ಈ 5 ರಾಶಿಯವರು ಇತರರನ್ನು ಮೂರ್ಖರನ್ನಾಗಿ ಮಾಡುತ್ತಾರೆ!

ಈ ಜಗತ್ತಿನಲ್ಲಿ ಅನೇಕರು ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ರೆ. ಇನ್ನೂ ಕೆಲವರಿಗೆ ಬೇರೆಯವರ ಜೀವನದಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ. ಬೇರೆಯವರು ಏನು ಮಾಡುತ್ತಿದ್ದಾರೆ? ಅವರ ಜೀವನದಲ್ಲಿ ಏನಾಗ್ತಿದೆ? ಅನ್ನೋದನ್ನು ತಿಳಿದುಕೊಳ್ಳೋದ್ರಲ್ಲೇ ಜೀವನ ಕಳೆಯುತ್ತಾರೆ.

Zodiac Signs Who Are Good At Making Fool of Others in Kannada.

ಅಷ್ಟೇ ಅಲ್ಲದೇ ಬೇರೆಯವರನ್ನು ಮೂರ್ಖರನ್ನು ಮಾಡೋದ್ರಲ್ಲೇ ಇವರು ಖುಷಿ ಪಡುತ್ತಾರೆ. ಅಷ್ಟಕ್ಕೂ ಬೇರೆಯವರನ್ನು ಮೂರ್ಖರನ್ನಾಗಿ ಮಾಡಿ ಖುಷಿ ಪಡುವ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಮಿಥುನ ರಾಶಿ

ಮಿಥುನ ರಾಶಿಯವರು ತಮ್ಮ ತ್ವರಿತ ಬುದ್ಧಿವಂತಿಕೆ ಮತ್ತು ಬಹುಮುಖತೆಗೆ ಹೆಸರುವಾಸಿಯಾಗಿದ್ದಾರೆ. ವಿಭಿನ್ನ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವು ಇವರಲ್ಲಿದೆ. ಮಿಥುನ ರಾಶಿಯವರು ಕಥೆ ಹೇಳುವಿಕೆ ಮತ್ತು ಅನುಕರಣೆಯಲ್ಲಿ ಸ್ವಾಭಾವಿಕ ಪ್ರತಿಭೆಯನ್ನು ಹೊಂದಿರುತ್ತಾರೆ. ಎಷ್ಟು ದೊಡ್ಡ ಸುಳ್ಳನ್ನು ಕೂಡ ಸತ್ಯ ಎಂದು ನಂಬಿಸಿ ಇತರರನ್ನು ಸುಲಭವಾಗಿ ಮೂರ್ಖರನ್ನಾಗಿ ಮಾಡುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯವರಲ್ಲಿ ಸಾಮಾನ್ಯವಾಗಿ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ಉತ್ತಮವಾಗಿರುತ್ತದೆ. ಇವರು ಇತರರಿಗೆ ಮನೋರಂಜನೆಯನ್ನು ನೀಡುತ್ತಾರೆ. ಆದರೆ ಕೆಲವೊಂದು ಸಲ ಈ ಮನೋರಂಜನೆ ಮಿತಿ ಮೀರಿ ಇತರರಿಗೆ ನೋವುಂಟಾಗಬಹುದು. ಕೆಲವೊಂದು ಸಲ ಇವರ ಕುಚೇಷ್ಟೇ ಇತರರಿಗೆ ನೋವುಂಟು ಮಾಡಬಹುದು. ಅಷ್ಟೇ ಅಲ್ಲದೇ, ಇದು ಅವರ ಹತ್ತಿರ ಇರುವವರ ಮನಸ್ಸಿಗೆ ಘಾಸಿಯಾಗುವಂತೆ ಮಾಡುತ್ತದೆ.

ಧನು ರಾಶಿ

ಧನು ರಾಶಿಯವರು ವಿಶಿಷ್ಟವಾದ ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾರೆ. ಅದು ಸಾಮಾನ್ಯವಾಗಿ ಜನರನ್ನು ಸೆಳೆಯುತ್ತದೆ. ಅನಿರೀಕ್ಷಿತ ಸ್ಥಳಗಳಲ್ಲಿ ವಿನೋದವನ್ನು ಕಂಡುಕೊಳ್ಳುವ ಅವರ ಸಾಮರ್ಥ್ಯವು ಅನಿರೀಕ್ಷಿತ ಪಂಚ್‌ಲೈನ್‌ಗಳ ಮೂಲಕ ಎಲ್ಲರನ್ನು ಸೆಳೆಯುತ್ತಾರೆ. ಧನು ರಾಶಿಯವರು ಸಾಮಾನ್ಯ ಸನ್ನಿವೇಶಗಳಲ್ಲಿ ಇತರರ ಕಾಲೆಳೆಯೋದಕ್ಕೆ ಯತ್ನಿಸುತ್ತಾರೆ. ಇವರ ತಮಾಷೆ ಬೇರೆಯವರಿಗೆ ನೋವುಂಟು ಮಾಡುತ್ತದೆ.

ತುಲಾ ರಾಶಿ

ತುಲಾ ರಾಶಿಯವರು ಸಾಮರಸ್ಯದ ಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಮಾತಿನ ಮೂಲಕ ಇತರರಿಗೆ ಮನೋರಂಜನೆಯನ್ನು ನೀಡುತ್ತಾರೆ. ಇವರು ಮಾಡುವ ಕೀಟಲೆ, ಕುಚೇಷ್ಟೆಗಳು ಕೆಲವೊಂದು ಸಲ ಚೆನ್ನಾಗಿ ಅನ್ನಿಸಿದರೂ ಕೂಡ. ಇನ್ನೂ ಕೆಲವು ಸಲ ಮನಸ್ಸಿಗೆ ನೋವು ಮಾಡುತ್ತದೆ. ಬೇರೆಯವರಿಗೆ ನಗಿಸುವ ಭರದಲ್ಲಿ ಇವರು ತಮ್ಮವರ ಮನಸ್ಸಿಗೆ ನೋವು ಮಾಡುತ್ತಾರೆ.

ಕುಂಭ ರಾಶಿ

ಕುಂಭ ರಾಶಿಯವರು ತಮ್ಮ ಅಸಾಂಪ್ರದಾಯಿಕ ಚಿಂತನೆ ಮತ್ತು ಅನನ್ಯ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದ್ದಾರೆ. ಇವರು ಮಾಡುವ ಜೋಕ್‌ಗಳು ಮತ್ತು ಹಾಸ್ಯದ ಅವಲೋಕನಗಳು ಸಾಮಾನ್ಯವಾಗಿ ಜನರನ್ನು ಸೆಳೆಯುತ್ತವೆ. ಕುಂಭ ರಾಶಿಯವರು ಜಗತ್ತನ್ನು ವಿಭಿನ್ನ ಕೋನದಿಂದ ನೋಡುವ ಅಪರೂಪದ ಸಾಮರ್ಥ್ಯವನ್ನು ಹೊಂದಿದ್ದಾರೆ. ಕೆಲವೊಂದು ಬಾರಿ ಇವರು ಮಾಡುವ ಜೋಕ್ಸ್ ಗಳು ಇತರರನ್ನು ಪೀಕಲಾಟಕ್ಕೆ ಸಿಲುಕಿಸುತ್ತದೆ.

English summary

Zodiac Signs Who Are Good At Making Fool of Others in Kannada.

These Zodiac Signs Who Are Good At Making Fool of Others. Read more.
Story first published: Saturday, September 2, 2023, 8:00 [IST]
X
Desktop Bottom Promotion