Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಈ 5 ರಾಶಿಯವರು ತಮ್ಮ ಸಂಗಾತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ!
ಈ ಜಗತ್ತಿನಲ್ಲಿ ಪ್ರೀತಿ, ಮದುವೆ ಹಾಗೂ ರೊಮ್ಯಾನ್ಸ್ ಇಲ್ಲದೇ ಯಾವ ವ್ಯಕ್ತಿಯ ಜೀವನವೂ ಪೂರ್ಣ ಅನ್ನಿಸಿಕೊಳ್ಳೋದಿಲ್ಲ. ಹೆಚ್ಚಿನವರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಸಲ ಖಂಡಿತ ಪ್ರೀತಿಯಲ್ಲಿ ಬಿದ್ದಿರುತ್ತಾರೆ. ಇದರಲ್ಲಿ ಎಲ್ಲರ ಪ್ರೀತಿಯೂ ನಿಷ್ಕಲ್ಮಶ ಪ್ರೀತಿ ಅಂತ ಹೇಳೋದಿಕ್ಕಾಗೋದಿಲ್ಲ.
ಟೈಂ ಪಾಸ್ ಗಾಗಿ ಪ್ರೀತಿ ಮಾಡುವವರೂ ಇದ್ದಾರೆ. ಆದ್ರೆ ಇನ್ನೂ ಕೆಲವರು ತಮ್ಮ ಸಂಗಾತಿಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅಷ್ಟಕ್ಕೂ ಯಾವ ರಾಶಿಯವರು ತಮ್ಮ ಸಂಗಾತಿಯನ್ನು ಪ್ರೀತಿಯ ಗಡಿಯನ್ನೂ ಮೀರಿ ಪ್ರೀತಿಸುತ್ತಾರೆ ಅನ್ನೋದನ್ನು ತಿಳಿಯೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ತುಂಬಾನೇ ಶಾಂತ ಸ್ವಭಾವದವರು. ಇವರು ಕೂಡ ತಮ್ಮ ಸಂಗಾತಿಗಾಗಿ ಪ್ರಾಣ ಕೊಡೋದಕ್ಕೂ ಸಿದ್ಧವಿರುತ್ತಾರೆ. ಇವರು ತಮ್ಮ ಸಂಗಾತಿಯ ಜೊತೆಗೆ ಭಾವನಾತ್ಮಕವಾಗಿ ಉತ್ತಮ ಬಾಂಧವ್ಯ ಹೊಂದಿರುತ್ತಾರೆ. ಸಂಗಾತಿಯನ್ನು ಬಿಟ್ಟಿರೋ ಶಕ್ತಿ ಇವರಿಗೆ ಇರೋದಿಲ್ಲ. ಇನ್ನೂ ಇವರು ಪ್ರೀತಿಯಲ್ಲಿ ತುಂಬಾನೇ ಪ್ರಾಮಾಣಿಕರು. ಪ್ರೀತಿಸಿದವರಿಗೆ ಮೋಸ ಮಾಡಬೇಕು ಅನ್ನೋ ಆಲೋಚನೆಯೇ ಇವರ ತಲೆಯಲ್ಲಿ ಬರೋದಿಲ್ಲ.
ಮಿಥುನ ರಾಶಿ
ಮಿಥುನ ರಾಶಿಯವರು ಪ್ರೀತಿಗೆ ತುಂಬಾನೇ ಬೆಲೆ ಕೊಡುತ್ತಾರೆ. ಇವರು ಒಂದು ಸಾರಿ ಯಾರನ್ನಾದರೂ ಪ್ರೀತಿ ಮಾಡೋದಕ್ಕೆ ಶುರು ಮಾಡಿದ್ರೆ ಸಾಕು. ಇವರ ಜಗತ್ತಿನ ತುಂಬೆಲ್ಲಾ ಅವರೇ ಆವರಿಸಿ ಬಿಡುತ್ತಾರೆ. ಎಲ್ಲಾ ಸಮಯದಲ್ಲಿ ಸಂಗಾತಿಯನ್ನು ಖುಷಿಯಾಗಿಡೋದಕ್ಕೆ ಇಷ್ಟ ಪಡುತ್ತಾರೆ. ಪ್ರೀತಿಗಾಗಿ ಮನೆಯವನ್ನು ಎದುರು ಹಾಕಿಕೊಳ್ಳೋಕ್ಕೂ ಜಗ್ಗೋದಿಲ್ಲ. ಈ ರಾಶಿಯವರು ಪ್ರೀತಿಸಿದವರಿಗಾಗಿ ಬದಲಾಗುತ್ತಾರೆ. ಅಷ್ಟೇ ಅಲ್ಲ, ಪ್ರೀತಿ ಮಾಡಿದವರನ್ನೇ ಮದುವೆಯಾಗುವಲ್ಲಿ ಯಶಸ್ವಿಯಾಗುತ್ತಾರೆ.
ಕನ್ಯಾ ರಾಶಿ
ಈ ರಾಶಿಯವರು ಅಷ್ಟು ಸುಲಭವಾಗಿ ಪ್ರೀತಿಯಲ್ಲಿ ಬೀಳೋದಿಲ್ಲ. ಆದರೆ ಒಂದು ಸಾರಿ ಪ್ರೀತಿಯಲ್ಲಿ ಬಿದ್ದರೆ ಆ ಪ್ರೀತಿಗಾಗಿ ಎಂತಹ ಕಷ್ಟ ಎದುರಿಸೋದಕ್ಕೂ ಕೂಡ ಇವರು ಸಿದ್ಧವಾಗಿ ಇರುತ್ತಾರೆ. ವಿಶೇಷ ಏನಂದ್ರೆ ಈ ರಾಶಿಯವರು ತುಂಬಾನೇ ಸುಲಭವಾಗಿ ತನ್ನ ಮನೆಯವರನ್ನು ಪ್ರೇಮ ವಿಹಾಹಕ್ಕೆ ಒಪ್ಪಿಸುತ್ತಾರೆ. ಇವರು ತಮ್ಮ ಸಂಗಾತಿಯ ಜೊತೆಗೆ ಹೆಚ್ಚಿನ ಸಮಯ ಕಳೆಯಲು ಇಷ್ಟ ಪಡುತ್ತಾರೆ. ಹಾಗೂ ವೈಯಕ್ತಿಕ ವಿಚಾರವನ್ನು ಯಾರೊಂದಿಗೂ ಹಂಚಿಕೊಳ್ಳೋದಕ್ಕೆ ಇಷ್ಟ ಪಡೋದಿಲ್ಲ. ಇನ್ನೂ ಇವರು ಪ್ರೀತಿಸಿದವರನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಉತ್ತಮ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹಾಗೂ ಅವರ ಜೊತೆಗೆ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಈ ರಾಶಿಯವರು ಯಾರ ಮೇಲೆಯೂ ಅವಲಂಬಿತರಾಗಿ ಇರೋದಿಲ್ಲ. ಆದರೆ ತಮ್ಮ ಸಂಗಾತಿಯನ್ನು ಹೆಚ್ಚಿನ ವಿಚಾರಕ್ಕೆ ಇವರು ಅವಲಂಬಿತರಾಗಿರುತ್ತಾರೆ. ಈ ರಾಶಿಯವರು ತಮ್ಮ ಸಂಗಾತಿಯ ಯಶಸ್ಸಿನಲ್ಲಿ ಅವರ ಜೊತೆಯಾಗಿ ಇರುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ತುಂಬಾನೇ ಶಾಂತ ಸ್ವಭಾವದವರು. ಇವರು ಯಾರೊಂದಿಗಾದರೂ ಪ್ರೀತಿಯಲ್ಲಿ ಬಿದ್ದರೆ ಇವರು ತಮ್ಮ ಬುದ್ಧಿಯ ಮಾತನ್ನು ಕೇಳೋದಕ್ಕಿಂತ ಮನಸ್ಸಿನ ಮಾತು ಕೇಳೋದಕ್ಕೆ ಶುರು ಮಾಡುತ್ತಾರೆ. ಇನ್ನೂ ಈ ರಾಶಿಯವರು ತಮ್ಮ ಪ್ರೀತಿಗಾಗಿ ಎಂತಹ ತ್ಯಾಗಕ್ಕಾದರೂ ಸಿದ್ಧವಾಗಿರುತ್ತಾರೆ. ಇನ್ನೂ ಇವರು ಭಾವನಾತ್ಮಕ ಜೀವಿಗಳಾಗಿರೋದ್ರಿಂದ ತಮ್ಮನ್ನು ತುಂಬಾ ಅರ್ಥ ಮಾಡಿಕೊಂಡವರೊಂದಿಗೆ ಮಾತ್ರ ಇವರು ಪ್ರೀತಿಯಲ್ಲಿ ಬೀಳುತ್ತಾರೆ.



Click it and Unblock the Notifications
