Latest Updates
-
ಮಳೆಗಾಲದ ಬೆಳಗಿನ ವರ್ಕೌಟ್: ನಿಮ್ಮ ಪ್ಲಾನ್ ಉಲ್ಟಾಪಲ್ಟಾ ಆಗದಿರಲಿ, ಈ ಮುನ್ನೆಚ್ಚರಿಕೆ ಮರೆಯದಿರಿ! -
ಲಿವ್-ಇನ್ ಸಂಬಂಧ ಮುರಿದರೆ ಕ್ರಿಮಿನಲ್ ಕೇಸ್? ಸುಪ್ರೀಂ ಕೋರ್ಟ್ನಿಂದ ಬಂತು ಬಿಗ್ ಶಾಕ್! -
ಉರಿಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಹೀಟ್ ವೇವ್ ಎಚ್ಚರಿಕೆ: ಬಿಸಿಲಿನ ಬೇಗೆಯಿಂದ ಬಚಾವಾಗಲು ಈ ಪಾನೀಯಗಳೇ ಮದ್ದು! -
ಅನುಷ್ಕಾ ಶರ್ಮಾ ಐಪಿಎಲ್ ಲುಕ್: ಸಿಂಪಲ್ ಡ್ರೆಸ್ನಲ್ಲೇ ಮ್ಯಾಜಿಕ್ ಮಾಡಿದ್ದು ಹೇಗೆ? -
ಬಿಸಿಗಾಳಿ ಎಚ್ಚರಿಕೆ: ಏಪ್ರಿಲ್ ಬಿಸಿಲಿನಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಾಯಿಸುವುದು ಹೇಗೆ? -
ಪೊಲೀಸ್ ಕಿರುಕುಳದಿಂದ ಬೇಸತ್ತಿದ್ದೀರಾ? ಪ್ರೇಮಿಗಳಿಗೆ ರಕ್ಷಣೆ ನೀಡಲು ಹೈಕೋರ್ಟ್ ಕೊಟ್ಟಿದೆ ಬಿಗ್ ರಿಲೀಫ್! -
ಬಿಸಿಲ ಬೇಗೆಯಿಂದ ತತ್ತರಿಸಿದೆಯೇ? ನಿಮ್ಮ ಮನೆ ಮತ್ತು ಗಿಡಗಳನ್ನು ತಂಪಾಗಿರಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಸರಳ ಟಿಪ್ಸ್ ಪಾಲಿಸಿ: ಸುಡುವ ಬಿಸಿಲಿನಲ್ಲಿ ಆರೋಗ್ಯವಾಗಿರುವುದು ಹೇಗೆ? -
ಸುಡುವ ಬಿಸಿಲಿಗೆ ಸುಸ್ತಾದ್ರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ಕೂಲಿಂಗ್ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 5 ರಾಶಿಯವರು ಪ್ರಾಮಾಣಿಕರು, ನಿಷ್ಠಾವಂತರೂ ಆಗಿರುತ್ತಾರೆ!
ಈ ಜಗತ್ತಿನಲ್ಲಿ ನಮಗೆ ನಂಬಿಕಸ್ಥ ವ್ಯಕ್ತಿಗಳು ಸಿಗುವುದು ತುಂಬಾನೇ ವಿರಳ. ಈ ಕಲಿಗಾಲದಲ್ಲಿ ಸತ್ಯವಂತರೇ ಇಲ್ಲದಂತಾಗಿದ್ದಾರೆ. ಎಲ್ಲಾ ಕಡೆಯೂ ಕಪಟ ಮೋಸ, ಸುಳ್ಳು ಹೇಳುವ, ವಂಚನೆ ಮಾಡೋ ಜನರೇ ತುಂಬಿ ಹೋಗಿದ್ದಾರೆ. ಅಂತವರ ಮಧ್ಯೆ ಕೂಡ ಕೆಲವೇ ಕೆಲವು ಜನ ಚಿನ್ನದಂತಹ ವ್ಯಕ್ತಿಗಳು ನಮಗೆ ಕಾಣ ಸಿಗುತ್ತಾರೆ.

ಇವರ ಮನಸ್ಸು ಚಿನ್ನದಷ್ಟೇ ಪರಿಶುದ್ಧವಾಗಿರುತ್ತದೆ. ಇಂತವರನ್ನು ನಂಬಿ ಯಾವ ಕೆಲಸವನ್ನಾದರೂ ಮಾಡಬಹುದು ಅನ್ನೋ ವಿಶ್ವಾಸ ನಮಗೆ ಮೂಡುತ್ತದೆ. ಅಷ್ಟಕ್ಕೂ ಯಾವೆಲ್ಲಾ ರಾಶಿಯವರು ಪ್ರಮಾಣಿಕವಾಗಿರುತ್ತಾರೆ ಮತ್ತು ನಂಬಿಕಸ್ಥರೆನಿಸಿಕೊಳ್ಳುತ್ತಾರೆ ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ವೃಷಭ ರಾಶಿಯವರು ನಿಷ್ಠಾವಂತ ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಈ ರಾಶಿಯವರು ಅಚಲ ಬದ್ಧತೆ ಮತ್ತು ನಿರ್ಣಯಕ್ಕೆ ಹೆಸರುವಾಸಿಯಾಗಿರುತ್ತಾರೆ. ವೃಷಭ ರಾಶಿಯವರು ಯಾರಿಗಾದರೂ ಮಾತು ಕೊಟ್ಟರೆ ಅದನ್ನು ಖಂಡಿತ ನಡೆಸಿ ಕೊಡುತ್ತಾರೆ. ಸಂಬಂಧಗಳನ್ನು ಉತ್ತಮವಾಗಿ ಕೊನೆಯವರೆಗೂ ಕಾಪಾಡಿಕೊಳ್ಳುವ ಗುಣ ಇವರಲ್ಲಿರುತ್ತದೆ. ಇವರು ತಮ್ಮ ನಿಷ್ಠೆಗೆ ಹೆಸರುವಾಸಿಯಾಗಿರುತ್ತಾರೆ. ಈ ರಾಶಿಯವರು ಪ್ರತಿಯೊಬ್ಬರಿಗೂ ಮಾದರಿ ಎನ್ನುವಂತೆ ಬದುಕುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯನ್ನು ಚಂದ್ರನು ಆಳುತ್ತಿದ್ದಾನೆ. ಇವರು ನಿಷ್ಠಾವಂತರಾಗಿ ಇರುತ್ತಾರೆ. ಈ ರಾಶಿಯವರು ಸಂಬಂಧಗಳನ್ನು ಕೊನೆಯವರೆಗೂ ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಅಷ್ಟು ಸುಲಭವಾಗಿ ಸಂಬಂಧಗಳನ್ನು ಮುರಿದುಕೊಳ್ಳೋದಕ್ಕೆ ಅವಕಾಶ ನೀಡುವುದಿಲ್ಲ. ಬೇರೆಯವರ ಯೋಗಕ್ಷೇಮಕ್ಕಾಗಿ ಶ್ರಮಿಸುತ್ತಾರೆ. ಮತ್ತು ಇತರರ ಬಗ್ಗೆ ಸದಾ ಕಾಳಜಿಯನ್ನು ಹೊಂದಿರುವವರಾಗಿದ್ದಾರೆ. ತಮ್ಮ ಪ್ರೀತಿಪಾತ್ರರಿಗೆ ಸದಾ ಬೆಂಬಲವಾಗಿ ನಿಲ್ಲುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಆತ್ಮ ವಿಶ್ವಾಸ ಹೆಚ್ಚಾಗಿ ಇರುತ್ತದೆ. ಅಷ್ಟೇ ಅಲ್ಲದೇ, ಇವರು ನಿಷ್ಠಾವಂತರು ಹಾಗೂ ಕೆಲಸದಲ್ಲಿ ಶ್ರದ್ಧೆ ಹೊಂದಿರುವ ವ್ಯಕ್ತಿಗಳು ಆಗಿರುತ್ತಾರೆ. ಸಿಂಹ ರಾಶಿಯನ್ನು ಸೂರ್ಯನು ಆಳುತ್ತಿರೋದ್ರಿಂದ ತಮ್ಮ ಬಗ್ಗೆ ಇವರಿಗೆ ಅಪಾರವಾದ ಹೆಮ್ಮೆ ಇರುತ್ತದೆ. ಇವರ ಗುಣ ನೋಡಿ ಅನೇಕ ಜನ ಸ್ಫೂರ್ತಿ ಪಡೆದುಕೊಳ್ಳುತ್ತಾರೆ. ಇವರು ಸದಾ ತಾವು ಪ್ರೀತಿಸುವವರ ಪರವಾಗಿ ನಿಲ್ಲುತ್ತಾರೆ. ತಮ್ಮನ್ನು ನಂಬಿ ಬಂದವರನ್ನು ಅರ್ಧಕ್ಕೆ ಕೈ ಬಿಡುವವರಲ್ಲ.
ವೃಶ್ಚಿಕ ರಾಶಿ
ಈ ವೃಶ್ಚಿಕ ರಾಶಿಯವರು ತಮ್ಮ ಮಾತು ಹಾಗೂ ಬದ್ಧತೆಗೆ ಹೆಸರುವಾಸಿಯಾಗಿರುತ್ತಾರೆ. ಇವರು ನಂಬಿಕಸ್ಥರು ಹಾಗೆನೇ ನಿಷ್ಠಾವಂತರಾಗಿರುತ್ತಾರೆ. ಎಂತಹದ್ದೇ ಪರಿಸ್ಥಿತಿ ಬಂದರೂ ಕೂಡ ಬದುಕಿನಲ್ಲಿ ನಂಬಿಕೆ, ನಿಷ್ಠೆಯನ್ನು ಬಿಟ್ಟು ಬದುಕೋದಿಲ್ಲ. ಇತರರನ್ನು ಗೌರವಿಸುತ್ತಾರೆ. ಹಾಗೂ ಶ್ರಮಪಟ್ಟು ದುಡಿಯುತ್ತಾರೆ. ಇವರು ನಿಷ್ಠಾವಂತರೂ ಎಂದು ಮೇಲ್ನೋಟಕ್ಕೆ ಕಾಣಿಸದಿದ್ದರೂ ಕೂಡ ಅದು ಅವರ ಸ್ವಭಾವದ ಅವಿಭಾಜ್ಯ ಅಂಗವಾಗಿದೆ.
ಮಕರ ರಾಶಿ
ಮಕರ ರಾಶಿಯನ್ನು ಶನಿಯು ಆಳುತ್ತಿದ್ದಾನೆ. ಈ ರಾಶಿಯವರು ಜವಾಬ್ದಾರಿಯುತ ಹಾಗೂ ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಇವರು ಕೂಡ ಸಂಬಂಧಗಳಿಗೆ ತುಂಬಾನೇ ಬೆಲೆ ಕೊಡುತ್ತಾರೆ. ಹಾಗೂ ಅದನ್ನು ಕಡೆಯವರೆಗೂ ಉಳಿಸಿಕೊಂಡು ಹೋಗುತ್ತಾರೆ. ಒಂದು ಸಾರಿ ಅವರು ಯಾರನ್ನಾದರೂ ಸ್ನೇಹಿತ ಅಂತ ಒಪ್ಪಿಕೊಂಡರೆ ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಅವರನ್ನು ಕೈ ಬಿಡೋದಿಲ್ಲ. ಇವರ ನಿಷ್ಠೆ ನಿರಂತರ ಹಾಗೂ ಅಚಲವಾಗಿರುತ್ತದೆ.



Click it and Unblock the Notifications