಫ್ಯಾಷನ್ ಗೆ ಏನು ಕಡಿಮೆ ಇಲ್ಲ. ಪ್ರತಿ ದಿನ ಸಾವಿರಾರು ಫ್ಯಾಷನ್, ಟ್ರೆಂಡ್ ಗಳು ಈ ಜಗತ್ತಿಗೆ ಕಾಲಿಡುತ್ತಲೇ ಇರುತ್ವೆ. ಅದ್ರಲ್ಲೂ ಅನೇಕರಂತೂ ಈ ಫ್ಯಾಷನ್ ನ ಹಿಂದೆ ಬಿದ್ದವರೇ. ಆದ್ರೆ ಹೆಚ್ಚಿನ ಜನ ಈ ಫ್ಯಾಷನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ.

ತಮಗೆ ಯಾವ ಫ್ಯಾಷನ್ ಇಷ್ಟ ಆಗುತ್ತೋ ಅಂತಹದ್ದೇ ಬಟ್ಟೆಗಳನ್ನು ಧರಿಸುತ್ತಾರೆ. ಅಷ್ಟಕ್ಕೂ ಯಾವ ರಾಶಿಯವರು ಫ್ಯಾಷನ್ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಆದ ಫ್ಯಾಷನ್ ಟ್ರೆಂಡ್ ಅನ್ನು ಫಾಲೋ ಮಾಡ್ತಾರೆ ಅನ್ನೋದನ್ನು ತಿಳಿಯೋಣ.
ಧನು ರಾಶಿ
ಪ್ರಾಯೋಗಿಕತೆಯೇ ಧನು ರಾಶಿಯವರ ಫ್ಯಾಷನ್ ಮಂತ್ರವಾಗಿದೆ. ಈ ರಾಶಿಯವರು ಕನ್ನಡಿಯ ಮುಂದೆ ಗಂಟೆ ಗಟ್ಟಲೇ ಕಳೆಯೋದಕ್ಕೆ ಇಷ್ಟ ಪಡೋದಿಲ್ಲ. ಈಗೀನ ಫ್ಯಾಷನ್ ಟ್ರೆಂಡ್ ಬಗ್ಗೆ ಇವರು ತಲೆ ಕೆಡಿಸಿಕೊಳ್ಳೋದಿಲ್ಲ. ಇವರು ಯಾವಾಗಲೂ ನಿರಾಂತಕವಾಗಿ ಇರುತ್ತಾರೆ. ತಮಗೆ ಇಷ್ಟವಾಗಿರೋ ಫ್ಯಾಷನ್ ಟ್ರೆಂಡ್ ಗಳನ್ನೇ ಇವರು ಫಾಲೋ ಮಾಡೋದು. ಹೆಚ್ಚು ಆಡಂಬರದ ಅವಶ್ಯಕತೆ ಇವರಿಗೆ ಇರೋದಿಲ್ಲ.
ಕುಂಭ ರಾಶಿ
ಕುಂಭ ರಾಶಿಯವರು ಫ್ಯಾಷನ್ ಟ್ರೆಂಡ್ ಅನುಸರಿಸದೇ ಇದ್ದರೂ ಇವರು ಫಾಲೋ ಮಾಡುವ ಫ್ಯಾಷನ್ ಜನರಿಗೆ ಇಷ್ಟ ಆಗೋ ರೀತಿಯಲ್ಲಿ ಇರುತ್ತದೆ. ಯಾರನ್ನೂ ಕೂಡ ಅನುಕರಣೆ ಮಾಡೋದಕ್ಕೆ ಇವರು ಹೋಗೋದಿಲ್ಲ. ವಿಂಟೇಜ್ ಶೈಲಿಯ ಬಟ್ಟೆಗಳನ್ನು ಧರಿಸಿದರೂ ಕೂಡ ಇವರು ಸುಂದರವಾಗಿ ಕಾಣಿಸಿಕೊಳ್ಳುತ್ತಾರೆ. ಫ್ಯಾಷನ್ ಅನ್ನೋದು ಅಷ್ಟೊಂದು ಮುಖ್ಯವಲ್ಲ ಅಂತ ಇವರು ನಂಬಿಕೊಂಡು ಇರುತ್ತಾರೆ.
ಮಕರ ರಾಶಿ
ಕರ್ಕಾಟಕ ರಾಶಿಯವರು ಗುಣಮಟ್ಟದ ಉಡುಪುಗಳನ್ನೇ ಧರಿಸುತ್ತಾರೆ. ಫ್ಯಾಷನ್ ಗೆ ಇವರು ಹೆಚ್ಚಿನ ಆಧ್ಯತೆಯನ್ನು ನೀಡದಿದ್ದರೂ ಕೂಡ ಉಡುಪಿನ ಗುಣಮಟ್ಟದ ವಿಚಾರದಲ್ಲಿ ಕಾಂಪ್ರಮೈಸ್ ಆಗೋದಿಲ್ಲ. ನಾನು ಹಾಕುವ ಬಟ್ಟೆಯ ಬಗ್ಗೆ ಬೇರೆಯವರು ಏನು ಅನ್ನುತ್ತಾರೋ ಅನ್ನೋದ್ರ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲ ಇವರು. ತಮಗೇನು ಇಷ್ಟವೋ ಅಂತಹದ್ದೇ ಬಟ್ಟೆಯನ್ನು ಧರಿಸಿ, ಅದ್ರಲ್ಲೇ ಖುಷಿ ಕಂಡುಕೊಳ್ಳುತ್ತಾರೆ.
ಕರ್ಕಾಟಕ ರಾಶಿ
ವಾರ್ಡ್ ರೋಬ್ ತುಂಬಾ ಬಟ್ಟೆ ಇಡುವವರಲ್ಲ ಇವರು. ಫ್ಯಾಷನ್ ಬಗ್ಗೆ ತಲೆಕೆಡಿಸಿಕೊಳ್ಳೋದಕ್ಕೆ ಹೋಗದೇ ಕೆಲವೇ ಕೆಲವು ಸೀಮಿತ ಬಟ್ಟೆಗಳನ್ನು ಮಾತ್ರ ಧರಿಸುತ್ತಾರೆ. ಫ್ಯಾಷನ್ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲದ ಇವರು ಬಟ್ಟೆಯ ವಿಚಾರದಲ್ಲಿ ಶಿಸ್ತನ್ನು ಪಾಲಿಸುತ್ತಾರೆ. ಫ್ಯಾಷನ್ ಗೆ ಗೀಳಿಗೆ ಬಿದ್ದು ಸಿಕ್ಕ ಸಿಕ್ಕ ಬಟ್ಟೆ ಹಾಕಿಕೊಳ್ಳುವವರ ಮಧ್ಯೆ ನಿಜವಾಗಿಯೂ ಇವರು ಅಪರೂಪದಲ್ಲಿ ಅಪರೂಪ ಅನ್ನಿಸಿಕೊಳ್ಳುತ್ತಾರೆ.
ಮೇಷ ರಾಶಿ
ಮೇಷ ರಾಶಿಯವರು ಸಹಾಯಮಯ ಜೀವಿಗಳು. ಈ ರಾಶಿಯವರು ಕ್ರೀಡಾ ಉಡುಪಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋದಕ್ಕೆ ಇಷ್ಟ ಪಡುತ್ತಾರೆ. ಕ್ರೀಡಾ ಕ್ಷೇತ್ರದ ಬಗ್ಗೆ ಅತಿಯಾದ ಆಸಕ್ತಿಯನ್ನು ಹೊಂದಿರುತ್ತಾರೆ. ಅಂತವರು ಫ್ಯಾಷನ್ ಬಗ್ಗೆ ಹೆಚ್ಚು ಗಮನ ಕೊಡೋದಕ್ಕೆ ಇಷ್ಟ ಪಡೋದಿಲ್ಲ. ಇತ್ತೀಚಿನ ಟ್ರೆಂಡ್ ಅವರಿಗೆ ಅವಶ್ಯಕತೆ ಇರೋದಿಲ್ಲ. ತಮಗಿಷ್ಟ ಬಂದ ಉಡುಪುಗಳನ್ನು ಧರಿಸಿ ಖುಷಿಯಾಗಿ ಇರುತ್ತಾರೆ.



Click it and Unblock the Notifications