Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ರಾಶಿಯವರು ತಮ್ಮ ಪ್ರೀತಿಯನ್ನು ಹೇಳಲು ಸಾಧ್ಯವಾಗದಷ್ಟು ನಾಚಿಕೆ ಹೊಂದಿರುತ್ತಾರೆ
ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವು ವಿಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಯ ರಾಶಿಯ ಆಧಾರದ ಮೇಲೆ ಅವನ ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯಬಹುದು. ವ್ಯಕ್ತಿಯ ರಾಶಿಯು ಆತನ ಸ್ವಭಾವದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ ಗುಣಗಳನ್ನು ಹೊಂದಿರುತ್ತಾರೆ. ಅದ್ರಲ್ಲಿ ಒಳ್ಳೆಯ ಗುಣಗಳು ಇರುತ್ತದೆ ಜೊತೆಗೆ ನ್ಯೂನತೆಗಳನ್ನು ಹೊಂದಿರುತ್ತಾರೆ.
ಅದ್ರಲ್ಲಿ ಅನೇಕರು ನಾಚಿಕೆ ಸ್ವಭಾವದವರಾಗಿರುತ್ತಾರೆ. ಯಾರೊಂದಿಗಾದರೂ ಮಾತನಾಡೋದಕ್ಕೂ ಮುಂದೆ ಹೋಗೋದಿಲ್ಲ. ಮುಖ ಕೊಟ್ಟು ಮಾತನಾಡುವುದಕ್ಕೂ ಅವರಿಂದ ಸಾಧ್ಯವಾಗೋದಿಲ್ಲ. ಅದ್ರಲ್ಲೂ ಈ ರಾಶಿಯವರು ತುಂಬಾನೇ ನಾಚಿಕೆ ಸ್ವಭಾವದವರಾಗಿರುತ್ತಾರೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರ ಸ್ವಭಾವವು ಇತರ ಜನರಿಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಈ ರಾಶಿಯವರು ನಾಚಿಕೆ ಸ್ವಭಾವದವರು ಮತ್ತು ಈ ಕಾರಣದಿಂದಾಗಿ ಅವರು ಇತರರ ಮುಂದೆ ಮಾತನಾಡುವುದಕ್ಕೆ ಹಿಂಜರಿಯುತ್ತಾರೆ. ಅವರು ತಮ್ಮ ಭಾವನೆಗಳನ್ನು ಇತರರ ಮುಂದೆ ವ್ಯಕ್ತ ಪಡಿಸೋದಕ್ಕೆ ಇಷ್ಟ ಪಡುವುದಿಲ್ಲ. ಕೆಲವೊಂದು ಸಾರಿ ತಮಗೆ ತೊಂದರೆಯಾದಾಗಲೂ ಕೂಡ ಇವರು ಧ್ವನಿ ಎತ್ತುವುದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕರ್ಕಾಟಕ ರಾಶಿಯಂತೆ ನಾಚಿಕೆ ಸ್ವಭಾವದವರು. ಈ ರಾಶಿಯ ಜನರು ತಮ್ಮ ಮನಸ್ಸಿನ ಮಾತನ್ನು ಹೇಳಲು ಸ್ವಲ್ಪ ಹಿಂಜರಿಯುತ್ತಾರೆ. ಆದರೆ ಅವರು ಹೀಗೆ ವರ್ತಿಸುವುದು ಯಾರ ಭಯದಿಂದಲ್ಲ. ಅಷ್ಟೇ ಅಲ್ಲ, ಈ ರಾಶಿಯವರು ಯಾರನ್ನೂ ಅಷ್ಟು ಸುಲಭವಾಗಿ ನಂಬುವುದಿಲ್ಲ. ಕೂಲಂಕುಷ ತನಿಖೆಯ ನಂತರವೇ ಜನರನ್ನು ನಂಬುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ತುಂಬಾನೇ ಗಂಭೀರ ಸ್ವಭಾವದವರು. ಆದರೆ ಮಾತನಾಡುವುದಕ್ಕೆ ಇವರು ನಾಚಿಗೆ ಮಾಡುತ್ತಾರೆ. ಮಕರ ರಾಶಿಯವರು ತಮ್ಮ ಮನಸ್ಸನ ಮಾತನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಇವರಿಗೆ ಎಷ್ಟು ನಾಚಿಕೆ ಎಂದರೆ ತಮ್ಮ ಮನಸ್ಸಿನ ಮಾತನ್ನು ತಾನು ಪ್ರೀತಿಸಿದವರ ಬಳಿ ಕೂಡ ವ್ಯಕ್ತ ಪಡಿಸುವುದಿಲ್ಲ.
ಮೀನ ರಾಶಿ
ಮೀನ ರಾಶಿಯವರು ತುಂಬಾನೇ ನಾಚಿಕೆ ಸ್ವಭಾವದವರು. ಪರಿಚಯಸ್ಥರ ಜೊತೆಗೆ ಮಾತನಾಡುವುದಕ್ಕೂ ಇವರು ಹಿಜರಿಯುತ್ತಾರೆ. ಇವರು ಒಬ್ಬರ ಮುಂದೆ ಮುಕ್ತವಾಗಿ ಮಾತನಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಸುಲಭವಾಗಿ ಇವರು ಯಾರನ್ನೂ ನಂಬೋದಿಲ್ಲ. ಒಬ್ಬ ವ್ಯಕ್ತಿಯನ್ನು ಬಲವಾಗಿ ನಂಬಿದ ನಂತರವಷ್ಟೇ ಇವರು ಮನಸ್ಸಿನ ಮಾತನ್ನು ಹೇಳಿಕೊಳ್ಳುತ್ತಾರೆ. ಇವರು ಏನನ್ನೂ ಮಾತನಾಡುವ ಮೊದಲು ಗಂಭೀರವಾಗಿ ಯೋಚಿಸಿ ನಂತರ ಮಾತನಾಡುತ್ತಾರೆ.



Click it and Unblock the Notifications
