Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈ ರಾಶಿಯವರು ಸಂಗಾತಿ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ
ದಾಂಪತ್ಯದಲ್ಲಿ ಗಂಡ ಹಾಗೂ ಹೆಂಡತಿ ಇಬ್ಬರ ಖುಷಿ ಹಾಗೂ ಸುಖ ತುಂಬಾನೇ ಮುಖ್ಯವಾಗುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ವ್ಯಕ್ತಿಗಳು ಅವರ ಖುಷಿಯನ್ನು ಮಾತ್ರ ಕಂಡುಕೊಳ್ಳುತ್ತಾರೆಯೇ ಹೊರತು ಸಂಗಾತಿಯ ಖುಷಿಯ ಬಗ್ಗೆ ಗಮನ ಕೊಡೋದಿಲ್ಲ. ಆದರೆ ಇನ್ನೂ ಕೆಲವು ಸಂಬಂಧಗಳಲ್ಲಿ ತಮ್ಮ ಸಂಗತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.
ಇಂತಹ ಸಂಬಂಧಗಳಲ್ಲಿ ವ್ಯಕ್ತಿ ತನ್ನ ಸುಖವನ್ನು ತ್ಯಾಗ ಮಾಡಿ ತನ್ನ ಸಂಗಾತಿ ಖುಷಿಗಾಗಿ ಶ್ರಮಿಸುತ್ತಾರೆ. ಯಾವಾಗಲೂ ಸಂಗಾತಿ ಖುಷಿಯಾಗಿರಲಿ ಎಂದು ಬಯಸುತ್ತಾನೆ. ಅದಕ್ಕಾಗಿ ತನ್ನ ಸಂತೋಷವನ್ನು ತ್ಯಾಗ ಮಾಡೋದಕ್ಕೂ ಹಿಂಜರಿಯೋದಿಲ್ಲ. ಕೆಲವೇ ಕೆಲವು ರಾಶಿಯವರು ಮಾತ್ರ ತಮ್ಮ ಸಂಗಾತಿಯ ಖುಷಿಗಾಗಿಯೇ ಬದುಕುತ್ತಾರಂತೆ. ಅಷ್ಟಕ್ಕು ಆ ರಾಶಿಯವರು ಯಾರು ಎಂಬುವುದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತಮ್ಮ ಸಂಗಾತಿಯ ಭಾವನಾತ್ಮಕ ಅಗತ್ಯತೆಗಳ ಬಗ್ಗೆ ಚೆನ್ನಾಗಿ ಅರಿತುಕೊಂಡಿರುತ್ತಾರೆ. ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಹಾಗೂ ಅವರ ಪೋಷಣೆಯನ್ನು ಹೆಚ್ಚಾಗಿ ಮಾಡುತ್ತಾರೆ. ಇವರು ಕೆಲಸ ಮುಗಿಸಿ ಮನೆಗೆ ಬೇಗ ಬಂದು. ಮಕ್ಕಳನ್ನು ನೋಡಿಕೊಂಡು ಜೊತೆಗೆ ಅಡುಗೆ ಕೆಲಸದಲ್ಲೂ ಸಹಾಯ ಮಾಡುತ್ತಾರೆ. ಸಂಗಾತಿಯ ಮನಸ್ಸನ್ನು ಗೆಲ್ಲೋದಕ್ಕೆ ತಮ್ಮ ಸುಖವನ್ನು ತ್ಯಾಗ ಮಾಡೋದಕ್ಕೂ ಈ ರಾಶಿಯವರು ಸಿದ್ಧರಿರುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ತಮ್ಮ ಸಂಗಾತಿಯನ್ನು ನೋಡಿಕೊಳ್ಳುವಲ್ಲಿ ಹಾಗೂ ಅವರ ಬಗ್ಗೆ ಕಾಳಜಿ ಮಾಡೋದ್ರಲ್ಲಿ ಎಂದಿಗೂ ವಿಫಲವಾಗೋದಿಲ್ಲ. ಅವರು ಯಾವಾಗಲೂ ತಮ್ಮ ಸಂಗಾತಿಯ ಸುರಕ್ಷತೆ ಮತ್ತು ಭದ್ರತೆಯನ್ನು ಬಯಸುತ್ತಾರೆ. ಅವರು ಸಂಗಾತಿಯ ಜೊತೆಗೆ ಹೆಚ್ಚಾಗಿ ಚರ್ಚಿಸಿ ಅವರ ವಿರೋಧ ಕಟ್ಟಿಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ಹಾಗೂ ಈ ರಾಶಿಯವರು ತಮ್ಮ ಸಂಗಾತಿಗೆ ಇಷ್ಟ ಆಗುವ ರೀತಿಯಲ್ಲಿ ಮೂನ್ ಲೈಟ್ ಡಿನ್ನರ್‌ನ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಇವರು ಸಂಗಾತಿಯ ಜೊತೆಗೆ ಅನ್ಯೋನ್ಯವಾಗಿರುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಏನೇ ಭಿನ್ನಾಭಿಪ್ರಾಯಗಳು ಇದ್ದರೆ ಅವರು ಅದನ್ನು ಮಾತನಾಡಿಕೊಂಡು ಸರಿಪಡಿಸುತ್ತಾರೆ. ಅದೇನೆ ಇದ್ದರೂ ಇವರ ಮೊದಲ ಪ್ರಾಮುಖ್ಯತೆ ಸಂಗಾತಿಗೆ ಆಗಿರುತ್ತದೆ. ಈ ರಾಶಿಯವರು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತಾರೆ. ಸಂಗಾತಿಯಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತಾರೆ. ಸಂಗಾತಿಯ ಬಗ್ಗೆ ಅತಿಯಾದ ಕಾಳಜಿ ಇವರಿಗಿದೆ.
ಮೇಷ ರಾಶಿ
ಮೇಷ ರಾಶಿಯ ವ್ಯಕ್ತಿಗಳು ತಮ್ಮ ಸಂಗಾತಿಯ ಮನಸ್ಸನ್ನು ಗೆಲ್ಲೋದು ಹೇಗೆ ಎಂದು ಆಲೋಚಿಸುತ್ತಿರುತ್ತಾರೆ. ತಮ್ಮ ಪ್ರೀತಿಗೆ ಇವರು ಮೊದಲು ಆಧ್ಯತೆಯನ್ನು ನೀಡುತ್ತಾರೆ. ಇವರಿಗೆ ಸಂಗಾತಿಯೊಂದಿಗೆ ಜಗಳವಾಡೋದಕ್ಕೆ ಇಷ್ಟವಿರೋದಿಲ್ಲ. ಹೀಗಾಗಿ ಸಾಧ್ಯವಾದಷ್ಟು ಸಂಘರ್ಷಗಳನ್ನು ತಪ್ಪಿಸೋದಕ್ಕೆ ಯತ್ನಿಸುತ್ತಾರೆ. ಸಂಗಾತಿಯ ಪ್ರತಿಯೊಂದು ಮಾತಿಗೆ ಒಪ್ಪಿಗೆ ಸೂಚಿಸುತ್ತಾರೆ. ಯಾಕಂದ್ರೆ ಅವರ ಮನಸ್ಸಿಗೆ ನೋವು ಮಾಡೋದು ಇವರಿಗೆ ಇಷ್ಟವಿರೋದಿಲ್ಲ.



Click it and Unblock the Notifications