Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಈ ರಾಶಿಯ ಮಕ್ಕಳನ್ನು ಬೆಳೆಸೋದು ಪೋಷಕರಿಗೆ ದೊಡ್ಡ ತಲೆನೋವು!
ಈ ಪ್ರಪಂಚದಲ್ಲಿರುವ ಎಲ್ಲಾ ಮಕ್ಕಳ ಗುಣ ಒಂದೇ ರೀತಿ ಇರೋದಿಲ್ಲ. ಒಬ್ಬೊಬ್ಬರು ಒಂದೊಂದು ಗುಣವನ್ನು ಹೊಂದಿರುತ್ತಾರೆ. ಎಲ್ಲಾ ಮಕ್ಕಳಲ್ಲೂ ಮುಗ್ಧತೆ ಇರುತ್ತದೆ. ಆದರೆ ಕೆಲವು ಮಕ್ಕಳು ಮೃದು ಸ್ವಭಾವ ಹೊಂದಿದ್ದರೆ ಇನ್ನೂ ಕೆಲವು ಮಕ್ಕಳು ತುಂಬಾನೇ ಹಠ ಮಾರಿಗಳು. ಪೋಷಕರ ಮಾತನ್ನೇ ಕೇಳುವುದಿಲ್ಲ. ಹೀಗಾಗಿ ಕೆಲವು ಮಕ್ಕಳನ್ನು ನಿಭಾಯಿಸೋದು ತುಂಬಾನೇ ಕಷ್ಟ. ಅದ್ರಲ್ಲೂ ಈ ರಾಶಿಯ ಮಕ್ಕಳನ್ನೂ ಸಾಕುವುದು ಪೋಷಕರಿಗೆ ಒಂದು ರೀತಿಯ ತಲೆನೋವೇ ಸರಿ. ಅಷ್ಟಕ್ಕು ಯಾವ ರಾಶಿಯ ಮಕ್ಕಳನ್ನು ನಿಭಾಯಿಸೋದು ಕಷ್ಟ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯ ಮಕ್ಕಳು ಅತ್ಯಂತ ಮಹತ್ವಾಕಾಂಕ್ಷೆಯುಳ್ಳವರು ಮತ್ತು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಈ ರಾಶಿಯವರಿಗೆ ಮೊಂಡುತನ ಹೆಚ್ಚು ಹಾಗೂ ಇವರನ್ನು ನಿಭಾಯಿಸೋದು ತುಂಬಾನೇ ಕಷ್ಟ. ಇವರು ಬೇರೆಯವರ ಮಾರ್ಗದರ್ಶನ ಕೇಳೋದಿಲ್ಲ. ತಮ್ಮ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ. ಇವರಿಗೆ ತಾಳ್ಮೆ ಕಡಿಮೆ ಇರೋದ್ರಿಂದ ಇವರನ್ನು ನಿಭಾಯಿಸೋದು ಕಷ್ಟ.

ವೃಷಭ ರಾಶಿ
ವೃಷಭ ರಾಶಿಯ ಮಕ್ಕಳು ತುಂಬಾನೇ ಹಠಮಾರಿಗಳು ಇವರು ತಮ್ಮ ಕಂಫರ್ಟ್ ಝೋನ್ ನಲ್ಲಿ ವಾಸಿಸೋದಕ್ಕೆ ಇಷ್ಟ ಪಡುತ್ತಾರೆ. ತಮ್ಮ ವೈಯಕ್ತಿಕ ವಿಚಾರಗಳಿಗೆ ಬೇರೆಯವರು ಮೂಗು ತೂರಿಸೋದು ಇವರಿಗೆ ಇಷ್ಟ ಆಗೋದಿಲ್ಲ. ಪೋಷಕರು ಅಥವಾ ಯಾರೇ ಆಗಲಿ ಇವರ ಕೆಲಸಗಳಿಗೆ ಅಡ್ಡಿ ಪಡಿಸಿದರೆ ಇವರಿಗೆ ಇಷ್ಟ ಆಗೋದಿಲ್ಲ. ಈ ರಾಶಿಯ ಮಕ್ಕಳು ಸುಲಭವಾಗಿ ಯಾರ ಮಾತನ್ನು ಕೇಳದಿರೋದ್ರಿಂದ ಇವರನ್ನು ನಿಭಾಯಿಸೋದು ಕೊಂಚ ಕಷ್ಟ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಯಾವಾಗಲೂ ಪರಿಪೂರ್ಣರಾಗಿರಲು ಬಯಸುತ್ತಾರೆ. ಈ ರಾಶಿಗೆ ಸೇರಿದ ಮಕ್ಕಳು ಒಂದು ಶ್ರೇಷ್ಠತೆ ಗುರಿಯನ್ನು ಹೊಂದಿರುತ್ತಾರೆ. ಇವರು ಒಂದು ಸಾರಿ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಇಡೋದೇ ಇಲ್ಲ. ತಮ್ಮ ಗುರಿಯನ್ನು ಸಾಧಿಸುವವರೆಗೂ ಕಠಿಣ ಪ್ರಯತ್ನವನ್ನು ಇವರು ಮಾಡುತ್ತಾರೆ. ಈ ಸಂದರ್ಭದಲ್ಲಿ ಅವರ ಗುರಿ ಸಾಧನೆಗೆ ಯಾರೇ ಅಡ್ಡ ಬಂದರೂ ಇವರು ಕೇಳೋದಿಲ್ಲ. ಅಷ್ಟು ಹಠಮಾರಿಗಳಾಗಿರುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಕ್ಕಳ ತುಂಬಾನೇ ಹಠ ಮಾರಿಗಳು ತಮ್ಮ ದಾರಿಗೆ ಯಾರೇ ಅಡ್ಡ ಬಂದರೂ ಕೂಡ ಇವರು ಸಹಿಸೋದಿಲ್ಲ. ಅವರ ಅಭಿಪ್ರಾಯಗಳು, ಗುರಿಗಳು ಸರಿಯಾಗಿರುತ್ತದೆ. ಆದರೆ ಪೋಷಕರಾಗಿ ನೀವು ಅದಕ್ಕೆ ಅಡ್ಡ ಬಂದರೆ ಖಂಡಿತ ಅವರು ಸಹಿಸೋದಿಲ್ಲ. ಮತ್ತು ಈ ರಾಶಿಯವರು ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳೋದಿಲ್ಲ. ಪೋಷಕರ ಮಾತು ಕೇಳದೇ ಇರೋದ್ರಿಂದ ಅವರಿಗೆ ಕೊಂಚ ಅಸಮಾಧಾನ ಉಂಟಾಗುತ್ತದೆ.
ಕುಂಭ ರಾಶಿಯವರು ಯಾರ ಬಂಧನದಲ್ಲಿ ಇರೋದಕ್ಕೆ ಇಷ್ಟ ಪಡೋದಿಲ್ಲ. ಅವರ ಮೇಲೆ ನಿಯಮಗಳನ್ನು ಹಾಕಿ ಮಿತಿ ಹೇರಿದರೆ ಅವರು ಖಂಡಿತ ಅದಕ್ಕೆ ಬಗ್ಗುವವರಲ್ಲ. ಅವರ ಸ್ವಾತಂತ್ರಕ್ಕೆ ಪೋಷಕರು ಅಡ್ಡ ಪಡಿಸಿದರೆ ಅದು ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಅವರು ನಿಮ್ಮಿಂದ ದೂರವಾಗುವ ಸಾಧ್ಯತೆ ಇರುತ್ತದೆ.



Click it and Unblock the Notifications