Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ 5 ರಾಶಿಯವರು ಪ್ರೀತಿಗಾಗಿ ನಿರಂತರವಾಗಿ ಹೋರಾಡುತ್ತಾರೆ!
ಪ್ರೀತಿಯಲ್ಲಿ ಬೀಳೋದು ಸುಲಭ ಆದರೆ ಅದನ್ನು ಉಳಿಸಿಕೊಳ್ಳೋದು ಇದ್ಯಲ್ಲ ಅಂದು ತುಂಬಾನೇ ಕಷ್ಟ. ಪ್ರೀತಿ ಮಾಡೋವಾಗ ಪ್ರೇಮಿಗಳ ಮಧ್ಯೆ ಸಾಕಷ್ಟು ಸಮಸ್ಯೆಗಳು ಎದುರಾದ್ರೆ, ಇನ್ನೇನು ಮದುವೆಯಾಗಬೇಕು ಅನ್ನೋವಾಗ ಪೋಷಕರು ಅಡ್ಡಗಾಲು ಹಾಕುತ್ತಾರೆ. ಜಾತಿ, ಮತ, ಆಸ್ತಿ-ಅಂತಸ್ತು ಎಂದು ಮಕ್ಕಳ ಪ್ರೀತಿಯನ್ನು ಮುರಿಯೋದಕ್ಕೆ ಯತ್ನಿಸುತ್ತಾರೆ.

ಕೆಲವರಂತೂ ತಮ್ಮ ಪ್ರೀತಿಗೆ ಎಷ್ಟೇ ಅಡ್ಡಿ-ಆತಂಕಗಳು ಎದುರಾದ್ರು ಕೂಡ ಅಂಜೋದಿಲ್ಲ. ಏನೇ ಆದ್ರೂ ಪ್ರೀತಿಯನ್ನು ಮುರಿಯೋದಕ್ಕೆ ಅವಕಾಶ ನೀಡುವುದಿಲ್ಲ. ಪ್ರೀತಿಗಾಗಿ, ಪ್ರೀತಿಸಿದವರಿಗಾಗಿ ಕೊನೆವರೆಗೂ ಹೋರಾಡುತ್ತಾರೆ. ಅಷ್ಟಕ್ಕು ಯಾವ ರಾಶಿಯವರು ಪ್ರೀತಿಗಾಗಿ ಕೊನೆವರೆಗೂ ಹೋರಾಡುತ್ತಾರೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯವರು ಭಾವೋದ್ರಿಕ್ತ ಗುಣವನ್ನು ಹೊಂದಿರುತ್ತಾರೆ. ಇವರು ಯಾವುದೇ ವಿಚಾರಕ್ಕಾದರೂ ಉಗ್ರ ನಿರ್ಣಯ ತೆಗೆದುಕೊಳ್ಳುತ್ತಾರೆ. ಮತ್ತು ಈ ರಾಶಿಯವರು ತುಂಬಾನೇ ದೈರ್ಯವಂತರು. ಪ್ರೀತಿಯ ವಿಷಯಕ್ಕೆ ಬಂದಾಗ ಮೇಷ ರಾಶಿಯವರು ತಮ್ಮ ಪ್ರೀತಿಪಾತ್ರರನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡೋದಿಲ್ಲ. ಅವರಿಗಾಗಿ ಎಷ್ಟು ದೊಡ್ಡ ಹೋರಾಟವನ್ನು ಬೇಕಾದರೂ ಇವರು ಮಾಡುತ್ತಾರೆ. ಇವರು ಭಾವನೆಗಳಿಗೆ ತುಂಬಾನೇ ಬೆಲೆಯನ್ನು ಕೊಡುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಸೂರ್ಯನಿಂದ ಆಳಲ್ಪಡುತ್ತಾರೆ. ಈ ರಾಶಿಯವರು ನಿಷ್ಠಾವಂತರು ಹಾಗೂ ಸಾಟಿಯಿಲ್ಲದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಈ ರಾಶಿಯವರು ಸಂಗಾತಿಯ ಸಂತೋಷಕ್ಕೆ ಮೊದಲ ಆಧ್ಯತೆ ನೀಡುತ್ತಾರೆ. ಈ ರಾಶಿಯವರು ತಮ್ಮ ಸಂಬಂಧವನ್ನು ಕಾಪಾಡಿಕೊಳ್ಳೋದಕ್ಕೆ ಎಂತಹ ಹೋರಾಟಕ್ಕೆ ಬೇಕಾದರೂ ಮಾಡುತ್ತಾರೆ. ಆದರೆ ಪ್ರೀತಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳೋದಿಲ್ಲ. ಪ್ರೀತಿಯ ರಕ್ಷಣೆಗೆ ಸದಾ ಸಿದ್ಧರಾಗಿ ಇರುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕೂಡ ಭಾವೋದ್ರಿಕ್ತ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಪ್ರೀತಿಯಲ್ಲಿ ಬಿದ್ದರೆ ಆ ಪ್ರೀತಿಗೆ ಪ್ರಾಮಾಣಿಕವಾಗಿ ಇರುತ್ತಾರೆ. ತಮ್ಮ ಸಂಗಾತಿಯ ಭಾವನೆಗಳಿಗೆ ತುಂಬಾನೇ ಬೆಲೆ ಕೊಡುತ್ತಾರೆ. ಮನೆಯವರ ವಿರೋಧದ ಮಧ್ಯೆಯೂ ತಮ್ಮ ಪ್ರೀತಿಯನ್ನು ಒಪ್ಪಿಸಿ ಕೊನೆಗೂ ಮದುವೆಯಾಗುತ್ತಾರೆ. ಪ್ರೀತಿಯ ವಿಚಾರಕ್ಕೆ ಬಂದರೆ ಇವರು ಹಠಮಾರಿಗಳು. ಇವರು ಪ್ರೀತಿಯಲ್ಲಿ ಯಾವಾಗಲೂ ನಿಷ್ಠಾವಂತರಾಗಿ ಇರುತ್ತಾರೆ.
ಕರ್ಕಾಟಕ ರಾಶಿ
ಮಕರ ರಾಶಿಯವರು ತಮ್ಮ ದೃಢತೆ ಮತ್ತು ನಿರ್ಣಯಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಗುಣಗಳು ಅವರ ಪ್ರೀತಿಯ ಜೀವನಕ್ಕೂ ವಿಸ್ತರಿಸುತ್ತವೆ. ಪ್ರೀತಿಗೆ ತುಂಬಾನೇ ನಿಷ್ಠೆಯಿಂದ ಇರುತ್ತಾರೆ. ಅವರ ಮನೆಯಲ್ಲಿ ಪ್ರೀತಿಗೆ ಒಪ್ಪದಿದ್ದಾಗ ಕಷ್ಟ ಪಟ್ಟದಾರೂ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾರೆ. ತಮ್ಮ ದಾರಿಯಲ್ಲಿ ಬರುವ ದೊಡ್ಡ ಸವಾಲುಗಳನ್ನು ಪ್ರೀತಿಗಾಗಗಿ ಎದುರಿಸೋದಕ್ಕೆ ಸಿದ್ಧವಾಗಿ ಇರುತ್ತಾರೆ.
ಮೀನ ರಾಶಿ
ಮೀನ ರಾಶಿಯನ್ನು ನೆಪ್ಚೂನ್ ಗ್ರಹವು ಆಳುತ್ತಿದೆ. ಮೀನ ರಾಶಿಯವರು ಸಹಾನುಭೂತಿಯನ್ನು ಹೊಂದಿರುತ್ತಾರೆ. ಪ್ರೀತಿಗಾಗಿ ಹಾಗೂ ಪ್ರೀತಿಸಿದವರಿಗಾಗಿ ತಮ್ಮ ಪ್ರಾಣ ತ್ಯಾಗ ಮಾಡೋದಕ್ಕೂ ಇವರು ಸಿದ್ಧವಾಗಿ ಇರುತ್ತಾರೆ. ಇವರಲ್ಲಿರುವ ನಿಸ್ವಾರ್ಥತೆ ಮತ್ತು ಅಚಲವಾದ ವಿಶ್ವಾಸವು ಸಂಬಂಧ ಮುರಿಯೋದಕ್ಕೆ ಅವಕಾಶ ಕೊಡೋದಿಲ್ಲ. ಪ್ರೀತಿಯಿಂದಲೇ ಇವರು ಎಲ್ಲಾ ಶಕ್ತಿಯನ್ನು ಗೆಲ್ಲುತ್ತಾರೆ. ಇವರು ಪ್ರೀತಿಸುವವರ ಜೊತೆಗೆ ಸದಾ ಇರುತ್ತಾರೆ.



Click it and Unblock the Notifications
