Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಈ 6 ರಾಶಿಯವರು ಹಣ ಮಾಡೋದಿಕ್ಕೆ ಅಂತಾನೇ ಹುಟ್ಟಿರುತ್ತಾರೆ!
ಜೀವನದಲ್ಲಿ ಸಂತೋಷವಾಗಿರಬೇಕು ಎನ್ನುವ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದ್ರೆ ಸಂತೋಷ ಅಂದ್ರೆ ಏನು ಅಂತ ಕೇಳಿದ್ರೆ ನಮ್ಮ ಕೈಯಲ್ಲಿ ಬೇಕಾದಷ್ಟು ದುಡ್ಡಿದ್ರೆ ಮಾತ್ರ ನಾವು ಖುಷಿಯಾಗಿರೋದಕ್ಕೆ ಸಾಧ್ಯ ಅಂತ ಹೆಚ್ಚಿನವರು ಉತ್ತರಿಸುತ್ತಾರೆ. ದುಡ್ಡು ಮಾಡೋದಕ್ಕೆ ಮನುಷ್ಯ ಕಂಡು ಕೊಳ್ಳದಿರುವ ಮಾರ್ಗವಿಲ್ಲ. ಕೆಲವರಿಗೆ ತುಂಬಾ ಸುಲಭವಾಗಿ ಹಣದ ಹೊಳೆಯೇ ಹರಿದು ಬರುತ್ತೆ. ಇನ್ನೂ ಕೆಲವರೂ ಹುಟ್ಟುತ್ತಲೇ ಚಿನ್ನದ ಸ್ಪೂನ್ ಇಟ್ಕೊಂಡೆ ಬಂದಿರ್ತಾರೆ.
ಕೆಲವರ ಅದೃಷ್ಟ ಹೇಗಿರುತ್ತೆ ಅಂದ್ರೆ ಕಡು ಬಡವರಾಗಿದ್ದವರು ರಾತ್ರೋ ರಾತ್ರಿ ಶ್ರೀಮಂತರಾಗುತ್ತಾರೆ. ಹೀಗೆ ಕೆಲವರ ಕಡೆಗೆ ಒಂದಲ್ಲ ಒಂದು ರೀತಿಯಲ್ಲಿ ದುಡ್ಡು ಬಂದು ಬಿಡುತ್ತೆ. ಅಷ್ಟಕ್ಕು ಯಾವ ರಾಶಿಯವರು ದುಡ್ಡು ಮಾಡೋದಕ್ಕೆ ಅಂತಾನೇ ಹುಟ್ಟಿವರು ಅನ್ನೋದನ್ನು ತಿಳಿಯೋಣ.

ಕನ್ಯಾ ರಾಶಿ
ಕನ್ಯಾರಾಶಿ ಶ್ರೀಮಂತ ರಾಶಿಗಳಲ್ಲಿ ಒಂದಾಗಿದೆ. ಆರ್ಥಿಕ ಸಮೃದ್ಧಿ ಹೊಂದುವ ಹೆಚ್ಚಿನ ಅವಕಾಶವನ್ನು ಇವರು ಹೊಂದಿರುತ್ತಾರೆ. ಕನ್ಯಾ ರಾಶಿಯವರು ಯಾವುದರ ಮೇಲಾದರೂ ಹೂಡಿಕೆ ಮಾಡಿದರೆ ಖಂಡಿತ ಅದರಿಂದ ಲಾಭವನ್ನು ಪಡೆಯುತ್ತಾರೆ. ಇವರು ಆಶಾವಾದಿಗಳಾಗಿರುತ್ತಾರೆ. ಆರ್ಥಿಕ ವಿಚಾರದಲ್ಲಿ ಇವರು ತೆಗೆದುಕೊಂಡ ನಿರ್ಧಾರಗಳು ಯಾವತ್ತಿಗೂ ತಪ್ಪಾಗೋದಿಲ್ಲ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರ ಉತ್ಸಾಹ ಹಾಗೂ ಸಮಯ ಪ್ರಜ್ಞೆಯಿಂದ ಅವರು ಶ್ರೀಮಂತರಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇವರು ಕಂಪನಿಯ ಮಾಲೀಕರಾಗದಿದ್ದರೂ ಕೂಡ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ಇವರಿಗೆ ದಕ್ಕುತ್ತದೆ. ಹಾಗೂ ಆ ಕಂಪನಿಗೆ ಹೇಗೆ ಲಾಭ ತಂದುಕೊಡಬೇಕು ಅನ್ನೋದು ಇವರಿಗೆ ಗೊತ್ತಿರುತ್ತದೆ.
ಹೀಗಾಗಿ ಅದೇ ಕಂಪನಿಯಲ್ಲಿ ದೊಡ್ಡ ಹುದ್ದೆಯನ್ನು ಗಳಿಸುವ ಸಾಧ್ಯತೆಯಿದೆ. ವೃಶ್ಚಿಕ ರಾಶಿಯವರು ತಮ್ಮ ಪ್ರಭಾವಿ ಪ್ರತಿಸ್ಪರ್ಧಿಗಳ ತಂತ್ರಗಳನ್ನು ರಹಸ್ಯವಾಗಿ ಸಂಶೋಧಿಸುತ್ತಾರೆ. ಮತ್ತು ಅವರನ್ನು ಸೋಲಿಸಲು ಸಾಧ್ಯವಾಗುವಂತೆ ಬುದ್ಧಿವಂತ ಯೋಜನೆಯನ್ನು ರೂಪಿಸುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರಲ್ಲಿರುವ ಜಾಣ್ಮೆ ಮತ್ತು ಸ್ವಯಂ-ಭರವಸೆ ಅವರನ್ನು ದೊಡ್ಡ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಸಿಂಹ ರಾಶಿಯವರು ತಮ್ಮ ಗುರಿಗಳನ್ನು ಸಾಧಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಾರೆ. ತಮ್ಮ ಶ್ರದ್ಧೆಯಿಂದಾಗಿಯೇ ಅವರು ಸಾಕಷ್ಟು ಯಶಸ್ಸು ಹಾಗೂ ದುಡ್ಡನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ವಿಚಾರದಲ್ಲೂ ಪ್ರಯೋಗಾತ್ಮಕವಾಗಿ ಆಲೋಚಿಸುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ತಮ್ಮ ಸ್ಥಿರತೆ, ತಾಳ್ಮೆ ಮತ್ತು ಕೆಲಸದ ನೀತಿಗೆ ಹೆಸರುವಾಸಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರ ಆರ್ಥಿಕತೆ ಉತ್ತಮವಾಗಿರುತ್ತದೆ. ಅವರು ಅಂದುಕೊಂಡ ಉದ್ದೇಶಗಳನ್ನು ಸಾಧಿಸದೇ ಬಿಡುವವರಲ್ಲ. ವೃಷಭ ರಾಶಿಯವರು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಏನು ಬೇಕಾದರೂ ಮಾಡುತ್ತಾರೆ. ಹೀಗಾಗಿ ಆರ್ಥಿಕ ಸಮಸ್ಯೆಯನ್ನು ಇವರು ಹೆಚ್ಚಾಗಿ ಎದುರಿಸೋದಿಲ್ಲ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಯಾವಾಗಲೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾರೆ. ಹಾಗೂ ಅದನ್ನು ಪೂರೈಸೋದಕ್ಕೆ ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಸಣ್ಣ ಸಂಭಳದ ಕೆಲಸದಲ್ಲಿ ಹೆಚ್ಚು ದಿನ ನಿಲ್ಲುವವರಲ್ಲ ಇವರು. ಕಷ್ಟ ಪಟ್ಟಾದರೂ ದೊಡ್ಡ ಸಂಭಳದ ಹುದ್ದೆಯನ್ನೇ ಪಡೆಯುತ್ತಾರೆ. ಇವರು ಯಶಸ್ವಿಯಾಗೋದಕ್ಕೆ ಬಯಸುತ್ತಾರೆ. ಹಾಗೂ ಅದಕ್ಕಾಗಿ ಹಗಲು ರಾತ್ರಿ ಕಷ್ಟ ಪಟ್ಟು ದುಡಿಯುತ್ತಾರೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಆರ್ಥಿಕ ಸಂಕಷ್ಟ ಅನ್ನೋದು ಬರೋದಿಲ್ಲ. ತಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ತಾಳ್ಮೆ ಮತ್ತು ದೃಢತೆಯ ಕೊರತೆ ಇದ್ದರೂ ಕೂಡ ಅದೃಷ್ಟದಿಂದ ಇವರು ಗೆಲ್ಲುತ್ತಾರೆ. ಯಶಸ್ಸಿನ ಹಾದಿಯ ಕಡೆಗೆ ಇವರು ಯಾವಾಗಲೂ ಕೆಲಸ ಮಾಡುತ್ತಾರೆ. ತಾಳ್ಮೆ ಕೊಂಚ ಕಮ್ಮಿ ಇದ್ದರೂ ಇವರಲ್ಲಿರುವ ಸ್ಫೂರ್ತಿ ಇವರನ್ನು ಗೆಲುವಿನ ದಡ ಸೇರಿಸುತ್ತದೆ.



Click it and Unblock the Notifications
