Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ 7 ರಾಶಿಯವರು ಓವರ್‌ಥಿಂಕ್ ಮಾಡುವುದರಿಂದಲೇ ಸಮಸ್ಯೆ ಹೆಚ್ಚು ಮಾಡ್ಕೊಳ್ಳುತ್ತಾರೆ
ಕೆಲವರು ಇರ್ತಾರೆ ತುಂಬಾ ಓವರ್ ಥಿಂಕಿಂಗ್ ಅಂದರೆ ಅನಗ್ಯತವಾಗಿ ತುಂಬಾ ಯೋಚಿಸುತ್ತಾರೆ, ಹಾಗೇ.. ಹೀಗೆ ಅಂತ ತಾವು ಊಹಿಸಿ ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಾರೆ. ಇಂಥವರು ನಮ್ಮ ಮನೆಯಲ್ಲಿ ಅಥವಾ ಸ್ನೇಹಿತರ ಗುಂಪಿನಲ್ಲಿದ್ದರೆ ಕೆಲವೊಮ್ಮೆ ಅವರ ಆ ಗುಣ ನಮಗೆ ತುಂಬಾನೇ ಕಿರಿಕಿರಿ ಉಂಟು ಮಾಡುವುದು.
ನಾವು ಅವರ ಬಗ್ಗೆ ಹೇಳುವುದು ಒಂದು ಅದನ್ನು ಅವರು ತೆಗೆದುಕೊಳ್ಳುವುದು ಒಂದು, ಇದರಿಂದಾಗಿ ತುಂಬಾನೇ ಸಮಸ್ಯೆ ಉಂಟಾಗುವುದು. ಅವರ ಈ ರೀತಿಯ ಸ್ವಭಾವಕ್ಕೂ ರಾಶಿಗೂ ಸಂಬಂಧವಿದೆಯೇ? ಹೌದಂತೆ. ಜ್ಯೋತಿಷ್ಯ ಶಾಸ್ತ್ರವು ಕೆಲವೊಂದು ರಾಶಿಯವರಲ್ಲಿ ಈ ಬಗೆಯ ಸ್ವಭಾವ ಹೆಚ್ಚಾಗಿ ಕಂಡು ಬರುವುದಂತೆ, ಬನ್ನಿ ಓವರ್ ಥಿಂಕಿಂಗ್ ರಾಶಿಯವರು ಯಾರು ಎಂದು ನೋಡೋಣ ಬನ್ನಿ:

ಕನ್ಯಾ ರಾಶಿಯವರು
ಕನ್ಯಾ ರಾಶಿಯವರು ಪ್ರತಿಯೊಂದು ವಿಷಯದಲ್ಲೂಓವರ್ ಥಿಂಕಿಂಗ್ ಮಾಡುತ್ತಾರೆ. ಹೀಗಾಗಿ ಅವರು ಕೆಲವೊಮ್ಮೆ ಸರಿಯಾಗಿ ನಿರ್ಧಾರ ತೆಗೆದುಕೊಂಡರೂ ನಾನು ತೆಗೆದುಕೊಂಡ ನಿರ್ಧಾರ ಸರಿಯಾಗಿ ಇದೆಯೇ, ಇಲ್ವೇ? ಎಂದು ಗೊಂದಲಕ್ಕೆ ಒಳಗಾಗುತ್ತಾರೆ. ಅಲ್ಲದೆ ಅವರು ಯಾವಾಗಲೂ ಒಂದು ವೇಳೆ ಹೀಗಾದರೆ, ಒಂದು ವೇಳೆ ಹಾಗಾದರೆ ಎಂದು ಯೋಚಿಸುವುದು ಜಾಸ್ತಿ.
ಈ ಕಾರಣಕ್ಕೆ ಇವರು ಸಂಬಂಧದಲ್ಲೂ ಸಮಸ್ಯೆಗಳನ್ನು ತಂದುಕೊಳ್ಳುವುದುಂಟು, ಕೆಲವೊಮ್ಮೆ ಇವರ ಅತಿಯಾದ ಚಿಂತನೆ ಸಂಗಾತಿಗೆ ತುಂಬಾನೇ ಅಸಮಧಾನ ಉಂಟು ಮಾಡಬಹುದು. ಹೆಚ್ಚಾಗಿ ಊಹೆ ಮಾಡುವುದರಿಂದ ನೆಗೆಟಿವ್ ಚಿಂತನೆಗಳು ಅಧಿಕವಿರುತ್ತದೆ. ಇವರು ಯಾರನ್ನೂ ಸುಲಭವಾಗಿ ನಂಬಲು ಸಿದ್ಧವಿರಲ್ಲ. ಇವರ ಈ ಸ್ವಭಾವವೇ ಇವರಿಗೆ ನೋವುಂಟು ಮಾಡಸುತ್ತದೆ, ಇಲ್ಲದಿರುವುದನ್ನು ಇರಬಹುದು ಎಂದು ಊಹಿಸುವುದು ಜಾಸ್ತಿ.
ಮಿಥುನ ರಾಶಿಯವರು
ಮಿಥುನ ರಾಶಿಯವರು ಸ್ವಲ್ಪ ಅಧಿಕ ಯೋಚಿಸುವರು ಆಗಿರುತ್ತಾರೆ. ಈ ಸ್ವಭಾವದಿಂದಲೇ ನೆಮ್ಮದಿ ಎಂಬುವುದು ಕಷ್ಟವಾಗುವುದು. ಹೀಗಿರಬಹುದು ಎಂದೆಲ್ಲಾ ಸುಮ್ಮನೆ ಯೋಚಿಸಿ ಸುಮ್ಮನೆ ಇಲ್ಲಸಲ್ಲದ ವಿಷಯಕ್ಕೆ ತಲೆಕೆಡಿಸಿಕೊಳ್ಳುವುದುಂಟು, ಆದರೆ ಕೆಲವೊಮ್ಮೆ ಈ ಗುಣ ಅವರಿಗೆ ಪಾಸಿಟಿವ್ ಆಗಲೂ ಬಹುದು. ಏಕೆಂದರೆ ಎಲ್ಲಾ ವಿಷಯವನ್ನು ಅವರು ಅತಿಯಾಗಿ ಯೋಚಿಸುವುದರಿಂದ ನೆಗೆಟಿವ್ ಆಗುವುದನ್ನು ತಡೆಗಟ್ಟಲು ಅಥವಾ ಅದರಿಂದ ಹೊರಬರಲು ಸಹಾಯವಾಗುತ್ತೆ. ಮಿಥುನ ರಾಶಿಯವರು ತುಂಬಾ ಬುದ್ಧಿವಂತರು, ಆದರೆ ಈ ರೀತಿ ಅತಿಯಾಗಿ ಯೋಚಿಸುವುದರಿಂದ ಅವರ ಸಾಮರ್ಥ್ಯದ ಬಗ್ಗೆ ಅವರಿಗೇ ನಂಬಿಕೆ ಇರಲ್ಲ.
ವೃಶ್ಚಿಕ ರಾಶಿ
ಯಾವುದೇ ಸಂದರ್ಭವಿರಲಿ ಇವರು ಅತಿಯಾಗಿ ಯೋಚಿಸದೆ ಇರಲ್ಲ. ಅವರು ತಮ್ಮ ಆಲೋಚನೆಗಳು ಹಾಗೂ ನಿರ್ಧಾರಗಳನ್ನು ತಾವೇ ಅವಲೋಕಿಸುತ್ತಿರುತ್ತಾರೆ. ನಾನು ಮಾಡುತ್ತಿರುವುದು ಸರಿಯಿದೆಯೇ ಎಂದು ಯೋಚಿಸುತ್ತಾರೆ. ಈ ಗುಣದಿಂದ ಕೆಲವೊಮ್ಮೆ ಅವರಿಗೆ ಇನ್ನಷ್ಟು ಬೆಟರ್ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು, ಕೆಲವೊಮ್ಮೆ ಸಿಕ್ಕಾಪಟ್ಟೆ ಗೊಂದಲಕ್ಕೆ ಒಳಗಾಗಿ ನೆಮ್ಮದಿ ಕಳೆದುಕೊಳ್ಳುತ್ತಾರೆ. ಈ ಗುಣವೇ ಅವರ ಪ್ರಗತಿಗೆ ಅಡ್ಡಿಯಾಗಬಹುದು.
ಮೀನ ರಾಶಿ
ಮೀನ ರಾಶಿಯವರು ಕೂಡ ಸ್ವಲ್ಪ ಅತಿಯಾಗಿ ಯೋಚಿಸುವವರಾಗಿರುತ್ತಾರೆ. ಯಾವುದೇ ವಿಷಯವಿರಲಿ ಅವರಿಗೆ ಅದರಲ್ಲಿ ಕೆಲವೊಂದು ಸಂಶಯ ಬಂದೇ ಬರುತ್ತದೆ, ಅವರು ಅದರ ಬಗ್ಗೆ ಇನ್ನಷ್ಟು ತಿಳಿಯಲು ಪ್ರಯತ್ನಿಸುತ್ತಾರೆ. ಅವರ ಜೊತೆ ಸಾಮಾನ್ಯವಾಗಿ ಮಾತನಾಡಿದರೂ ಸಾಕು ಅದರ ಒಳಾರ್ಥ ಏನಿರಬಹುದು ಎಂದು ಸುಮ್ಮನಾದರೂ ಯೋಚಿಸುತ್ತಾರೆ. ಇವರ ಮನೆಯವರಿಗೆ ಅಥವಾ ಸಂಗಾತಿಗೆ ಇವರ ಈ ಸ್ವಭಾವದಿಂದಾಗಿಯೇ ಮನಸ್ತಾಪ ಉಂಟಾಗಬಹುದು. ಅಲ್ಲದೆ ಏನಾದರೂ ಕೆಡಕು ಆದರೆ ಅದು ಅವರ ಮನಸ್ಸಿನಿಂದ ಸುಲಭವಾಗಿ ಹೋಗುವುದಿಲ್ಲ. ಪ್ರತಿಯೊಂದು ಸಂದರ್ಭಕ್ಕೂ ಲಿಂಕ್ ಮಾಡುತ್ತಾರೆ. ಈ ಗುಣ ಇವರಿಗೇ ನೋವುಂಟು ಮಾಡುವುದುಂಟು.
ಕರ್ಕ ರಾಶಿ
ಇವರು ಓವರ್‌ಥಿಂಕಿಂಗ್ ನಟೋರಿಯಸ್ ಎಂದು ಹೇಳಬಹುದು. ಇವರು ಯಾವುದಾದರೂ ವಿಷಯ ಸಿಕ್ಕರೆ ಅದನ್ನು ಸಂಪೂರ್ಣ ಕೆದಕುವುದರಲ್ಲಿ ತುಂಬಾನೇ ಹುಷಾರು. ಇವರು ನನಗೂ, ನನ್ನ ಕುಟುಂಬಕ್ಕೂ ಯಾವುದೇ ಸಮಸ್ಯೆ ಬರಬಾರದು, ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳಬಾರದು ಎಂದು ತುಂಬಾನೇ ಯೋಚಿಸುವುದರಿಂದ ಓವರ್ ಥಿಂಕಿಂಗ್ ಮಾಡುವುದು ಹೆಚ್ಚು. ಆದರೆ ಇದೇ ಸ್ವಭಾವ ಕೆಲವೊಮ್ಮೆ ಇವರಿಗೆ ಉಲ್ಟಾ ಹೊಡೆಯುವುದು ಇದೆ.
ಮಕರ ರಾಶಿ
ಇವರು ವಿಷಯ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಆದರೆ ತುಂಬಾನೇ ಯೋಚಿಸುತ್ತಾರೆ. ಅವರು ಸದಾ ಏನಾದರೂ ಒಂದು ಇಂಥ ಚಿಂತನೆ ಮಾಡುತ್ತಲೇ ಇರುತ್ತದೆ. ಬೆಳಗ್ಗೆ ಎದ್ದ ತಕ್ಷಣವೇ ಅವರ ದಿನ ಪ್ಲ್ಯಾನಿಂಗ್ ಶುರುವಾಗುವುದು. ಆಗಬಹುದಾ, ಇಲ್ವಾ ಎದು ಜಾಸ್ತಿ. ಈ ಸ್ವಭಾವ ಅವರ ಪ್ರತಿಯೊಂದು ಕಾರ್ಯದಲ್ಲೂ ಕಂಡು ಬರುವುದು.
ತುಲಾ ರಾಶಿ
ತುಲಾ ರಾಶಿಯವರು ಕೂಡ ಓವರ್ ಥಿಂಕಿಂಗ್ ಮಾಡುವವರು. ಅವರು ತಮ್ಮದೇ ನಿರ್ಧಾರಗಳಲ್ಲೂ ಡೌಟ್ ವ್ಯಕ್ತಪಡಿಸುವವರು. ಯಾವುದೇ ವಿಷಯವಾದರೂ ಸರಿ ಹೀಗೆ ಮಾಡಿದರೆ ಮುಂದೆ ಏನಾಗಬಹುದು ಎಂದು ಯೋಚಿಸುವವರು. ಅಲ್ಲದೆ ಸಂಬಂಧದ ವಿಷಯದಲ್ಲಿ ಈ ಸ್ವಭಾವದಿಂದಾಗಿ ಸಂಬಂಧವನ್ನು ಜಟಿಲ ಮಾಡಿಕೊಳ್ಳುವುದು ಅಧಿಕ. ಪ್ರತಿಯೊಂದು ಮಾತು, ಆಂಗಿಕ ಭಾಷೆಗೆ ಒಳಾರ್ಥ ಹುಡುಕುವ ಸ್ವಭಾವದಿಂದಾಗಿ ಅನಾವಶ್ಯಕವಾಗಿ ಸಮಸ್ಯೆ ಉಂಟು ಮಾಡಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುತ್ತಾರೆ.



Click it and Unblock the Notifications