Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ ರಾಶಿಯ ಪುರುಷರು ಆದರ್ಶ ಪತಿಯಾಗುತ್ತಾರಂತೆ!
ಅನೇಕ ಜನ ಪುರುಷರಿಗೆ ಮದುವೆಯಾದ ಮೇಲೆ ನಾವು ಮಹಿಳೆಯರಿಗಿಂತ ಒಂದು ಕೈ ಮೇಲೆ ಎಂದು ಅಂದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ಪುರುಷರಿಗೆ ಅಹಂ ಅನ್ನೋದು ಇರೋದಿಲ್ಲ. ಅವರು ಸರಳವಾಗಿ ಇದ್ದು ಬಿಡುತ್ತಾರೆ. ಅವರು ತಮ್ಮ ಸಂಗಾತಿಯನ್ನು ಪ್ರೀತಿಸುವ ಮತ್ತು ಕಾಳಜಿ ವಹಿಸುವ ಗುಣ ನಿಜವಾಗಿಯೂ ಪ್ರಶಂಸನೀಯವಾಗಿದೆ.
ತಾಳ್ಮೆ, ಪ್ರಾಮಾಣಿಕತೆ, ಸಹಾನುಭೂತಿ ಮತ್ತು ತಿಳುವಳಿಕೆ ಅವರಲ್ಲಿ ಹೆಚ್ಚಾಗಿರುತ್ತದೆ. ಇವರು ಪತ್ನಿಗೆ ತಕ್ಕ ಪತಿ ಅನ್ನಿಸಿಕೊಳ್ಳುತ್ತಾರೆ. ಅಷ್ಟಕ್ಕು ಯಾವೆಲ್ಲಾ ರಾಶಿಯ ಪುರುಷರು ಆದರ್ಶ ಪತಿಯರಾಗಿ ಇರುತ್ತಾರೆ ಅನ್ನೋದನ್ನು ನೋಡೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಪುರುಷರು ಪತ್ನಿ ವಿಚಾರದಲ್ಲಿ ಅತಿಯಾಗಿ ಕಾಳಜಿ ಮಾಡುತ್ತಾರೆ. ಈ ರಾಶಿಯವರು ಕುಟುಂಬಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಇವರು ಪತ್ನಿಗೆ ಯಾವುದೇ ರೀತಿ ನೋವಾಗದಂತೆ ಅವರು ಸಂತೋಷವಾಗಿಡಬೇಕೆಂದು ಬಯಸುತ್ತಾರೆ. ಪತ್ನಿ ಖುಷಿಯಲ್ಲಿಯೇ ತಮ್ಮ ಖುಷಿಯನ್ನು ಕಾಣುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಪುರುಷರು ತಮ್ಮ ಪತ್ನಿ ಅಗತ್ಯತೆಗಳಿಗೆ ಗಮನ ಹರಿಸುತ್ತಾರೆ. ಅವರ ಸಂತೋಷಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡೋದಕ್ಕೆ ಸಿದ್ಧವಿರುತ್ತಾರೆ. ಇವರು ಹೆಂಡತಿಯ ಜೊತೆಗೆ ತಮ್ಮ ವಿಶ್ವಾಸವನ್ನೂ ಎಂದಿಗೂ ಕಳೆದುಕೊಳ್ಳುವುದಿಲ್ಲ. ಹೆಂಡತಿಯ ಬೇಕು ಬೇಡಗಳನ್ನು ವಿಚಾರಿಸುತ್ತಾರೆ. ಹಾಗೂ ಅವರಿಗೆ ಬೇಕಾದುದನ್ನು ತಂದುಕೊಡುತ್ತಾರೆ.
ತುಲಾ ರಾಶಿ
ತುಲಾ ರಾಶಿಯ ಪುರುಷರಿಗೆ ಸಂಬಂಧದಲ್ಲಿ ಸಾಮರಸ್ಯ ಇಷ್ಟ ಆಗೋದಿಲ್ಲ. ಇವರು ರಾಜ ತಾಂತ್ರಿಕವಾಗಿ ಯೋಚಿಸುತ್ತಾರೆ. ಮತ್ತು ನ್ಯಾಯ ಯೋಚಿತ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಪತಿ - ಪತ್ನಿಯ ನಡುವೆ ಏನೇ ಜಗಳ ನಡೆದರೂ ಕೂಡ ಮೊದಲಿಗೆ ಇವರೇ ಹೋಗಿ ರಾಜಿ ಮಾಡಿಕೊಳ್ಳುತ್ತಾರೆ. ಇನ್ನೂ ಈ ರಾಶಿಯವರು ಹೆಂಡತಿಗೆ ಬೆಂಬಲವಾಗಿ ನಿಲ್ಲುತ್ತಾರೆ.
ವೃಶ್ಚಿಕ ರಾಶಿ
ಈ ರಾಶಿಯ ಪುರುಷರು ಹೆಂಡತಿಯ ಜೊತೆಗೆ ಅನ್ಯೋನ್ಯವಾಗಿರುತ್ತಾರೆ. ಹೆಂಡತಿಗೆ ಗೌರವ ನೀಡುವುದು ಮಾತ್ರವಲ್ಲದೇ ಅವರ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಇವರು ತಮ್ಮ ಹೆಂಡತಿಗೆ ನಿಷ್ಠಾವಂತರಾಗಿರುತ್ತಾರೆ. ರಕ್ಷಣಾತ್ಮಕ ಪ್ರವೃತ್ತಿಯನ್ನು ಇವರು ಹೊಂದಿರುತ್ತಾರೆ. ಇನ್ನೂ ಹೆಂಡತಿಯ ಸಾಧನೆಗೆ ಇವರು ಹೆಗಲಾಗಿ ನಿಲ್ಲುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಸಹಾನುಭೂತಿಯುಳ್ಳರಾಗಿರುತ್ತಾರೆ. ಇವರು ತಮ್ಮ ಪತ್ನಿಗೆ ಭಾವನಾತ್ಮಕ ಬೆಂಬಲ ನೀಡುತ್ತಾರೆ. ಇವರು ಪ್ರೀತಿಪಾತ್ರರ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ. ಎಂತಹದ್ದೇ ಪರಿಸ್ಥಿತಿ ಬಂದರೂ ಕೂಡ ಇವರು ತಮ್ಮ ಪತ್ನಿಯನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಪ್ರತಿಯೊಂದು ಹೆಜ್ಜೆಯಲ್ಲೂ ಪತ್ನಿಗೆ ಬೆಂಬಲ ನೀಡುತ್ತಾರೆ.



Click it and Unblock the Notifications
