Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಈ ರಾಶಿಯವರು ಪ್ರೀತಿಯಲ್ಲಿ ಬಿದ್ದಾಗ ಪ್ರೇಮ ಕವಿಗಳಾಗುತ್ತಾರೆ
ಪ್ರೀತಿಯನ್ನು ವ್ಯಕ್ತ ಪಡಿಸೋದಕ್ಕೆ ಇಂತಹದ್ದೇ ವಿಧಾನ ಆಗಬೇಕೆಂದೇನಿಲ್ಲ. ಅನೇಕ ಜನ ವಿವಿಧ ರೀತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ. ಕೆಲವರು ಹಾಡು ಹಾಡುತ್ತಾರೆ, ಡಾನ್ಸ್ ಮಾಡುತ್ತಾರೆ, ಇನ್ನೂ ಕೆಲವರು ಮಾತಿನಲ್ಲೇ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವವರಿದ್ದಾರೆ.
ಆದರೆ ಈ ರಾಶಿಯವರು ಪ್ರೀತಿಯಲ್ಲಿ ಬಿದ್ದ ತಕ್ಷಣ ಕವಿಯಾಗುತ್ತಾರಂತೆ. ತಮ್ಮ ಪ್ರೀತಿಯನ್ನು ಕವಿತೆ ಬರೆಯುವುದರ ಮೂಲಕ ವ್ಯಕ್ತ ಪಡಿಸುತ್ತಾರಂತೆ. ಹಾಗಾದ್ರೆ ಕವಿತೆ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವವರು ಯಾರು ಅನ್ನೋದನ್ನು ತಿಳಿಯೋಣ.

ಮಕರ ರಾಶಿ
ಮಕರ ರಾಶಿಯವರು ತಮ್ಮ ಸಂಗಾತಿಯನ್ನು ತುಂಬಾನೇ ಪ್ರೀತಿಸುತ್ತಾರೆ. ಆದರೆ ಅದನ್ನು ಅವರು ಮೌಖಿಕವಾಗಿ ಹೇಳೋದಕ್ಕೆ ಇಷ್ಟ ಪಡೋದಿಲ್ಲ. ಬದಲಿಗೆ ಅದನ್ನು ಕವಿತೆಯ ಮೂಲಕ ವ್ಯಕ್ತ ಪಡಿಸಲು ಇಷ್ಟ ಪಡುತ್ತಾರೆ. ಇವರಿಗೆ ಪ್ರಕೃತಿಯೆಂದರೆ ತುಂಬಾನೇ ಪ್ರೀತಿ. ಮಕರ ರಾಶಿಯವರು ಭಾವನೆಯಲ್ಲಿ ಕಳೆದು ಹೋಗಿರುತ್ತಾರೆ. ಆದರೆ ಅವರು ಆ ಭಾವನೆಗಳನ್ನು ತಮ್ಮ ಪ್ರೇಮ ಕವಿತೆಯಲ್ಲಿ ಬಂಧಿಸಿ. ಈ ಮೂಲಕ ತಮ್ಮ ಭಾವನೆಯನ್ನು ವ್ಯಕ್ತ ಪಡಿಸುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ತಮ್ಮ ಸಂಗಾತಿಯ ಬಗ್ಗೆ ಏನು ಅಂದುಕೊಳ್ಳುತ್ತಾರೆಯೋ ಅದನ್ನು ಮಾತಿನ ಮೂಲಕ ತಿಳಿಸಿ ಸಂಗಾತಿಯನ್ನು ಮೋಡಿ ಮಾಡುವ ಕೌಶಲ್ಯ ಹೊಂದಿದ್ದಾರೆ. ಇನ್ನೂ ಈ ರಾಶಿಯವರು ಭಾವನಾತ್ಮ ಜೀವಿಗಳು. ಇನ್ನೂ ಇವರ ಭಾವನೆಗಳನ್ನು ಪದಕ್ಕೆ ಇಳಿಸುವ ಕೌಶಲ್ಯ ಇವರಿಗಿದೆ. ಇನ್ನ ಸಂಗಾತಿಗಾಗಿ ಮುದ್ದಾದ ಕವನವನ್ನು ಇವರು ರಚಿಸುತ್ತಾರೆ. ಆದರೆ ತಮ್ಮ ಸಂಗಾತಿಗೆ ತಮ್ಮ ಕವನವನ್ನು ಹೇಳಬೇಕು ಅಂದಾಗ ಇವರು ತುಂಬಾ ಒತ್ತಡವನ್ನು ಅನುಭವಿಸುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ತಮ್ಮ ಅಭಿಪ್ರಾಯಗಳನ್ನು ಜಗತ್ತಿಗೆ ತಿಳಿಸೋದಕ್ಕೆ ಹೆದರೋದಿಲ್ಲ. ಇವರು ಮೂಲತಃ ಕವಿಗಳಲ್ಲದಿದ್ದರೂ ಕೆಲವೊಂದು ಸಲ ತಮ್ಮ ಸಂಗಾತಿಯ ಮನವೊಲಿಸಲೆಂದು ಕವಿತೆಗಳನ್ನು ಗೀಜುತ್ತಾರೆ. ಇನ್ನೂ ಬಹಳ ಬೇಗನೆ ಕವಿತೆ ಬರೆಯುವ ಕಲೆ ಇವರಲ್ಲಿರುತ್ತದೆ. ಒಂದು ಕುರ್ಚಿಯಲ್ಲಿ ಕಾಫಿ ಕಪ್‌ನೊಂದಿಗೆ ಕುಳಿತರೆ ಸಾಕು ಇವರ ಮನಸ್ಸಿನ ಭಾವನೆಗಳೆಲ್ಲಾ ಕಾವ್ಯವಾಗಿ ಬದಲಾಗುತ್ತದೆ.
ಮೀನ ರಾಶಿ
ಮೀನ ರಾಶಿಯವರು ಪ್ರಪಂಚದ ಬಗ್ಗೆ ವಿಶಿಷ್ಟವಾದ ದೃಷ್ಟಿಕೋನ ಹೊಂದಿರುತ್ತಾರೆ. ಇವರು ಪ್ರೀತಿಯಲ್ಲಿ ಬಿದ್ದಾಗ ಕವಿಯಾಗಿ ಬಿಡುತ್ತಾರೆ. ಇನ್ನೂ ಮೀನ ರಾಶಿಯವರು ಹೆಚ್ಚು ಭಾವನಾತ್ಮಕ ಜೀವಿಗಳು. ಇವರು ಕಾವ್ಯಾತ್ಮಕವಾಗಿ ಇರುತ್ತಾರೆ ಜೊತೆಗೆ ಸೃಜನಶೀಲ ವ್ಯಕ್ತಿತ್ವ ಇವರದ್ದಾಗಿದೆ. ಅದೇನೇ ಇದ್ದರೂ ಇವರು ಬರೆಯುವ ಅಂತಿಮ ಕವಿತೆಗಳು ಇವರ ಹೃದಯ ಗೆದ್ದವರಿಗಾಗಿಯೇ ಇರುತ್ತದೆ.



Click it and Unblock the Notifications

