Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 7 ರಾಶಿಯವರು ಮುಖಕ್ಕೆ ಹೊಡೆದಂಗೆ ಮಾತನಾಡುತ್ತಾರೆ!
ಈ ಜಗತ್ತಿನಲ್ಲಿ ಸಂವಹನ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ನಮ್ಮ ಸಂವಹನ ಹೇಗಿರುತ್ತೆ ಅನ್ನೋದ್ರ ಮೇಲೆ ನಮ್ಮ ಸಂಬಂಧಗಳು ಹೇಗಿರುತ್ತೆ ಅನ್ನೋದನ್ನು ನಿರ್ಧಾರ ಮಾಡಬಹುದು. ಈ ಜಗತ್ತಿನಲ್ಲಿ ಎಲ್ಲರೂ ಒಂದೇ ರೀತಿ ಮಾತನಾಡೋದಿಲ್ಲ. ಒಬ್ಬೊಬ್ಬರ ಸಂಭಾಷಣಾ ಶೈಲಿ ಒಂದೊಂದು ರೀತಿಯಲ್ಲಿ ಇರುತ್ತದೆ.

ಕೆಲವರಂತೂ ಯಾವುದೇ ವಿಚಾರವನ್ನು ಹೇಳಬೇಕಾದರೂ ಸುತ್ತಿ ಬಳಸಿ ಮಾತನಾಡುತ್ತಾರೆ. ಆದ್ರೆ ಮತ್ತೂ ಕೆಲವರು ಹಾಗಲ್ಲ. ಯಾವುದೇ ವಿಚಾರವೇ ಆಗಿರಲಿ ಅದ್ರಲ್ಲಿ ಅಂಜಿಕೆ ಅಳುಕಿಲ್ಲದೇ ನೇರವಾಗಿ ಮುಖಕ್ಕೆ ಹೊಡೆದಂಗೆ ಹೇಳಿ ಬಿಡುತ್ತಾರೆ. ಅಷ್ಟಕ್ಕು ಯಾವ ರಾಶಿಯವರು ನೇರ ಮಾತುಗಾರರೂ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ತಮ್ಮ ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಹೆಸರುವಾಸಿಯಾಗಿದ್ದಾರೆ. ಅವರದ್ದು ನೇರ ಹಾಗೂ ನಿರ್ಭೀತ ಸ್ವಭಾವವಾಗಿರುತ್ತದೆ. ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಯಾವುದೇ ಹಿಂಜರಿಕೆಯನ್ನು ಹೊಂದಿಲ್ಲ. ಮತ್ತು ಅವರು ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆಯನ್ನು ಗೌರವಿಸುತ್ತಾರೆ. ಮೇಷ ರಾಶಿಯವರು ತಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಪ್ರಾಮಾಣಿಕವಾಗಿ ಮಾತನಾಡುತ್ತಾರೆ.
ಧನು ರಾಶಿ
ಧನು ರಾಶಿಯವರು ಜೀವನದ ಬಗ್ಗೆ ತಮ್ಮ ತಾತ್ವಿಕ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಸ್ವಾಭಾವಿಕವಾಗಿ ಎಲ್ಲಾ ಸಂದರ್ಭಗಳಲ್ಲಿ ಸತ್ಯವನ್ನು ಹುಡುಕಲು ಒಲವು ತೋರುತ್ತಾರೆ. ಈ ಸತ್ಯಾನ್ವೇಷಣೆಯ ಸ್ವಭಾವವು ಅವರ ಸಂವಹನ ಶೈಲಿಯಲ್ಲಿಯೂ ಪ್ರತಿಫಲಿಸುತ್ತದೆ. ಧನು ರಾಶಿಯವರು ತಮ್ಮ ಮಾತುಗಳನ್ನು ಯಾವಾಗಲೂ ಶುಗರ್ ಕೋಟ್ ಮಾಡುವುದಿಲ್ಲ ಮಾಡಿ ಆಡೋದಿಲ್ಲ. ಸುತ್ತಿ-ಬಳಸಿ ಮಾತನಾಡುವ ಸ್ವಭಾವ ಇವರದ್ದಲ್ಲ.
ಸಿಂಹ ರಾಶಿ
ಸಿಂಹ ರಾಶಿಯವರು ಸ್ವಾಭಾವಿಕ ವರ್ಚಸ್ಸು ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಯಾವಾಗಲೂ ನೇರವಾಗಿ ಮಾತನಾಡಲು ಇಷ್ಟ ಪಡುತ್ತಾರೆ. ಸಿಂಹ ರಾಶಿಯವರು ತಮ್ಮ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಹೆಚ್ಚಿನವರಿಗೆ ಇವರ ನೇರ ಮಾತುಗಾರಿಕೆ ಇಷ್ಟ ಆಗುತ್ತದೆ. ಬೇರೆಯವರು ಏನಂದುಕೊಳ್ಳುತ್ತಾರೆ ಎಂದು ಯೋಚಿಸದೇ ಮಾತಾಡುತ್ತಾರೆ.
ಕರ್ಕಾಟಕ ರಾಶಿ
ಮಕರ ರಾಶಿಯವರು ಜೀವನದ ಪ್ರಾಯೋಗಿಕ ಮತ್ತು ವಾಸ್ತವಿಕ ವಿಧಾನಕ್ಕೆ ಹೆಸರುವಾಸಿಯಾಗಿದ್ದಾರೆ. ಶುಗರ್ ಕೋಟ್ ಮಾಡಿ ಮಾತನಾಡೋದು ಹೇಗೆ ಅನ್ನೋದು ಇವರಿಗೆ ಗೊತ್ತಿಲ್ಲ. ಏನೇ ಇದ್ದರೂ ನೇರವಾಗಿ ಮಾತು ಆಡುತ್ತಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಪ್ರಾಮಾಣಿಕ ಮತ್ತು ನೇರ ಸಂವಹನವು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ನಂಬುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ನವೀನ ಚಿಂತನೆಗೆ ಹೆಸರುವಾಸಿಯಾಗಿರುತ್ತಾರೆ. ಈ ರಾಶಿಯವರು ಸ್ಪಷ್ಟವಾದ ಸಂವಹನ ಶೈಲಿ ಹೊಂದಿರುತ್ತಾರೆ. ಈ ರಾಶಿಯವರು ಪ್ರಾಮಾಣಿಕರು. ಸುಳ್ಳು, ಕಪಟ ಇವರಿಗೆ ಗೊತ್ತಿಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳುವ ರಾಶಿಯವರು ಇವರು. ಇವರ ಮಾತುಗಳು ಕೆಲವೊಮ್ಮೆ ಕಹಿ ಅನ್ನಿಸಿದರೂ ಸತ್ಯವನ್ನೇ ಆಡುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಸಂವಹನ ಶೈಲಿ ಉತ್ತಮವಾಗಿರುತ್ತದೆ. ಈ ರಾಶಿಯವರು ಮಾತನಾಡುವಾಗ ಬೇರೆಯವರು ಏನು ಅಂದುಕೊಳ್ಳುತ್ತಾರೋ ಅಥವಾ ಸಾಮಾಜಿಕ ಮಾನದಂಡಗಳಿಗೆ ಹೆದರೋದಿಲ್ಲ. ಈ ರಾಶಿಯವರು ಅನನ್ಯ ದೃಷ್ಟಿಕೋನ ಹೊಂದಿರುತ್ತಾರೆ. ಈ ರಾಶಿಯವರು ತಮ್ಮ ಸಿದ್ಧಾಂತಗಳಿಗೆ ಬದ್ಧರಾಗಿ ಇರುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ತುಂಬಾನೇ ಡೌನು ಟು ಅರ್ಥ್. ಇವರ ಸಂವಹನ ಶೈಲಿ ಹೆಚ್ಚಿನವರಿಗೆ ಇಷ್ಟ ಆಗುತ್ತದೆ. ಈ ರಾಶಿಯವರು ತಮ್ಮ ಪ್ರಾಯೋಗಿಕತೆ ಮತ್ತು ಸಾಮಾನ್ಯ ಜ್ಞಾನಕ್ಕೆ ಹೆಸರುವಾಸಿಯಾಗಿದ್ದಾರೆ. ಅನಗತ್ಯ ವಿಚಾರಗಳ ಬಗ್ಗೆ ಇವರು ಮಾತನಾಡೋದೇ ಇಲ್ಲ. ಯಾವುದೇ ವಿಚಾರವಿದ್ದರೂ ನೇರ ಹಾಗೂ ಪ್ರಾಮಾಣಿಕ ವಿಧಾನವನ್ನೇ ಆಯ್ದುಕೊಳ್ಳುತ್ತಾರೆ. ಸರಳತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುತ್ತಾರೆ.



Click it and Unblock the Notifications