Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಈ 6 ರಾಶಿಯ ಮಹಿಳೆಯರಲ್ಲಿ ಬುದ್ಧಿವಂತಿಕೆ ಜೊತೆಗೆ ಸೌಂದರ್ಯವಿದೆ!
ಈ ಜಗತ್ತಿನಲ್ಲಿ ಅದೆಷ್ಟೋ ಜನ ಸುಂದರ ಮಹಿಳೆಯರನ್ನು ನಾವು ನೋಡಿರ್ತೀವಿ. ಅನೇಕ ಜನ ಬಹು ಬೇಗನೇ ಹೆಂಗಳೆಯರ ಸೌಂದರ್ಯಕ್ಕೆ ಮನಸೋಲುತ್ತಾರೆ. ಆದರೆ ನಮ್ಮಲ್ಲಿ ಕೇವಲ ಸೌಂದರ್ಯ ಇದ್ದರಷ್ಟೇ ಸಾಲೋದಿಲ್ಲ. ಸೌಂದರ್ಯಕ್ಕೆ ತಕ್ಕ ಹಾಗೆ ಬುದ್ಧಿವಂತಿಕೆಯೂ ಇರಬೇಕು. ಆಗ ಮಾತ್ರ ನಮ್ಮ ವ್ಯಕ್ತಿತ್ವ ಇತರರಿಗೆ ಇಷ್ಟ ಆಗುತ್ತದೆ.

ಕೆಲವರಲ್ಲಿ ಸೌಂದರ್ಯ ಇರುತ್ತದೆ. ಆದರೆ ಬುದ್ಧಿವಂತಿಕೆ ಇರೋದಿಲ್ಲ. ಇನ್ನೂ ಕೆಲವರಲ್ಲಿ ಬುದ್ಧಿವಂತಿಕೆ ಇರುತ್ತದೆ. ಆದರೆ ಸೌಂದರ್ಯ ಇರೋದಿಲ್ಲ. ಆದರೆ ಕೆಲವೇ ಕೆಲವು ರಾಶಿಯವರಲ್ಲಿ ಮಾತ್ರ ಬುದ್ಧಿವಂತಿಕೆ ಹಾಗೂ ಸೌಂದರ್ಯ ಎರಡೂ ಇರುತ್ತದೆ. ಅಷ್ಟಕ್ಕೂ ಆ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ವೃಷಭ ರಾಶಿಯ ಮಹಿಳೆಯರು ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುತ್ತಾರೆ. ಈ ರಾಶಿಯವರು ಉತ್ತಮ ಕೌಶಲ್ಯವನ್ನು ಹೊಂದಿರುತ್ತಾರೆ. ಇವರಲ್ಲಿರುವ ಬಲವಾದ ಇಚ್ಛಾಶಕ್ತಿಯ ಸ್ವಭಾವವು ಅವರ ನಿರ್ಣಯ ಮತ್ತು ಅವರ ಕನಸುಗಳ ಅಚಲ ಅನ್ವೇಷಣೆಗೆ ಸಾಕ್ಷಿಯಾಗಿದೆ. ವೃಷಭ ರಾಶಿಯ ಮಹಿಳೆಯರು ತಮ್ಮ ಕಾಂತೀಯ ವ್ಯಕ್ತಿತ್ವದಿಂದ ಇತರರು ಆಕರ್ಷಿತರಾಗುವಂತೆ ಮಾಡುತ್ತಾರೆ. ಇವರು ಯಾವಾಗಲೂ ಬುದ್ಧಿವಂತಿಕೆಯಿಂದಲೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯ ಮಹಿಳೆಯರು ವೃತ್ತಿಪರ ಕ್ಷೇತ್ರಗಳಲ್ಲಿ ಬೇರೆಯವರಿಗೆ ಮಾರ್ಗದರ್ಶನ ನೀಡುವ ಅಂತಃಪ್ರಜ್ಞೆಯನ್ನು ಹೊಂದಿರುತ್ತಾರೆ. ಇತರರ ಅಗತ್ಯತೆಗಳನ್ನು ಬಹಳ ಸುಲಭವಾಗಿ ಇವರು ಅರ್ಥ ಮಾಡಿಕೊಳ್ಳುತ್ತಾರೆ. ಇವರು ಕೆಲಸ ಮಾಡೋ ವಿಧಾನವನ್ನು ಕಂಡು ಬಹಳಷ್ಟು ಮಂದಿ ಇವರನ್ನು ಸ್ಮಾರ್ಟ್ ಅಂತ ಕರೆಯುತ್ತಾರೆ. ಇವರನ್ನು ನೋಡಿದ ತಕ್ಷಣ ಎಂತವರಾದರೂ ಕೂಡ ಇವರತ್ತ ಆಕರ್ಷಿತರಾಗುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ತಮ್ಮಲ್ಲಿರುವ ಆತ್ಮವಿಶ್ವಾಸ ಮತ್ತು ಅಚಲ ಮಹತ್ವಾಕಾಂಕ್ಷೆಯಿಂದ ಪ್ರಕಾಶಮಾನವಾಗಿ ಹೊಳೆಯುತ್ತಾರೆ. ಇತರರನ್ನು ಸೆಳೆದುಕೊಳ್ಳುವ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಆತ್ಮವಿಶ್ವಾಸ ಮತ್ತು ಅಚಲ ಮಹತ್ವಾಕಾಂಕ್ಷೆಯಿಂದ ಪ್ರಕಾಶಮಾನವಾಗಿ ಹೊಳೆಯುತ್ತಾರೆ. ಇವರು ಜವಾಬ್ದಾರಿ ಹೊತ್ತು ಯಾವುದಾದರೂ ಕೆಲಸವನ್ನು ಸುಲಭವಾಗಿ ಮಾಡುತ್ತಾರೆ. ಇವರಲ್ಲಿರುವ ಬುದ್ಧಿವಂತಿಕೆಯೇ ಇವರ ಯಶಸ್ಸಿನ ಗುಟ್ಟಾಗಿರುತ್ತದೆ.
ಕನ್ಯಾ ರಾಶಿ
ಕನ್ಯಾರಾಶಿಯ ಮಹಿಳೆಯರು ಸೌಂದರ್ಯಕ್ಕೆ ಹೆಸರುವಾಸಿಯಾಗಿರುತ್ತಾರೆ. ಹಾಗೂ ಇವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಪರಿಪೂರ್ಣತೆಗೆ ಶ್ರಮಿಸುತ್ತಾರೆ. ಯಾವುದಾದರೂ ಒಂದು ವಿಚಾರವನ್ನು ಸೂಕ್ಷ್ಮವಾಗಿ ಮತ್ತು ಚಿಂತನಾಶೀಲರಾಗಿ ನೋಡುವ ಸಾಮರ್ಥ್ಯ ಹೊಂದಿರುತ್ತಾರೆ. ಮುಂದಿಟ್ಟ ಹೆಜ್ಜೆಯನ್ನು ಈ ರಾಶಿಯವರು ಹಿಂದಕ್ಕೆ ಇಡುವ ಮಾತೇ ಇಲ್ಲ. ಶ್ರಮಪಟ್ಟು ಕೆಲಸ ಮಾಡುವುದಕ್ಕಿಂತ ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಅದ್ರಲ್ಲಿ ಗೆಲ್ಲುತ್ತಾರೆ.
ತುಲಾ ರಾಶಿ
ತುಲಾ ರಾಶಿಯವರು ಎಂತವರನ್ನೂ ತಮ್ಮ ಬುದ್ಧಿವಂತಿಕೆ ಹಾಗೂ ಸೌಂದರ್ಯದಿಂದ ಮೋಡಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಲ್ಲಿರುವ ಗುಣ ಎಂತವರನ್ನೂ ಸಲೀಸಾಗಿ ಸೆಳೆಯುತ್ತದೆ. ಬುದ್ಧಿವಂತಿಕೆಯನ್ನು ಬಳಸಿಕೊಂಡು ಎಂತಹ ಕೆಲಸವನ್ನಾದರೂ ಸುಲಭವಾಗಿ ಮುಗಿಸುತ್ತಾರೆ. ಈ ರಾಶಿಯವರು ಯಾವಾಗಲೂ ತಮ್ಮ ಗುರಿಯ ಕಡೆಗೆ ಕೆಲಸ ಮಾಡುತ್ತಾರೆ. ಹೀಗಾಗಿ ಯಶಸ್ಸು ಯಾವಾಗಲೂ ಇವರ ಜೊತೆಗಿರುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಒಂದು ರೀತಿಯಲ್ಲಿ ನಿಗೂಢ ಗುಣ ಹೊಂದಿರುತ್ತಾರೆ. ಇವರು ಏನು ಮಾಡುತ್ತಿದ್ದಾರೆ ಅನ್ನೋದು ಯಾರಿಗೂ ಗೊತ್ತಾಗೋದಿಲ್ಲ. ಇವರು ಮಾಡುವ ಕೆಲಸ ಹೆಚ್ಚು ಸುದ್ಧಿ ಮಾಡದೇ ಇದ್ದರೂ ಇವರ ಯಶಸ್ಸು ಹೆಚ್ಚು ಹೆಚ್ಚು ಸುದ್ಧಿ ಮಾಡುತ್ತದೆ. ಈ ರಾಶಿಯ ಮಹಿಳೆಯರು ಬುದ್ಧಿವಂತಿಕೆಯ ಜೊತೆಗೆ ಸೌಂದರ್ಯವನ್ನೂ ಹೊಂದಿರುತ್ತದೆ. ಇದೇ ಕಾರಣಕ್ಕೆ ಇವರತ್ತ ಹೆಚ್ಚಿನ ಜನ ಆಕರ್ಷಿತರಾಗೋದು.



Click it and Unblock the Notifications











