Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಈ 5 ರಾಶಿಯವರು ವಿದೇಶದಲ್ಲಿ ಕೆಲಸ ಪಡೆಯುತ್ತಾರೆ!
ವಿದ್ಯಾಭ್ಯಾಸ ಪಡೆದ ಮೇಲೆ ಪ್ರತಿಯೊಬ್ಬರೂ ಒಂದಲ್ಲ ಒಂದು ಕೆಲಸವನ್ನು ಹುಡುಕಿಕೊಳ್ಳಲೇಬೇಕು. ಹೊಟ್ಟೆಪಾಡಿಗಾಗಿ ಕೆಲಸ ಹುಡುಕುವ ಅನಿವಾರ್ಯತೆ ಹೆಚ್ಚಿನವರಿಗೆ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಅನೇಕರು ಊರಲ್ಲೇ ಕೆಲಸ ಹುಡುಕಿಕೊಂಡ್ರೆ, ಇನ್ನೂ ಹೆಚ್ಚಿನವರು ಊರು ಬಿಟ್ಟು ಪಟ್ಟಣ ಸೇರುತ್ತಾರೆ.

ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೆಚ್ಚು ದುಡ್ಡು ಸಂಪಾದನೆ ಮಾಡಬೇಕು ಅನ್ನೋ ಉದ್ದೇಶದಿಂದ ವಿದೇಶಕ್ಕೆ ವಲಸೆ ಹೋಗುತ್ತಾರೆ. ಅಷ್ಟಕ್ಕೂ ವಿದೇಶದಲ್ಲಿ ಕೆಲಸ ಮಾಡೋದಕ್ಕೆ ಒಲವು ತೋರುವ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ..
ಮೇಷ ರಾಶಿ
ಮೇಷ ರಾಶಿಯವರು ಅಚಲ ನಿರ್ಣಯ ಮತ್ತು ಸಾಹಸ ಮನೋಭಾವ ಹೊಂದಿರುತ್ತಾರೆ. ಈ ರಾಶಿಯವರು ವಿದೇಶದಲ್ಲಿ ಕೆಲಸ ಮಾಡೋದಕ್ಕೆ ಇಚ್ಛಿಸುತ್ತಾರೆ. ದಿಟ್ಟತನಕ್ಕೆ ಹೆಸರುವಾಸಿಯಾಗಿರೋ ಇವರು ಹೊಸ ಹೊಸ ಸವಾಲುಗಳನ್ನು ಸ್ವೀಕರಿಸೋದಕ್ಕೆ ಇಷ್ಟ ಪಡುತ್ತಾರೆ. ಯಾವಾಗಲೂ ದೇಶದ ಆಚೆಗೆ ಹಾಕಿ ಹೋಗಿ ಅಲ್ಲಿ ಸಾಧನೆ ಮಾಡೋದ್ರ ಬಗ್ಗೆ ಇವರ ಮನಸ್ಸು ಚಿಂತಿಸುತ್ತಿರುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಹೊಸ ವಿಚಾರಗಳನ್ನು ಕಲಿಯುವ ಹಸಿವು ಇರುತ್ತದೆ. ಚಿಟ್ಟೆಯಂತೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹಾರಲು ಇವರ ಮನಸ್ಸು ತವಕಿಸುತ್ತಿರುತ್ತದೆ. ಇವರಲ್ಲಿರುವ ಅತ್ಯುತ್ತಮ ಸಂವಹನ ಕೌಶಲ್ಯ ಮತ್ತು ಹೊಂದಾಣಿಕೆಯು ವಿದೇಶಿ ವಾತಾವರಣದಲ್ಲಿ ಕೆಲಸದಲ್ಲಿ ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ. ಮಿಥುನ ರಾಶಿಯವರು ತಮ್ಮ ಪರಿಧಿಯನ್ನು ವಿಸ್ತರಿಸುವ ಅವಕಾಶವಾಗಿ ಪ್ರತಿ ಸವಾಲನ್ನು ಎದುರಿಸುತ್ತಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ವರ್ಚಸ್ಸು ಹಾಗೂ ಆತ್ಮವಿಶ್ವಾಸ ಹೊಂದಿರುತ್ತಾರೆ. ಸಿಂಹ ರಾಶಿಯರು ವಿದೇಶದಲ್ಲಿ ಕೆಲಸ ಮಾಡೋದಕ್ಕೆ ಇಷ್ಟ ಪಡುತ್ತಾರೆ. ಹಾಗೂ ಆ ದೇಶದತ್ತ ಬಹುಬೇಗನೇ ಆಕರ್ಷಿತರಾಗುತ್ತಾರೆ. ಯಾವುದೇ ದೇಶಕ್ಕೆ ಕೆಲಸಕ್ಕಾಗಿ ಹೋದರೂ ಕೂಡ ಇವರು ತಮ್ಮ ಕೌಶಲ್ಯದಿಂದಲೇ ಅಲ್ಲಿರುವವರನ್ನು ಮನಸೂರೆಗೊಳಿಸುತ್ತಾರೆ. ವಿದೇಶಿ ನೆಲದಲ್ಲಿ ಪ್ರವರ್ತಕರಾಗುವ ನಿರೀಕ್ಷೆ ಕೂಡ ಇವರಲ್ಲಿ ಇರುತ್ತಾರೆ. ಅಲ್ಲಿ ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ.
ಧನು ರಾಶಿ
ಧನು ರಾಶಿಯವರು ಮುಕ್ತ ಮನೋಭಾವ ಹೊಂದಿರುತ್ತಾರೆ. ಈ ರಾಶಿಯವರು ವೈಯಕ್ತಿಕ ಬೆಳವಣಿಗೆ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಹೀಗಾಗಿ ವಿದೇಶಕ್ಕೆ ಹಾರಿ ಅಲ್ಲಿ ಏನಾದರೂ ಸಾಧಿಸುವ ಆಸೆ ಇವರಲ್ಲಿ ಮೊದಲಿಂದ ಇದ್ದೇ ಇರುತ್ತದೆ. ಇವರಲ್ಲಿ ಕಲಿಕಾ ಆಸಕ್ತಿ ಹೆಚ್ಚಾಗಿ ಇರೋದ್ರಿಂದ ಇವರು ಎಲ್ಲೇ ಹೋದರೂ ಕೂಡ ಬೆಳೆಯುತ್ತಾರೆ. ಸಹೋದ್ಯೋಗಿಗಳ ಜೊತೆಗೂ ಕೂಡ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ಜಾಗತಿಕ ಏಕತೆಯ ಶಕ್ತಿಯಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದಾರೆ. ವಿದ್ಯಾಭ್ಯಾಸ ಮುಗಿಸಿದ ತಕ್ಷಣ ವಿದೇಶಕ್ಕೆ ಹಾರುವ ಮನಸ್ಸು ಮಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಧನಾತ್ಮಕ ಪ್ರಭಾವ ಬೀರಲು ಅವಕಾಶ ನೀಡುವ ವೃತ್ತಿಜೀವನದತ್ತ ಆಕರ್ಷಿತರಾಗುತ್ತಾರೆ. ಎಷ್ಟೇ ಕಷ್ಟಗಳು ಎದುರಾದ್ರು ಕೂಡ ಮತ್ತೆ ಎದ್ದು ನಿಲ್ಲುವ ಛಲ ಇವರಲ್ಲಿ ಇರುತ್ತದೆ. ಇದೇ ಕಾರಣಕ್ಕೆ ಇವರು ಎಂತಹ ಸಂದರ್ಭದಲ್ಲೂ ಯಶಸ್ವಿಯಾಗುತ್ತಾರೆ.



Click it and Unblock the Notifications